Relationship Tips: 'ಗೆಹ್ರೈಯಾನ್' ಸಿನಿಮಾ ನೋಡಿ, ದಾಂಪತ್ಯದಲ್ಲಿ ಈ ತಪ್ಪು ಮಾಡಬೇಡಿ !

ಹಾಟ್ ಲುಕ್, ಬೋಲ್ಡ್ ಸೀನ್, ಲಿಪ್ ಲಾಕ್ ದೃಶ್ಯಗಳಿಂದಲೇ ಬಾಲಿವುಡ್‌ (Bollywood)ನ ಹೊಸ ಚಿತ್ರ ‘ಗೆಹ್ರೈಯಾನ್’ ಸುದ್ದಿಯಲ್ಲಿದೆ. ಅಕ್ರಮ ಸಂಬಂಧದ ಕುರಿತಾಗಿ ಇರುವ ಚಿತ್ರದ ಬಗ್ಗೆ ಹಲವು ಮೆಚ್ಚುಗೆ-ಟೀಕೆಗಳು ವ್ಯಕ್ತವಾಗ್ತಿದೆ. ‘ಗೆಹ್ರೈಯಾನ್’ ಚಿತ್ರದಿಂದ ಕಲಿಯಬಹುದಾದ ಕೆಲವು ಸಂಬಂಧ (Relationship)ದ ಪಾಠಗಳು ಇಲ್ಲಿವೆ.

Relationship Lessons To Learn From Gehraiyaan

ಬಾಲಿವುಡ್ ಚಿತ್ರ ‘ಗೆಹ್ರೈಯಾನ್’ (Gehraiyaan) ಬಿಡುಗಡೆಗೂ ಮೊದಲೇ ತನ್ನ ಟ್ರೈಲರ್‌ನಿಂದ ಸಾಕಷ್ಟು ಸುದ್ದಿಯಾಗಿತ್ತು. ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಅಭಿನಯದ ಚಿತ್ರ ಸಾಕಷ್ಟು ಬೋಲ್ಡ್ ಸೀನ್‌ಗಳನ್ನು ಒಳಗೊಂಡಿದ್ದು, ಚಿತ್ರ ಬಿಡುಗಡೆಯ ನಂತರವೂ ಸುದ್ದಿಯಾಗ್ತಿದೆ. ಚಿತ್ರದಲ್ಲಿ ಜೋಡಿಗಳ ಬೋಲ್ಡ್, ಹಾಟ್ ಲುಕ್ (Hotlook), ಬಿಕಿನಿ, ಲಿಪ್ ಲಾಕ್ ಮೊದಲಾದ ದೃಶ್ಯಗಳು ವೈರಲ್ ಆಗಿವೆ. ‘ಗೆಹ್ರೈಯಾನ್’ ಅಕ್ರಮ ಸಂಬಂಧಗಳ ಕುರಿತಾಗಿರುವ ಸಿನಿಮಾವಾಗಿದ್ದು, ಸಂಬಂಧಗಳ ಸೂಕ್ಷ್ಯತೆ, ಮಹತ್ವದ ಬಗ್ಗೆ ಹಲವು ಸಂದೇಶಗಳನ್ನು ನೀಡುತ್ತದೆ. ಗೆಹ್ರೈಯಾನ್ ಚಿತ್ರ ದಾಂಪತ್ಯ, ಗಂಡ-ಹೆಂಡತಿಯ ಸಂಬಂಧ, ಪರಪುರುಷ, ಅಕ್ರಮ ಸಂಬಂಧ (Relationship)ದ ಬಗ್ಗೆ ತಿಳಿಸಿಕೊಡುತ್ತದೆ. ಅದರಲ್ಲಿ ಕೆಲವು ಇಲ್ಲಿವೆ.

ಸಂಗಾತಿಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ
ಪ್ರತಿಯೊಬ್ಬರೂ ತಾವು ಇಷ್ಟಪಟ್ಟ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗಬೇಕೆಂದು ಬಯಸುತ್ತಾರೆ. ಮನೆಯವರೇ ಮೋಡಿ ಮದುವೆಯಾದರೂ ಬಳಿಕ ಅವರನ್ನು ಪ್ರೀತಿಸಿ ಇಷ್ಟಕಷ್ಟಗಳನ್ನು ಗೌರವಿಸುತ್ತಾರೆ. ಆದರೆ ನಾವು ಯಾವಾಗ ನಮ್ಮ ಸಂಗಾತಿಯನ್ನು ಲಘುವಾಗಿ ತೆಗೆದುಕೊಳ್ಳುತ್ತೇವೋ ಅಲ್ಲಿಗೆ ದಾಂಪತ್ಯ ಹಳಿತಪ್ಪಲು ಆರಂಭವಾಗುತ್ತದೆ. ನನ್ನ ಗಂಡ ಇಷ್ಟೇ, ನನ್ನ ಹೆಂಡತಿ ಇಷ್ಟೇ. ಅವನಿಂದ, ಅವಳಿಂದ ಏನೂ ಸಾಧ್ಯವಿಲ್ಲ ಎಂಬ ಭಾವನೆ ಸಂಗಾತಿಯೆಡೆಗಿನ ಆಸಕ್ತಿ (Interest) ಕಡಿಮೆಯಾಗುವಂತೆ ಮಾಡುತ್ತದೆ. ಹೀಗಿದ್ದಾಗ ಆ ಸಂಬಂಧದಿಂದ ಹೊರ ಬರಲು ನೀವು ಕಾರಣವನ್ನು ಹುಡುಕುತ್ತೀರಿ. ಸಂಗಾತಿ ಮಾತನಾಡುವಾಗಲೂ, ಮಾಡುವ ಪ್ರತಿಯೊಂದು ವಿಷಯದಲ್ಲಿಯೂ ತಪ್ಪು ಕಾಣುತ್ತದೆ. ಹೀಗಾಗಿ ನಿಮ್ಮ ಸಂಗಾತಿಯನ್ನು ಯಾವತ್ತೂ ಗೌರವಿಸಿ, ಲಘುವಾಗಿ ತೆಗೆದುಕೊಳ್ಳಬೇಡಿ.

Relationship Tips : ಇಲ್ಲಿ ಭಾನುವಾರ ಮುತ್ತಿಗೂ ರಜಾ!

ಮಾತನಾಡುವುದನ್ನು ಬಿಟ್ಟುಬಿಡಬೇಡಿ
ಯಾವುದೇ ಸಂಬಂಧವನ್ನು ಉಳಿಸಿಕೊಳ್ಳಲು ಪರಸ್ಪರ ಮಾತನಾಡುವುದು ಮುಖ್ಯವಾಗಿದೆ. ಆದರೆ ಇವತ್ತು ಹೆಚ್ಚಾಗಿ ಸಂಬಂಧಗಳು ಪರಸ್ಪರ ಮಾತುಕತೆಯಿಲ್ಲದ ಕಾರಣ ಮುರಿದುಬೀಳುತ್ತವೆ. ಸಂಬಂಧದಲ್ಲಿ ಮನಸ್ಸಿಗೆ ಬಂದದ್ದನ್ನು ಹಾಗೆಯೇ ಹೇಳಿಬಿಡಬೇಕು. ಆಗಲಷ್ಟೇ ನೀವೇನು ಯೋಚಿಸುತ್ತಿದ್ದೀರಿ, ಯಾವ ತೊಂದರೆಯನ್ನು ಅನುಭವಿಸುತ್ತಿದ್ದೀರಿ ಎಂಬುದು ಇನ್ನೊಬ್ಬರಿಗೆ ಗೊತ್ತಾಗುತ್ತದೆ. ಪರಸ್ಪರ ಮಾತನಾಡುತ್ತಿದ್ದಾಗ ಸಮಸ್ಯೆ (Problem)ಗಳ ಬಗ್ಗೆ ತಿಳಿಯುವುದಿಲ್ಲ. ಹೀಗಾಗಿ ತಪ್ಪು ಗ್ರಹಿಕೆ ಉಂಟಾದಾಗ, ಜಗಳವಾದಾಗ ಮಾತನಾಡುವುದನ್ನು ಬಿಟ್ಟುಬಿಡಬೇಡಿ. ಇದರಿಂದ ದಾಂಪತ್ಯದಲ್ಲಿ ಬಿರುಕು ಹೆಚ್ಚಾಗುತ್ತಾ ಹೋಗುತ್ತದೆ. ಬದಲಾಗಿ ಯಾವುದೇ ಸಮಸ್ಯೆಯಾದರೂ ಮಾತನಾಡಿ ಬಗೆಹರಿಸಿಕೊಳ್ಳಿ.

ಸಂಗಾತಿಯ ಇಷ್ಟ, ಕಷ್ಟದ ಬಗ್ಗೆ ಆಸಕ್ತಿ ವಹಿಸಿ
ದಾಂಪತ್ಯದಲ್ಲಿ ಅನ್ಯೋನ್ಯವಾಗಿರಲು ಗಂಡ-ಹೆಂಡತಿ ಇಬ್ಬರೂ ಪರಸ್ಪರ ತಮ್ಮ ಇಷ್ಟಕಷ್ಟಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಗಂಡನಿಗೆ, ಹೆಂಡತಿಗೆ ಏನಿಷ್ಟ ಎಂಬುದನ್ನು ತಿಳಿದುಕೊಂಡು ಅದರಂತೆ ವರ್ತಿಸಿ. ಅವರ ಆಸಕ್ತಿಗಳಿಗೆ ಹೆಚ್ಚು ಪ್ರೋತ್ಸಾಹ ಕೊಡಿ. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ.

Relationship Tips : ಪತ್ನಿ ಮಾಡೋ ಈ ತಪ್ಪಿಗೆ ಹಾಳಾಗುತ್ತೆ ದಾಂಪತ್ಯ!

ಸಂಬಂಧ ದೂರವಾಗಲು ಅವಕಾಶ ಕೊಡಬೇಡಿ
ಪರಿಪೂರ್ಣವಾದ ಯಾವುದೇ ಸಂಬಂಧವಿಲ್ಲ. ಎಲ್ಲಾ ಸಂಬಂಧಗಳು ಜಗಳ, ಒಡಕು, ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಆದರೆ ಈ ಕಾರಣಗಳಿಂದಾಗಿ ಸಂಬಂಧ ದೂರವಾಗಲು ಅವಕಾಶ ಮಾಡಿಕೊಡಬೇಡಿ. ಇದರಿಂದ ನಿಮ್ಮ ಸಂಗಾತಿ ಪ್ರೀತಿಗಾಗಿ ಮತ್ತೊಬ್ಬರ ಬಳಿ ತೆರಳುತ್ತಾರೆ. ಒಂದು ಬಾರಿ ಹಳಿತಪ್ಪಿದ ದಾಂಪತ್ಯ ಮತ್ತೆ ಸರಿಯಾಗಿ ಸಾಗುವುದು ಕಷ್ಟ. ಹೀಗಾಗಿ ಸಂಬಂಧ ದೂರವಾಗಲು ಮೊದಲ ಹಂತದಲ್ಲೇ ಅವಕಾಶ ಮಾಡಿ ಕೊಡಬಾರದು. ಪರಸ್ಪರ ಪ್ರೀತಿ (Love), ವಿಶ್ವಾಸದಿಂದ ಜೀವನ ನಡೆಸಿ.

ಆಲೋಚನೆ ವಿಭಿನ್ನವಾಗಿದ್ದರೂ, ಪರಸ್ಪರ ಗೌರವಿಸಿ
ನಾವೆಲ್ಲರೂ ನಮ್ಮದೇ ಆದ ಆಲೋಚನಾ ವಿಧಾನವನ್ನು ಹೊಂದಿದ್ದೇವೆ. ನಮ್ಮ ವೈಯಕ್ತಿಕ ವ್ಯಕ್ತಿತ್ವಗಳು, ನಮ್ಮ ಭಾವನಾತ್ಮಕ ಅಂಶವೂ ಸಹ ಪ್ರತ್ಯೇಕವಾಗಿರುತ್ತದೆ. ಹೀಗಾಗಿಯೇ ಸಂಗಾತಿಯು ಸಹ ನಮ್ಮಂತೆ ಯೋಚಿಸಬೇಕು, ವರ್ತಿಸಬೇಕು ಎಂಬುದನ್ನು ನಿರೀಕ್ಷಿಸಬಾರದು. ಪ್ರತಿಯೊಬ್ಬರ ಯೋಚನೆಯನ್ನು ಗೌರವಿಸಬೇಕು. ತಪ್ಪಾದ ಬಿಡಿಸಿ ತಿಳಿಸಿ ಹೇಳಬೇಕು. ಬದಲಾಗಿ ನಾನು ಹೇಳಿದ್ದೇ ಸರಿಯೆಂಬ ವಾದ ದಾಂಪತ್ಯದಲ್ಲಿ ಜಗಳಕ್ಕೆ ಮಾತ್ರ ಕಾರಣವಾಗುತ್ತದೆ.

Latest Videos
Follow Us:
Download App:
  • android
  • ios