Shocking News : ಬಾಯ್ ಫ್ರೆಂಡ್ ಖಾಸಗಿ ಅಂಗ ಕತ್ತರಿಸಿ ಮಹಿಳೆ ಮಾಡಿದ್ದೇನು?

ಪ್ರಪಂಚದಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ನಾವು ಊಹಿಸಲೂ ಸಾಧ್ಯವಿಲ್ಲ. ಮನುಷ್ಯರು ಇಷ್ಟು ಕ್ರೂರರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮಹಿಳೆಯೊಬ್ಬಳು ಮಾಡಿದ ಕೆಲಸ ಎಲ್ಲರನ್ನು ದಂಗುಬಡಿಸಿದೆ.
 

Woman Cuts Boyfriends Penis And Hides From Police

ಕೋಪ (Anger) ದಲ್ಲಿ ಮನುಷ್ಯ (Human) ಯಾವುದೇ ಕೆಲಸ (Work)ವನ್ನು ಮಾಡ್ಬಾರದು ಎನ್ನುತ್ತಾರೆ. ಕೋಪದಲ್ಲಿ ಮಾಡಿದ ಕೆಲಸ ಯಡವಟ್ಟಾಗುತ್ತದೆ. ಪ್ರೀತಿ (Love)ಯಲ್ಲಿ ಗಲಾಟೆ ಸಾಮಾನ್ಯ. ಆದ್ರೆ ಬಂದ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು. ದಂಪತಿ ಮಧ್ಯೆ ಆಗುವ ಜಗಳ ತಾರಕಕ್ಕೇರಿದಾಗ ಅಪರಾಧಗಳಾಗುವ ಸಾಧ್ಯತೆಯಿರುತ್ತದೆ. ಕೋಪದಲ್ಲಿ ತಪ್ಪು ಮಾಡಿ ನಂತ್ರ ಪಶ್ಚಾತಾಪಪಟ್ಟರೆ ಯಾವುದೇ ಪ್ರಯೋಜನವಿಲ್ಲ. ಕೆಲವೊಬ್ಬರು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಜೊತೆಗೆ ತಪ್ಪನ್ನು ಸಮರ್ಥಿಸಿಕೊಳ್ತಾರೆ. ಕೋಪದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ದೊಡ್ಡ ಅನಾಹುತ ಮಾಡಿದ್ದಾಳೆ. ಆಕೆ ಮಾಡಿದ ಕೆಲಸವೇನು? ಪೊಲೀಸರಿಗೆ ಆಕೆ ಹೇಳಿದ್ದೇನು ಎಂಬುದನ್ನು ಇಲ್ಲಿ ಹೇಳ್ತೇವೆ.

ಪ್ರಿಯಕರನ ಖಾಸಗಿ ಅಂಗ ಕಟ್ : ಕೋಪದಲ್ಲಿ ಮಹಿಳೆ, ಪ್ರಿಯಕರನ ಖಾಸಗಿ ಅಂಗ ಕತ್ತರಿಸಿದ್ದಾಳೆ. ಅಷ್ಟೇ ಅಲ್ಲ ಗುಪ್ತಾಂಗವನ್ನು ಕತ್ತರಿಸಿ ಬಕೆಟ್ ನಲ್ಲಿ ಹಾಕಿದ್ದಾಳೆ. ಬರೀ ಖಾಸಗಿ ಅಂಗ ಕತ್ತರಿಸಿದ್ದರೆ ವಿಷ್ಯ ಬೇರೆಯಿತ್ತು. ಆದ್ರೆ ಈ ಮಹಾನ್ ಮಹಿಳೆ ಇಡೀ ದೇಹವನ್ನೇ ತುಂಡು ತುಂಡಾಗಿ ಕತ್ತರಿಸಿದ್ದಾಳೆ. ಈ ಕೆಲಸ ಮಾಡಿದ ಮಹಿಳೆ ವಯಸ್ಸು 24 ವರ್ಷ.ಈ ಮಹಿಳೆ ಅಮೆರಿಕದ ವಿಸ್ಕಾನ್ಸಿನ್ ಮೂಲದವಳು. ಆಕೆಯ ಹೆಸರು ಟೇಲರ್ ಡಿ. ಶಾಬ್ಯುಸಿನೆಸ್. ಈಕೆ ಸದ್ಯ ಗ್ರೀನ್ ಬೇ ಪ್ರದೇಶದಲ್ಲಿ ವಾಸಿಸುತ್ತಾಳೆ.
ಪೊಲೀಸರಿ ಹೋಗಿತ್ತು ದೂರು : ಪೊಲೀಸರಿಗೆ ಫೆಬ್ರವರಿ 23ರ ಬೆಳಿಗ್ಗೆ ಅಪರಿಚಿತರಿಂದ ಕರೆ ಬಂದಿತ್ತಂತೆ. ಬೇಸ್ಮೆಂಟ್ ನ ಬಕೆಟ್ ಒಂದರಲ್ಲಿ ವಿಚಿತ್ರ ವಸ್ತುವಿದೆ ಎಂದು ದೂರಿದ್ದರಂತೆ. ಬಕೆಟ್ ಮೇಲೆ ಟವೆಲ್ ಕೂಡ ಇಡಲಾಗಿತ್ತಂತೆ. ಅದ್ರ ಮೇಲೆ ಟೇಲರ್ ಬಾಯ್ ಫ್ರೆಂಡ್ ತಲೆಯಿತ್ತು ಎಂದೂ ಪೊಲೀಸರು ಹೇಳಿದ್ದಾರೆ. ದೂರು ಸಿಕ್ಕ ತಕ್ಷಣ ಪೊಲೀಸರು ಅಪಾರ್ಟ್ಮೆಂಟ್ ಗೆ ಹೋಗಿದ್ದಾರೆ.

ಅಜ್ಜಿಯ 90ನೇ ಬರ್ತ್‌ಡೇಗೆ ಸರ್‌ಪ್ರೈಸ್ ವಿಸಿಟ್ ಕೊಟ್ಟ ವಿಶೇಷ ಅತಿಥಿ.. ಭಾವುಕರಾದ ಹಿರಿಯಜ್ಜಿ

ಟೇಲರ್ ಮನೆ ನೋಡಿ ದಂಗಾದ ಪೊಲೀಸ್ : ಟೇಲರ್ ಬಾಯ್ ಫ್ರೆಂಡ್ ಕೊನೆಯದಾಗಿ ಕಂಡಿದ್ದು ಟೇಲರ್ ಮನೆಯಲ್ಲಿಯೇ. ಬಕೆಟ್ ಮೇಲೆ ಬಾಯ್ ಫ್ರೆಂಡ್ ಕತ್ತು ಹಾಗೂ ಒಳಗೆ ಖಾಸಗಿ ಅಂಗ ನೋಡಿದ ಪೊಲೀರು ಟೇಲರ್ ಮನೆಗೆ ನುಗ್ಗಿದ್ದಾರೆ. ಟೇಲರ್ ಬಟ್ಟೆಯೆಲ್ಲ ರಕ್ತವಿದ್ದು,ಒಣಗಿತ್ತಂತೆ. ಪೊಲೀಸರು ಟೇಲರ್ ವಾಹನವನ್ನು ತನಿಖೆ ಮಾಡಿದಾಗ ಅಲ್ಲಿ ವ್ಯಕ್ತಿಯ ದೇಹದ ಕೆಲವು ಭಾಗಗಳು ಬಿದ್ದಿರುವುದು ಕಂಡುಬಂದಿದೆ. ಇದಾದ ನಂತರ ಪೊಲೀಸರು ಆಕೆ ಮನೆಯನ್ನು ಶೋಧಿಸಲು ಶುರು ಮಾಡಿದ್ದಾರೆ. ಅಲ್ಲಿ ಕಂಡ ದೃಶ್ಯ ನೋಡಿ  ಪೊಲೀಸರು ಆಶ್ಚರ್ಯಚಕಿತರಾಗಿದ್ದಾರೆ. ಟೇಲರ್ ಬಾಯ್ ಫ್ರೆಂಡ್ ದೇಹ ತುಂಡು ತುಂಡಾಗಿ ಮನೆಯೊಳಗೆ,ಬಕೆಟ್ ನಲ್ಲಿ ಬಿದ್ದಿತ್ತಂತೆ.  ಬಕೆಟ್, ಟೇಲರ್ ಬಾಯ್ ಫ್ರೆಂಡ್ ತಾಯಿಯದ್ದು ಎಂದು ಆಕೆ ಹೇಳಿದ್ದಾಳೆ. ಕೊಲೆಯ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ, ಇಬ್ಬರೂ ಮೆಥ್ (ಒಂದು ರೀತಿಯ ರಾಸಾಯನಿಕ ಔಷಧ) ಸೇವಿಸಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದೆವು ಎಂದಿದ್ದಾಳೆ.  

Relationship Tips : ಮದುವೆಗೂ ಮುನ್ನ ಈ ವಿಷ್ಯ ತಿಳಿದಿದ್ದರೆ ಸಮಸ್ಯೆ ಬರ್ತಿರಲಿಲ್ಲ…!

ಟೇಲರ್ ಹೇಳೋದೇನು? : ಡ್ರಗ್ಸ್ ತೆಗೆದುಕೊಂಡ ನಂತ್ರ ಏನಾಯ್ತು ಎಂಬುದು ಗೊತ್ತಾಗಲಿಲ್ಲ ಎನ್ನುವ ಟೇಲರ್, ಮಜಾ ಮಾಡಿ,ಉಳಿದ ಭಾಗಗಳನ್ನು ಹುಡುಕಿ ಎಂದು ಪೊಲೀಸ್ ಮುಂದೆ ಹೇಳಿದ್ದಾಳೆ. ಇಷ್ಟೇ ಅಲ್ಲ, ಬಾಯ್ ಫ್ರೆಂಡ್ ಹತ್ಯೆ ಮಾಡುವ ಉದ್ದೇಶ ನನಗಿರಲಿಲ್ಲ. ಆತನ ಕತ್ತು ಹಿಸುಕಿ, ಉಸಿರಾಟ ನಿಲ್ಲುವುದನ್ನು ನೋಡಲು ನನಗೆ ಖುಷಿಯಾಗ್ತಿತ್ತು ಎಂದಿದ್ದಾಳೆ. ಪೊಲೀಸರು ಬಾಯ್ ಫ್ರೆಂಡ್ ನ ದೇಹದ ಎಲ್ಲ ಭಾಗವನ್ನು ಶೋಧಿಸಿದ್ದಾರೆ. ನೆಲಮಾಳಿಗೆಯಲ್ಲೇ ಹತ್ಯೆ ನಡೆದಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಯಾಕೆಂದ್ರೆ ಅಲ್ಲಿಯೇ ಬಾಯ್ ಫ್ರೆಂಡ್ ಕತ್ತು ಸಿಕ್ಕಿದೆ. ದೇಹದ ಭಾಗಗಳು ಕಾರ್ ನಲ್ಲಿ ಸಿಕ್ಕಿವೆ. ಮಹಿಳೆ ಮಾನಸಿಕ ಅಸ್ವಸ್ಥೆ ಎಂದಿರುವ ಪೊಲೀಸರು, ಯಾವುದೋ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಕೋಪದಲ್ಲಿ ಮಹಿಳೆ ಈ ಕೃತ್ಯವೆಸಗಿದ್ದಾಳೆಂದು ಅಂದಾಜಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಇನ್ನೊಂದಿಷ್ಟು ವಿಚಾರಣೆ ನಡೆಸುತ್ತಿದ್ದಾರೆ. 

Latest Videos
Follow Us:
Download App:
  • android
  • ios