ನೀವು single child ಪೋಷಕರಾಗಿದ್ದರೆ, ಈ ವಿಷ್ಯ ತಿಳಿದಿದ್ದರೆ ಸೇಫ್!
ನೀವು ಸಿಂಗಲ್ ಮಗುವಿನ ಪೋಷಕರಾಗಿದ್ದರೆ ಮತ್ತು ಒಂದು ಮಗುವನ್ನು ಬೆಳೆಸುವುದು ಸರಿಯೇ ಅಥವಾ ನೀವು ಮತ್ತೊಂದು ಮಗುವಿನ ಪ್ಲ್ಯಾನ್ ಮಾಡಬೇಕೆ ಎನ್ನುವ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಯಾವಾಗಲೂ ಒಂದು ಪ್ರಶ್ನೆ ಇದ್ದೆ ಇರುತ್ತೆ ಅಲ್ವ? ಆದ್ದರಿಂದ ಇಂದು ನಾವು ನಿಮಗೆ ಒಂದೇ ಮಗುವಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ಸಂಗತಿಗಳನ್ನು ಹೇಳುತ್ತೇವೆ.
ಮನೆಯಲ್ಲಿ ಎರಡು ಮಕ್ಕಳು ಇದ್ರೇನೆ ಚೆಂದ ಅನ್ನೋದನ್ನು ಹೆಚ್ಚಿನ ಜನರು ಹೇಳಿರೋದನ್ನು ನಾವು ಕೇಳಿರುತ್ತೇವೆ.. ಒಂದು ಮನೆಯಲ್ಲಿ ಒಂದು ಮಗುವಿದ್ದರೆ (single child), ಒಂದೇ ಮಗು ಯಾಕೆ, ಮತ್ತೊಂದು ಮಗು ಇದ್ರೆ ಚೆನ್ನಾಗಿರುತ್ತೆ ಎಂದು ಪೋಷಕರ ಮೇಲೆ ಹೆಚ್ಚು ಒತ್ತಡ ಹೇರಲಾಗುತ್ತೆ. ಅನೇಕ ಬಾರಿ ಪೋಷಕರು ಒಂದೇ ಮಗುವನ್ನು ಬೆಳೆಸಬೇಕೇ ಅಥವಾ ಮತ್ತೊಂದು ಮಗುವಿನ ಬಗ್ಗೆ ಯೋಚಿಸಬೇಕೇ ಎಂಬ ಬಗ್ಗೆ ಚಿಂತಿತರಾಗಿರುತ್ತಾರೆ. ನೀವೂ ಸಹ ಒಂದೇ ಮಗುವಿನ ಪೋಷಕರಾಗಿದ್ದರೆ ಮತ್ತು ಈ ಎಲ್ಲಾ ಆಲೋಚನೆಗಳು ನಿಮ್ಮ ಮನಸ್ಸಿಗೆ ಬಂದರೆ, ಒಂದೇ ಮಗುವಿನ ಪಾಲನೆಯ ಸಮಯದಲ್ಲಿ ಅವರ ಮೇಲೆ ಉಂಟಾಗುವ ಪ್ರಯೋಜನಗಳು ಮತ್ತು ಅನಾನುಕೂಲಗಳು ಯಾವುವು ಎಂದು ನಾವು ನಿಮಗೆ ಹೇಳುತ್ತೇವೆ…
ಸಿಂಗಲ್ ಮಕ್ಕಳು ಹೆಚ್ಚು ಸಂತೋಷವಾಗಿರುತ್ತಾರೆ
ಒಡಹುಟ್ಟಿದವರನ್ನು (Siblings) ಹೊಂದಿರುವ ಮಕ್ಕಳು ಸಂತೋಷವಾಗಿರುತ್ತಾರೆ (happy child) ಎಂದು ಜನರು ಹೇಳುತ್ತಾರೆ. ಆದರೆ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ಸ್‌ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಇಬ್ಬರು ಮಕ್ಕಳಿರುವ ಮನೆಗಳಲ್ಲಿ, ಮಕ್ಕಳ ನಡುವೆ ಸ್ಪರ್ಧೆಗಳಿರುತ್ತೆ. ಕೆಲವೊಮ್ಮೆ ಮಕ್ಕಳು ಅದರಿಂದ ಅಸಮಾಧಾನಗೊಳ್ಳುತ್ತಾರೆ. ಆದರೆ ಒಂಟಿ ಮಕ್ಕಳು ಸಂತೋಷವಾಗಿರುತ್ತಾರೆ ಮತ್ತು ಸ್ಪರ್ಧಾತ್ಮಕ ಭಾವನೆಯನ್ನು (Competitive Feeling) ಹೊಂದಿರುವುದಿಲ್ಲ ಎಂದು ಹೇಳಲಾಗುತ್ತದೆ.
ವಿಚ್ಚೇದನಕ್ಕೆ ಹೆಚ್ಚು ಸಾಧ್ಯತೆ
ಒಂದು ಸಂಶೋಧನೆ ಪ್ರಕಾರ, ತಮ್ಮ ಹೆತ್ತವರೊಂದಿಗೆ ಏಕಾಂಗಿಯಾಗಿ ವಾಸಿಸುವ ಅಥವಾ ಒಂಟಿಯಾಗಿರುವ ಮಕ್ಕಳು ತನ್ನ ಹೆತ್ತವರ ಜೀವನವನ್ನು ಬಹಳ ಹತ್ತಿರದಿಂದ ಗಮನಿಸುತ್ತಾನೆ. ಹಾಗಾಗಿ, ಸಿಂಗಲ್ ಮಕ್ಕಳು ಭವಿಷ್ಯದಲ್ಲಿ ವಿಚ್ಛೇದನದಂತಹ (divorce) ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತೆ ಎಂದು ತಿಳಿದು ಬಂದಿದೆ.
ಶೈಕ್ಷಣಿಕ ದಾಖಲೆ ಉತ್ತಮವಾಗಿದೆ
ಸಿಂಗಲ್ ಮಗುವಿನ ಶೈಕ್ಷಣಿಕ ದಾಖಲೆಯು (academic record) ಒಡಹುಟ್ಟಿದವರ ಜೊತೆ ಬೆಳೆದ ಮಕ್ಕಳಿಗಿಂತ ಉತ್ತಮವಾಗಿರುತ್ತೆ, ಏಕೆಂದರೆ ಪೋಷಕರು 1 ಮಗುವಿನ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ, ಆದರೆ ಮನೆಯಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವಾಗ ಅವರ ಶೈಕ್ಷಣಿಕ ಬೆಳವಣಿಗೆ ಮೇಲೆ ಗಮನ ಹರಿಸಲು ಸಾಧ್ಯವಾಗೋದಿಲ್ಲ.
ಸಿಂಗಲ್ ಮಕ್ಕಳು ಬೆಸ್ಟ್ ಸ್ನೇಹಿತರಾಗ್ತಾರೆ
ಸಿಂಗಲ್ ಮಕ್ಕಳ ಸ್ನೇಹವು ತುಂಬಾ ಬಲವಾಗಿರುತ್ತೆ, ಏಕೆಂದರೆ ಅವರಿಗೆ ಮನೆಯಲ್ಲಿ ತಮ್ಮ ಮಾತುಗಳನ್ನು ಹಂಚಿಕೊಳ್ಳಲು ಯಾರೂ ಇರೋದಿಲ್ಲ. ಅವರಿಗೆ ಸ್ನೇಹಿತರು ಸಿಕ್ಕಾಗ ಅವರು ತುಂಬಾನೆ ಸಂತೋಷ ಪಡ್ತಾರೆ, ಜೊತೆಗೆ ತನ್ನ ವಸ್ತುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾನೆ ಮತ್ತು ಅದ್ಭುತ ಸ್ನೇಹಿತನಾಗೋದ್ರಲ್ಲಿ (best friends) ಡೌಟೇ ಇಲ್ಲ.
ಖಿನ್ನತೆಯ ಬಲಿಪಶುವಾಗಬಹುದು
ಹದಿಹರೆಯದಲ್ಲಿ ಈ ಸಿಂಗಲ್ ಮಕ್ಕಳು ಖಿನ್ನತೆಗೆ (depression) ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತೆ ಎಂದು ಅನೇಕ ಸಂಶೋಧನೆಗಳು ಕಂಡುಕೊಂಡಿವೆ. ಆದರೆ ಮನೆಯಲ್ಲಿ ಒಡಹುಟ್ಟಿದವರು ಇದ್ದರೆ, ಅವರು ಜಗಳವಾಡಿದ ನಂತರವೂ ತಮ್ಮ ವಸ್ತುಗಳನ್ನು ಪರಸ್ಪರ ಹಂಚಿಕೊಂಡು, ಮತ್ತೆ ಜೊತೆಯಾಗಿ ಆಟವಾಡುತ್ತಾರೆ. ಇಂತಹ ಮಕ್ಕಳಿಗೆ ಖಿನ್ನತೆ ಉಂಟಾಗುವ ಸಾಧ್ಯತೆ ಕಡಿಮೆ.
ಉತ್ತಮ ಪಾಲನೆ
ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಬೆಳೆಸುವುದಕ್ಕಿಂತ ಒಂದೇ ಮಗುವನ್ನು ಬೆಳೆಸುವುದು ಉತ್ತಮ. ಸಿಂಗಲ್ ಮಕ್ಕಳು ಹೆಚ್ಚು ಉತ್ತಮ ನಡವಳಿಕೆಯನ್ನು ಹೊಂದಿರುತ್ತಾರೆ ಮತ್ತು ಅವರ ನಡವಳಿಕೆಯೂ ಸಹ ಸೌಮ್ಯವಾಗಿರುತ್ತದೆ. ಆದರೆ ಜೊತೆಯಾಗಿ ಬೆಳೆಯ ಮಕ್ಕಳು ತುಂಬಾ ತುಂಟರಾಗಿರುತ್ತಾರೆ ಎಂದು ಹೇಳಲಾಗುತ್ತೆ.