ಪ್ರಶ್ನೆ: ನಾನು ಅವಿವಾಹಿತೆ. ಬಾಯ್‌ಫ್ರೆಂಡ್‌ ಇದ್ದಾನೆ. ಸದ್ಯಕ್ಕೆ ಮದುವೆಯಾಗುವ ಯೋಚನೆಯಿಲ್ಲ. ನಾನೊಂದು ಕಂಪನಿಯಲ್ಲಿ ಕೆಲಸದಲ್ಲಿದ್ದೇನೆ. ಬಾಸ್‌ ಒಳ್ಳೆಯವರು. ಸಹೋದ್ಯೋಗಿಗಳೂ ಚೆನ್ನಾಗಿದ್ದಾರೆ. ಆದರೆ ಇತ್ತೀಚೆಗೆ ನನಗೆ ನನ್ನ ಬಾಸ್‌ನ ಪತ್ನಿಯ ಪರಿಚಯವಾಯಿತು. ನಮ್ಮಿಬ್ಬರ ಸ್ನೇಹ ಗಾಢವಾಗಿದೆ. ಅವರ ಮನೆಗೂ ಹೋಗಿದ್ದೇನೆ. ಈ ಸಂದರ್ಭದಲ್ಲಿ ಆಕೆ ಲೆಸ್ಬಿಯನ್ ಕೂಡ ಹೌದು ಎಂಬುದು ಗೊತ್ತಾಯಿತು. ಆಕೆ ನನ್ನನ್ನು ಪದೇ ಪದೇ ಮನೆಗೆ ಬರುವಂತೆ, ಆಕೆಯೊಂದಿಗೆ ಸೆಕ್ಸ್‌ ನಡೆಸುವಂತೆ ಒತ್ತಾಯಿಸುತ್ತಿದ್ದಾಳೆ. ಒಪ್ಪದಿದ್ದರೆ ಬಾಸ್‌ಗೆ ಹೇಳಿ ಕಿರುಕುಳ ಕೊಡಬಹುದು ಅಥವಾ ಕೆಲಸದಿಂದ ಕಿತ್ತು ಹಾಕಿಸಬಹುದು ಎಂಬ ಆತಂಕ. ಬಾಯ್‌ಫ್ರೆಂಡ್‌ ಜೊತೆಗೆ ನನಗೆ ಆರೋಗ್ಯಕರ ಸೆಕ್ಸ್ ಸಂಬಂಧ ಇದೆ. ಲೆಸ್ಬಿಯನ್ ಸಂಬಂಧದ ಅನುಭವ ಪಡೆ ಎಂದು ಮನಸ್ಸಿನ ಒಂದು ಮೂಲೆ ಹೇಳುತ್ತಿದೆ. ಏನು ಮಾಡಲಿ?

ಉತ್ತರ: ಈಗಾಗಲೇ ನಿಮಗೊಂದು ಸೆಕ್ಸ್ ಜೀವನ ಇದೆ. ನಿಮ್ಮ ಬಾಯ್‌ಫ್ರೆಂಡ್‌ ಜೊತೆಗೆ ಸೆಕ್ಸ್ ಅನುಭವ ಹೊಂದುತ್ತಿದ್ದೀರಿ ಹಾಗೂ ಸುಖವಾಗಿಯೂ ಇದ್ದೀರಿ. ಹೀಗಿರುವಾಗ ಇನ್ನೊಂದು ಸಂಬಂಧ ಬೇಕೇ ಎಂಬುದು ಇಲ್ಲಿರುವ ಪ್ರಶ್ನೆ. ನೀವಿಬ್ಬರೂ ಮಹಿಳೆಯರು ಆದ್ದರಿಂದ, ನಿಮ್ಮ ಸಂಬಂಧ ಬಾಸ್‌ನ ಗಮನಕ್ಕೆ ಬರದಂತೆ ಹೇಗೋ ನಿಭಾಯಿಸಬಹುದು ಅನ್ನೋಣ. ಆದರೆ ನೀವಿಬ್ಬರೂ ನಿಮ್ಮ ಆತ್ಮವಂಚನೆ ಮಾಡಿಕೊಳ್ಳುತ್ತಿರುತ್ತೀರಿ. ನೀವು ನಿಮ್ಮ ಫ್ರೆಂಡ್‌ಗೂ, ಆಕೆ ಅವರ ಪತಿಗೂ ವಂಚನೆ ಮಾಡುತ್ತಿರುತ್ತೀರಿ. ಉಭಯರಿಗೂ ಅದನ್ನು ತಿಳಿಸಿ ನೀವು ಸಂಬಂಧ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇದರಿಂದ ನಿಮ್ಮ ಪ್ರೀತಿಗೆ, ಬಾಯ್‌ಫ್ರೆಂಡ್‌ ನಡುವಿನ ಸಂಬಂಧಕ್ಕೆ ನೀವು ಎಳ್ಳುನೀರು ಬಿಡಬೇಕಾದೀತು. ಹಾಗೆಯೇ ನಿಮ್ಮ ಬಾಸ್‌ಗೂ ಗೊತ್ತಾದರೆ ನೀವು ಕಚೇರಿಯಲ್ಲಿಯೂ ಕಿರುಕುಳ ಎದುರಿಸಬೇಕಾದೀತು. ಸದ್ಯಕ್ಕೆ ಆಕೆಯ ಆಫರ್‌ ಅನ್ನು ತಿರಸ್ಕರಿಸಿ. ತೀರಾ ಕಚೇರಿಯಲ್ಲಿ ಕಿರುಕುಳದಂಥ ಸನ್ನಿವೇಶಗಳು ಎದುರಾದರೆ ಇನ್ನೊಂದು ಉದ್ಯೋಗ ಹುಡುಕಬಹುದು. ಮನಸ್ಸಿಲ್ಲದೆ ಹೋದರೆ ಸೆಕ್ಸ್ ಸಂಬಂಧ ಮುಂದುವರಿಸಕೂಡದು. ಆದರೆ ಮನದಲ್ಲಿ ಆ ಬಗ್ಗೆ ಸ್ವಲ್ಪ ಕುತೂಹಲವಿದೆ ಎನ್ನುತ್ತೀರಿ. ಯಾರಿಗೂ ತಿಳಿಯದಂತೆ ಈ ಸಂಬಂಧವನ್ನು ನೀವು ನಿಭಾಯಿಸಲು ಸಾಧ್ಯವಾದರೆ, ಅದರಿಂದ ನಿಮ್ಮ ಮನಸ್ಸಿಗೂ ಆನಂದ ದೊರೆಯುತ್ತಿದ್ದರೆ. ಅದರಿಂದ ಸಮಾಜಕ್ಕೂ ಏನೂ ಹಾನಿಯಿಲ್ಲ ಎಂಬುದಾದರೆ, ಗೋ ಅಹೆಡ್.

ಪ್ರಶ್ನೆ: ನನ್ನ ಶಿಶ್ನ ಒಂದು ಕಡೆಗೆ ಬಾಗಿದಂತೆ ಇದೆ. ನಿಮಿರಿದಾಗ ಸುಮಾರು ಐದು ಇಂಚು ಉದ್ದವಾಗುತ್ತಿದ್ದರೂ, ಬಾಗಿಕೊಂಡೇ ಇರುತ್ತದೆ. ನನಗಿನ್ನೂ ಮದುವೆಯಾಗಿಲ್ಲ. ಹೀಗಿದ್ದರೆ, ಮದುವೆಯ ನಂತರ ಪತ್ನಿಯನ್ನು ಸುಖಪಡಿಸಲು ಸಾಧ್ಯವೇ? ಚಿಂತೆ ಕಾಡುತ್ತಿದೆ.

#Feelfree: ಹೆಂಡ್ತಿ ಹಾದರ ನೋಡೋ ಗತಿ ವೈರಿಗೂ ಬರಬಾರ್ದು! 

ಉತ್ತರ: ಚಿಂತಿಸಬೇಡಿ. ಜಗತ್ತಿನಲ್ಲಿ ನೂರಕ್ಕೆ ಇಪ್ಪತ್ತೈದು ಗಂಡಸರ ಶಿಶ್ನ ಹೀಗೆ ಬಾಗಿಕೊಂಡೇ ಇರುತ್ತದೆ ಎಂಧು ತಜ್ಞರು ಹೇಳುತ್ತಾರೆ. ಇದು ಚಿಂತೆಗೆ ಕಾರಣವಾದ ವಿಷಯವಲ್ಲ. ಹಾಗೇ ನಿಮ್ಮ ಶಿಶ್ನ ಬಾಗಿಕೊಂಡಿರುವುದರಿಂದ ನಿಮ್ಮ ಪತ್ನಿಯನ್ನು ಖುಷಿಪಡಿಸುವ ನಿಮ್ಮ ಸಾಮರ್ಥ್ಯದಲ್ಲಾಗಲೀ, ನೀವು ಖುಷಿಪಡುವ ನಿಮ್ಮ ಸಾಮರ್ಥ್ಯದಲ್ಲಾಗಲೀ ಏನೂ ವ್ಯತ್ಯಾಸ ಆಗುವುದಿಲ್ಲ. 

ಪೋರ್ನ್ ತಾರೆ ರೆನೀ ಗ್ರೇಸಿ ಮತ್ತೆ ಕಾರ್‌ ರೇಸಿಗೆ ಬರ್ತಾಳಂತೆ! 

ಪ್ರಶ್ನೆ: ಹಸ್ತಮೈಥುನ ಹಾನಿಕರವೇ? ನಾನು ವಾರಕ್ಕೊಮ್ಮೆಯಾದರೂ ಮಾಡಿಕೊಳ್ಳುತ್ತೇನೆ. ಸಹೋದ್ಯೋಗಿಯನ್ನು ಊಹಿಸಿಕೊಂಡು ಮಾಡಿಕೊಳ್ಳುತ್ತೇನೆ. ಇದು ಅನಾರೋಗ್ಯಕರವೇ?

#Feelfree: ನೀನೂ ಒಂದು ಸಂಬಂಧ ಇಟ್ಕೋ ಅಂತಾಳೆ ಮಡದಿ! 

ಉತ್ತರ: ವಾರಕ್ಕೊಮ್ಮೆ ಹಸ್ತಮೈಥುನದಿಂದ ಯಾವುದೇ ಸಮಸ್ಯೆಯಿಲ್ಲ. ನೀವು ಯಾರನ್ನು ಬೇಕಾದರೂ ಊಹಿಸಿಕೊಳ್ಳಿ. ಆದರೆ ಇದು ಅತಿಯಾಗಿ, ನಿಮ್ಮ ಹಾರ್ದಿಕ ಸ್ನೇಹ ಸಂಬಂಧಕ್ಕೆ ಧಕ್ಕೆಯಾಗದಿರಲಿ.