ಮದುವೆಯಾದ 30 ವರ್ಷಗಳ ಬಳಿಕ, ಮಹಿಳೆಯೊಬ್ಬರು ತಮ್ಮ ಪತಿಯ ಆಘಾತಕಾರಿ ದುರಭ್ಯಾಸವನ್ನು ಪತ್ತೆಹಚ್ಚುತ್ತಾರೆ. ತನ್ನ ಸ್ನೇಹಿತರು ಮತ್ತು ಸಂಬಂಧಿಕರ ಒಳುಡುಪುಗಳನ್ನು ಕದಿಯುತ್ತಿದ್ದ ಗಂಡನ ಸತ್ಯ ತಿಳಿದು, ನಂಬಿಕೆ ದ್ರೋಹದಿಂದ ನೊಂದ ಆಕೆ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ.

ಗತ್ತಿನಲ್ಲಿ ಪ್ರತಿದಿನ ಲೆಕ್ಕವಿಲ್ಲದಷ್ಟು ವಿಚ್ಛೇದನಗಳು ನಡೆಯುತ್ತಿವೆ. ಅದಕ್ಕೆ ವಿವಿಧ ಕಾರಣಗಳಿವೆ. ಆದರೆ, ಇಂದು ನಾವು ಹೇಳುವ ವಿಚಾರ ರಿಲೇಷನ್‌ಷಿಪ್‌ನ ಬಗ್ಗೆ ಇರುವ ನಿಮ್ಮ ಅಸಹನೆಯನ್ನು ಇನ್ನಷ್ಟು ಹೆಚ್ಚು ಮಾಡುವುದು ಖಂಡಿತ. ಇಲ್ಲಿ ಮಹಿಳೆಯೊಬ್ಬರಿಗೆ ಮದುವೆಯಾದ 30 ವರ್ಷಗಳ ಬಳಿಕ ಗಂಡನ ದುರಭ್ಯಾಸ ಗೊತ್ತಾಗಿದೆ. ಇದಾದ ಬಳಿಕ ಆಕೆ ಗಂಡನ ಜೊತೆ ವಾಸ ಮಾಡೋದು ಸಾಧ್ಯವೇ ಇಲ್ಲ ಎಂದು ಆತನಿಂದ ವಿಚ್ಛೇದನ ಪಡೆದುಕೊಂಡಿದ್ದಾಳೆ. ಇಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಅತ್ಯಂತ ಆಘಾತಕಾರಿ ಅಸಹ್ಯಕರ ಅಭ್ಯಾಸ ಬಗ್ಗೆ ಗೊತ್ತಾದ ತಕ್ಷಣವೇ ಆಕೆಯ ಸಂತೋಷದ ದಾಂಪತ್ಯ ಜೀವನ ನಾಶವಾಗಿದೆ.

ಇಂಗ್ಲೆಂಡ್‌ನ ದಿ ಮಿರರ್‌ ಪತ್ರಿಕೆ ಇದರ ಬಗ್ಗೆ ವರದಿ ಮಾಡಿದೆ. ಮಹಿಳೆ ಹೇಳಿರುವ ಪ್ರಕಾರ ಆಕೆಯ ಪತಿ, ಕಳೆದ ಹಲವು ವರ್ಷಗಳಿಂದ ತನ್ನ ಮನೆಯ ಅಕ್ಕಪಕ್ಕದಲ್ಲಿರುವ ಸ್ನೇಹಿತರು ಹಾಗೂ ಸಂಬಂಧಿಗಳ ಮನೆಯ ಹೆಂಗಸರ ಒಳುಡುಪುಗಳನ್ನು ಕದಿಯುತ್ತಿದ್ದ. ಇಷ್ಟು ವರ್ಷಗಳವರೆಗೆ ಇದರ ವಿಚಾರ ಆಕೆಗೆ ಗೊತ್ತಿರಲಿಲ್ಲ. ಆದರೆ, ಈ ಸಂಗತಿ ಗೊತ್ತಾದ ಬಳಿಕ ಕಾಮುಕನ ವೇಷದಲ್ಲಿದ್ದ ಗಂಡನ ಜೊತೆ ಬದುಕಲೇಬಾರದು ಎಂದು ತೀರ್ಮಾನ ಮಾಡಿದ್ದಾಳೆ.

ಇದು ಆಕೆಗೆ ಗೊತ್ತಾಗಿದ್ದು ಹೇಗೆ?

ಅತ್ಯಂತ ಆಘಾತಕಾರಿ ವಿಚಾರ ಏನೆಂದರೆ, ಆಕೆಯ ಪತಿ ಯಾವುದೇ ಗೊತ್ತಿಲ್ಲದ ಮನೆಯ ಹೆಂಗಸರ ಅಥವಾ ಯುವತಿಯರ ಒಳು ಉಡುಪು ಕದಿಯುತ್ತಿರಲಿಲ್ಲ. ಬದಲಾಗಿ ತನಗೆ ಗೊತ್ತಿರುವ ತನ್ನ ಸಂಬಂಧಿಗಳೇ ಆದ ಹೆಂಗಸರು ಹಾಗೂ ಯುವತಿಯರ ಒಳು ಉಡುಪುಗಳನ್ನ ಕದಿಯುತ್ತಿದ್ದ. ಈ ಘಟನೆಯ ಬಗ್ಗೆ ಅನಾಮಿಕ ವ್ಯಕ್ತಿಯೊಬ್ಬ ಪತ್ನಿಗೆ ತಿಳಿಸಿದಾಗ, ಆಕೆಯೇ ನೇರವಾಗಿ ಗಂಡನನ್ನು ಪ್ರಶ್ನೆ ಮಾಡಿದ್ದಾಳೆ. ಆರಂಭದಲ್ಲಿ ಗಂಡ ಇಲ್ಲ ಇಲ್ಲ ಎಂದರೂ ಕೊನೆಗೆ ಗಂಡ ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾನೆ.

ತನ್ನ ಗಂಡನಿಗೆ ಒಳ ಉಡುಪುಗಳ ಮೇಲೆ ವಿಚಿತ್ರವಾದ ಆಕರ್ಷಣೆ ಇದೆ ಎಂದು ನನಗೆ ಸಣ್ಣ ಮಟ್ಟದ ಕಲ್ಪನೆ ಇತ್ತು. ಆದರೆ ಆ ಅಭ್ಯಾಸ ಇಷ್ಟೊಂದು ಗಂಭೀರವಾಗಿ, ನೈತಿಕತೆಯನ್ನೂ ಮೀರಿ ಹೋಗಿದೆ ಎಂದೂ ನಾನು ಊಹಿಸಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಸಂಬಂಧಿಗಳು ಹಾಗೂ ಸ್ನೇಹಿತರ ಮನೆಗಳಿಂದ ಬಳಸಿದ ಪ್ಯಾಂಟಿಗಳನ್ನು ತೆಗೆದುಕೊಂಡು ಲೈಂಗಿಕ ತೃಪ್ತಿಗಾಗಿ ಗಂಡ ಬಳಸುತ್ತಿದ್ದ ಎಂದು ಆಕೆ ಹೇಳಿದ್ದಾಳೆ. ಈ ತಪ್ಪೊಪ್ಪಿಗೆಯು ತನ್ನ ನಂಬಿಕೆ ಮತ್ತು ಸುರಕ್ಷತೆಯ ಭಾವನೆಯನ್ನು ಛಿದ್ರಗೊಳಿಸಿದೆ ಎಂದಿದ್ದಾರೆ.

30 ವರ್ಷಗಳ ದಾಂಪತ್ಯ ಅಂತ್ಯ

ತನ್ನ ಗುರುತನ್ನು ರಹಸ್ಯವಾಗಿಟ್ಟಿರುವ ಮಹಿಳೆ, ಕೌನ್ಸೆಲಿಂಗ್ ವೆಬ್‌ಸೈಟ್‌ನಲ್ಲಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. "ಈಗ ನನಗೆ ನನ್ನ ಗಂಡನ ಬಗ್ಗೆ ನಾಚಿಕೆಯಾಗುತ್ತಿದೆ. ಇದು ವಿಚಿತ್ರ ಅಭ್ಯಾಸ ಮಾತ್ರವಲ್ಲ, ನನ್ನ ನಂಬಿಕೆ ಮತ್ತು ಭಾವನೆಗಳಿಗೆ ಮಾಡಿದ ಗಂಭೀರ ದ್ರೋಹ. ಈ ಘಟನೆಯ ನಂತರ, ನನಗೆ ತುಂಬಾ ಹಿಂಸೆ ಎಂದು ಅನಿಸುತ್ತಿದೆ. ಮಾನಸಿಕವಾಗಿ ನಾನು ಅಸ್ವಸ್ಥಳಾಗಿದ್ದೇನೆ. ನನಗೆ ನನ್ನ ಸ್ನೇಹಿತೆಯರ ಮುಂದೆ ಹೋಗಲು ಕೂಡ ಭಯವಾಗುತ್ತಿದೆ' ಎಂದಿದ್ದಾರೆ.

ಮಾನಸಿಕ ಆರೋಗ್ಯ ಮತ್ತು ರಿಲೇಷನ್‌ಷಿಪ್‌ ಎಕ್ಸ್‌ಪರ್ಟ್‌ ಪ್ರಕಾರ, ಇಂತಹ ನಡವಳಿಕೆಯು ಅನೈತಿಕ ಮತ್ತು ಮಹಿಳೆಯರ ಗೌಪ್ಯತೆಯ ಗಂಭೀರ ಉಲ್ಲಂಘನೆಯಾಗಿದೆ. ಸಂಬಂಧಪಟ್ಟ ಮಹಿಳೆಯರಿಗೆ ಇದರ ಬಗ್ಗೆ ತಿಳಿದರೆ, ಅವರು ತೀವ್ರ ಮಾನಸಿಕ ಆಘಾತವನ್ನು ಅನುಭವಿಸಬಹುದು ಎಂದು ಅವರು ಹೇಳಿದ್ದಾರೆ.