Asianet Suvarna News Asianet Suvarna News

ಮಾಜಿ ಗಂಡ ಅಂದ್ರೆ ನಿನ್ನಂಗಿರ್ಬೇಕಪ್ಪ ಅಂತ ಹೃತಿಕ್​ ರೋಷನ್ ಕಾಲೆಳೀತಿರೋ ನೆಟ್ಟಿಗರು​: ಅಷ್ಟಕ್ಕೂ ಆಗಿದ್ದೇನು?

ಮಾಜಿ ಪತ್ನಿ ಸುಸ್ಸಾನೇ ಖಾನ್​ ಬಾಯ್​ಫ್ರೆಂಡ್​ಗೆ ಬ್ರದರ್​ ಎಂದ ಹೃತಿಕ್​ ರೋಷನ್​, ಹುಟ್ಟುಹಬ್ಬಕ್ಕೆ ವಿಷ್​ ಮಾಡಿದ್ದಾರೆ. ಇದಕ್ಕೆ ಟ್ರೋಲಿಗರು ಏನಂತಿದ್ದಾರೆ ನೋಡಿ... 
 

Hrithik Roshan wishes ex wife Sussanne Khans boyfriend Arslan Goni on  birthday suc
Author
First Published Dec 20, 2023, 1:05 PM IST

ಹೃತಿಕ್​ ರೋಷನ್​ ಮತ್ತು ಸುಸ್ಸಾನೇ ಖಾನ್​ ವಿಚ್ಛೇದನ ಪಡೆದು ವರ್ಷಗಳೇ ಕಳೆದಿವೆ. ಮದ್ವೆಯಾಗಿರುವಾಗಲೇ ಕಂಗನಾ ರಣಾವತ್​ ಜೊತೆ ಅಫೇರ್​ ಇಟ್ಟುಕೊಂಡಿದ್ದ ಹೃತಿಕ್​ ಕೊನೆಗೂ ಅವರಿಗೂ ಕೈಕೊಟ್ಟು, ಸುಸ್ಸಾನೇ ಖಾನ್​ಗೂ ಡಿವೋರ್ಸ್​ ಕೊಟ್ಟು, ಸದ್ಯ  ಗಾಯಕಿ ಸಬಾ ಅಜಾದ್ ಜೊತೆ ಸಂಬಂಧದಲ್ಲಿದ್ದಾರೆ. ಇವರ ಲವ್ ವಿಚಾರ ಇದೀಗ ಗುಟ್ಟಾಗಿಯೇನು ಉಳಿದಿಲ್ಲ. ಕೆಲ ತಿಂಗಳ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ತಿಳಿಸಿದ್ದರು. ಇದರ ವಿಡಿಯೋ ಭಾರಿ ಸದ್ದು ಮಾಡಿತ್ತು. ಸಬಾ ಜೊತೆ ಡೇಟಿಂಗ್ ಮಾಡುತ್ತಾ ಕೆಲ ವರ್ಷಗಳೇ ಆಗಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಜೋಡಿ ಮಾತ್ರ ತುಟಿಕ್​ ಪಿಟಿಕ್​ ಅಂದಿರಲಿಲ್ಲ.  ಆದರೆ ಈಗ ಅವರಿಬ್ಬರು ಯಾವುದೇ ಹಿಂಜರಿಕೆ ಇಲ್ಲದೇ ತಮ್ಮ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಕೆಲಸಗಳಿಂದ ಸಣ್ಣ ಬ್ರೇಕ್​ ತೆಗೆದುಕೊಂಡಿರೋ ನಟ,  ಅರ್ಜೆಂಟೀನಾದಲ್ಲಿ ಗರ್ಲ್​ಫ್ರೆಂಡ್​ ಜೊತೆ ಮೋಜು ಮಸ್ತಿಯಲ್ಲಿ ತೊಡಗಿದ್ದು, ಅದರ ಫೋಟೋಗಳನ್ನು ಕೆಲ ತಿಂಗಳ ಹಿಂದೆ ಖುಲ್ಲಂ ಖುಲ್ಲಾ ಆಗಿ ಶೇರ್ ಮಾಡಿಕೊಂಡಿದ್ದರು. ಮದುವೆಯ ಬಗ್ಗೆ ಏನೂ ಹೇಳದ ಈ ಜೋಡಿ ಮಾತ್ರ ಟೂರ್​ ಎಂಜಾಯ್​ ಮಾಡುತ್ತಿದ್ದು, ಅವರ ಫೋಟೋ ವೈರಲ್​ ಆಗುತ್ತಿವೆ.
 

ಇದನ್ನು ನೋಡಿ ಸೂಸೆನ್ ಖಾನ್​ ಸುಮ್ಮನೇ ಇರ್ತಾರೆಯೇ? ಮಾಜಿ ಪತಿ ಹೃತಿಕ್​ ರೋಷನ್​ಗೆ ಸರಿಯಾದ ತಿರುಗೇಟು ನೀಡುತ್ತಲೇ ಇದ್ದಾರೆ. ಹೃತಿಕ್ ರೋಷನ್ ಗೆಳತಿ ಸಬಾ ಆಜಾದ್ (Saba Azad) ಜೊತೆಗಿನ ಫೋಟೋಗಳನ್ನು ಶೇರ್​ ಮಾಡಿಕೊಂಡ ಎರಡು ದಿನಗಳಲ್ಲಿಯೂ ಸೂಸೇನ್​ ಖಾನ್​  ತಮ್ಮ ಸ್ನೇಹಿತ  ಅರ್ಸ್ಲಾನ್ ಗೋನಿಯೊಂದಿಗೆ ಇರುವ ವಿಡಿಯೋ ಒಂದನ್ನು ಶೇರ್​ ಮಾಡಿದ್ದರು. ರೊಮ್ಯಾಂಟಿಕ್​ ರೀಲ್ಸ್​ ಇದಾಗಿದ್ದು, ಇದನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು.  ಸೂಸೇನ್​ ಮತ್ತು  ಆರ್ಸ್ಲಾನ್ ಅವರ ರಜೆಯ ಕ್ಷಣಗಳನ್ನು ಇದರಲ್ಲಿ ನೋಡಬಹುದು. ನೈಟ್‌ಕ್ಲಬ್‌ನಲ್ಲಿ ಪಾರ್ಟಿಗೆ ಅಟೆಂಡ್​ ಆಗಿರೋ ಜೋಡಿ,  ತಡರಾತ್ರಿಯ ವೇಳೆ ರೊಮ್ಯಾಂಟಿಕ್​ ಮೂಡ್​ನಲ್ಲಿರುವುದನ್ನು ನೋಡಬಹುದು.

ನೀನೇ ಬೇಕು... ಬಾಯ್‌ಫ್ರೆಂಡ್‌ನ ತಬ್ಬಿಕೊಂಡು ಬರ್ತ್‌ಡೇ ವಿಶ್ ಮಾಡಿದ ಹೃತಿಕ್ ರೋಷನ್‌ ಮಾಜಿ ಪತ್ನಿ

ಇದರ ಮಧ್ಯೆಯೇ ನಿನ್ನೆ ಆರ್ಸ್ಲಾನ್ ಜನುಮದಿನ. ಈ ಸಂದರ್ಭದಲ್ಲಿ ಮಾಜಿ ಪತಿಗೆ ಇನ್ನಷ್ಟು ಹೊಟ್ಟೆ ಉರಿ ಬರಿಸಿದ್ದ ಸುಸ್ಸಾನೇ ಖಾನ್​, ಬಾಯ್​ಫ್ರೆಂಡ್​ ಜೊತೆ ಲಿಪ್​ಲಾಕ್​ ಮಾಡಿಕೊಂಡು ಹುಟ್ಟುಹಬ್ಬದ ವಿಷ್​ ಮಾಡಿದ್ದರು. ಹ್ಯಾಪಿ ಹ್ಯಾಪಿಯೆಸ್ಟ್ ಬರ್ತ್‌ಡೇ ಮೈ ಲವ್, ನೀನು ನನಗೆ ಸಿಕ್ಕಿದ ಶ್ರೇಷ್ಠವಾದ ಉಡುಗೊರೆ. ನೀನು ನಾನು ಎಂದೂ ಊಹಿಸಿದ್ದಕ್ಕಿಂತಲೂ ಹೆಚ್ಚು ಖುಷಿಯಾಗಿ ನನ್ನನ್ನರಿಸಿದ್ದೀಯಾ ಎಂದು ಹೇಳಿದ್ದರು. ನೀನು ನನ್ನನ್ನು ಮತ್ತಷ್ಟು ಒಳ್ಳೆಯ ವ್ಯಕ್ತಿಯಾಗಿ ಪರಿವರ್ತಿಸಿದ್ದೀಯಾ.. ನನ್ನ ಪ್ರೀತಿಯೇ... ನಮ್ಮ ಆತ್ಮದಲ್ಲಿರುವ ಪ್ರತಿಯೊಂದು ಕೋಶದಿಂದಲೂ ನಾವು ಈ ಜೀವನವನ್ನು ಎಂಜಾಯ್ ಮಾಡಬೇಕು. ಬೇಬೀ ನಾವು ಈಗಷ್ಟೇ ಪ್ರಾರಂಭಿಸಿದ್ದೇವೆ.. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ವಿಷ್​ ಮಾಡಿದ್ದರು. ಇದಕ್ಕೆ ಲವರ್​ ಕೂಡ ಥ್ಯಾಂಕ್ಯೂ ಎಂದು ರಿಪ್ಲೈ ಮಾಡಿದ್ದಾರೆ.

ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಹೃತಿಕ್​ ರೋಷನ್​, ಮಾಜಿ ಪತ್ನಿಯ ಲವರ್​ ಅನ್ನು ಬ್ರದರ್​ ಎಂದು ಕರೆದಿದ್ದು, ಹುಟ್ಟುಹಬ್ಬಕ್ಕೆ ವಿಷ್​ ಮಾಡಿದ್ದಾರೆ. ಹುಟ್ಟುಹಬ್ಬದ ಶುಭಾಶಯ ಎಂದಿದ್ದಾರೆ. ಇದನ್ನು ನೋಡಿ, ನೆಟ್ಟಿಗರು ನಟನ ಕಾಲೆಳೆಯುತ್ತಿದ್ದಾರೆ. ಮಾಜಿ ಪತಿ ಅಂದ್ರೆ ನಿನ್ನಂಗಿರಬೇಕು ನೋಡಪ್ಪಾ ಅಂತಿದ್ದಾರೆ ಟ್ರೋಲಿಗರು. ಇನ್ನು ಹೃತಿಕ್​ ಫ್ಯಾನ್ಸ್​ ತಮ್ಮ ನೆಚ್ಚಿನ ನಟನ ಗುಣಗಾನ ಮಾಡುತ್ತಿದ್ದಾರೆ. ಅಂದಹಾಗೆ ಹೃತಿಕ್​ ಮತ್ತು ಸುಸ್ಸಾನೇ ಡಿವೋರ್ಸ್​ ಪಡೆದು 9 ವರ್ಷಗಳು ಕಳೆದಿವೆ. ಸೂಸೇನ್​ ಖಾನ್​ಗೆ ಈಗ 48 ವರ್ಷ ವಯಸ್ಸು. ಈಕೆಯ ಬಾಯ್​ಫ್ರೆಂಡ್​ಗೆ 37 ವರ್ಷ ವಯಸ್ಸಾದರೆ, ಹೃತಿಕ್​ ರೋಷನ್​ ಅವರಿಗೆ 49 ವರ್ಷ ವಯಸ್ಸು. 

ನಂಬಿಕೆಗಿಂತ ಮುಖ್ಯ ದಾಂಪತ್ಯದಲ್ಲಿ ಇನ್ನೇನಿದೆ? ಥ್ಯಾಂಕ್ಯೂ ಗೌತಮ್​ ಸರ್​ ಅಂತಿದ್ದಾರೆ ಅಮೃತಧಾರೆ ಫ್ಯಾನ್ಸ್​
 

Follow Us:
Download App:
  • android
  • ios