ವಿವಾಹ ವಾರ್ಷಿಕೋತ್ಸವಕ್ಕೆ ವಿಶ್ ಮಾಡಲು ಮರೆತ ಪತಿಗೆ ಹಿಗ್ಗಾ ಮುಗ್ಗಾ ಗೂಸ,ಪತ್ನಿ ವಿರುದ್ಧ ದೂರು!
ಮದುವೆಯಾದವರು ವಿವಾಹ ವಾರ್ಷಿಕೋತ್ಸವ ದಿನಾಂಕ ಮರೆತಿದ್ದೀರಾ? ಪತ್ನಿಗೆ ವಿಶ್ ಮಾಡಲು ಮರೆತು ಹೋಗಿದ್ದೀರಾ? ಆದರೆ ಇನ್ಮು ಮುಂದೆ ಎಚ್ಚರಿಕೆ ವಹಿಸುವುದು ಸೂಕ್ತ. ಕಾರಣ ಇಲ್ಲೊಂದು ಘಟನೆ ಮದುವೆಯಾದವರಿಗೆ, ಆಗುತ್ತಿರುವರಿಗೆ ಎಚ್ಚರಿಕೆ ಕರೆಗಂಟೆ ನೀಡಿದೆ. ವೆಡ್ಡಿಂಗ್ ಆ್ಯನಿವರ್ಸರಿಗೆ ವಿಶ್ ಮಾಡಲು ಮೆರತ ಪತಿಗೆ ಗೂಸ ನೀಡಲಾಗಿದೆ. ಪತಿಯ ತಾಯಿ ಮೇಲೂ ಹಲ್ಲೆ ನಡೆಸಲಾಗಿದೆ. ಪತಿಯ ಆಟೋ ರಿಕ್ಷಾ ಪುಡಿ ಮಾಡಿದ ಘಟನೆ ನಡೆದಿದೆ.
ಮುಂಬೈ(ಫೆ.25): ಪತ್ನಿ ಹುಟ್ಟು ಹಬ್ಬ ದಿನಾಂಕ ಮರೆತು ಫಜೀತಿ, ವೆಡ್ಡಿಂಗ್ ಆ್ಯನಿವರ್ಸರಿ ದಿನಾಂಕ ಮರೆತು ಕಾರಣದಿಂದ ಜಗಳ ಸೇರಿದಂತೆ ಈ ರೀತಿಯ ಹಲವು ಜಟಾಪಟಿಗಳು ಸಂಸಾರದಲ್ಲಿ ಸಾಮಾನ್ಯ. ಇದನ್ನ ಸರಿಪಡಿಸಲು ಪತಿ ದುಬಾರಿ ಗಿಫ್ಟ್ ಸೇರಿದಂತೆ ಹಲವು ಆಫರ್ ನೀಡಿ ಸಮಾಧಾನಿಸುವುದು ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ಪತಿ ತನ್ನ ಮದುವೆ ವಾರ್ಷಿಕೋತ್ಸವ ಮರೆತಿದ್ದಾನೆ. ಪತ್ನಿಗೆ ವಿಶ್ ಮಾಡದೇ ಆಟೋ ಹಿಡಿದು ಹೊರಟಿದ್ದಾನೆ. ಸಂಜೆ ಮನೆಗೆ ಮರಳುತ್ತಿದ್ದಂತೆ ಪತ್ನಿ ಕೆಂಡಾಮಂಡಲವಾಗಿದ್ದಾಳೆ. ತನಗೆ ವಿಶ್ ಮಾಡಿಲ್ಲ ಅನ್ನೋ ಕಾರಣಕ್ಕೆ ಪತಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಇಷ್ಟಕ್ಕೆ ಆಕೆಯ ಕೋಪ ತಣ್ಣಗಾಗಿಲ್ಲ. ತನ್ನ ಸಹೋದರ ಹಾಗೂ ಕುಟಂಬಸ್ಥರನ್ನು ಪತಿ ಮನೆಗೆ ಬರುವಂತೆ ಸೂಚಿಸಿದ್ದಾಳೆ. ಕೆಲ ಹೊತ್ತಲ್ಲೇ ಮನೆ ರಣಾಂಗಣವಾಗಿದೆ. ಪತಿಯೊಂದಿ ವಾಗ್ವಾದ ಜೋರಾಗಿದೆ. ಪತಿಯ ಕಪಾಳಕ್ಕೆ ಬಾರಿಸಲಾಗಿದೆ. ಇತ್ತ ಪತ್ನಿ ಸಹೋದರ ಆಟೋ ರಿಕ್ಷಾ ಹಾಗೂ ಮನೆ ಕಿಟಕಿ ಗಾಜುಗಳನ್ನು ಒಡೆದಿದ್ದಾನೆ. ಇಲ್ಲಿಗೂ ನಿಂತಿಲ್ಲ, ಇದರ ಮುಂದುವರಿದ ಭಾಗ ಪತಿ ಪೋಷಕರ ಮನೆಯಲ್ಲಿ ನಡೆದಿದೆ. ಈ ಘಟನೆ ಮುಂಬೈನ ಗೋವಂಡಿಯಲ್ಲಿ ನಡೆದಿದೆ.
ವಿಶಾಲ್ ನಂಗ್ರೆ ಪೂರ್ವ ಮುಂಬೈನ ಗೋವಂಡಿಯ ನಿವಾಸಿ. ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದ. ವಿಶಾಲ್ ವಯಸ್ಸು 32. 2018ರಲ್ಲಿ ವಿಶಾಲ್ ಮದುವೆಯಾಗಿದ್ದಾನೆ. ಪತಿಯ ವಯಸ್ಸು 25. ಹೆಚ್ಚಿನ ಸಮಸ್ಯೆಗಳಿಲ್ಲದೆ ಜೀವನ ಸಾಗುತ್ತಿತ್ತು. ಆದರೆ ವಿಶಾಲ್ ನಂಗ್ರೆ ತನ್ನ ವಿವಾಹ ವಾರ್ಷಿಕೋತ್ಸವ ದಿನಾಂಕ ಮರೆತೇ ಹೋಗಿದ್ದಾನೆ. ಎಂದನಂತೆ ಬೆಳಗ್ಗೆ ಎದ್ದು, ಆಟೋ ಸ್ವಚ್ಚಗೊಳಿಸಿ ಆಹಾರ ಸೇವಿಸಿ ಹೊರಟಿದ್ದಾನೆ. ಇತ್ತ ಪತ್ನಿ ವಿವಾಹ ವಾರ್ಷಿಕೋತ್ಸವ ದಿನ ಪತಿ, ಬಾಲಿವುಡ್ ಸ್ಟೈಲ್‍ನಲ್ಲಿ ಅಲ್ಲದಿದ್ದರೂ, ಮರಾಠಿ ಶೈಲಿಯಲ್ಲಾದರೂ ವಿಶ್ ಮಾಡುತ್ತಾನೆ. ಸರ್ಫ್ರೈಸ್ ಗಿಫ್ಟ್ ನೀಡುತ್ತಾನೆ ಎಂದು ಭಾವಿಸಿದ್ದಾಳೆ. ಆದರೆ ಪತಿ ಇದರ ಅರಿವೇ ಇಲ್ಲದೆ ಕೆಲಸಕ್ಕೆ ಹಾಜರಾಗಿದ್ದಾನೆ.
ಕಡಿಮೆ ಬಜೆಟ್ ನಲ್ಲಿWedding Anniversary ಆಚರಿಸೋಕೆ ಐಡಿಯಾಗಳು..
ಪತಿ ವಿಶ್ ಮಾಡುತ್ತಾನೆ ಎಂದು ಸಂಜೆವರೆಗೆ ಕಾದಿದ್ದಾಳೆ. ಆದರೆ ಪತಿಯ ಸುಳಿವಿಲ್ಲ. ಸೂರ್ಯ ಮುಳುಗುತ್ತಿದ್ದಂತೆ ಮನೆಗೆ ಆಗಮಿಸಿದ ಪತಿಯ ನೋಡಿ ಪತ್ನಿ ಮತ್ತಷ್ಟು ಕೆಂಡಾಮಂಡಲವಾಗಿದ್ದಾಳೆ. ಕೈಯಲ್ಲಿ ಯಾವುದೇ ಗಿಫ್ಟ್ ಇಲ್ಲ, ಸಹಿತಿನಿಸು ಇಲ್ಲ, ಕನಿಷ್ಠ ಒಂದು ವಿಶ್ ಕೂಡ ಮಾಡಿಲ್ಲ. ಇದು ಪತ್ನಿಯ ಪಿತ್ತ ನೆತ್ತಿಗೇರಿಸಿದೆ. ಜಗಳ ಶುರುಮಾಡಿದ್ದಾಳೆ. ಆರಂಭದಲ್ಲೇ ಪತಿ ಪ್ರತಿ ಮಾತಿಗೂ ತಿರುಗೇಟು ನೀಡುತ್ತಾ ಜಗಳ ಶುರುಮಾಡಿದ್ದಾಳೆ. ಏನೋ ಎಡವಟ್ಟಾಗಿದೆ ಎಂದು ಅರಿತ ಪತಿ, ಯಾಕೆ ಈ ರೀತಿ ಆಡುತ್ತಿದ್ದೀಯಾ? ಏನಾಗಿದೆ ಎಂದು ಪ್ರಶ್ನಿಸಿದ್ದಾನೆ. ಆಗಲೆ ಇಂದು ವೆಡ್ಡಿಂಗ್ ಆ್ಯನಿವರ್ಸರಿ ಅನ್ನೋ ವಿಚಾರ ತಿಳಿದಿದೆ.
ತಾನು ಮರೆತು ಹೋಗಿದ್ದೆ. ಕ್ಷಮಿಸು ಎಂದಿದ್ದಾನೆ. ಆದರೆ ಪತ್ನಿ ಕೋಪ ಇಷ್ಟಕ್ಕೆ ಕರಗುವ ಯಾವುದೇ ಲಕ್ಷಣವಿರಲಿಲ್ಲ. ಹೆಂಡತಿಗೆ ವಿಶ್ ಮಾಡಬೇಕು ಅನ್ನೋ ಕನಿಷ್ಠ ಪರಿಜ್ಞಾನ ಇಲ್ಲ ಎಂದು ವಾಗ್ವಾದ ಆರಂಭಗೊಂಡಿದೆ. ನನ್ನಿಂದ ತಪ್ಪಾಗಿದೆ ಕ್ಷಮಿಸು ಎಂದರೆ ಪತ್ನಿ ಮಾತ್ರ ಕೇಳುತ್ತಿಲ್ಲ. ಇವರಿಬ್ಬರ ಜಗಳ ತಾರಕಕ್ಕೇರಿದೆ. ವಿಶ್ ಮಾಡಿಲ್ಲ ಅನ್ನೋ ಕಾರಣದಿಂದ ಆರಂಭಗೊಂಡು ಆರೋಪ ಪ್ರತ್ಯಾರೋಪ ಸುರಿಮಳೆಯಾಗಿದೆ. ಇದರಿಂದ ಕೆರಳಿದ ಪತ್ನಿ, ಸಹೋದರ ಹಾಗೂ ಕುಟುಂಬಸ್ಥರಿಗೆ ಕರೆ ಮಾಡಿ ತಕ್ಷಣ ಗಂಡನ ಮನೆಗೆ ಆಗಮಿಸುವಂತೆ ಸೂಚಿಸಿದ್ದಾಳೆ.
ಲಿಪ್ ಕಿಸ್ ಫೋಟೋ ಶೇರ್ ಮಾಡಿ ಪತ್ನಿಗೆ ನಟ ಫರ್ಹಾನ್ ಅಖ್ತರ್ ರೊಮ್ಯಾಂಟಿಕ್ ವಿಶ್
ಪತ್ನಿಯ ಕುಟಂಬಸ್ಥರು ಆಗಮಿಸಿದ ಬಳಿಕ ಮತ್ತೆ ವಾಗ್ವಾದ ಜೋರಾಗಿದೆ. ಈ ಯುದ್ಧದಲ್ಲಿ ಪತಿ ಕಪಾಳಕ್ಕೆ ಎರಡು ಬಾರಿಸಲಾಗಿದೆ.ಇತ್ತ ಪತ್ನಿಯ ಸಹೋದರ ಆಟೋ ರಿಕ್ಷಾವನ್ನು ಜಖಂ ಗೊಳಿಸಿದ್ದಾನೆ. ಮನೆಯ ಕಿಟಕಿ ಗಾಜು ಪುಡಿ ಮಾಡಿದ್ದಾನೆ. ಇಷ್ಟಕ್ಕೆ ಪತ್ನಿ ಕೋಪ ತಣ್ಣಗಾಗಿಲ್ಲ. ಗಂಡನ ಮನೆಯಲ್ಲಿನ ಅವಾಂತರದ ಬಳಿಕ ಹತ್ತಿರದಲ್ಲೇ ಇತ್ತ ಗಂಡನ ಪೋಷಕರ ಮನಗೆ ಹೋಗಿ ಮತ್ತೆ ಪತ್ನಿ ಹಾಗೂ ಕುಟುಂಬಸ್ಥರು ಜಗಳ ಆಡಿದ್ದಾರೆ. ಈ ವೇಳೆ ಅತ್ತೆಯ ಮೇಲೂ ಪತ್ನಿ ಕೈಮಾಡಿದ್ದಾರೆ. ಇದು ಗಂಡನ ಆಕ್ರೋಶಕ್ಕೆ ಕಾರಣವಾಗಿದೆ. ತಾಯಿಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ತೆರಳಿ ಪತ್ನಿ ವಿರುದ್ಧವೇ ದೂರು ದಾಖಲಿಸಿದ್ದಾನೆ.