ದಾಂಪತ್ಯದಲ್ಲಿ ಮೋಸವಾದ್ರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ನಂಬಿಕೆ ಇಲ್ಲಿ ಬಹಳ ಮುಖ್ಯ. ಎರಡೂ ಕಡೆಯಿಂದ ಪ್ರೀತಿ, ನಂಬಿಕೆ, ವಿಶ್ವಾಸ ಸಿಕ್ಕಾಗ ಮಾತ್ರ ದಾಂಪತ್ಯ ಮಧುರವಾಗಿರುತ್ತದೆ. ಇಬ್ಬರ ಮಧ್ಯೆ ನಾಟಕ ಶುರುವಾದ್ರೆ ಅಲ್ಲಿ ಪ್ರೀತಿ ಹಳಸುತ್ತದೆ. 

ದಾಂಪತ್ಯ (Marriage) ತುಂಬಾ ಸೂಕ್ಷ್ಮವಾದ ಸಂಬಂಧ. ಸಣ್ಣ ತೂತು ಬಿದ್ದರೂ ಬಲೂನ್ (Balloon ) ಒಡೆದಂತೆ ದಾಂಪತ್ಯ ಹಾಳಾಗುತ್ತದೆ. ಎಲ್ಲಿಂದಲೂ ಗಾಳಿ (Air)ಹೊರಗೆ ಹೋಗದಂತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದಂಪತಿ ಮಧ್ಯೆ ಎಷ್ಟೇ ಪ್ರೀತಿ (Love) ಯಿದ್ದರೂ ಸಂಗಾತಿ ಮಾಡುವ ಸಣ್ಣ ತಪ್ಪು ದಾಂಪತ್ಯದ ದಾರಿ ತಪ್ಪಿಸುತ್ತದೆ. ಸಂಗಾತಿಯ ಮನಸ್ಸು ಬೇರೊಂದು ಸೆಳೆತಕ್ಕೆ ಸಿಲುಕಿ ದಾಂಪತ್ಯ ಚೂರಾಗುತ್ತದೆ. ವಿವಾಹೇತರ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿವೆ. ಅನೇಕ ದಾಂಪತ್ಯ ಮುರಿದು ಬೀಳಲು ದೊಡ್ಡ ಕಾರಣವೇ ಇರುವುದಿಲ್ಲ.

ಬೇರೊಬ್ಬರ ಮೇಲಿನ ಆಕರ್ಷಣೆಗೆ ಸದಾ ಜೊತೆಗಿರ್ತೇನೆಂದು ಪ್ರಮಾಣ ಮಾಡಿದ ಸಂಗಾತಿಯನ್ನು ಅನೇಕರು ದೂರ ಮಾಡ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಇಂಥ ಅನೇಕ ಘಟನೆಗಳನ್ನು ನಾವು ನೋಡಬಹುದಾಗಿದೆ. ಈಗ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾನೆ. ಕನಸಿನಲ್ಲಿ ಪತ್ನಿ ಹೇಳಿದ ಮಾತು ಆತನ ಪ್ರೀತಿಯ ಜೀವನಕ್ಕೆ ಮುಳ್ಳಾಗಿದೆ. ಆತನ ಕಥೆಯೇನು ಎಂಬುದನ್ನು ನಾವಿಂದು ಹೇಳ್ತೇವೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವಿನ ಕಥೆ ಹೇಳಿರುವ ವ್ಯಕ್ತಿ ತನ್ನ ಹೆಸರು ಹೇಳಿಲ್ಲ. ಪತ್ನಿಯನ್ನು ಆತ ಗಾಢವಾಗಿ ಪ್ರೀತಿಸುತ್ತಾನಂತೆ. ಆದ್ರೆ ಪತ್ನಿಗೆ ಸಮಯವೇ ಇಲ್ವಂತೆ. ಕನಸಿನಲ್ಲೂ ತನ್ನ ಪತ್ನಿ ತನಗೆ ಮೋಸ ಮಾಡ್ತಾಳೆ ಎಂದು ಆತ ಎಂದೂ ಆಲೋಚನೆ ಮಾಡಿರಲಿಲ್ಲವಂತೆ. ಪತ್ನಿಯ ಸರಳತೆ, ಸೌಂದರ್ಯ ಹಾಗೂ ಸದಾ ಚಟುವಟಿಕೆಯಿಂದಿರುವ ಗುಣ ಆತನ ಪ್ರೀತಿಯನ್ನು ದುಪ್ಪಟ್ಟು ಮಾಡಿತ್ತಂತೆ. ಪತ್ನಿಯ ಸ್ವಭಾವಕ್ಕೆ ಅನೇಕರು ಆಕರ್ಷಿತರಾಗ್ತಾರೆ. ಆಕೆ ಸದಾ ಬೇರೆಯವರ ಸೇವೆಗೆ ಸಿದ್ಧವಿರ್ತಾಳೆ. ಆದ್ರೆ ನನಗೆ ಸಮಯ ನೀಡುವುದಿಲ್ಲ ಎಂಬ ಬೇಸರದಲ್ಲಿದ್ದ ಪತಿಗೆ ಒಂದು ದಿನ ಶಾಕ್ ಆಗಿದೆ.

ಕನಸಿನಲ್ಲಿ ಪತ್ನಿ ಹೇಳಿದ್ದೇನು? : ಆ ದಿನ ಇಬ್ಬರೂ ದಣಿದು ಬಂದಿದ್ದರಂತೆ. ಹಾಗಾಗಿ ಬೇಗನೇ ನಿದ್ರೆಗೆ ಜಾರಿದ್ದರಂತೆ. ಕೆಲಸದ ಒತ್ತಡದಿಂದಾಗಿ ಪತಿಗೆ ಆಗಾಗ ಎಚ್ಚರವಾಗ್ತಿತ್ತಂತೆ. ನಿದ್ರೆಯಲ್ಲಿದ್ದ ಪತ್ನಿ ಪತಿಯ ಆಪ್ತ ಗೆಳೆಯನ ಹೆಸರು ಹೇಳಿ ಕೂಗಾಡಿದ್ದಾಳಂತೆ. ನಿದ್ರೆಯಲ್ಲಿ ಮಾತನಾಡ್ತಿದ್ದ ಪತ್ನಿ ಮತ್ತಷ್ಟು ಸುಂದರವಾಗಿ ಕಾಣ್ತಿದ್ದಾಳೆಂದು ಆಕೆ ಹತ್ತಿರಕ್ಕೆ ಹೋಗಿದ್ದ ಪತಿಗೆ ಸ್ನೇಹಿತನ ಹೆಸರು ಕೇಳಿ ಶಾಕ್ ಆಯ್ತಂತೆ. ಪತ್ನಿ, ಪತಿಯ ಆಪ್ತ ಸ್ನೇಹಿತ ಅಮರ್ ಎಂಬಾತನ ಜೊತೆ ಶಾರೀರಿಕ ಸಂಬಂಧ ಬೆಳೆಸಿದ ಕನಸು ಕಾಣ್ತಿದ್ದಳಂತೆ. ಸ್ವಲ್ಪ ಸಮಯ ನಿದ್ರೆಯಲ್ಲಿ ಮಾತನಾಡಿದ ಪತ್ನಿ ಮತ್ತೆ ಗಾಢ ನಿದ್ರೆಗೆ ಜಾರಿದ್ದಳಂತೆ. ಆದ್ರೆ ವ್ಯಕ್ತಿ ಆ ದಿನದಿಂದ ನಿದ್ರೆ ಕಳೆದುಕೊಂಡಿದ್ದಾನೆ.

HAPPY VALENTINES DAY; ಸ್ಯಾಂಡಲ್‌ವುಡ್‌ ನಟಿಯರು ಆಚರಿಸುವುದು ಹೀಗೆ!

ಸಂಶಯಕ್ಕೆ ಸಿಕ್ತು ಮತ್ತಷ್ಟು ಸಾಕ್ಷ್ಯ : ಇಷ್ಟಕ್ಕೇ ಪತ್ನಿಯ ಬಗ್ಗೆ ತಪ್ಪು ತಿಳಿಯಬಾರದು ಎಂದುಕೊಂಡಿದ್ದ ಪತಿ, ಪತ್ನಿಯ ಮೇಲೆ ಕಣ್ಣಿಟ್ಟಿದ್ದ. ಪತ್ನಿ ಬ್ಯುಸಿ ಎಂದು ಮನೆಯಿಂದ ಹೊರಗೆ ಹೋದ ದಿನ ಆತನ ಸ್ನೇಹಿತ ಅಮರ್ ಕೂಡ ಬ್ಯುಸಿಯಿರ್ತಿದ್ದ. ಒಂದು ದಿನ ಪತ್ನಿಯನ್ನು ಹಿಂಬಾಲಿಸಿದ್ದ ಪತಿಗೆ, ಪತ್ನಿ ಅಮರ್ ಜೊತೆ ಹೋಗುವುದು ಗೊತ್ತಾಗಿದೆ. ಅಮರ್, ವ್ಯಕ್ತಿಯ ಬಾಲ್ಯದ ಸ್ನೇಹಿತನಂತೆ.

Relationship Tips: 'ಗೆಹ್ರೈಯಾನ್' ಸಿನಿಮಾ ನೋಡಿ, ದಾಂಪತ್ಯದಲ್ಲಿ ಈ ತಪ್ಪು ಮಾಡಬೇಡಿ !

ಪತ್ನಿ ದೂರ ಮಾಡಲು ಮನಸ್ಸಿಲ್ಲ : ಪತ್ನಿಗೆ ಈ ವಿಷ್ಯವನ್ನು ಇನ್ನೂ ಆತ ಹೇಳಿಲ್ಲವಂತೆ. ಸತ್ಯ ಒಪ್ಪಿಕೊಂಡು ಪತ್ನಿ ತನ್ನಿಂದ ದೂರವಾದ್ರೆ ಎಂಬ ಭಯ ನೊಂದ ವ್ಯಕ್ತಿಗಿದೆ. ಪತ್ನಿಯನ್ನು ಅತಿ ಹೆಚ್ಚು ಪ್ರೀತಿಸುವ ಈತ ತೊಳಲಾಟದಲ್ಲಿದ್ದಾನೆ. ಪತ್ನಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ಆತನಿಗೆ ಮನಸ್ಸಿಲ್ಲ. ನಿಮ್ಮಿಬ್ಬರ ಆಟ ನನಗೆ ಗೊತ್ತಿದೆ ಎಂದು ಪತ್ನಿ ಮುಂದೆ ಹೇಳುವ ಧೈರ್ಯವೂ ಇಲ್ಲ. ಆಕೆಗೆ ವಿಚ್ಛೇದನ ನೀಡಲು ಸಾಧ್ಯವೇ ಇಲ್ಲ ಎನ್ನುವ ಪತಿಗೆ ಸುಳ್ಳಿನ ಜೊತೆ ಜೀವನ ಮಾಡುವುದೂ ಕಷ್ಟವಾಗಿದೆಯಂತೆ.