Asianet Suvarna News Asianet Suvarna News

ನಂಬಿಕೆಗಿಂತ ಮುಖ್ಯ ದಾಂಪತ್ಯದಲ್ಲಿ ಇನ್ನೇನಿದೆ? ಥ್ಯಾಂಕ್ಯೂ ಗೌತಮ್​ ಸರ್​ ಅಂತಿದ್ದಾರೆ ಅಮೃತಧಾರೆ ಫ್ಯಾನ್ಸ್​

ದಾಂಪತ್ಯ ಎನ್ನುವುದು ಪರಸ್ಪರ ನಂಬಿಕೆಯ ತಳಹದಿಯ ಮೇಲೆ ನಿಂತಿದೆ ಎನ್ನುವ ಮಾತನ್ನು ತೋರಿಸಿಕೊಟ್ಟ ಅಮೃತಧಾರೆ ಗೌತಮ್​ಗೆ ಥ್ಯಾಂಕ್ಸ್​ ಹೇಳ್ತಿದ್ದಾರೆ ಫ್ಯಾನ್ಸ್​.
 

Fans thanking Amritdhare Gautham for showing that marriage is based on mutual trust suc
Author
First Published Dec 20, 2023, 12:19 PM IST

ದಾಂಪತ್ಯದಲ್ಲಿ ಪತಿ-ಪತ್ನಿ ನಡುವೆ ನಂಬಿಕೆಗಿಂತ ಮುಖ್ಯವಾದದ್ದು ಯಾವುದೂ ಇಲ್ಲ. ದಾಂಪತ್ಯದಲ್ಲಿ ಒಂದೇ ಒಂದು ಸಣ್ಣ ಸಂದೇಹ ಎದುರಾದರೂ ಪತಿ-ಪತ್ನಿಯ ನಡುವೆ ದೊಡ್ಡ ಬಿರುಕೇ ಮೂಡಬಹುದು. ಅದರಲ್ಲಿಯೂ ಇನ್ನೊಂದು ಸಂಬಂಧ ಇದೆ ಎಂದು ತಿಳಿದರೆ ಅಥವಾ ಆ ಬಗ್ಗೆ ಅಪಾರ್ಥ ಮಾಡಿಕೊಂಡರೆ ಮುಗಿದೇ ಹೋಯ್ತು. ಇದೇ ಕಾರಣಕ್ಕೆ ಅದೆಷ್ಟೋ ಕೊಲೆಗಳೇ ನಡೆದು ಹೋಗಿವೆ. ಪತಿ ಅಥವಾ ಪತ್ನಿಗೆ ಮದುವೆಗೂ ಮುನ್ನ ಪ್ರೇಮ ವಿಷಯಗಳನ್ನು ಪರಸ್ಪರ ಮುಚ್ಚಿಟ್ಟಾಗ ಇಂಥದ್ದೊಂದು ಸನ್ನಿವೇಶ ಎದುರಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ಇಂಥ ವಿಷಯಗಳನ್ನು ಮದುವೆಗೂ ಮುನ್ನವೇ ಬಗೆಹರಿಸಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಹಿರಿಯರು. ಕೆಲವು ಸಂದರ್ಭಗಳಲ್ಲಿ ಇಂಥ ವಿಷಯಗಳನ್ನು ಮದುವೆಗೂ ಮೊದಲೇ ಪರಿಹರಿಸಿಕೊಂಡಿದ್ದರೂ, ಮದುವೆಯಾದ ಮೇಲೂ ಏನೋ ಒಂದು ಸಂದೇಹ ಬರುವುದೂ ಇದೆ. ಆದ್ದರಿಂದ ದಾಂಪತ್ಯ ಎನ್ನುವುದು ಸೂಕ್ಷ್ಮವಾಗಿರುವ ತಂತಿಯ ಮೇಲಿನ ನಡಿಗೆ ಎಂದೇ ಹೇಳಲಾಗುತ್ತದೆ.  

ಕಣ್ಣಾರೆ ಕಂಡರೂ ಪರಾಮರ್ಶಿಸಿ ನೋಡಬೇಕು ಎನ್ನುವ ಮಾತಿನಂತೆ, ಕಣ್ಣಿಗೆ ಕಂಡದ್ದೆಲ್ಲವೂ ನಿಜ ಎಂದು ಅಂದುಕೊಳ್ಳುವ ಪೂರ್ವದಲ್ಲಿ, ದಂಪತಿ ನಡುವೆ ಏನಾದರೂ ಸಂದೇಹ ಎದುರಾದರೆ ಅದನ್ನು ಮಾತಿನ ಮೂಲಕ ಬಗೆಹರಿಸಿಕೊಂಡರೆ ಯಾವುದೇ ಸಮಸ್ಯೆ ಬರುವುದಿಲ್ಲ. ಎಲ್ಲಕ್ಕಿಂತಲೂ ಮೇಲಾಗಿ ಪರಸ್ಪರ ನಂಬಿಕೆಯೇ ಮುಖ್ಯ. ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್​ನ ನಾಯಕ ಗೌತಮ್​ ನಡೆದುಕೊಂಡಿರುವ ರೀತಿಯಿಂದ ಈ ವಿಷಯ ಚರ್ಚೆಗೆ ಬಂದಿದೆ.

ಬಿಗ್​ಬಾಸ್​ ವಿನಯ್​ ಪರ ಮಾತನಾಡಿ ಟ್ರೋಲ್​ ಆದ ನಟಿ ಅನು ಪೂವಮ್ಮ: ನೆಟ್ಟಿಗರು ಹೀಗೆಲ್ಲಾ ಹೇಳೋದಾ?

ಅಷ್ಟಕ್ಕೂ ಈ ಸೀರಿಯಲ್​ ನೋಡುತ್ತಿರುವವರಿಗೆ ಕಥೆಯಂತೂ ಗೊತ್ತೇ ಇದೆ. ಮಧ್ಯ ವಯಸ್ಸಿನಲ್ಲಿ ಮದುವೆಯಾದವರ ಕಥಾ ಹಂದರವನ್ನು ಈ ಸೀರಿಯಲ್‌ ಹೊಂದಿದೆ. ಆಗರ್ಭ ಶ್ರೀಮಂತ ಗೌತಮ್‌ ಮತ್ತು ಮಧ್ಯಮ ವರ್ಗದ ಹೆಣ್ಣು ಭೂಮಿಕಾ ನಡುವಿನ ಕಥೆಯಿದು. ಮದುವೆಗೂ ಮುನ್ನ ಸಾಕಷ್ಟು ಜಗಳವಾಡುತ್ತಿದ್ದ ಈ ಜೋಡಿ ಈಗ ಈ ವಯಸ್ಸಿನಲ್ಲಿ ಮದುವೆಯಾಗಿ ಪರಸ್ಪರ ಹೊಂದಿಕೊಳ್ಳಲು ಕಷ್ಟಪಡುತ್ತಿದೆ. ಆದರೂ ಈಗಷ್ಟೇ ಇಬ್ಬರ ನಡುವೆ ಪ್ರೀತಿಯ ಭಾವನೆ ಮೂಡುತ್ತಿದೆ. ಆದರೆ ಅಷ್ಟೊತ್ತಿಗಾಗಲೇ ವಿಲನ್​ ಎಂಟ್ರಿಯಾಗಿದೆ. ಅದು ಭೂಮಿಕಾ ಮದುವೆಗೂ ಮುನ್ನ ಪ್ರೀತಿಸುತ್ತಿದ್ದ ಯುವಕ ಕಿರಣ್​. ಅವನಿಗೂ ಮದ್ವೆಯಾಗಿದ್ದರೂ ಭೂಮಿಕಾ ಸಂಸಾರವನ್ನು ಹಾಳು ಮಾಡುವ ತಂತ್ರ ರೂಪಿಸಿದ್ದಾನೆ. ಗೌತಮ್​ ಕಂಪೆನಿಯಲ್ಲಿಯೇ ಕೆಲಸ ಗಿಟ್ಟಿಸಿಕೊಂಡಿರುವ ಈತ ಇದಾಗಲೇ ತನ್ನ ಮತ್ತು ಭೂಮಿಕಾ ಸಂಬಂಧದ ಕುರಿತು ಗೌತಮ್​ ತಲೆಯಲ್ಲಿ ಹುಳ ಬಿಟ್ಟಿದ್ದಾನೆ. ಪತ್ನಿಯ ಮೇಲೆ ಗೌತಮ್​ಗೆ ನಂಬಿಕೆಯೇ ಹೊರಟು ಹೋಗಿದೆ ಎನ್ನುವ ರೀತಿಯ ಸ್ಥಿತಿ ಇದು.

ಆದರೆ ಈ ನಡುವೆಯೇ ಭೂಮಿಕಾ ಹುಟ್ಟುಹಬ್ಬ ಬಂದಿದೆ. ಆಕೆಯ ಪತಿಯ ಮನೆಯವರು ಹಾಗೂ ಅಮ್ಮನ ಮನೆಯವರು ಹುಟ್ಟುಹಬ್ಬದ ಸರ್​ಪ್ರೈಸ್​ ನೀಡುವ ಸಮಯದಲ್ಲಿಯೇ, ಮೊದಲೇ ಕುತಂತ್ರ ರೂಪಿಸಿದ್ದ ಕಿರಣ್​ ದೊಡ್ಡದಾದ ಬರ್ತ್​ಡೇ ಕೇಕ್​ ತಂದು ಅದನ್ನು ಕತ್ತರಿಸಿ ಭೂಮಿಕಾ ಬಾಯಿಗೆ ನೀಡಲು ಹೊರಟಿದ್ದಾನೆ. ನಿನಗೆ ಪ್ರತಿಸಲವೂ ಹೀಗೆಯೇ ಮಾಡುತ್ತಿದ್ದೆನಲ್ಲ ಎನ್ನುತ್ತಿದ್ದಂತೆಯೇ ಗೌತಮ್​ ಕಿರಣ್​ ಕೆನ್ನೆಗೆ ಹೊಡೆದಿದ್ದಾನೆ. ಇಷ್ಟುಪ್ರೊಮೋ ಬಿಡುಗಡೆಯಾಗಿದೆ. ಮುಂದೇನಾಗುತ್ತದೆ ಎನ್ನುವುದನ್ನು ಸೀರಿಯಲ್​ ನೋಡಬೇಕು. ಆದರೆ ಎಲ್ಲಿ ಗೌತಮ್​ ಮತ್ತು ಭೂಮಿಕಾ ಬೇರೆಬೇರೆಯಾಗಿ ಬಿಡುತ್ತಾರೆಯೋ ಎಂದು ಭಯಪಟ್ಟಿದ್ದ ಸೀರಿಯಲ್​ ಪ್ರಿಯರಿಗೆ ಈಗ ಸಮಾಧಾನವಾಗಿದೆ. ಥ್ಯಾಂಕ್ಯೂ ಗೌತಮ್​ ಸರ್​ ಎಂದು ಫ್ಯಾನ್ಸ್​ ಕಮೆಂಟ್​ ಹಾಕುತ್ತಿದ್ದಾರೆ. ದಾಂಪತ್ಯದಲ್ಲಿ ನಂಬಿಕೆಯೇ ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ, ಪತ್ನಿಯ ಪರ ನೀವು ನಿಂತಿರುವುದು ಹೆಮ್ಮೆಯ ವಿಷಯ ಎಂದೆಲ್ಲಾಕೊಂಡಾಡಿದ್ದಾರೆ. ದಾಂಪತ್ಯ ಜೀವನ ನಂಬಿಕೆಯ ತಳಹದಿಯ ಮೇಲೆ ನಿಂತಿದೆ ಎಂದು ತೋರಿಸಿಕೊಟ್ಟಿದ್ದಕ್ಕೆ ನಿಮಗೆ ಸಲಾಂ ಎಂದೆಲ್ಲಾ ಕಮೆಂಟ್​ ಹಾಕುತ್ತಿದ್ದಾರೆ. 

'ಬೀಗ್​ ಬಾಸ್'​ ಮನೆಯಲ್ಲಿ ಲೂಸ್​-ಟೈಟ್​ ಮಾಡಲು ಎಂಟ್ರಿ ಕೊಟ್ಟ ಪ್ಲಂಬರ್! ಸ್ಪರ್ಧಿಗಳು ಶಾಕ್​...

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios