ಪ್ರಶ್ನೆ - ನಾನು ಎಣ್ಣೆ ಮಿಲ್ ನ ಬ್ಯುಸಿನೆಸ್ ಮಾಡುತ್ತಿದ್ದೇನೆ. ರಾತ್ರಿ ಹಗಲು ಕೆಲಸ ಇರುತ್ತೆ. ಕೆಲವೊಮ್ಮೆ ವಾರಗಟ್ಟಲೆ ಔಟ್ ಆಫ್ ಸ್ಟೇಶನ್ ಇರುತ್ತೇನೆ. ಇಡೀ ದಿನ ಬ್ಯುಸಿನೆಸ್ ನ ತಲೆಬಿಸಿಗಳೇ ಇರುವ ಕಾರಣ ಮನೆಯ ಕಡೆ ಗಮನ ಕೊಡಲಾಗುವುದಿಲ್ಲ. ಆದರೆ ಇದನ್ನು ಹೆಂಡತಿ ಈ ಮಟ್ಟಿನ ನೀಚ ಕೆಲಸಕ್ಕೆ ಬಳಸಿಕೊಳ್ತಾಳೆ ಅಂತ ಗೊತ್ತಿರಲಿಲ್ಲ. ಮೊನ್ನೆ ಯಾವುದೋ ಡಾಕ್ಯುಮೆಂಟ್ ತಗೊಳ್ಬೇಕು ಅಂತ ಕೆಲಸದ ಮಧ್ಯದಲ್ಲೇ ಮನೆಗೆ ಬಂದೆ. ಇನ್ನೇನು ಬೆಲ್ ಮಾಡ್ಬೇಕು ಅನ್ನುವಷ್ಟರಲ್ಲಿ ಹೆಂಡತಿ ಸಣ್ಣಗೆ ನರಳಿದ ಹಾಗೆ ಕೇಳಿತು. ಬೆಲ್ ಮಾಡದೇ ನನ್ನ ಬಳಿ ಇದ್ದ ಕೀಯಿಂದ ಲಾಕ್ ಓಪನ್ ಮಾಡಿ ಮನೆಯೊಳಗೆ ಹೋದೆ. ನೋಡಿದ್ರೆ ಮನೆಯ ಕೆಲಸದವನ ಜೊತೆ ಸೆಕ್ಸ್ ಮಾಡ್ತಿದ್ದಾಳೆ. ನನ್ನನ್ನು ನೋಡಿದ ಮೇಲೆ ಇಬ್ಬರೂ ಭಯದಿಂದ ಬಿಳುಚಿಕೊಂಡು ಆಚೆ ಹೋಗಿದ್ದಾರೆ. ನನಗೇನು ಮಾಡಬೇಕು ಅಂತ ತೋಚುತ್ತಿಲ್ಲ. ಈ ಶಾಕ್ ನಿಂದ ಚೇತರಿಸಿಕೊಳ್ಳಲಾಗುತ್ತಿಲ್ಲ. ಹೆಂಡತಿ ಹಾದರ‌ ಮಾಡೋದು ನೋಡೋ ದುರ್ದೈವ ಶತ್ರುಗೂ ಬರಬಾರದು. ಅವಳ ಮುಖ ನೋಡೋಕೆ ಕೆಟ್ಟ ಅಸಹ್ಯ ಆಗುತ್ತೆ. ಆದ್ರೆ ಅವಳಿಲ್ಲದೇ ಇರೋದು ಕಷ್ಟ.  ನಿಮ್ಮ ಪ್ರಕಾರ ನಾನೀಗ ಏನು ಮಾಡಿದರೆ ಉತ್ತಮ?

#Feelfree: ನೀನೂ ಒಂದು ಸಂಬಂಧ ಇಟ್ಕೋ ಅಂತಾಳೆ ಮಡದಿ! 

ಉತ್ತರ - ಇಲ್ಲಿ ಬರೀ ಹೆಂಡತಿ ತಪ್ಪಷ್ಟೇ ಇಲ್ಲ. ನಿಮ್ಮ ತಪ್ಪೂ ಇದೆ. ಏನೇ ಕೆಲಸ ಇದ್ದರೂ ಫ್ಯಾಮಿಲಿಗೂ ಟೈಮ್ ಕೊಡಲೇ ಬೇಕಲ್ವಾ? ಹೆಚ್ಚಿನವರು ನಾವು ಹೆಂಡ್ತಿ, ಮಕ್ಕಳಿಗೋಸ್ಕರ ಕಷ್ಟ ಪಡುತ್ತೀವಿ ಅಂತಾರೆ. ಅವರನ್ನು ಪ್ರೀತಿಸ್ತೀವಿ ಅಂತಾರೆ.‌ ಆದರೆ ಅವರ ಜೊತೆಗೆ ಸಮಯ ಕಳೆಯೋದಿಲ್ಲ. ಇದರಿಂದ ಕೆಲವೊಮ್ಮೆ ಹೀಗೆಲ್ಲ ಆಗುತ್ತದೆ. ನೀವು ಮೊದಲು ಕೆಲಸದವನನ್ನು ಕಿತ್ತು ಹಾಕಿ. ಆಮೇಲೆ ಪತ್ನಿಯ ಜೊತೆಗೆ ಈ ವಿಷಯವಾಗಿ ಮಾತನಾಡಿ. ಇಬ್ಬರೂ ಮಾತಾಡಿ ಸಮಸ್ಯೆ ಬಗೆಹರಿಸಲಾಗುತ್ತದಾ ಅಂತ ನೋಡಿ. 

ಚುಂಬನ ರೋಗದ ಬಗ್ಗೆ ಗೊತ್ತಾ?‌ ಡಿಸೀಸ್‌ಗೆ ಕೊರೋನಾದ್ದೇ ಲಕ್ಷಣ, ಆದ್ರೆ ..

ಪ್ರಶ್ನೆ - ನಾನು ವರ್ಕಿಂಗ್ ವುಮೆನ್. ಕೆಲಸ ಮುಗಿಸಿ ಮನೆಗೆ ಬರುವಾಗ ಸಾಕಷ್ಟು ಸುಸ್ತಾಗಿರುತ್ತೆ. ಆಮೇಲೆ ಮನೆ ಕೆಲಸ ಮುಗಿಸಿ‌ ಮಕ್ಕಳನ್ನು ಸಂಭಾಳಿಸಿ ಮಲಗೋ ಹೊತ್ತಿಗೆ ಸಾಕೋ ‌ಸಾಕಾಗಿರುತ್ತೆ. ಹಸ್ಬೆಂಡ್ ಸೆಕ್ಸ್ ಮಾಡಲು ಆಹ್ವಾನಿಸುತ್ತಾರೆ. ಆದರೆ ನನಗೋ ಒಮ್ಮೆ ನಿದ್ದೆ ಮಾಡಿದ್ರೆ ಸಾಕು ಅನಿಸುತ್ತಿರುತ್ತೆ. ಜೊತೆಗೆ ಇದರಿಂದ ಪತಿಯ ಮನಸ್ಸಿಗೆ ನೋವಾಗ್ತಿದೆಯಲ್ಲಾ ಅಂತಾನೂ ಅನಿಸುತ್ತೆ. ಇದನ್ನು ಹೇಗೆ ನಿಭಾಯಿಸಲಿ ಎಂದೇ ತಿಳಿಯುತ್ತಿಲ್ಲ. ದಯವಿಟ್ಟು ಸಲಹೆ ಕೊಡಿ. 

ಸೆಕ್ಸ್ ಇಲ್ಲದೆಯೇ ಗರ್ಭಿಣಿಯಾದಳಂತೆ ಈಕೆ, ಇಲ್ಲಿದೆ ವಿಚಿತ್ರ ಸುದ್ದಿ!

ಉತ್ತರ - ಇದು ನಿಮ್ಮೊಬ್ಬರ ಸಮಸ್ಯೆಯಾಗಿ ಉಳಿದಿಲ್ಲ. ಹೆಚ್ಚಿನ ಮಹಿಳೆಯರು, ಉದ್ಯೋಗಿಗಳು, ಗೃಹಿಣಿಯರು ಫೇಸ್ ಮಾಡುತ್ತಾರೆ. ಆದರೆ ನಾವು ಎಷ್ಟೋ ಸಲ ಬೇರೆ ಕೆಲಸಗಳ ನಡುವೆ ನಮಗೆ ನಿಜಕ್ಕೂ ಅಗತ್ಯ ಇರುವುದಕ್ಕೆ ಸಮಯ ಕೊಡುವುದಿಲ್ಲ. ಅಡುಗೆ, ಮನೆ ಕೆಲಸ, ಮಕ್ಕಳು ಎಲ್ಲಾ ಜವಾಬ್ದಾರಿ ನೀವೊಬ್ಬರೇ ಯಾಕೆ ಹೊರುತ್ತೀರಿ. ಪತಿ, ಮಕ್ಕಳನ್ನೂ ಇದರ ತೊಡಗಿಸಿಕೊಳ್ಳಬಹುದಲ್ವಾ? ಆಗ ನಿಮ್ಮ ಒತ್ತಡ ಕಡಿಮೆಯಾಗುತ್ತೆ. ಲೈಂಗಿಕತೆ ಅನ್ನೋದು ಕೇವಲ ದೈಹಿಕವಷ್ಟೇ ಅಲ್ಲ, ಅದು ನೀಡುವ ಮಾನಸಿಕ ಸಮಾಧಾನವೂ ದೊಡ್ಡದು. ಎಷ್ಟೇ ಸುಸ್ತಾಗಿದ್ರೂ ಆ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ದಣಿವು, ಆಯಾಸ, ಒತ್ತಡ ಎಲ್ಲಾ ನಿವಾರಣೆಯಾಗುತ್ತೆ. ಈ ಬಗೆಗೂ ಯೋಚಿಸಿ. ಇದರ ಜೊತೆಗೆ ಒಂದಿಷ್ಟು ಎಕ್ಸರ್ ಸೈಸ್ ಗಳು ನಿಮ್ಮ ದೇಹಕ್ಕೆ ಚೈತನ್ಯ ನೀಡುತ್ತದೆ. ಹೆಚ್ಚು ಪೌಷ್ಟಿಕಾಂಶ ಇರುವ ಆಹಾರ ಹೆಚ್ಚೆಚ್ಚು ಸೇವಿಸಿ. ಮನೆ, ಮಕ್ಕಳ ಜವಾಬ್ದಾರಿಯನ್ನು ನೀವು ನಿಮ್ಮ ಪತಿ ಇಬ್ಬರೂ ನಿಭಾಯಿಸುತ್ತಾ, ಒಬ್ಬರಿಗೊಬ್ಬರು ಟೈಮ್ ಕೊಡುತ್ತಾ ಹೋದರೆ ಲೈಫ್ ಚೆನ್ನಾಗಿರುತ್ತೆ. ನಿರಂತರ ಕೆಲಸ ಮಾಡುತ್ತಲೇ ಇರಬೇಡಿ.‌ ಕೆಲಸ ಮಾಡಿ ಬೇಗ ಮುಗಿಸಬೇಕು ಅನ್ನೋ ಧಾವಂತ ಬೇಡ. ನಡು ನಡುವೆ ವಿರಾಮ ಕೊಡುತ್ತಾ ಕೆಲಸವನ್ನೂ ಎನ್ ಜಾಯ್ ಮಾಡಿ. ಪ್ರಯತ್ನಪೂರ್ವಕವಾಗಿ ಈ ರೀತಿ ಮಾಡಿದರೆ ನಿಮ್ಮ ಸಮಸ್ಯೆಯಿಂದ ಹೊರಬರಬಹುದು.