Happy Valentines Day; ಸ್ಯಾಂಡಲ್‌ವುಡ್‌ ನಟಿಯರು ಆಚರಿಸುವುದು ಹೀಗೆ!

ಇಂದು ಪ್ರೇಮಿಗಳ ದಿನ. ಇಂಥಾ ಹೊತ್ತಲ್ಲಿ ಸ್ಯಾಂಡಲ್‌ವುಡ್‌ ಹುಡುಗೀರು ಪ್ರೀತಿಯ ಕನಸು, ಕನವರಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Valentines Day celebrated in Unique way by Kannada film actress vcs

ಈ ದಿನ ಅಪ್ಪ ಚಾಕ್ಲೇಟ್‌ ತರ್ತಾರೆ, ನಮ್‌ ಜೊತೆ ಅಮ್ಮಂಗೂ ಕೊಡ್ತಾರೆ!

ರೀಷ್ಮಾ ನಾಣಯ್ಯ

Valentines Day celebrated in Unique way by Kannada film actress vcs

ಯಾವತ್ತೂ ಕೆಲಸ ಮುಗಿಸಿ ತಮ್ಮ ಪಾಡಿಗೆ ಮನೆಗೆ ವಾಪಾಸಾಗೋ ಅಪ್ಪನ ಮುಖದಲ್ಲಿ ವ್ಯಾಲೆಂಟೀನ್‌ ಡೇ ದಿನ ಕೊಂಚ ಬದಲಾವಣೆ ಇರುತ್ತೆ. ಅಂದು ಅವರ ಕೈ ತುಂಬಾ ಚಾಕೊಲೇಟ್‌ಗಳಿರುತ್ತವೆ. ಬಣ್ಣ ಬಣ್ಣದ ರಾರ‍ಯಪರ್‌ನಲ್ಲಿ ಸುತ್ತಿರುವ ಆ ಚಾಕೊಲೇಟ್‌ ಅನ್ನು ಅಪ್ಪ ಅಕ್ಕ, ನನ್ನ ಜೊತೆಗೆ ಅಮ್ಮನಿಗೂ ಕೊಡ್ತಾರೆ. ಅವರು ಅಮ್ಮನಿಗೆ ಚಾಕೊಲೇಟ್‌ ಕೊಡುವ ಕ್ಷಣ ಸಿಹಿ ಕ್ಷಣವಾಗಿ ಮನಸ್ಸಲ್ಲುಳಿದಿದೆ. ನನ್ನ ವ್ಯಾಲೆಂಟೈನ್‌ ಡೇ ಸೆಲೆಬ್ರೇಶನ್‌ ಬಗ್ಗೆ ಈವರೆಗೆ ಯೋಚನೆ ಮಾಡಿದವಳಲ್ಲ. ಎಷ್ಟೋ ಸಲ ಇಂಥದ್ದಕ್ಕೆಲ್ಲ ನಾನಿನ್ನೂ ಚಿಕ್ಕವಳು ಅಂತ ಅನಿಸುತ್ತೆ. ಆದರೆ ಪ್ರೇಮಿಗಳು ಈ ದಿನವನ್ನು ಆಚರಿಸೋದನ್ನು ನೋಡಿದಾಗ ಖುಷಿ ಆಗುತ್ತೆ.

Hug day: ಮನದ ಮಾತನ್ನು ಅಪ್ಪಿಕೊಂಡು ಹೇಳಿದ್ರೆ ಒಪ್ಪಿಕೊಳ್ದೆ ಇರ್ತಾರಾ?

ಲವ್‌ ಮಾಡಿ, ನಿರೀಕ್ಷೆ ಕಡಿಮೆ ಇರಲಿ

ಚೈತ್ರಾ ಆಚಾರ್‌

ಎಕ್ಸ್‌ಪೆಕ್ಟೇಶನ್ಸೇ ಇಟ್ಟುಕೊಳ್ಳದೇ ನಮ್ಮ ಪಾಡಿಗೆ ನಾವು ಒಬ್ಬ ವ್ಯಕ್ತಿಯನ್ನು ಇಷ್ಟಪಡೋದೇ ಪ್ರೀತಿ. ನಾನು ನಿಮ್ಮನ್ನು ತುಂಬ ಪ್ರೀತಿಸ್ತೀನಿ ಅಂದರೆ ಪ್ರೀತಿಸ್ತೀನಿ ಅಷ್ಟೇ. ನೀವೂ ನನ್ನ ಅಷ್ಟೇ ಪ್ರೀತಿಸ್ಬೇಕು, ನಂಗೋಸ್ಕರ ಇದನ್ನೆಲ್ಲ ಮಾಡ್ಬೇಕು ಅಂತ ಲೀಸ್ಟ್‌ ಮಾಡ್ಕೊಳ್ಳೋದು ತಪ್ಪು. ಹುಡುಗೀರ ಸದಾ ಗಿಫ್ಟ್‌ ನಿರೀಕ್ಷೆಯಲ್ಲಿರ್ತಾರೆ ಅನ್ನೋ ಪೂರ್ವಾಗ್ರಹ ಹುಡುಗರಲ್ಲಿದೆ. ಆದರೆ ನಾವೆಲ್ಲ ದುಡೀತೀವಿ. ಬೇಕಾದ್ದು ತಗೊಳ್ತೀವಿ. ಅವ್ರಿಂದ ಗಿಫ್ಟ್‌ ಬೇಕು ಅಂತೆಲ್ಲ ನಿರೀಕ್ಷೆ ಮಾಡಲ್ಲ. ಕೆಲವೊಮ್ಮೆ ನಾವೇನಾದರೂ ಹೇಳಿದಾಗ ಅವರು ರಿಯಾಕ್ಟ್ ಮಾಡದಿದ್ದರೆ ಅಯ್ಯೋ ಒಂಚೂರೂ ಏನೂ ಹೇಳಲಿಲ್ಲವಲ್ಲ ಅಂತ ಬೇಜಾರು ಇರುತ್ತೆ ಹೊರತು ಹೇಳಬೇಕು ಅಂತ ಅಧಿಕಾರ ಚಲಾಯಿಸೋದಿಲ್ಲ. ಮುಕ್ತ ಮನಸ್ಸಿಂದ ಪ್ರೀತಿಸಿ. ಪ್ರೀತಿಯನ್ನು ಪ್ರತಿದಿನ ಸಂಭ್ರಮಿಸೋಣ.

ನಗಿಸಿದ್ರೆ, ಒಳ್ಳೆ ಅಡುಗೆ ಮಾಡಿಕೊಟ್ರೆ ಅದೇ ಪ್ರೀತಿಯ ಸೆಲೆಬ್ರೇಶನ್‌

ರಂಜನಿ ರಾಘವನ್‌

Valentines Day celebrated in Unique way by Kannada film actress vcs

ಪ್ರೀತಿಯನ್ನು ಫೀಲ್‌ ಮಾಡ್ಬೇಕು. ಬಾಯಿ ಬಿಟ್ಟು ಹೇಳಬಾರದು. ನಮಗೆ ಯಾರೋ ಒಬ್ರು ಇಷ್ಟಆಗಿದ್ದಾರೆ ಅಂದರೆ ಅವರನ್ನು ಸಂಪೂರ್ಣವಾಗಿ ಅವರ ನೆಗೆಟಿವ್‌ಗಳ ಸಮೇತ ಇಷ್ಟಪಡಬೇಕು. ರುಚಿಯಾದ ಅಡುಗೆ ಮಾಡಿಕೊಟ್ಟರೆ, ನಗಿಸಿದ್ರೆ, ಜೊತೆಯಾಗಿ ಕೂತು ಓದಿದ್ರೆ ಅದೇ ನನಗೆ ಪ್ರೀತಿಯ ಸಂಭ್ರಮಾಚರಣೆ. ‘ಮಿಲನ’ ಸಿನಿಮಾದ ಲವ್‌ಸ್ಟೋರಿ ನನಗೆ ಬಹಳ ಇಷ್ಟ. ಅದರಲ್ಲಿ ಫ್ರೆಂಡ್‌ಶಿಪ್‌ ಮತ್ತು ಪ್ರೀತಿಯನ್ನು ಬ್ಯೂಟಿಫುಲ್‌ ಆಗಿ ತೋರಿಸಿದ್ದಾರೆ. ಮಲಯಾಳಂನಲ್ಲಿ ‘ಮಹಾನದಿ’ ಎಂಬ ಒಂದು ಸಿನಿಮಾ ಇದೆ. ಅವಕಾಶಕ್ಕೆ ಒದ್ದಾಡುವ ಒಬ್ಬ ಆ್ಯಕ್ಟರ್‌, ಅವಳಿಗಾಗಿ ಹಂಬಲಿಸುವ ಒಬ್ಬ ಹುಡುಗ. ಅವಳಿಗೆ ಮೊದಲು ನಟನೆ, ನಂತರ ಲವ್‌. ಅವನ ಮೊದಲ ಆಯ್ಕೆಯೇ ಲವ್‌. ಕೊನೆಗವನು ಅವಳ ಪ್ರೀತಿಯ ಕನವರಿಕೆಯಲ್ಲೇ ಸತ್ತು ಹೋಗ್ತಾನೆ. ಪ್ರೀತಿ ಅಂದಾಗ ಈ ಸಿನಿಮಾದ ಇಮೇಜ್‌ಗಳು ಮನಸ್ಸಿಗೆ ಬರುತ್ತವೆ.

Valentines Day 2022: ಪ್ರೇಮಿಗಳ ದಿನಾಚರಣೆಗೆ ಸಿಲಿಕಾನ್ ಸಿಟಿ ಸಜ್ಜು!

ಸಮುದ್ರದಲೆಗಳ ನಡುವೆ ಪ್ರೀತಿಯ ತಂಗಾಳಿ

ಅಮಿತಾ ರಂಗನಾಥ್‌

ಪ್ರೀತಿ ಅಂದರೆ ಎರಡು ಜೀವಗಳ ನಡುವಿನ ಸುಂದರ ಸಂವಹನ. ಅದರೊಳಗೆ ನಂಬಿಕೆ, ಸಪೋರ್ಟ್‌, ಕಾಳಜಿ, ಅಕ್ಕರೆ ಎಲ್ಲವೂ ತುಂಬಿರುತ್ತದೆ. ಪ್ರೀತಿಯನ್ನು ಮುನ್ನಡೆಸೋದು ಭರವಸೆ. ಪ್ರೀತಿಯಲ್ಲಿ ಬಿದ್ದಾಗ ಸಾಧನೆಯ ದಾರಿ ಸುಲಭ. ಜೀವಕ್ಕೆ ಜೀವ ಕೊಡುವ ಸಂಗಾತಿ ಕೊಡುವ ಧೈರ್ಯ, ಬೆಂಬಲದಲ್ಲಿ ಯಾವ ಕೆಲಸವೂ ಕಷ್ಟಅನಿಸೋದಿಲ್ಲ. ಪ್ರೀತಿಯ ಹೆಸರಲ್ಲಿ ಪೊಸೆಸಿವ್‌ನೆಸ್‌ ಬೆಳೆಸಿದರೆ ಅದು ಬಂಧನವಾಗುತ್ತದೆ. ಆಗ ಇಬ್ಬರಲ್ಲೂ ಅಸಹನೆಯ ಕುದಿಬಿಂದು ಸಿಡಿಯಲು ಹವಣಿಸುತ್ತಾ ಇರುತ್ತದೆ. ಸಮುದ್ರ ದಂಡೆಯ ಮೇಲೆ ಅಲೆಗಳ ಸಮೀಪ ಪುಟಾಣಿ ಟೇಬಲ್‌ ಹಾಕಿಕೊಂಡು ಕೂರಬೇಕು. ಸಮುದ್ರದ ನಡುವಿಂದ ಬೀಸುವ ಗಾಳಿ, ಅಲೆಗಳ ನಾದದ ನಡುವೆ ಪ್ರೀತಿಸುವ ಜೊತೆಗಿದ್ದರೆ ಅದೆಂಥಾ ರೊಮ್ಯಾಂಟಿಕ್‌ ಅನುಭವ!

ಪ್ರಶಾಂತ ಪರಿಸರ, ಅದ್ಭುತ ಊಟದ ನಡುವೆ ಲವ್‌ ಡೇಟ್‌

ರಚನಾ ಇಂದರ್‌

ಪ್ರೀತಿಯ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಗೊಂದಲಗಳೇ ಹೆಚ್ಚು. ನಂಗಿನ್ನೂ ಪ್ರೀತಿಯ ದರ್ಶನ ಆಗಿಲ್ಲ. ನನಗೂ ಪ್ರೀತಿಯಾಗಿ ಅದನ್ನು ಸೆಲೆಬ್ರೇಟ್‌ ಮಾಡುವ ಸಂದರ್ಭ ಬಂದರೆ ಹೇಗಿರುತ್ತೆ ಅನ್ನೋದನ್ನು ಯೋಚಿಸಿದರೆ ಮೊದಲಿಗೆ ಬರುವ ಯೋಚನೆ ಊಟದ್ದು. ಲವ್‌ ಡೇಟ್ಸ್‌ನಲ್ಲಿ ಅದ್ಭುತವಾದ ಊಟ ಇರ್ಬೇಕು ಅನ್ನೋದು ನನ್ನ ಕನಸು. ಸುಂದರವಾದ ಕೊಳ ಅಥವಾ ಸರೋವರದ ಸಮೀಪ ಪ್ರಶಾಂತ ಪರಿಸರದಲ್ಲಿ ಟೇಸ್ಟಿಟೇಸ್ಟಿಮೀಲ್ಸ್‌ ಜೊತೆಗೆ ಪ್ರೀತಿಯ ಸಂಭ್ರಮಾಚರಣೆ ಇರಬೇಕು. ಈ ಕ್ಷಣ ಕೊನೇವರೆಗೂ ನೆನಪಿರುವ ಹಾಗೆ ಸೆಲೆಬ್ರೇಶನ್‌ ಇರಬೇಕು.

Latest Videos
Follow Us:
Download App:
  • android
  • ios