Asianet Suvarna News Asianet Suvarna News

Parenting Tips: ಸದಾ ಮಕ್ಕಳ ಸುತ್ತ ಸುತ್ತುವ ಬದಲು ಈ ಸ್ಟೈಲ್ ಫಾಲೋ ಮಾಡಿ

ಮಕ್ಕಳಿಗೆ ಏನು ತಿಳಿಯೋದಿಲ್ಲ ಅಂದ್ಕೊಂಡು ಸದಾ ಅವರ ಸಪೋರ್ಟ್ ಗೆ ನಾವು ನಿಲ್ತೆವೆ. ಮಕ್ಕಳು ತಿಳಿಯಬೇಕೆಂದ್ರೆ ಅವರಿಗೊಂದಿಷ್ಟು ಅವಕಾಶ ಬೇಕು. ಪಾಲಕರು ಆ ಅವಕಾಶ ನೀಡ್ಬೇಕು. ಈ ಮಾಡರ್ನ್ ಯುಗದಲ್ಲಿ ಮಕ್ಕಳ ಪಾಲನೆ ಕೂಡ ಮಾಡರ್ನ್ ಆಗ್ಬೇಕು.
 

Why You Should Let Your Child Alone
Author
First Published Dec 3, 2022, 3:07 PM IST

ಮಕ್ಕಳಾದ್ಮೇಲೆ ದಂಪತಿಯ ಜೀವನ ಶೈಲಿ ಸಂಪೂರ್ಣ ಬದಲಾಗುತ್ತದೆ. ಮಕ್ಕಳಿಗೆ ಮೊದಲ ಆದ್ಯತೆ ನೀಡಲು ಪಾಲಕರು ಶುರು ಮಾಡ್ತಾರೆ. ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿರುವ ಪಾಲಕರು, ಕಣ್ಣಲ್ಲಿ ಕಣ್ಣಿಟ್ಟು ಕರುಳ ಕುಡಿಯನ್ನು ಸಾಕುತ್ತಾರೆ. ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಮಕ್ಕಳಿಗೆ ಮೀಸಲಿಡ್ತಾರೆ. ಇಡೀ ದಿನ ಮಕ್ಕಳ ಹಿಂದೆ – ಮುಂದೆ ಸುತ್ತುವ ಪಾಲಕರನ್ನು ನೀವು ನೋಡಿರಬಹುದು.

ಸಾಮಾನ್ಯವಾಗಿ ಸಣ್ಣ ಮಕ್ಕಳಿಗೆ ಪರಿಸರ (Environment) ದ ಬಗ್ಗೆ ಸರಿಯಾಗಿ ತಿಳಿಯೋದಿಲ್ಲ. ಹಾಗಾಗಿ ಅವರ ಬಳಿ ಪಾಲಕರು ಇರಬೇಕು. ಇನ್ನು ಮಕ್ಕಳು (Children) ದೊಡ್ಡವರಾಗ್ತಿದ್ದಂತೆ ಅವರ ಕೀಟಲೆ ಜಾಸ್ತಿಯಾಗುತ್ತದೆ. ಅವರಿಗೆ ಅವರು ಅಪಾಯ ತಂದುಕೊಳ್ಳುವ ಸಾಧ್ಯತೆಯಿರುತ್ತದೆ. ಇದೇ ಭಯ (Fear) ಕ್ಕೆ ಪಾಲಕರು ಸದಾ ಅವರ ಹಿಂದಿರುತ್ತಾರೆ. ಮಕ್ಕಳ ಜೊತೆ ಕಾಲ ಕಳೆಯುವುದ್ರಿಂದ ಪಾಲಕರಿಗೆ ವೈಯಕ್ತಿಕ ಸಮಯ ಸಿಗೋದಿಲ್ಲ. ಕೆಲಸ ಪೂರ್ಣಗೊಳಿಸಲು ಸಾಧ್ಯವಾಗೋದಿಲ್ಲ. ಒಂದಿಷ್ಟು ಸಮಯ ನಮಗೆ ಮೀಸಲಿದ್ದರೆ ಎಂದುಕೊಳ್ತಾರೆ ಪಾಲಕರು. ನಿಮಗೆ ತಿಳಿದಿರಲಿ, ಪಾಲಕರು ಮಾತ್ರವಲ್ಲ ಮಕ್ಕಳಿಗೆ ಕೂಡ ವೈಯಕ್ತಿಕ ಸಮಯ ನೀಡುವ ಅವಶ್ಯಕತೆಯಿದೆ. ತಮ್ಮನ್ನು ತಾವು ಅರ್ಥ ಮಾಡಿಕೊಳ್ಳಲು ಮಕ್ಕಳಿಗೆ ಸಮಯ ನೀಡಬೇಕಾಗುತ್ತದೆ. 

ಮಗು ಚಿಕ್ಕದಿರಲಿ ಇಲ್ಲ ದೊಡ್ಡದಿರಲಿ, ಸದಾ ಮಕ್ಕಳ ಹಿಂದೆ ಪಾಲಕರು ಸುತ್ತುವುದು ಸರಿಯಲ್ಲ. ನೀವು ಮಕ್ಕಳಿಗೆ ಮೀ ಟೈಂ ನೀಡ್ಬೇಕು. ಮಕ್ಕಳು ತಮ್ಮದೆ ಪ್ರಪಂಚದಲ್ಲಿರಲು ಅವಕಾಶ ನೀಡಬೇಕು.  ತಜ್ಞರು ಕೂಡ, ಮಕ್ಕಳಿಗೆ ಸಮಯ ನೀಡಬೇಕು ಎನ್ನುತ್ತಾರೆ. ಮಕ್ಕಳು ತಾವಾಗಿಯೇ ಆಟವಾಡಿದ್ರೆ, ಒಂಟಿಯಾಗಿದ್ದರೆ ಅನೇಕ ಸಂಗತಿಯನ್ನು ಕಲಿಯುತ್ತಾರೆ. ಈ ಮಧ್ಯೆ ಮಕ್ಕಳು ಹಾಗೂ ಪಾಲಕರು ಇಬ್ಬರಿಗೂ ಅನುಕೂಲವಾಗುವ ಪೋಷಣೆ ವಿಧಾನ ಇತ್ತೀಚಿನ ದಿನಗಳಲ್ಲಿ ಚರ್ಚೆಯಾಗ್ತಿದೆ. ಅದ್ರಲ್ಲಿ ಸಿಟ್ಟರ್ವೈಸಿಂಗ್ ಪೇರೆಂಟಿಂಗ್ ಚರ್ಚೆಯಲ್ಲಿದೆ.

ಸಿಟ್ಟರ್ವೈಸ್ ಪೇರೆಂಟಿಂಗ್ (Sitterwise Parenting) ಅಂದ್ರೇನು?: ಸಿಟ್ಟರ್ವೈಸ್ ಪೇರೆಂಟಿಂಗ್ ಒಂದು ಹೊಸ ವಿಧಾನವಾಗಿದೆ. ಇದನ್ನು ಪೋಷಕರು ತುಂಬಾ ಇಷ್ಟಪಡ್ತಿದ್ದಾರೆ. ಪೋಷಕರು ದೂರದ ಸ್ಥಳದಲ್ಲಿ ಕುಳಿತು ಮಕ್ಕಳ ಚಟುವಟಿಕೆಯನ್ನು ವೀಕ್ಷಿಸುವುದು ಮತ್ತು ಅದನ್ನು ಮೇಲ್ವಿಚಾರಣೆ ಮಾಡುವುದನ್ನು ಸಿಟ್ಟರ್ವೈಸ್ ಪೇರೆಂಟಿಂಗ್ ಎನ್ನಲಾಗುತ್ತದೆ. ಇಲ್ಲಿ ಪಾಲಕರು, ಮಕ್ಕಳ ಬಳಿ ಕುಳಿತು ಅವರ ಜೊತೆ ಆಟವಾಡುವುದಿಲ್ಲ. ದೂರದಲ್ಲಿ ಕುಳಿತು ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ಗಮನಿಸುತ್ತಿರುತ್ತಾರೆ.
ಸಿಟ್ಟರ್ವೈಸ್ ಪೇರೆಂಟಿಂಗ್ ಶೈಲಿಯು, ಮಕ್ಕಳ ಪಾಲನೆಯ ಆಧುನಿಕ ವಿಧವಾಗಿದೆ. ಇದರಲ್ಲಿ ಪೋಷಕರು ಮತ್ತು ಮಕ್ಕಳ ನಡುವೆ ಪೀಳಿಗೆಯ ಅಂತರ ಕಡಿಮೆಯಾಗುತ್ತದೆ. ಅವರ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ. ಪೋಷಕರು ಮಕ್ಕಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಕೆಲಸ ಮಾತ್ರ ಮಾಡುತ್ತಾರೆ.

ನೀವು single child ಪೋಷಕರಾಗಿದ್ದರೆ, ಈ ವಿಷ್ಯ ತಿಳಿದಿದ್ದರೆ ಸೇಫ್!

ಸಿಟ್ಟರ್ವೈಸ್ ಪೇರೆಂಟಿಂಗ್ ನಿಂದಾಗುವ ಲಾಭಗಳು : ಸಿಟ್ಟರ್ವೈಸ್ ಪೇರೆಂಟಿಂಗ್ ನಿಂದ ಮಕ್ಕಳು ಹಾಗೂ ಫೋಷಕರು ಇಬ್ಬರಿಗೂ ಲಾಭವಿದೆ.  ಮಕ್ಕಳ ಲಾಭ ನೋಡೋದಾದ್ರೆ ಸಿಟ್ಟರ್ವೈಸ್ ಪೇರೆಂಟಿಂಗ್ ನಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಬಹಳ ವೇಗವಾಗಿರುತ್ತದೆ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ತಮ್ಮದೇ ಆದ ಆಟವಾಡಲು ಮಕ್ಕಳಿಗೆ ಅವಕಾಶವನ್ನು ಇಲ್ಲಿ ನೀಡಲಾಗುತ್ತದೆ. ಇದರಿಂದ ಮಕ್ಕಳ ಕೌಶಲ ವೃದ್ಧಿಯಾಗುತ್ತದೆ. ಮಕ್ಕಳು ಸ್ವಾವಲಂಬಿಗಳಾಗುತ್ತಾರೆ ಮತ್ತು ಅವರ ಸುತ್ತಲಿನ ಪರಿಸರವನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತಾರೆ. ಅವರು ತಮ್ಮ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ತಂದೆ – ತಾಯಿ ಹತ್ತಿರವಿರದ ಕಾರಣ ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಅವರನ್ನು ಚುರುಕುಗೊಳಿಸುತ್ತದೆ. 

Parenting Tips: ಮಕ್ಕಳ ತುಟಿಗಳಿಗೆ ಪೋಷಕರು ಮುತ್ತು ಕೊಡಬಹುದಾ?

ಸಿಟ್ಟರ್ವೈಸ್ ಪೇರೆಂಟಿಂಗ್ ನಲ್ಲಿ ಪಾಲಕರಿಗೂ ಅನುಕೂಲವಿದೆ. ಮಕ್ಕಳ ಹಿಂದೆ ಸದಾ ಓಡಾಡಿಕೊಂಡು ಇರಬೇಕಾಗಿಲ್ಲ. ಮಗುವಿಗೆ  ಆಟವಾಡಲು ಸ್ವಲ್ಪ ಸಮಯವನ್ನು ನೀಡುವುದ್ರಿಂದ ಅಥವಾ ಅವರನ್ನು ಏಕಾಂಗಿಯಾಗಿ ಬಿಡುವುದ್ರಿಂದ ನೀವು ದೂರದಲ್ಲಿ ಕುಳಿತು ನಿಮ್ಮ ಕೆಲಸವನ್ನು ನೀವು ಮಾಡಬಹುದು. ಆಗಾಗ ಅವರು ಏನು ಮಾಡ್ತಿದ್ದಾರೆ ಎಂದು ನೋಡಿದ್ರೆ ಸಾಕು.  

Follow Us:
Download App:
  • android
  • ios