* ಅಶ್ಲೀಲ  ವೆಬ್ ಸೈಟ್ ನಲ್ಲಿ ತನ್ನದೇ ವಿಡಿಯೋ ಕಂಡು ದಂಗಾದ* ಗೆಳೆತಿಯೊಂದಿಗೆ ಕಳೆದ ಮಧುರ ಕ್ಷಣ ರೆಕಾರ್ಡ್ ಮಾಡಿದ್ದು ಯಾರು?* ಡಿಟಿಟಲ್ ಯುಗದಲ್ಲಿ ಯಾವ ಮಾಹಿತಿಗಳು ಸೇಫ್ ಅಲ್ಲ

ಬೆಂಗಳೂರು(ಫೆ. 02) ಆನ್ ಲೈನ್ (Online) ಯುಗ, ಡಿಜಿಟಲ್ ((Digital world) ಯುಗದಲ್ಲಿ ಯಾವ ಮಾಹಿತಿಗಳು ಸುರಕ್ಷಿತವಲ್ಲ ಎಂಬ ಘಟನಾವಳಿಗಳನ್ನು ಅನೇಕ ನೋಡುತ್ತಿರು್ತೆವೆ., ಈಗ ಬೆಂಗಳೂರಿನಿಂದ ಅಂಥದ್ದೇ ಒಂದು ಪ್ರಕರಣ ದಾಖಲಾಗಿದೆ.

ಯುವಕನೊಬ್ಬ ಅಶ್ಲೀಲ ವೆಬ್‌ಸೈಟ್‌ ವೀಕ್ಷಿಸುತ್ತಿದ್ದಾಗ ತನ್ನದೇ ವೀಡಿಯೋ (Video) ಕಂಡು ದಂಗಾಗಿದ್ದಾನೆ. ಬೆಂಗಳೂರಿನ (Bengaluru) ನ್‌ಟೌನ್‌ನ 25 ವರ್ಷದ ಟೆಕ್ಕಿ ಕೇಂದ್ರ ವಿಭಾಗದ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು ವಿಡಿಯೋ ಹೇಗೆ ಅಪ್ ಲೋಡ್ ಆಗಿದೆ ಎನ್ನುವುದು ಗೊತ್ತಿಲ್ಲ ಎಂದಿದ್ದಾನೆ.

ವೀಡಿಯೋದಲ್ಲಿ ಮುಖಗಳು ಸರಿಯಾಗಿ ಕಾಣುತ್ತಿಲ್ಲ. ಆದರೆ, ದೇಹದಲ್ಲಿರುವ ಮಚ್ಚೆ ಹಾಗೂ ಇತರ ಗುರುತುಗಳು ನನ್ನವೆ. ಗೆಳತಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ಹೇಗೆ ಲೀಕ್ ಆಗಿ ಅದು ಅಶ್ಲೀಲ ತಾಣಕ್ಕೆ ಅಪ್ ಲೋಡ್ ಆಗಿದೆ ಗೊತ್ತಾಗುತ್ತಿಲ್ಲ. ಕೇವಲ ಒಂದು ಕಡೆ ಅಲ್ಲ ಹಲವಾರು ತಾಣಗಳಿಗೆ ಅಪ್ಲೋಡ್ ಆಗಿದ ಎಂದು ಹೇಳಿದ್ದಾನೆ. 

ಸೇನೆಯ ಮುಖ್ಯ ಹುದ್ದೆ ಬಿಟ್ಟು porn ಚಿತ್ರೋದ್ಯಮಕ್ಕೆ ಧುಮುಕಿದ ಬೆಡಗಿ

ವಿದ್ಯಾರ್ಥಿಗಳ ಗ್ರೂಪ್ ನಲ್ಲಿ ಪೋರ್ನ್ ವಿಡಿಯೋ: ಎಡವಟ್ಟು ಕೆಲಸ ಮಾಡಿಕೊಂಡ ಈ ಶಿಕ್ಷಕ ಕೆಲಸ ಕಳೆದುಕೊಂಡಿದ್ದ. ಖಾಸಗಿ ಶಾಲೆ ಶಿಕ್ಷಕ ವಿದ್ಯಾರ್ಥಿಗಳಿಗೆಂದು ಮಾಡಿಕೊಂಡಿದ್ದ ವಾಟ್ಸಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಹರಿಬಿಟ್ಟಿದ್ದ.

ಕೊರೋನಾ (Coronavirus) ಕಾರಣದಿಂದ ಆನ್ ಲೈನ್ (Online) ತರಗತಿಗೆ ಅನುಕೂಲವಾಗಲು ವ್ಯಾಟ್ಸಪ್ ಗ್ರೂಪ್ ಮಾಡಲಾಗಿತ್ತು. ಈ ಗ್ರೂಪ್ ನಲ್ಲಿ ಗಣಿತ ಶಿಕ್ಷಕನೊಬ್ಬ ಅಶ್ಲೀಲ ವಿಡಿಯೋ ರವಾನಿಸಿದ್ದ. 12 ನೇ ತರಗತಿ ವಿದ್ಯಾರ್ಥಿಗಳಿಗಾಗಿ ರಚಿಸಿಕೊಂಡಿದ್ದ ವಾಟ್ಸಾಪ್ ಗ್ರೂಪ್ ನಲ್ಲಿ ಶಿಕ್ಷಕ ರಾತ್ರಿ ವೇಳೆ ಅಶ್ಲೀಲ ವಿಡಿಯೋ ಶೇರ್ ಮಾಡಿದ್ದಾನೆ. ವಿಷಯ ದೊಡ್ಡದಾಗಿದ್ದು ಶಾಲಾ ಆಡಳಿತ ಮಂಡಳಿಯೇ ಶಿಕ್ಷಕನ ವಿರುದ್ಧ ದೂರು ನೀಡಿದೆ. ಹತ್ತು ವರ್ಷದಿಂದ ಗಣಿತ ಕಲಿಸುತ್ತಿದ್ದ ಶಿಕ್ಷಕ ಇದೀಗ ಶಿಕ್ಷೆಗೆ ಗುರಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಿಕ್ಷಕ ಆರ್ ಮತಿವಣ್ಣನ್ ಅಶ್ಲೀಲ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರು ಆಘಾತಕ್ಕೆ ಒಳಗಾಗಿದ್ದು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದರು.

ಬಿಜೆಪಿ ಗ್ರೂಪ್ ನಲ್ಲಿ ವಿಡಿಯೋ: ಉತ್ತರ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಮತ್ತು ಸೊರಬ ಶಾಸಕ ಕುಮಾರ ಬಂಗಾರಪ್ಪ ಸಹ ಇರುವ ಗ್ರೂಪ್ ನಲ್ಲಿ ಬ್ಲ್ಯೂಫಿಲಂ ಹರಿದಾಡಿತ್ತು. ಬಿಜೆಪಿ ವಲಯದಲ್ಲಿ ಇರಿಸು ಮುರಿಸು ಮತ್ತು ಮುಜುಗರಕ್ಕೆ ಈ ಪ್ರಕರಣ ಕಾರಣವಾಗಿದ್ದ ಪ್ರಕರಣ ಇದು. 

'ಜ್ಞಾನ ಪ್ರಸಾರಕ್ಕೆಂದು' ಪೋರ್ನ್ ಹಬ್‌ಗೆ ಇನ್ನೂರು ವಿಡಿಯೋ ಅಪ್ ಲೋಡ್: ತೈವಾನ್ ನ ಗಣಿತ ಶಿಕ್ಷಕನೊಬ್ಬ ಮಾಡಿದ ಕೆಲಸ ವೈರಲ್ ಆಗಿದೆ. ಅಶ್ಲೀಲ ವೆಬ್ ತಾಣ ಪೋರ್ನ್ ಹಬ್ (Porn Hub) ನಲ್ಲಿ ಈ ಶಿಕ್ಷಕ ಗಣಿತಕ್ಕೆ ಸಂಬಂಧಿಸಿದ ಇನ್ನೂರಕ್ಕೂ ಅಧಿಕ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾನೆ. ಇಲ್ಲಿಯೇ ಹೆಚ್ಚು ಜನ ವೀಕ್ಷಣೆ ಮಾಡುತ್ತಾರೆ ಎಂದು ವಾದ ಮುಂದಿಟ್ಟಿದ್ದ.

ಮೊದಲು ಯು ಟ್ಯೂಬ್ ನಲ್ಲಿ ಗಣಿತದ ಪಾಠ ಅಪ್ ಲೋಡ್ ಮಾಡಿದ್ದ ಶಿಕ್ಷಕ ನಂತರ ಪೋರ್ನ್ ಹಬ್ ಗೂ ಅಪ್ ಲೋಡ್ ಮಾಡಿದ್ದಾನೆ. ಪೋರ್ನ್ ಹಬ್ ಸಿಕ್ಕಾಪಟ್ಟೆ ಜನಪ್ರಿಯವಾಗಿರುವ ಕಾರಣ ಅಲ್ಲಿ ಜ್ಞಾನ ಪ್ರಸಾರವಾಗಲಿ ಎಂಬ ಕಾರಣಕ್ಕೆ ವಿಡಿಯೋ ಅಪ್ ಲೋಡ್ ಮಾಡಿದ್ದೆ ಎನ್ನುವ ಸಮರ್ಥನೆ ನೀಡಿದ್ದ.