Mental Health and Relation: ದೈಹಿಕ ಸೌಂದರ್ಯವಿದ್ದರೆ ಈ ಅಪಾಯವೂ ಹೆಚ್ಚು: ನೀವೂ ಬಲಿಯಾಗ್ಬೋದು ಎಚ್ಚರ

ಸ್ವಾರ್ಥಿಗಳೊಂದಿಗೆ ಬರೆಯಲು, ಆತ್ಮರತಿಯುಳ್ಳ ಜನರೊಂದಿಗೆ ಒಡನಾಡಲು ಯಾರೂ ಇಷ್ಟಪಡುವುದಿಲ್ಲ. ಇಂಥವರು ಸದಾಕಾಲ ತಮ್ಮ ಪ್ರಶಂಸೆಯಲ್ಲೇ ಇರುತ್ತಾರೆ. ಸಾಮಾನ್ಯವಾಗಿ ದೈಹಿಕ ಸೌಂದರ್ಯ ಹೊಂದಿರುವವರಲ್ಲಿ ಈ ಭಾವನೆ ಹೆಚ್ಚು ಎಂಬುದಾಗಿ ವಿಜ್ಞಾನಿಗಳು ಹೇಳುತ್ತಾರೆ.
 

If you physically attractive you are more prone to narcissist behavior

ಆತ್ಮರತಿಯುಳ್ಳ ಜನರೊಂದಿಗೆ ಬೆರೆಯಲು ಸಾಮಾನ್ಯವಾಗಿ ಯಾರೂ ಇಷ್ಟಪಡುವುದಿಲ್ಲ. ಸ್ವಪ್ರಶಂಸೆ ಮಾಡಿಕೊಳ್ಳುತ್ತ ಬೇರೆಯವರನ್ನು ಹೀಗಳೆಯುವ ಮಂದಿಯೊಂದಿಗೆ ಒಡನಾಡುವುದನ್ನು ಎಲ್ಲರೂ ಅವಾಯ್ಡ್ ಮಾಡುತ್ತಾರೆ. ಅವರು ಸದಾಕಾಲ ಬೇರೆಯವರನ್ನು ನಿಂದಿಸುತ್ತಲೂ ಇರುತ್ತಾರೆ. ಆದರೆ, ನೀವೊಂದು ಅಂಶವನ್ನು ಪರಿಗಣಿಸಿರಬಹುದು. ಅದೆಂದರೆ, ಆತ್ಮರತಿಯುಳ್ಳ ಜನರು ದೈಹಿಕವಾಗಿ ಚೆನ್ನಾಗಿರುತ್ತಾರೆ, ಸುಂದರವಾಗಿರುತ್ತಾರೆ. “ತಾನು ಚೆನ್ನಾಗಿದ್ದೇನೆಂದು ಆಕೆಗೆ ಸೊಕ್ಕು’ ಎನ್ನುವ ಮಾತನ್ನು ಕೇಳಿರಬಹುದು. ಸಣ್ಣದೊಂದು ಅಹಂಕಾರವೂ ಇರಬಹುದು. ಅಹಂಕಾರಕ್ಕಿಂತ ಹೆಚ್ಚಾಗಿ ಆತ್ಮರತಿ ಇವರಲ್ಲಿ ಮನೆ ಮಾಡಿರುತ್ತದೆ. ಬರೀ ಸ್ವಪ್ರಶಂಸೆಯಲ್ಲಿ ಖುಷಿ ಕಾಣುತ್ತಾರೆ. ಇಂತಹ ಗುಣ ಹೊಂದಿದವರು ದೈಹಿಕವಾಗಿ ಸುಂದರವಾಗಿರುತ್ತಾರೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ನಿಮಗೆ ಗೊತ್ತೇ?  ಆತ್ಮರತಿಯನ್ನೂ ಸಹ ಮಾನಸಿಕ ಸಮಸ್ಯೆಯೆಂದು ಗುರುತಿಸಲಾಗಿದೆ. ಇವರು ತಮಗೆ ಅತಿಯಾದ ಪ್ರಾಮುಖ್ಯತೆ ಕೊಟ್ಟುಕೊಳ್ಳುತ್ತಾರೆ. ಇನ್ನೊಬ್ಬರು ಲೆಕ್ಕಕ್ಕೇ ಇರುವುದಿಲ್ಲ. ಅತಿಯಾಗಿ ಸ್ವಾರ್ಥಿಯಾಗಿರುತ್ತಾರೆ. ಬೇರೆಯವರಿಗಿಂತ ತಾವು ಶ್ರೇಷ್ಠವಾದವರು ಎನ್ನುವ ಭಾವನೆ ಹೆಚ್ಚಾಗಿರುತ್ತದೆ. ಹೀಗಾಗಿ, ಯಾರಾದರೂ ಸುಂದರವಾಗಿರುವವರನ್ನು ಭೇಟಿಯಾದರೆ ಅವರ ಬಗ್ಗೆ ತುಸು ಎಚ್ಚರಿಕೆಯಿಂದಿರುವುದು ಉತ್ತಮ. ಅವರ ನಿಜವಾದ ಬಣ್ಣ ಗೊತ್ತಾಗುವ ಮುನ್ನವೇ ಅವರನ್ನು ನಾವು ಗುರುತುಹಚ್ಚಬಹುದು. 

ವಿಜ್ಞಾನ (Science) ಏನನ್ನುತ್ತೆ?
ಕೆಲವು ಅಧ್ಯಯನಗಳ (Study) ಪ್ರಕಾರ, ಆತ್ಮರತಿಯುಳ್ಳವರು (Narcissist) ದೈಹಿಕವಾಗಿ (Physically) ಆಕರ್ಷಕ ನೋಟ ಹೊಂದಿರುತ್ತಾರೆ. ನೋಡಲು ಸುಂದರವಾಗಿರುವವರು ಹೆಚ್ಚು ಸ್ವಾರ್ಥಿಗಳೂ ಆಗಿರುತ್ತಾರೆ. ಅಪವಾದಗಳು ಇರಬಹುದು, ಆದರೆ, ಸಾಮಾನ್ಯವಾಗಿ ಈ ಧೋರಣೆ ಇರುವುದು ಕಂಡುಬಂದಿದೆ. ದೈಹಿಕ ಕ್ಷಮತೆ, ಸೌಂದರ್ಯ (Beauty), ಆಕರ್ಷಣೆಯಿಂದಾಗಿ ತಾವು ಎಲ್ಲದಕ್ಕೂ ಅರ್ಹ ಎನ್ನುವ ಭಾವನೆ ಅವರಲ್ಲಿ ಮನೆ ಮಾಡಿರುತ್ತದೆ. ಹೀಗಾಗಿ, ಅವರು ತಮ್ಮ ಗುರಿ ಸಾಧನೆಗೆ ಹೆಚ್ಚು ಸ್ವಾರ್ಥ (Self) ಕೇಂದ್ರಿತ ಚಿಂತನೆಗಳಲ್ಲಿ ತೊಡಗಿರುತ್ತಾರೆ. 

Mental Health : ನಿಮ್ಮ ಮನಸ್ಸಿಗೆ ಈ ಸಂದರ್ಭದಲ್ಲಿ ಬೇಕು ವಿಶ್ರಾಂತಿ

ಸಮಾಜದಲ್ಲೂ (Society) ಸೌಂದರ್ಯಕ್ಕೆ ಮನ್ನಣೆ
ದೈಹಿಕವಾಗಿ ಹೆಚ್ಚು ಆಕರ್ಷಕವಾಗಿರುವವರನ್ನು ಸಮಾಜವೂ ಹೆಚ್ಚು ಸಮ್ಮಾನದಿಂದ ನೋಡುತ್ತದೆ ಎನ್ನುವುದು ಎಲ್ಲರ ಅನುಭವಕ್ಕೆ ಬರುವ ಸಂಗತಿ. ಇದು ಸಹ ಅವರಲ್ಲಿ ಆತ್ಮರತಿಯ ಭಾವನೆಯನ್ನು ಹೆಚ್ಚಿಸಬಲ್ಲದು. ಕೆಲವು ಅಧ್ಯಯನಗಳ ಪ್ರಕಾರ, ದೈಹಿಕ ಸೌಂದರ್ಯ ಹಲವು ರೀತಿಯ ಅನುಕೂಲಗಳನ್ನು (Advantages) ಸೃಷ್ಟಿಸುತ್ತದೆ. ಮಾನಸಿಕ ಆರೋಗ್ಯ (Mental Health), ಸಂಬಂಧ (Relationship), ಸಾಮಾಜಿಕ ಸ್ಥಾನಮಾನ (Social Status) ಚೆನ್ನಾಗಿರುವಲ್ಲಿ ದೈಹಿಕ ನಿಲುವಿನ ಕೊಡುಗೆಯೂ ಮುಖ್ಯವಾಗಿರುತ್ತದೆ. ಜನರು ಅವರನ್ನು ಮಾನಸಿಕವಾಗಿ ಹೆಚ್ಚು ಸದೃಢ, ಬುದ್ಧಿವಂತ ಮತ್ತು ಸಂಪನ್ಮೂಲಯುಕ್ತ ವ್ಯಕ್ತಿಯನ್ನಾಗಿ ಪರಿಗಣಿಸುತ್ತಾರೆ. ಇದು ಅವರ ಈಗೋ (Ego) ಹೆಚ್ಚಳಕ್ಕೂ ಕೊಡುಗೆ ನೀಡುತ್ತದೆ. 

ಬಯಸಿದ್ದನ್ನು ಪಡೆಯುವುದು ಹಕ್ಕು
ನೋಡಲು ಸುಂದರವಾಗಿರುವವರಿಗೆ ಜನ ತಮ್ಮನ್ನು ಸುಪೀರಿಯರ್, ಆಕರ್ಷಕ (Attractive) ಎಂದು ಪರಿಗಣಿಸಿರುವುದು ತಿಳಿದಿರುತ್ತದೆ. ಅವರು ಅದಕ್ಕೆ ತಕ್ಕಂತೆಯೇ ವರ್ತಿಸುತ್ತಾರೆ. ಈ ಧೋರಣೆ ಅವರ ಸಮಗ್ರ ವ್ಯಕ್ತಿತ್ವಕ್ಕೆ (Personality) ಬೇರೊಂದು ಬಣ್ಣ ನೀಡುತ್ತದೆ. ತಮಗೆ ಆದ್ಯತೆ ದೊರೆಯುವುದು ಸಹಜ ಎನ್ನುವ ಭಾವನೆಗೆ ಬಲಿಯಾಗುತ್ತದೆ. ಅಷ್ಟೇ ಅಲ್ಲ, ಸೂಕ್ತ ಸಂಗಾತಿ (Partner) ಪಡೆಯುವುದು ಸಹ ತಮ್ಮ ಹಕ್ಕು ಎಂಬುದಾಗಿ ಅವರು ಭಾವಿಸುತ್ತಾರೆ. ಹೀಗಾಗಿ, ತಮಗೆ ಬೇಕಾದವರನ್ನು ಪಡೆಯಲು ಅವರು ಅವರು ಸಿಕ್ಕಾಪಟ್ಟೆ ಯತ್ನಿಸುತ್ತಾರೆ, ಹಿಂಸೆಗಿಳಿಯಲೂ ಮುಂದಾಗಬಹುದು.

ಕೋಪಗೊಳ್ಳೋ ಮಕ್ಕಳನ್ನು ಕರೆಕ್ಟಾಗಿ ಸಂಭಾಳಿಸೋದು ಹೇಗೆ? ಇಲ್ಲಿದೆ ಟಿಪ್ಸ್

ಸುಂದರವಾಗಿರುವವರು ತಮ್ಮ ವರ್ಚಸ್ಸು, ಬುದ್ಧಿವಂತಿಕೆ, ಶಕ್ತಿಯನ್ನು (Power) ಸಂಗಾತಿ ಸೆಳೆಯಲು ಬಳಕೆ ಮಾಡಿಕೊಳ್ಳುತ್ತಾರೆ. ಅವರು ಇವರನ್ನು ಸಹಿಸಿಕೊಳ್ಳಲಾರದಿದ್ದರೂ ಇವರು ತಾವು ಬಯಸಿದ್ದನ್ನು ಪಡೆಯಲು ಅರ್ಹ ಎನ್ನುವ ಭಾವನೆಯಲ್ಲೇ ಇರುತ್ತಾರೆ. ಇತರರನ್ನೂ ಸಹ ಇದಕ್ಕಾಗಿ ಪ್ರಚೋದಿಸಲು ಮುಂದಾಗುತ್ತಾರೆ. ವಿಜ್ಞಾನಿಗಳು ಈ ನಿಟ್ಟಿನಲ್ಲಿ ಹಲವು ಅಧ್ಯಯನಗಳನ್ನು ನಡೆಸಿದ್ದಾರೆ. ಪ್ರಯೋಗವೊಂದರಲ್ಲಿ, ವ್ಯಕ್ತಿಗಳ ದೈಹಿಕ ಸೌಂದರ್ಯದ ಆಧಾರದ ಮೇಲೆ ಅಧ್ಯಯನ ನಡೆಸಲಾಗಿತ್ತು. ತಾವು ಚೆನ್ನಾಗಿದ್ದೇವೆ ಎನ್ನುವ ಭಾವನೆ ಮೂಡಿದಾಗ ಜನರಲ್ಲಿ ಸ್ವಾರ್ಥ ಕೇಂದ್ರಿತ ವರ್ತನೆಗಳು ಸಹಜವಾಗಿ ಹೆಚ್ಚಾಗಿರುವುದು ಇದರಲ್ಲಿ ಕಂಡುಬಂದಿತ್ತು. 

Latest Videos
Follow Us:
Download App:
  • android
  • ios