Asianet Suvarna News Asianet Suvarna News

ಶ್ರೇಷ್ಠಾ v/s ಪೂಜಾ: ಇಬ್ಬರಲ್ಲಿ ಗೆಲ್ಲುವವರು ಯಾರು? ಕುಸುಮಾಗೆ ಸತ್ಯ ಗೊತ್ತಾಗತ್ತಾ?

ತಾಂಡವ್​ ಮತ್ತು ಶ್ರೇಷ್ಠಾಳ ಲವ್​ಸ್ಟೋರಿಯನ್ನು ಎಲ್ಲರ ಎದುರು ಹೇಳುವುದಾಗಿ ಪೂಜಾ ಚಾಲೆಂಜ್​ ಮಾಡಿ ಬಂದಿದ್ದಾಳೆ. ಮುಂದೇನಾಗುತ್ತೆ?
 

Pooja has made a challenge to tell Tandav and Shresthas love story in Bhagyalakshmi suc
Author
First Published Apr 24, 2024, 2:53 PM IST | Last Updated Apr 24, 2024, 2:53 PM IST

ತಾಂಡವ್​ ಮತ್ತು ಶ್ರೇಷ್ಠಾಳ ಲವ್ ಸ್ಟೋರಿಗೆ ಫುಲ್​ಸ್ಟಾಪ್​ ಹಾಕಲು ಇತ್ತ ಪೂಜಾ ಪ್ಲ್ಯಾನ್​ ಮಾಡುತ್ತಿದ್ದರೆ, ಇನ್ನು ಹತ್ತೇ ದಿನಗಳಲ್ಲಿ ಮದುವೆಯಾಗುವುದಾಗಿ ಶ್ರೇಷ್ಠಾ ಚಾಲೆಂಜ್​ ಹಾಕಿದ್ದಾಳೆ. ಹತ್ತು ದಿನಗಳಲ್ಲಿ ಮದುವೆಯಾಗಬೇಕು ಎಂದು ತಾಂಡವ್​ ಬಳಿ ಹೇಳುತ್ತಿರುವಾಗಲೇ ಪೂಜಾ ಎಂಟ್ರಿ ಕೊಟ್ಟು ಇಬ್ಬರ ಮುಖಕ್ಕೂ ಮಂಗಳಾರತಿ ಮಾಡಿದ್ದಾಳೆ. 16 ವರ್ಷದ ಮಗಳನ್ನು ಮನೆಯಲ್ಲಿ ಇಟ್ಟುಕೊಂಡು ಹೀಗೆ ಹೇಳಲು ನಾಚಿಕೆ ಆಗಲ್ವಾ ಎಂದು ಭಾವಂಗೆ ಕೇಳಿದರೆ, ಊರಲ್ಲಿ ಎಲ್ಲಾ ಗಂಡಸರು ಬಿಟ್ಟು ಮದುವೆಯಾದ ಭಾವನೆ ಬೇಕಿತ್ತಾ ಎಂದು ಶ್ರೇಷ್ಠಾಳಿಗೆ ಝಾಡಿಸಿದ್ದಾಳೆ. ಉರಿದುಕೊಂಡಿರೋ ಶ್ರೇಷ್ಠಾ ಪೂಜಾಳಿಗೆ ಇಲ್ಲಸಲ್ಲದ್ದನ್ನೆಲ್ಲಾ ಹೇಳಿದ್ದಾಳೆ. ಎಲ್ಲಾ ವಿಷಯವನ್ನು ಮನೆಯವರಿಗೆ ಹೇಳುವೆ ಎಂದು ಸಿಟ್ಟಿನಿಂದ ಪೂಜಾ ಹೋಗಿದ್ದಾಳೆ.

ಇವೆಲ್ಲವನ್ನೂ ಮೂಕ ಪ್ರೇಕ್ಷಕರನ್ನಾಗಿ ತಾಂಡವ್​ ನೋಡುತ್ತಿದ್ದುದರಿಂದ ಸಿಟ್ಟಿಗೆದ್ದ ಶ್ರೇಷ್ಠಾ ಯಾಕೆ ಮಾತನಾಡಲಿಲ್ಲ ಪೂಜಾ ಎದುರು ಎಂದು ಬೈದಿದ್ದಾನೆ.  ಆದರೆ ತನ್ನ ಬಂಡವಾಳ ಎಲ್ಲಾ ಎಲ್ಲಿ ಮನೆಯವರ ಎದುರು ಬಯಲಾಗುವುದೋ ಎಂದು ಗಾಬರಿಯಲ್ಲಿರೋ ತಾಂಡವ್​, ಶ್ರೇಷ್ಠಾಳಿಗೆ ಎದುರು ಬೈದಿದ್ದಾನೆ. ಅಷ್ಟರಲ್ಲಿಯೇ ಪೂಜಾ ಅಲ್ಲಿಂದ ಹೊರಟು ಹೋಗಿದ್ದಾಳೆ.

ತನಗಿಂತ ಹೆಚ್ಚು ಗೌರವ ಸಿಗ್ತಿದೆಯಂತ ಕೊಲೆನೇ ಮಾಡ್ಸೋದಾ? ನಿಜಕ್ಕೂ ಇಂಥ ಹೆಂಗಸರು ಇರ್ತಾರಾ?

ಇತ್ತ ಕುಸುಮಾ, ತನ್ನ ಮಗನನ್ನೇ ಶ್ರೇಷ್ಠಾ ಮದುವೆಯಾಗ್ತಿರೋದು ಎಂದು ತಿಳಿಯದೇ ಶ್ರೇಷ್ಠಾಳ ಅಮ್ಮ ಯಶೋದಾ ಬಳಿ ಮಾತನಾಡುತ್ತಿದ್ದಾಳೆ. ತನ್ನ ಮಗಳ ಗಂಡನಾಗುವವನ ತಂದೆ-ತಾಯಿ ಸರಿಯಿಲ್ಲ ಎಂದು ಯಶೋದಾ ಹೇಳುತ್ತಿದ್ದಾಳೆ. ಆದರೆ ತನ್ನ ಮಗಳ ಸಲುವಾಗಿ ಅವನ ಜೊತೆ ಮದ್ವೆ ಮಾಡಿಸುತ್ತೇನೆ ಎನ್ನುತ್ತಿದ್ದಾಳೆ. ಅಷ್ಟಕ್ಕೂ ತಾಂಡವ್​ ಹೆಸರನ್ನು ತರುಣಾ ಎಂದು ಬದಲಾಯಿಸಿಕೊಂಡಿರೋ ಕಾರಣ ಕುಸುಮಂಗೂ ವಿಷಯ ಗೊತ್ತಾಗುತ್ತಿಲ್ಲ. ಒಮ್ಮೆ ತಾನೂ ಅವನನ್ನು ನೋಡಬೇಕು ಎಂದಿದ್ದಾಳೆ. ಆ ಹುಡುಗನ ಅಪ್ಪ-ಅಮ್ಮನೇ ಹೀಗಿರುವಾಗ ಹುಡುಗ ಹೇಗಿರಬೇಕು ಎಂದೆಲ್ಲಾ ಹೇಳುತ್ತಿರೋ ಕುಸುಮಾಗೆ ಅವನು ತನ್ನ ಮಗನೇ, ಅವನ ಮನೆಯಲ್ಲಿ ಇರೋರು ನಕಲಿ ಅಪ್ಪ-ಅಮ್ಮ ಎಂದು ಗೊತ್ತಿಲ್ಲ. ಒಟ್ಟಿನಲ್ಲಿ ಬೇಗ ಮದುವೆ ಮಾಡಿಸಿ ಎಂದಿದ್ದಾಳೆ.

ಅಷ್ಟರಲ್ಲಿ ಬಂದಿರೋ ಪೂಜಾ ಎಲ್ಲವನ್ನೂ ಕೇಳಿಸಿಕೊಂಡು ಈ ಮದುವೆ ಸಾಧ್ಯವಿಲ್ಲ ಎಂದಿದ್ದಾಳೆ. ಅದನ್ನು ಕೇಳಿ ಕುಸುಮಾ ಶಾಕ್​ ಆಗಿದ್ದು, ಇದರ ಪ್ರೊಮೋ ಬಿಡುಗಡೆಯಾಗಿದೆ. ಹಾಗಿದ್ದರೆ ಪೂಜಾ ಎಲ್ಲ ಸತ್ಯ ಬಾಯಿಬಿಡುತ್ತಾಳಾ ಎನ್ನುವುದು ಈಗಿರುವ ಪ್ರಶ್ನೆ. ಅದೇ ಇನ್ನೊಂದೆಡೆ ಭಾಗ್ಯ ಕೆಲಸ ಹುಡುಕಿಕೊಂಡು ಹೋಟೆಲ್​ ಅಲೆಯುತ್ತಿದ್ದಾಳೆ. ಅಂತೂ ಒಂದು ಹೋಟೆಲ್​ನಲ್ಲಿ ಕೆಲಸ ಸಿಗೋ ಛಾನ್ಸ್​ ಇದೆ. ಹೋಟೆಲ್​ ಬಿಟ್ಟು ಕೇಟರಿಂಗ್​ ಶುರು ಮಾಡಿ ಎಂದು ಭಾಗ್ಯಲಕ್ಷ್ಮಿ ಫ್ಯಾನ್ಸ್​ ಹೇಳುತ್ತಿದ್ದಾರೆ. ಮುಂದೆ ಏನಾಗುತ್ತೋ ನೋಡಬೇಕು.  

ಮುಚ್ಚಿಟ್ಟ ಗುಟ್ಟು ರಟ್ಟಾಗಿ ಹೋಯ್ತು: ಸಿಹಿಯನ್ನು ಒಪ್ಪಿಕೊಳ್ತಾನಾ ತಾತ?

 


Latest Videos
Follow Us:
Download App:
  • android
  • ios