ಸರ್ಕಾರಿ ಮಹಿಳಾ ಉದ್ಯೋಗಿಗೆ ಸಂಕಷ್ಟ ತಂದ ಬೆತ್ತಲೆ ಸ್ನಾನ, ಗಂಡನ ವಿರುದ್ಧವೇ ದೂರು ದಾಖಲಿಸಿದ ಪತ್ನಿ, ಪತ್ನಿಯ ಖಾಸಗಿ ವಿಡಿಯೋಗಳನ್ನು ಸೆರೆ ಹಿಡಿದ ಗಂಡ ಲೀಕ್ ಮಾಡಲು ಮುಂದಾಗಿದ್ದಾನೆ. ಇಷ್ಟೇ ಅಲ್ಲ 1.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.

ಮುಂಬೈ (ಮಾ.17) ಮಹಿಳೆಯರ ವಿಡಿಯೋಗಳನ್ನು ಸೆರೆ ಹಿಡಿದು ಲೀಕ್ ಮಾಡುವ ಅಥವಾ ಬೆದರಿಸುವ ಘಟನೆಗಳ ವಿರುದ್ದ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಆದರೂ ಕೆಲ ಘಟನೆಗಳು ನಡೆದಿದೆ. ಇದೀಗ ಇಲ್ಲಿ ವಿಲನ್ ಬೇರೆ ಯಾರು ಅಲ್ಲ, ಸ್ವತಃ ಗಂಡ. ಪತ್ನಿಯ ಖಾಸಗಿ ವಿಡಿಯೋಗಳನ್ನು ರಹಸ್ಯವಾಗಿ ಸೆರೆ ಹಿಡಿದಿದ್ದಾನೆ. ಬಾತ್‌ರೂಂನಲ್ಲಿ ಮೊಬೈಲ್ ಇಟ್ಟು ಪತ್ನಿಯ ಸ್ನಾನದ ವಿಡಿಯೋಗಳನ್ನು ಸೆರೆ ಹಿಡಿದಿದ್ದಾನೆ. ಬಳಿಕ ಸರ್ಕಾರಿ ಉದ್ಯೋಗದಲ್ಲಿರುವ ಪತ್ನಿಗೆ 1.5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಬೇಡಿಕೆ ಈಡೇರಿಸದಿದ್ದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸಿದ್ದಾನೆ. ಕೆರಳಿದ ಪತ್ನಿ ದೂರು ನೀಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ರಹಸ್ಯವಾಗಿ ವಿಡಿಯೋ ಸೆರೆ ಹಿಡಿದ ಪತಿ

ಪತ್ನಿಯ ಕೆಲ ವಿಡಿಯೋಗಳನ್ನು ಪತಿ ರೆಕಾರ್ಡ್ ಮಾಡಿದ್ದಾನೆ. ಈ ಪೈಕಿ ಬಾತ್‌ರೂಂ ವಿಡಿಯೋ ಸೇರಿದಂತೆ ಕೆಲ ವಿಡಿಯೋಗಳನ್ನು ಲೀಕ್ ಮಾಡಲು ಮುಂದಾಗಿದ್ದಾನೆ. 1.5 ಲಕ್ಷ ರೂಪಾಯಿ ಹಣದ ಬೇಡಿಕೆ ಈಡೇರಿಸಲು ನಿರಾಕರಿಸಿದಾಗ ಪತ್ನಿಯ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿದ್ದಾನೆ. ಗಂಡ ಹಾಗೂ ಆತನ ಪೋಷಕರ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸಲು ಪತ್ನಿ ಮುಂದಾಗಿದ್ದಾಳೆ. ಆದರೆ ಪ್ರಯೋಜನವಾಗಿಲ್ಲ. ಹಣ ಕೊಡದಿದ್ದರೆ ವಿಡಿಯೋ ಸೋಶಿಯಲ್ ಮೀಡಿಯಾ ಮೂಲಕ ಲೀಕ್ ಮಾಡುವುದಾಗಿ ಹೇಳಿದ್ದಾನೆ. ಜೇಮಲ್ ಸೇರಿದಂತೆ ಕೆಲವೆಡೆ ಈ ವಿಡಿಯೋಗಳನ್ನು ಸ್ಟೋರಿ ಮಾಡಿರುವುದಾಗಿ ಎಚ್ಚರಿಸಿದ್ದಾನೆ. ಗಂಡನ ಪರಿಪರಿಯಾಗಿ ಬೇಡಿಕೊಂಡರು 1.5 ಲಕ್ಷ ರೂಪಾಯಿ ಹಣದಲ್ಲಿ ಒಂದು ರೂಪಾಯಿ ಕಡಿಮೆ ಇಲ್ಲ ಎಂದು ಎಚ್ಚರಿಸಿದ್ದಾನೆ. ಹೀಗಾಗಿ ಪತ್ನಿ ಬೇರೆ ದಾರಿ ಕಾಣದೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಇಬ್ಬರು ಸರ್ಕಾರಿ ನೌಕರರು

ಮಹಾರಾಷ್ಟ್ರ ಸರ್ಕಾರದಲ್ಲಿ ಕ್ಲಾಸ್ 2 ದರ್ಜೆಯ ಮಹಿಳಾ ಉದ್ಯೋಗಿ ಅಂಬೇಗಾಂವ್ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿದ್ದಾರೆ. ಇಬ್ಬರು ಸರ್ಕಾರಿ ನೌಕರಿಯಲ್ಲಿದ್ದಾರೆ. ಕೆಲ ವರ್ಷದ ಹಿಂದೆ ಮದುವೆಯಾಗಿದೆ. ಆದರೆ ವರದಕ್ಷಿಣ ವಿಚಾರದಲ್ಲಿ ಕಿರುಕುಳ ಆರಂಭಗೊಂಡಿದೆ. ಗಂಡ ಸರ್ಕಾರಿ ನೌಕರಿಯಲ್ಲಿದ್ದರೂ ಊರು ತುಂಬ ಸಾಲ ಮಾಡಿದ್ದಾನೆ. ಬೆಟ್ಟಿಂಗ್ ಸೇರಿದಂತೆ ಇತರ ಚಟಗಳಿಂದ ಮಾಡಿದ ಸಾಲದಲ್ಲಿ ಮುಳುಗಿದ್ದಾನೆ. ಇತ್ತ ಪತ್ನಿ ವೇತನದಲ್ಲೂ ಮನೆ ನಡೆಯುತ್ತಿದೆ. ಇದರ ನಡುವೆ ಕಾರು ಸಾಲ ಪಾವತಿಸಲು ತವರು ಮನೆಯಿಂದ ಹಣ ತರುವಂತೆ ಪೀಡಿಸಿದ್ದಾನೆ. ವರದಕ್ಷಿಣೆ ರೂಪದಲ್ಲಿ ನಿನ್ನ ಮನೆಯವರು ಏನೂ ನೀಡಿಲ್ಲ. ಮದುವೆಗೂ ಮೊದಲು ಹಲವು ಭರವಸೆ ನೀಡಿದ್ದರು. ಆದರೆ ಇದೀಗ ಕೈತೊಳದೆಕೊಂಡಿದ್ದಾರೆ. ಸದ್ಯ 1.5 ಲಕ್ಷ ರೂಪಾಯಿ ಹಣವನ್ನು ತವರು ಮನೆಯಿಂದ ತರುವಂತೆ ಪೀಡಿಸಿದ್ದಾನೆ.

ಮಹಿಳಾ ಉದ್ಯೋಗಿಯ ಪತಿ ವಿರುದ್ಧ ಸೆಕ್ಷನ್ 85 ಹಾಗೂ ಸೆಕ್ಷನ್ 115(2) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ ವರದಕ್ಷಿಣ ಕಿರುಕುಳ ಆರೋಪವೂ ಕೇಳಿಬಂದಿರುವ ಕಾರಣ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.