Asianet Suvarna News Asianet Suvarna News

Parenting Tips: ಮಕ್ಕಳ ತುಟಿಗಳಿಗೆ ಪೋಷಕರು ಮುತ್ತು ಕೊಡಬಹುದಾ?

ಮಕ್ಕಳ ಲಾಲನೆ-ಪೋಷಣೆಯ ಸಂದರ್ಭ ಹಲವಾರು ವಿಚಾರಗಳನ್ನು ಗಮನಿಸಬೇಕಾಗುತ್ತದೆ. ಮಕ್ಕಳನ್ನು ಮುದ್ದಿಸಿ ಬೆಳೆಸುವ ಪೋಷಕರು ಮಕ್ಕಳ ತುಟಿಗಳಿಗೆ ಮುತ್ತು ಕೊಡೋ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಪೋಷಕರು ಈ ರೀತಿ ಮಾಡಬಹುದಾ ? ಇಲ್ಲಿದೆ ಹೆಚ್ಚಿನ ಮಾಹಿತಿ.

Parenting Tips: Is It Ok To Kiss Your Kids On Their Lips Vin
Author
First Published Nov 27, 2022, 1:53 PM IST

ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ತಮ್ಮ ಮಗಳು ಆರಾಧ್ಯ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ತಮ್ಮ ಮಗಳ ತುಟಿಗಳಿಗೆ ಮುತ್ತು (Kiss) ನೀಡುತ್ತಿರುವುದನ್ನು ಕಾಣಬಹುದು. ಇದಕ್ಕೆ 'ಮೈ ಲವ್... ಮೈ ಲೈಫ್... ಐ ಲವ್ ಯು, ಮೈ ಆರಾಧ್ಯ' ಎಂಬ ಸೀರ್ಷಿಕೆಯನ್ನು ನೀಡಲಾಗಿತ್ತು. ಕಾಮೆಂಟ್‌ಗಳ ವಿಭಾಗದಲ್ಲಿ ಜನರು ಚುಂಬನದ ಬಗ್ಗೆ ಮಿಶ್ರ ಭಾವನೆಗಳನ್ನು ವ್ಯಕ್ತಪಡಿಸಿದ್ದರು. ಕೆಲವರು ಇದು ತಾಯಿ ಮತ್ತು ಮಗಳ (Mother and Daughter) ನಡುವಿನ ಶುದ್ಧ ಪ್ರೀತಿ (Love) ಎಂದು ಹೇಳಿದರು. ಇನ್ನು ಹಲವರು ಪೋಷಕರು ಮಕ್ಕಳ ತುಟಿಗಳಿಗೆ ಮುತ್ತು ನೀಡುವ ಪಾಶ್ಚಾತ್ಯ ಸಂಸ್ಕೃತಿಯನ್ನು ಜನರು ವಿರೋಧಿಸಿದ್ದರು. 

ಹಾಲಿವುಡ್‌ನ ಹಲವಾರು ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ತಮ್ಮ ತುಟಿಗಳಿಗೆ ಚುಂಬಿಸುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಜನರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಹಿಲರಿ ಡಫ್ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಮಗನ ತುಟಿಗಳಿಗೆ ಚುಂಬಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಅದಕ್ಕೆ ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿ, 'ನೀವು ನಿಮ್ಮ ಮಗನನ್ನು ಹಾಗೆ ಚುಂಬಿಸಬಾರದು. ಇದು ಆರೋಗ್ಯಕ್ಕೆ (Health) ಒಳ್ಳೆಯದಲ್ಲ. ಪ್ರೀತಿಯನ್ನು ತೋರಿಸಲು ಬೇರೆ ಮಾರ್ಗಗಳಿವೆ' ಎಂದು ತಿಳಿಸಿದ್ದರು. ಇನ್ಸ್ಟಾಗ್ರಾಮ್ ಚಿತ್ರವನ್ನು ಹಾಕಿದ ನಂತರ ವಿಕ್ಟೋರಿಯಾ ಬೆಕ್ಹ್ಯಾಮ್ ಕೂಡ ಇದೇ ರೀತಿಯ ಟೀಕೆಯನ್ನು ಎದುರಿಸಿದ್ದರು. ಫೋಟೋದಲ್ಲಿ ಅವರು ತಮ್ಮ ಮಗಳು ಹಾರ್ಪರ್ ತುಟಿಗಳಿಗೆ ಚುಂಬಿಸಿದ್ದರು. ಕಾಮೆಂಟ್‌ಗಳ ವಿಭಾಗದಲ್ಲಿ ವಿಕ್ಟೋರಿಯಾ ನಿಂದನೆಯನ್ನು ಎದುರಿಸಬೇಕಾಯಿತು.

ಮಕ್ಕಳು ಜೊತೆಗೆ ಟಾಯ್ಸ್ ಇಟ್ಕೊಂಡು ಮಲಗ್ತಾರಾ ? ಇಷ್ಟೆಲ್ಲಾ ತೊಂದ್ರೆಯಾಗುತ್ತೆ ನೋಡಿ

ಮಕ್ಕಳ ತುಟಿಗಳಿಗೆ ಮುತ್ತು ಕೊಡುವುದು ಸರಿಯೇ ?
ಸಾಮಾಜಿಕ ಶಿಷ್ಟಾಚಾರ ತಜ್ಞ ಲಿಜ್ ಬ್ರೂವರ್, ಮಗ ಅಥವಾ ಮಗಳನ್ನು ತುಟಿಗಳ ಮೇಲೆ ಚುಂಬಿಸುವುದು ಅಸಾಮಾನ್ಯ ಅಭ್ಯಾಸ (Habit) ಎಂದು ಹೇಳುತ್ತಾರೆ. ಆದರೆ ಅದನ್ನು ಸೂಕ್ತವೆಂದು ಪರಿಗಣಿಸಬೇಕೆ ಅಥವಾ ಬೇಡವೇ ಎಂಬುದು ಪೋಷಕರ ಆಯ್ಕೆಯಾಗಿರಬೇಕು. ಅನೇಕ ಸಂಸ್ಕೃತಿಗಳಲ್ಲಿ, ತುಟಿಗಳ ಮೇಲೆ ಚುಂಬನವನ್ನು ಲೈಂಗಿಕವಾಗಿ ಪರಿಗಣಿಸಲಾಗುವುದಿಲ್ಲ ಮತ್ತು ಪ್ರೀತಿಯನ್ನು ತೋರಿಸುವ ಒಂದು ಪ್ಲಾಟೋನಿಕ್ ಸಾಧನವಾಗಿ ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಪೋಷಕರು ಮತ್ತು ಮಕ್ಕಳ ನಡುವಿನ ಅನ್ಯೋನ್ಯತೆ, ಮಗುವನ್ನು ತಬ್ಬಿಕೊಳ್ಳುವುದು, ಕಚಗುಳಿ ಇಡುವುದು ಅಥವಾ ಚುಂಬಿಸುವುದು,  ಮಗುವಿನ ಬೆಳವಣಿಗೆಯ (Childrens growth) ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಮಗುವನ್ನು ಅವರ ತುಟಿಗಳ ಮೇಲೆ ಚುಂಬಿಸುವುದು ನಿಮಗೆ ಸೂಕ್ತವಾಗಿದೆಯೇ ಎಂಬುದು ನಿಮ್ಮ ಕುಟುಂಬದ (Family) ಡೈನಾಮಿಕ್ಸ್, ಸಾಂಸ್ಕೃತಿಕ ರೂಢಿಗಳು, ಅನುಭವ ಮತ್ತು ಬಾಹ್ಯ ಪ್ರೀತಿಯ ಗ್ರಹಿಕೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.

ಮಕ್ಕಳ ತುಟಿಗೆ ನೀಡುವುದನ್ನು ಪ್ರೋತ್ಸಾಹಿಸದ ತಜ್ಞರು
ಸೈಕೋಥೆರಪಿಸ್ಟ್ ಜೆನ್ನಿ ಮಿಲ್ಲರ್ ಹೇಳುವಂತೆ, ಪೋಷಕರು ಮಕ್ಕಳ ತುಟಿಗಳಿಗೆ ಮುದ್ದಿಸುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಹೇಳುತ್ತಾರೆ. ಮಗುವನ್ನು ತುಟಿಗಳ ಮೇಲೆ ಚುಂಬಿಸುವುದರಿಂದ ಅವರ ವೈಯಕ್ತಿಕ ಸ್ಥಳವನ್ನು, ದೇಹ (Body)ವನ್ನು ಯಾರಾದರೂ  ಮುಟ್ಟಬಹುದು ಎಂದು ಅವರು ಅಂದುಕೊಳ್ಳುತ್ತಾರೆ. ಮಗುವು ಇಲ್ಲ ಎಂದು ಹೇಳಲು ಅಸಮರ್ಥತೆಯನ್ನು ಸಹ ಬೆಳೆಸಿಕೊಳ್ಳಬಹುದು.

ಮಕ್ಕಳಿಗೆ ಮನೆಯಲ್ಲಿರೋ ಔಷಧಿ ನೀಡುವ ಮುನ್ನ ಇರಲಿ ಎಚ್ಚರ

ಮಕ್ಕಳಿಗೆ ಮುತ್ತು ಕೊಡುವುದನ್ನು ಯಾವಾಗ ನಿಲ್ಲಿಸಬೇಕು ?
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸೈಕಾಲಜಿಯ ಸಹಾಯಕ ಪ್ರಾಧ್ಯಾಪಕ ಡಾ ರೆಜ್ನಿಕ್, ಮಗುವಿನ ತುಟಿಗಳಿಗೆ ಚುಂಬಿಸುವುದು ಮಗುವಿಗೆ ಗೊಂದಲವನ್ನುಂಟುಮಾಡುತ್ತದೆ ಎಂದು ಭಾವಿಸುತ್ತಾರೆ. ಪೋಷಕರು ಲೈಂಗಿಕ ವಿಷಯಗಳನ್ನು ಗ್ರಹಿಸಲು ಆರಂಭಿಸಬಹುದು. ಆದರೆ ಇದೆಲ್ಲವನ್ನು ಹೊರತುಪಡಿಸಿ ಮಕ್ಕಳಿಗೆ ಮುತ್ತು ಕೊಡುವುದು, ಕೊಡದೇ ಇರುವುದು ಪೋಷಕರ (Parents) ವೈಯುಕ್ತಿಕ ಆಯ್ಕೆಯಾಗಿದೆ. ಒಂದು ಕುಟುಂಬದಲ್ಲಿ ಸಾಮಾನ್ಯವಾದದ್ದು ಮತ್ತೊಂದು ಕುಟುಂಬಕ್ಕೆ ಸಾಮಾನ್ಯವಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು.

Follow Us:
Download App:
  • android
  • ios