ಕಡಿಮೆ ಬಜೆಟ್ ನಲ್ಲಿWedding Anniversary ಆಚರಿಸೋಕೆ ಐಡಿಯಾಗಳು..
ಮದುವೆ ಆದ್ಮೇಲೆ ಖರ್ಚು ಹೆಚ್ಚು. ಅದ್ರ ಜೊತೆ ಮದುವೆ ವಾರ್ಷಿಕೋತ್ಸವ ಹತ್ತಿರ ಬಂತೆಂದ್ರೆ ತಲೆಬಿಸಿ ಜಾಸ್ತಿಯಾಗುತ್ತದೆ. ಎಲ್ಲಿಂದ ಹಣ ಹೊಂದಿಸೋದು ಗೊತ್ತಾಗೋದಿಲ್ಲ. ಬುದ್ಧಿ ಉಪಯೋಗಿಸಿ ಕೆಲಸ ಮಾಡಿದ್ರೆ ಹಣ ಉಳಿಯೋದ್ರಲ್ಲಿ ಡೌಟ್ ಇಲ್ಲ.
ಮದುವೆ (Marriage) ಯ ಮೊದಲ ವಾರ್ಷಿಕೋತ್ಸವ (Anniversary) ಎಲ್ಲರಿಗೂ ವಿಶೇಷವಾಗಿರುತ್ತದೆ. ಪ್ರತಿಯೊಬ್ಬರೂ ಮದುವೆಯಂತೆ ಮೊದಲ ವಾರ್ಷಿಕೋತ್ಸವವನ್ನು ಕೂಡ ಸದಾ ನೆನಪಿರುವಂತೆ ಆಚರಿಸಿಕೊಳ್ಳಲು ಬಯಸ್ತಾರೆ. ಪಾರ್ಟಿ (Party) , ಉಡುಗೊರೆ (Gift), ಡ್ರೆಸ್ (Dress) ಹೀಗೆ ಅನೇಕ ಕಾರಣಕ್ಕೆ ಮೊದಲ ವಾರ್ಷಿಕೋತ್ಸವದಲ್ಲಿ ಜೇಬಿಗೆ ಕತ್ತರಿ ಬೀಳುವುದು ನಿಶ್ಚಿತ. ಮದುವೆಯಲ್ಲಿ ಮಾಡಿದ ಸಾಲವೇ ಇನ್ನೂ ತೀರಿಲ್ಲ, ಇನ್ನು ಮದುವೆ ವಾರ್ಷಿಕೋತ್ಸವಕ್ಕೆ ಮತ್ತೆ ಸಾಲ ಮಾಡ್ಬೇಕಾ ಎಂಬ ಆತಂಕ ಅನೇಕರಿಗಿರುತ್ತದೆ. ಸಹವಾಸವೆ ಬೇಡ ಎಂದು ಹಿಂದೆ ಸರಿಯುವವರಿದ್ದಾರೆ. ಮೊದಲನೆಯದಾಗಿ, ವಿವಾಹ ವಾರ್ಷಿಕೋತ್ಸವವನ್ನು ಸಂಗಾತಿ ಹಾಗೂ ಕುಟುಂಬಸ್ಥರು, ಸ್ನೇಹಿತರ ಜೊತೆ ಆಚರಿಸಲು ಎಲ್ಲರೂ ಬಯಸ್ತಾರೆ. ಇದನ್ನು ಮನಃಪೂರ್ವಕವಾಗಿ ಆನಂದಿಸಲು ಇಚ್ಚಿಸುತ್ತಾರೆ. ಕಡಿಮೆ ಬಜೆಟ್ ನಲ್ಲಿ ಎಲ್ಲ ಸಂತೋಷ ಸಿಗುತ್ತೆ ಅಂದ್ರೆ ಯಾರು ಬೇಡ ಹೇಳ್ತಾರೆ ಹೇಳಿ. ಅತಿಯಾದ ಖರ್ಚಿಲ್ಲದೆ ದೊಡ್ಡ ಪಾರ್ಟಿಯನ್ನು ಅತ್ಯಂತ ಅಗ್ಗವಾಗಿ ಆಯೋಜಿಸಲು ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ.
ಆಮಂತ್ರಣ ಪತ್ರಕ್ಕಾಗಿ ಹಣ ಖರ್ಚು ಮಾಡ್ಬೇಡಿ : ಇದು ಆನ್ಲೈನ್ ಯುಗ ಸ್ವಾಮಿ. ಹಿಂದಿನ ಕಾಲದಂತೆ ನೀವು ಆಮಂತ್ರಣ ಪತ್ರ ತಯಾರಿಸಿ, ಅದನ್ನು ಮನೆ ಮನೆಗೆ ಹೋಗಿ ಕೊಡಬೇಕಾಗಿಲ್ಲ. ಆನ್ಲೈನ್ ನಲ್ಲಿಯೇ ಎಲ್ಲವನ್ನೂ ಮಾಡಬಹುದು. ಯಾವುದೇ ಕಾರ್ಡ್ ಅನ್ನು ಸುಲಭವಾಗಿ ಆನ್‌ಲೈನ್‌ನಲ್ಲಿ ತಯಾರಿಸಬಹುದು. ನಿಮಗೆ ಬೇಕಾದ ಡಿಸೈನ್ ಆರಿಸಿಕೊಂಡು, ನೀವೇ ಕಾರ್ಡ್ ತಯಾರಿಸಬಹುದು. ಅದು ನೋಡಲು ತುಂಬಾ ಸುಂದರವಾಗಿರುತ್ತದೆ. ಹಾಗಾಗಿ ಕಾರ್ಡ್ ಮುದ್ರಿಸಲು ವಿನಃ ಖರ್ಚು ಮಾಡ್ಬೇಡಿ. ಆನ್ಲೈನ್ ನಲ್ಲಿ ಸುಂದರ ಕಾರ್ಡ್ ತಯಾರಿಸಿ. ಈ ಆಹ್ವಾನ ಪತ್ರವನ್ನು ಆನ್ಲೈನ್ ನಲ್ಲಿಯೇ ಸಂಬಂಧಿಕರು, ಸ್ನೇಹಿತರಿಗೆ ಕಳುಹಿಸಿ. ಅಗತ್ಯವಿದೆ ಎನ್ನಿಸಿದ್ರೆ ಅವರಿಗೊಂದು ಕರೆ ಮಾಡಿ ಕರೆಯುವುದು ಸೂಕ್ತ. ಕಾರ್ಡ್ ಮುದ್ರಿಸಲು ಹೋದ್ರೆ ಖರ್ಚು ಹೆಚ್ಚಾಗುತ್ತದೆ. ಹಾಗೆ ಕೆಲ ಕಾರ್ಡ್ ಹಾಗೆ ಉಳಿದುಬಿಡುತ್ತದೆ.
ಫ್ರೆಂಡ್ಸ್ ಜೊತೆ ಟ್ರಿಪ್ ಹೋದ ಹೆಂಡ್ತಿ, ಏನೇನೋ ಮಾಡ್ಕೊಂಡಳಂತೆ!
ಥೀಮ್ ಪಾರ್ಟಿ ಉತ್ತಮ ಪ್ಲಾನ್ : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಥೀಮ್ ಆರಿಸಿಕೊಂಡು ಪಾರ್ಟಿ ಮಾಡ್ತಾರೆ. ನಿಮ್ಮ ಮೊದಲ ಮದುವೆ ವಾರ್ಷಿಕೋತ್ಸವದಲ್ಲಿ ನಿಮ್ಮ ಬಜೆಟ್ ಗೆ ಅನುಗುಣವಾಗಿ ನೀವು ಥೀಮ್ ಸಿದ್ಧಪಡಿಸಬಹುದು. ಆಗ ಕಡಿಮೆ ಬಜೆಟ್ ನಲ್ಲಿ ಬಟ್ಟೆ ಖರೀದಿ ಮಾಡಬಹುದು. ಇಲ್ಲವೆ ಹಳೆ ಬಟ್ಟೆಗೆ ಹೊಸ ಲುಕ್ ನೀಡಬಹುದು. ಸ್ನೇಹಿತರು ಮತ್ತು ಸಂಬಂಧಿಕರಿಗೆ ಇದು ಇಷ್ಟವಾಗುತ್ತದೆ. ಹೊಸ ಡ್ರೆಸ್ ಖರೀದಿಸಲು ಖರ್ಚು ಮಾಡಬೇಕಾಗಿದ್ದ ಹಣ ಉಳಿಯುತ್ತದೆ.
ಹೋಟೆಲ್ ಬದಲು ಮನೆಯಾಗಿರಲಿ ಪಾರ್ಟಿಯ ಗಮ್ಯಸ್ಥಾನ : ನೀವು ದೊಡ್ಡ ಹೋಟೆಲ್‌ನಲ್ಲಿ ನಿಮ್ಮ ಮೊದಲ ವಾರ್ಷಿಕೋತ್ಸವದ ಪಾರ್ಟಿಯನ್ನು ಯೋಜಿಸುತ್ತಿದ್ದರೆ, ಇದಕ್ಕಾಗಿ ನೀವು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಹೊಟೇಲ್ ಹಾಲ್ ಗೆ ಪ್ರತ್ಯೇಕವಾಗಿ ಬಾಡಿಗೆ ನೀಡಬೇಕಾಗುತ್ತದೆ. ಅದರ ಬದಲು ನೀವು ಮನೆಯಲ್ಲಿಯೇ ಉತ್ತಮ ಅಲಂಕಾರ ಮಾಡಬಹುದು. ಪಾರ್ಟಿ ಹಾಲ್ ನಂತೆ ಮನೆಯನ್ನು ಸಿದ್ಧಪಡಿಸಬಹುದು. ಹಾಗೆ ಅಡುಗೆ ಮಾಡುವ ಜವಾಬ್ದಾರಿಯನ್ನು ನೀವು ಕ್ಯಾಟರಿಂಗೇ ಅವರಿಗೆ ನೀಡಬಹುದು. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ಇಷ್ಟಪಡುವ ಎಲ್ಲಾ ಭಕ್ಷ್ಯಗಳನ್ನು ನೀವು ತಯಾರಿಸಬಹುದು. ಇದ್ರಿಂದ ಖರ್ಚು ಕಡಿಮೆಯಾಗುತ್ತದೆ.
ಹುಡುಗ ಹೆಬ್ಬೆಟ್ಟು ಎಂದು ಮದುವೆ ಕ್ಯಾನ್ಸಲ್ ಮಾಡಿದ ವಧು!
ಸ್ನೇಹಿತರನ್ನೇ ಛಾಯಾಗ್ರಾಹಕನನ್ನಾಗಿ ಮಾಡಿ : ಮೊದಲ ವಿವಾಹ ವಾರ್ಷಿಕೋತ್ಸವದ ಪ್ರತಿಯೊಂದು ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಎಲ್ಲರೂ ಬಯಸುತ್ತಾರೆ. ಇದ್ರಲ್ಲಿ ಎರಡು ಮಾತಿಲ್ಲ. ವೃತ್ತಿಪರ ಛಾಯಾಗ್ರಾಹಕರಿಗೆ ಹಣ ವ್ಯಯಿಸುವ ಬದಲು ಕ್ಯಾಮೆರಾ ಹೊಂದಿರುವ ಮತ್ತು ಛಾಯಾಗ್ರಹಣದ ಕ್ರೇಜ್ ಇರುವ ಸ್ನೇಹಿತರಿಗೆ ಫೋಟೋ ಹೊಡೆಯುವ ಜವಾಬ್ದಾರಿ ನೀಡಿ. ನಿಮಗಿಷ್ಟವಾದ ಸಂದರ್ಭವನ್ನು ಸೆರೆ ಹಿಡಿಯುವಂತೆ ಸ್ನೇಹಿತರಿಗೆ ಸಲಹೆ ನೀಡಿ.