ಪ್ರಶ್ನೆ: ನಮಗೆ ಮದುವೆಯಾಗಿ ಐದು ವರ್ಷವಾಗಿದೆ. ಸೆಕ್ಸ್‌ನಲ್ಲಿ ಯಾವ ತೊಂದರೆಯೂ ಇಲ್ಲ. ಇತ್ತೀಚೆಗೆ ನನ್ನ ಪತಿ, ಸುಮ್ಮನೆ ಕುತೂಹಲಕ್ಕಾಗಿ ವಯಾಗ್ರ ಸೇವಿಸಿ ಸಂಭೋಗ ನಡೆಸಿದರು. ಆ ಸಲವೇನೋ ನಮ್ಮಿಬ್ಬರಿಗೂ ತುಂಬ ಸಂತೋಷವೇ ಆಯಿತು. ಅದಕ್ಕೆ ಮೊದಲು ಅವರಿಗೆ ಬಹುಬೇಗ ಸ್ಖಲನ ಆಗುತ್ತಿತ್ತು. ಆ ಬಾರಿ ತುಸು ದೀರ್ಘ ಕಾಲ ನಡೆದುದರಿಂದ ಇಬ್ಬರಿಗೂ ಹಿತವಾಯಿತು. ಆದರೆ ಅಂದಿನಿಂದ ನಂತರ, ನನ್ನ ಪತಿಗೆ ಲೈಂಗಿಕ ನಿಮಿರುವಿಕೆ ಸಾಧ್ಯವಾಗುತ್ತಲೇ ಇಲ್ಲ. ಈ ಸಾಧ್ಯತೆ ಶಾಶ್ವತವಾಗಿ ಕಳೆದುಹೋಯಿತೇ ಎಂದು ಭಯಪಡುವಂತಾಗಿದೆ. ದಾರಿ ತೋರಿಸಿ. 

ಉತ್ತರ: ಕುತೂಹಲಕ್ಕಾಗಿಯೇ ಆದರೂ ವಯಾಗ್ರ ಸೇವಿಸಿದ್ದು ತಪ್ಪು. ಅದು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಸೇವಿಸುವಂಥದ್ದಲ್ಲ. ಅದರಿಂದ ನೀವಿಬ್ಬರೂ ಆನಂದ ಅನುಭವಿಸಿದ್ದರೆ, ಒಳ್ಳೆಯದೇ. ಆದರೆ ಇನ್ನೊಮ್ಮೆ ಬಳಸಬೇಡಿ. ವಯಾಗ್ರದಿಂದ ನಿಮ್ಮ ಪತಿಯ ನಿಮಿರುವಿಕೆ ನಾಶವಾಗಿರುವ ಸಾಧ್ಯತೆ ಕಡಿಮೆ. ಅದು ಆತಂಕದಿಂದ ಸೃಷ್ಟಿಯಾದದ್ದು ಅನಿಸುತ್ತದೆ. ವಯಾಗ್ರ ಸೇವಿಸಿದಾಗ ತಮ್ಮ ಪರ್‌ಫಾರ್ಮೆನ್ಸ್ ಹಾಗೂ ಅದನ್ನು ಸೇವಿಸಲು ಮೊದಲು ಇದ್ದ ಪರ್‌ಫಾರ್ಮೆನ್ಸ್- ಇವೆರಡನ್ನೂ ನಿಮ್ಮ ಪತಿ ಹೋಲಿಸಿ ನೋಡಿರಬಹುದು. ಆಗ ತನ್ನಲ್ಲಿ ಶೀಘ್ರಸ್ಖಲನ ಇದೆ ಎಂಬ ಆತಂಕ, ಒತ್ತಡ ನಿಮ್ಮ ಪತಿಗೆ ಉಂಟಾಗಿರಬಹುದು. ಇದರಿಂದಾಗಿ ಸಹಜವಾಗಿ ನಿಮ್ಮೊಡನೆ ಒಂದುಗೂಡಲು ಆಗುತ್ತಿಲ್ಲ. ಈಗ ಈವು ನಿಮ್ಮ ಪತಿಯಲ್ಲಿ ಈ ವಿಷಯದ ಬಗ್ಗೆ ಧೈರ್ಯ ತುಂಬಬೇಕು. ಲೈಂಗಿಕ ಪರ್‌ಫಾರ್ಮೆನ್ಸ್‌ಗೂ ಪ್ರೀತಿಗೂ ಸಂಬಂಧವಿಲ್ಲ ಎಂದು ಮನದಟ್ಟು ಮಾಡಬೇಕು. ಅವರು ಮೊದಲಿನ ಸ್ಥಿತಿ ಕಂಡುಕೊಳ್ಳಲು ಹೆಚ್ಚಿನ ಮುನ್ನಲಿವು ಅಗತ್ಯವಾದೀತು. ನಿಜಕ್ಕೂ ಅರ್ಥಪೂರ್ಣ, ಆನಂದಪೂರ್ಣ ಸೆಕ್ಸ್‌ಗೆ ವಯಾಗ್ರ ಅಗತ್ಯವೇ ಅಲ್ಲ. 

#Feelfree: ನನ್‌ ಗಂಡ ಪ್ಯಾಂಟಿ ಕದೀತಾರೆ..! 

ಪ್ರಶ್ನೆ : ನನಗೀಗ ಇಪ್ಪತ್ತಮೂರು ವರ್ಷ ವಯಸ್ಸು, ಹುಡುಗಿ. ನಮ್ಮದು ಸಂಪ್ರದಾಯಸ್ಥ ಕುಟುಂಬ. ನನಗೆ ಲವರ್ ಆಗ್ಲೀ ಬಾಯ್ ಫ್ರೆಂಡ್ ಆಗಲೀ ಇಲ್ಲ. ಗೆಳೆತಿಯರು ಕೆಲವರಿದ್ದಾರೆ. ಇತ್ತೀಚೆಗೆ ಅವರು ಹಸ್ತ ಮೈಥುನದ ಬಗ್ಗೆ ಮಾತನಾಡುತ್ತಿದ್ದರು. ಅದು ಅಸಹ್ಯ, ಹಾಗೆಲ್ಲ ಮಾಡಲೇ ಬಾರದು ಅಂತ ಹೇಳ್ತಾ ಇದ್ದರು. ಅವರು ಮಾತಾಡುತ್ತಿದ್ದದ್ದು ಗಂಡಸರ ಹಸ್ತಮೈಥುನ ಬಗ್ಗೆ. ಆದರೆ ನನಗೆ ಅವತ್ತಿಂದ ಭಯ ಶುರುವಾಗಿದೆ. ನಾನು ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ದಿನಾ ಅಲ್ಲದಿದ್ದರೂ ಎರಡು ದಿನಕ್ಕೊಮ್ಮೆ ಮಾಡಿಕೊಳ್ಳುವ ಅಭ್ಯಾಸ. ಇದರಿಂದ ಖುಷಿಯಾಗುತ್ತದೆ. ನನ್ನ ಸ್ಟ್ರೆಸ್ ಗಳೆಲ್ಲ ಕಡಿಮೆಯಾಗಿ ಮನಸ್ಸಿಗೆ ಹಿತವಾದ ಫೀಲ್ ಸಿಗುತ್ತಿದೆ. ಆದರೆ ಗೆಳತಿಯರ ಮಾತು ಕೇಳಿದ ಮೇಲೆ ನನಗೆ ಭಯ ಶುರುವಾಗಿದೆ. ನನ್ನೊಳಗೇ ಅಪರಾಧಿ ಪ್ರಜ್ಞೆ ಶುರುವಾಗಿದೆ. ಇದರಿಂದ ಹೊರಬರುವುದು ಹೇಗೆ?

Feelfree: ಹಿಂದಿನಿಂದ ಪ್ರವೇಶಿಸಿದರೆ ನೋವಾಗಲ್ವಾ? 

ಉತ್ತರ - ಹಸ್ತಮೈಥುನ ಅನ್ನುವುದು ಗಂಡು ಹೆಣ್ಣಿನ ಲೈಂಗಿಕತೆಗೆ ಪರ್ಯಾಯವಾಗಿ ಮಾಡಿಕೊಂಡಿರುವ ವ್ಯವಸ್ಥೆ. ಅಂದರೆ ಸಂಗಾತಿ ಜೊತೆಯಲ್ಲಿ ಇಲ್ಲದವರು ಲೈಂಗಿಕ ಉದ್ರೇಕಗೊಂಡಾಗ ಹಸ್ತಮೈಥುನದಂಥಾ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇದು ಅಪರಾಧ ಅಲ್ಲ. ಲೈಂಗಿಕ ಬಯಕೆ ಗಂಡಿಗೆ ಮಾತ್ರ ಸೀಮಿತ ಅಲ್ಲವಲ್ಲಾ, ಅವನಷ್ಟೇ ಅವಳಿಗೂ ಲೈಂಗಿಕಾಸಕ್ತಿ ಇರುತ್ತದೆ, ಲೈಂಗಿಕಾಸಕ್ತಿ ಹುಡುಗನಿಗೆ ಹೆಚ್ಚೋ ಹುಡುಗಿಗೆ ಹೆಚ್ಚೋ ಅಂತ ಮೌಲ್ಯಮಾಪನ ಮಾಡೋದಂತೂ ಸಾಧ್ಯ ಇಲ್ಲವಲ್ಲ. ಹಾಗಿರುವಾಗ ಜಗತ್ತಿನ ಎಲ್ಲ ಕಡೆಯೂ ಮಹಿಳೆಯರು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ. ಆದರೆ ಅವಳು ಪೂರಕ ವಾತಾವರಣ ಇಲ್ಲದ ಕಾರಣ ಇದನ್ನು ಮುಕ್ತವಾಗಿ ಹೇಳಿಕೊಳ್ಳಲು ಆಗುತ್ತಿಲ್ಲ. ನೀವು ಈಗ ಮಾಡುತ್ತಿರುವುದು ತಪ್ಪಲ್ಲ. ಇದರಿಂದ ಮನಸ್ಸಿಗೆ ಖುಷಿ ಸಿಗೋದರ ಜೊತೆಗೆ ಒತ್ತಡ ನಿವಾರಣೆ ಆಗುವುದು ಹೌದು ಎಂಬುದು ವೈಜ್ಞಾನಿಕವಾಗಿಯೂ ಧೃಢಪಟ್ಟಿದೆ. ಈ ಅಭ್ಯಾಸದಿಂದ ಕೆಲವೊಂದು ಸಮಸ್ಯೆಗಳೂ ಆಗುತ್ತವೆ. ಹಸ್ತಮೈಥುನದಲ್ಲಿ ಖುಷಿ ಕಂಡ ನಿಮಗೆ ಮದುವೆಯಾದ ಮೇಲೆ ಸಂಗಾತಿಯ ಜೊತೆಗೆ ಮಾಡುವ ಲೈಂಗಿಕತೆಯಲ್ಲಿ ಖುಷಿ ಸಿಗದೇ ಹೋಗಬಹುದು, ಇದರಿಂದ ನಿಮ್ಮಿಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಹಾಗಾಗಿ ಹಸ್ತಮೈಥುನವನ್ನು ಚಟವಾಗಿಸಿಕೊಳ್ಳಬೇಡಿ. 

#Feelfree: ಬಾ ಅಂತ ಕರೀತಾಳೆ ಬಾಸ್‌ನ ಮಡದಿ!