Asianet Suvarna News Asianet Suvarna News

ಗರ್ಲ್ಸ್ ಟ್ರಿಪ್ ಗೆ ಹೋಗಿ ಬಂದವಳೇ ಪತಿಗೆ ಡಿವೋರ್ಸ್ ನೀಡಿದ್ಲು! ಆಗಿದ್ದೇನು ಅಲ್ಲಿ?

ಗರ್ಲ್ಸ್ ಟ್ರಿಪ್ ತುಂಬಾ ಮಜವಾಗಿರುತ್ತೆ. ನಿತ್ಯ ಜೀವನದ ಒತ್ತಡ ಕಳೆಯಲು ಮಹಿಳೆಯರು ಪ್ರವಾಸದ ಪ್ಲಾನ್ ಮಾಡ್ತಾರೆ. ಪ್ರವಾಸಕ್ಕೆ ಹೋದ ಸಮಯದಲ್ಲಿ ಪತ್ನಿ ಹೀಗಾಗ್ತಾಳೆ ಎಂದು ಆತ ಭಾವಿಸಿರಲಿಲ್ಲ. ಆದ್ರೆ ಮುಂದೇನಾಯ್ತು ಗೊತ್ತಾ? 
 

Woman Had Horrifying Discovery On A Girls Trip Divorced My Husband roo
Author
First Published Apr 24, 2024, 3:40 PM IST | Last Updated Apr 24, 2024, 3:40 PM IST

ನೆಮ್ಮದಿ ಇಲ್ಲದ ಜಾಗದಲ್ಲಿ ತುಂಬಾ ಸಮಯ ಕಳೆಯೋದು ಕಷ್ಟ. ದಾಂಪತ್ಯದಲ್ಲಿ ಸಂತೋಷ ಹುಡುಕುವವರ ಸಂಖ್ಯೆ ಬಹಳ ಕಡಿಮೆ. ಅನೇಕರು ಅನಿವಾರ್ಯ ಎನ್ನುವ ಕಾರಣಕ್ಕೆ, ಮಕ್ಕಳ ಮುಖ ನೋಡಿ, ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಾರೆ. ದಾಂಪತ್ಯದಲ್ಲಿ ಹೊಂದಾಣಿಕೆ, ಆತ್ಮ ಗೌರವ ಬಹಳ ಮುಖ್ಯವಾದ್ರೂ ಉಸಿರುಗಟ್ಟುವ ವಾತಾವರಣದಲ್ಲಿ ತುಂಬಾ ದಿನ ಕಾಲಕಳೆಯೋದು ಕಷ್ಟವಾಗುತ್ತದೆ. ಆದ್ರೆ ನಾವು ಉಸಿರುಗಟ್ಟಿಸುವ ವಾತಾವರಣದಲ್ಲಿ ಇದ್ದೇವೆ ಎಂಬುದೇ ಕೆಲವರಿಗೆ ತಿಳಿಯೋದಿಲ್ಲ. ಹೊರಗಿನ ಪ್ರಪಂಚದ ಸಂಪರ್ಕಕ್ಕೆ ಬಂದಾಗ, ನಮ್ಮ ಸುತ್ತಮುತ್ತಲಿನ ಜನರ ಜೀವನವನ್ನು ಇಣುಕಿ ನೋಡಿದಾಗ ಅನೇಕರಿಗೆ ಜ್ಞಾನೋದಯವಾಗೋದಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ತನ್ನ ಕಥೆ ಹೇಳಿಕೊಂಡ ಮಹಿಳೆಗೂ ನಾಲ್ಕು ಮಕ್ಕಳಾಗಿ, 40 ವರ್ಷವಾದ್ಮೇಲೆ ತನ್ನದಲ್ಲದ ಜೀವನವನ್ನು ತಾನು ಬದುಕುತ್ತಿದ್ದೇನೆ ಎಂಬ ಸತ್ಯ ಗೊತ್ತಾಗಿದೆ. ಗರ್ಲ್ಸ್ ಜೊತೆ ಪ್ರವಾಸಕ್ಕೆ ಹೋದ ಮಹಿಳೆ ವಾಪಸ್ ಬಂದಾಗ ತನ್ನ ಪತಿಗೆ ಡಿವೋರ್ಸ್ ನೀಡಿದ್ದಾಳೆ.

ಯುಕೆ (UK) ಯ ಲಿವರ್‌ಪೂಲ್‌ನ, ಸ್ಟೆಫನಿ ಹ್ಯಾನ್ಸನ್ ಹೆಸರಿನ ಮಹಿಳೆ ಪ್ರವಾಸದ ನಂತ್ರ ವಿಚ್ಛೇದನ (Divorce) ನೀಡಿದ ಮಹಿಳೆ. ಕುಟುಂಬದ ಜಂಜಾಟದಿಂದ ಬ್ರೇಕ್ ಪಡೆದ ಮಹಿಳೆ ತನ್ನ ಗರ್ಲ್ಸ್ ಗ್ಯಾಂಗ್ ಜೊತೆ ಪ್ರವಾಸಕ್ಕೆ ಹೊರಟಿದ್ದಾಳೆ. 40 ವರ್ಷದ ಸ್ಟೆಫನಿ ಹ್ಯಾನ್ಸನ್ ಗೆ ನಾಲ್ಕು ಮಕ್ಕಳು. ಸದಾ ಮಕ್ಕಳ ಜೊತೆ ಇರ್ತಿದ್ದ ಸ್ಟೆಫನಿ ಹ್ಯಾನ್ಸನ್ ತನ್ನಿಬ್ಬರು ಮಕ್ಕಳ ಜೊತೆ ಟ್ರಿಪ್ (Trip) ಎಂಜಾಯ್ ಮಾಡಿದ್ದಾಳೆ. 

ಶ್ರೇಷ್ಠಾ V/S ಪೂಜಾ: ಇಬ್ಬರಲ್ಲಿ ಗೆಲ್ಲುವವರು ಯಾರು? ಕುಸುಮಾಗೆ ಸತ್ಯ ಗೊತ್ತಾಗತ್ತಾ?

2022ರಲ್ಲಿ ಸ್ಟೆಫನಿ ತನ್ನ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಗ್ರೀಸ್‌ಗೆ ಪ್ರವಾಸಕ್ಕೆ ಹೋಗಿದ್ದಾಳೆ. ಈ ವೇಳೆ ಆಕೆಗೆ ಒಮ್ಮೆಯೂ ಪತಿಯ ನೆನಪು ಬರಲಿಲ್ಲ. ಎಲ್ಲ ಒತ್ತಡ ಮರೆತು ಮಜಾ ಮಾಡ್ತಿದ್ದ ಮಹಿಳೆಗೆ ಆಗಾಗ ಮಕ್ಕಳ ನೆನಪು ಮಾತ್ರ ಆಗ್ತಿತ್ತು. ಸ್ವಿಮ್ಮಿಂಗ್ ಮಾಡ್ತಿದ್ದ ವೇಳೆ, ಸ್ನೇಹಿತರ ಜೊತೆ ಮಾತನಾಡುವ ವೇಳೆ ಸ್ಟೆಫನ್ ಗೆ ಜೀವನದ ಸತ್ಯ ಗೊತ್ತಾಯ್ತು. ನಾನು ಸ್ನೇಹಿತೆಯರ ಜೊತೆ ಆರಾಮವಾಗಿ ಕಾಲ ಕಳೆಯುತ್ತಿದ್ದೆ. ನನಗೆ ವಾಪಸ್ ಹೋಗುವ ಮನಸ್ಸಿರಲಿಲ್ಲ. ನಾನು ದೀರ್ಘ ಸಮಯದಿಂದ ಬೇಸರದಲ್ಲಿದ್ದೇನೆ, ನನಗೆ ಈ ದಾಂಪತ್ಯ ಜೀವನದಲ್ಲಿ (Married LIfe) ಸುಖ ಸಿಗ್ತಿರಲಿಲ್ಲ ಎಂಬುದು ಸ್ಟೆಫನಿ ಗೆ ಗೊತ್ತಾಗಿದೆ. 

ಟ್ರಿಪ್ ನಿಂದ ವಾಪಸ್ ಯುಕೆಗೆ ಬಂದ ಸ್ಟೆಫನಿ ತನ್ನ ಪತಿಗೆ ವಿಚ್ಛೇದನ ನೀಡೋದಾಗಿ ಹೇಳಿದ್ದಾಳೆ. ಸದ್ಯ ಎಲ್ಲವೂ ಮುಗಿದಿದೆ. ನನಗೆ ನಿನ್ನ ನೆನಪು ಬರ್ತಿರಲಿಲ್ಲ. ನಾನು ಹೊಸ ಜೀವನ ನಡೆಸಲು ನಿರ್ಧರಿಸಿದ್ದೇನೆ. ಇಷ್ಟು ದಿನ ನಾನು ಎಷ್ಟು ಅಸಂತೋಷವಾಗಿದ್ದೆ ಎಂಬುದು ನನಗೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಗೊತ್ತಾಯ್ತು.  ಈಗ ಆರೋಗ್ಯವಾಗಿರಲು ಮತ್ತು ತನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಿದ್ಧವಾಗಿದ್ದೇನೆ ಎಂದು ಸ್ಟೆಫನಿ ತನ್ನ ಪತಿಗೆ ಹೇಳಿದ್ದಾಳೆ.  

ಸ್ಟೆಫನ್ ತನ್ನ ಪತಿಗೆ ವಿಚ್ಛೇದನ ನೀಡಿದ ನಂತ್ರ ತನ್ನ ತೂಕ ಇಳಿಸಲು ಹೆಚ್ಚು ಗಮನ ಹರಿಸಿದ್ದಾಳೆ. ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಫೋಟೋ ನೋಡಿದ ನಂತ್ರ ಆಕೆಗೆ ತೂಕ ಹೆಚ್ಚಾಗಿರೋದು ಗೊತ್ತಾಗಿದೆ. ಫ್ಲೆಬೋಟೊಮಿಸ್ಟ್ ಕೆಲಸ ಮಾಡುವ ಸ್ಟೆಫನಿ, ತೂಕ ಇಳಿಸಿಕೊಳ್ಳಲು ವರ್ಕ್ ಔಟ್ ಮಾಡಿದ್ದಾಳೆ. ಒಳ್ಳೆಯ ಡಯಟ್ ಫಾಲೋ ಮಾಡಿದ್ದಾಳೆ. 

Celebrity Parenting: ಒಬ್ಬಳಿಗೆ ಫೀಡ್ ಮಾಡುವಾಗ ಇನ್ನೊಬ್ಬಳು ಅಳ್ತಿದ್ಲು, ಹುಚ್ಚಿಯಂತಾಗ್ತಿದ್ದೆ ಒಮ್ಮೊಮ್ಮೆ

2022ರಲ್ಲಿಯೇ ವಿಚ್ಛೇದನ ಪಡೆದು, ಫಿಟ್ನೆಸ್ (Fitness) ಬಗ್ಗೆ ಹೆಚ್ಚು ಗಮನ ನೀಡಿದ ಸ್ಟೆಫನಿ, ಡೇವಿಡ್ ಬಾಲ್ಡ್ವಿನ್ ಹೆಸರಿನ ವ್ಯಕ್ತಿ ಜೊತೆ ಡೇಟಿಂಗ್ (Dating) ಶುರು ಮಾಡಿದ್ದಾಳೆ. ಆತನ ಜೊತೆ ಸ್ಟೆಫನ್ ಖುಷಿಯಾಗಿದ್ದಾಳೆ. ನಾನು ಹೇಗಿದ್ದೇನೋ ಅದೇ ರೀತಿ ಡೇವಿಡ್ ಬಾಲ್ಡ್ವಿನ್ ನನ್ನನ್ನು ಸ್ವೀಕರಿಸಿದ್ದಾನೆ. ನಾನು ಪ್ರವಾಸಕ್ಕೆ ಹೋಗದೆ ಇದ್ರೆ ತಪ್ಪು ವ್ಯಕ್ತಿ ಜೊತೆ ಜೀವನ ನಡೆಸಬೇಕಾಗಿತ್ತು ಎಂದಿದ್ದಾಳೆ. 

Latest Videos
Follow Us:
Download App:
  • android
  • ios