Feelfree: ಹಿಂದಿನಿಂದ ಪ್ರವೇಶಿಸಿದರೆ ನೋವಾಗಲ್ವಾ?
ಇತ್ತೀಚೆಗೆ ನನ್ನ ಗಂಡನಿಗೆ, ನನ್ನ ಹಿಂದಿನಿಂದ ಪ್ರವೇಶಿಸಬೇಕು ಎಂಬ ಖಯಾಲಿ ಶುರುವಾಗಿದೆ. ಆದರೆ ನನಗೆ ಭಯ. ಪೋರ್ನ್ ತೋರಿಸುತ್ತಾರೆ. ಅದರಲ್ಲಿ ಆ ಕ್ರಿಯೆಯನ್ನು ಎಂಜಾಯ್ ಮಾಡುತ್ತಾರೆ ಎಂಬ ಹಾಗೆ ಕಾಣುತ್ತದೆ. ಆದರೆ ಅದೆಲ್ಲಾ ನಿಜವಲ್ಲ ಎಂಬುದು ಗೊತ್ತಿದೆ. ಏನು ಮಾಡಲಿ?
ಪ್ರಶ್ನೆ: ನನಗೆ ಇಪ್ಪತ್ತೈದು ವರ್ಷ. ನನ್ನ ಗಂಡನಿಗೆ ಮೂವತ್ತು ವರ್ಷ. ನಮಗೆ ಮದುವೆಯಾಗಿ ಒಂದು ವರ್ಷವಾಗಿದೆ. ಇಬ್ಬರೂ ಆಲ್‌ಮೋಸ್ಟ್ ಪ್ರತಿದಿನ ಎಂಬಂತೆ ಸೆಕ್ಸ್ ಮಾಡುತ್ತೇವೆ. ಈ ಕ್ರಿಯೆಯಲ್ಲಿ ನಮಗೆ ತುಂಬಾ ಸಂತೋಷವೂ ಇದೆ. ಹಲವು ಭಂಗಿಗಳನ್ನೂ ಬಳಸುತ್ತೇವೆ. ಇತ್ತೀಚೆಗೆ ನನ್ನ ಗಂಡನಿಗೆ, ನನ್ನ ಹಿಂದಿನಿಂದ ಪ್ರವೇಶಿಸಬೇಕು ಎಂಬ ಖಯಾಲಿ ಶುರುವಾಗಿದೆ. ಆದರೆ ನನಗೆ ಭಯ. ಪೋರ್ನ್ ತೋರಿಸುತ್ತಾರೆ. ಅದರಲ್ಲಿ ಆ ಕ್ರಿಯೆಯನ್ನು ಎಂಜಾಯ್ ಮಾಡುತ್ತಾರೆ ಎಂಬ ಹಾಗೆ ಕಾಣುತ್ತದೆ. ಆದರೆ ಅದೆಲ್ಲಾ ನಿಜವಲ್ಲ ಎಂಬುದು ಗೊತ್ತಿದೆ. ಏನು ಮಾಡಲಿ?
ಉತ್ತರ: ಗುದಸಂಭೋಗದ ಬಗ್ಗೆ ನಿಮಗೆ ಇರುವ ಭಯಗಳನ್ನು ನಿಮ್ಮ ಗಂಡನಿಗೆ ವಿವರಿಸಿ ಹೇಳಿ. ಅದರಿಂದ ಅವರು ಹಿಂದೆಗೆಯುವಂತೆ ಮಾಡಿ. ಅದು ಸಾಧ್ಯವೇ ಇಲ್ಲ, ಅವರಿಗೆ ಆ ಕ್ರಿಯೆ ಬೇಕೇ ಬೇಕು ಎಂದಾದರೆ, ನಿಮಗೆ ನೋವಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ. ಲೈಂಗಿಕ ಕ್ರಿಯೆಗಾಗಿಯೇ ದೇವರು ಕೊಟ್ಟಿರುವ ಮುಖ್ಯ ಅಂಗಗಳು ಇರುವಾಗ ಹಿಂದಿನ ಬಾಗಿಲನ್ನು ಯಾಕೆ ಬಳಸಬೇಕು ಅಂತ ನೀವು ಹೇಳಬಹುದು. ಆದರೆ ಈ ಕ್ರಿಯೆಯನ್ನು ಆನಂದ ಕಾಣುವವರು ಲೋಕದಲ್ಲಿ ತುಂಬಾ ಮಂದಿ ಇದ್ದಾರೆ. ಉದಾಹರಣೆಗೆ, ಸಲಿಂಗಕಾಮಿಗಳು ಪರಸ್ಪರ ಗುದಸಂಭೋಗದಲ್ಲಿ ಸಂತೋಷವನ್ನು ಕಾಣುತ್ತಾರೆ. ಇದು ಇತ್ತೀಚಿನವರೆಗೂ ಅಸಹಜ ಕ್ರಿಯೆ ಎಂದು ಪರಿಗಣಿಸಲ್ಪಟ್ಟಿತ್ತು. ಆದರೆ, ಲೈಂಗಿಕ ವರ್ತನಾ ತಜ್ಞರ ಪ್ರಕಾರ, ಹಲವು ಬಗೆಯ ಲೈಂಗಿಕ ಕ್ರಿಯೆಗಳಲ್ಲಿ ಇದೂ ಒಂದು. ಭಾರತದ ಹಲವು ಪುರಾತನ ದೇವಾಲಯಗಳ ಹೊರಭಾಗದಲ್ಲೂ ಈ ಕ್ರಿಯೆಯ ಶಿಲ್ಪಗಳನ್ನು ಕಾಣಬಹುದು. ಆದ್ದರಿಂದ ಇದು ಹಿಂದಿನ ಕಾಲದಲ್ಲೂ ಪ್ರಚಲಿತದಲ್ಲಿತ್ತು ಎನ್ನಬಹುದು. ವಾತ್ಸಾಯನನ ಕಾಮಸೂತ್ರದಲ್ಲೂ ಇದರ ಉಲ್ಲೇಖ ಇದೆ.
ಕಾಮಸೂತ್ರದಲ್ಲಿ ಹೇಳಿದ ಈ ಫುಡ್ ಸೇವಿಸಿದ್ರೆ ವಯಾಗ್ರಾನೇ ಬೇಡ! ...
ಹಿಂದಿನಿಂಧ ಲೈಂಗಿಕ ಕ್ರಿಯೆ ನಡೆಸಲು ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಎಂದರೆ, ನಿಮ್ಮ ಲೈಂಗಿಕ ಅಂಗಗಳು ಶುಚಿಯಾಗಿರುವಂತೆ ನೋಡಿಕೊಳ್ಳುವುದು. ಶುಚಿಯಾಗಿಲ್ಲದೆ ಹೋದರೆ ಇಬ್ಬರಿಗೂ ಇನ್‌ಫೆಕ್ಷನ್ ಆಗಬಹುದು. ಈ ಕ್ರಿಯೆಯಿಂದ ಗಂಡಿಗೆ ಸುಖವೆನಿಸಿದರೂ ಹೆಣ್ಣಿಗೆ ನೋವಾಗಬಹುದು. ಯಾಕೆಂದರೆ ಅದು ಲೈಂಗಿಕ ಕ್ರಿಯೆಗಾಗಿ ವಿಕಾಸಗೊಂಡ ಅಂಗವೇ ಅಲ್ಲ. ಅದು ಯೋನಿಯಂತೆ ಆ ಸಂದರ್ಭದಲ್ಲಿ ಸಾಕಷ್ಟು ಗಾತ್ರಕ್ಕೆ ಹಿಗ್ಗುವ ಸಾಮರ್ಥ್ಯವನ್ನೂ ಹೊಂದಿರುವುದಿಲ್ಲ. ಇದನ್ನು ಗಮನಿಸಿಕೊಂಡು, ಕ್ರಿಯೆಗೆ ಮುನ್ನವೇ ಇಬ್ಬರ ಅಂಗಗಳೂ ಸಾಕ್ಟು ಲ್ಯೂಬ್ರಿಕೆಂಟ್ ಆಗಿರುವಂತೆ ನೋಡಿಕೊಳ್ಳಬೇಕು. ಕಾಮಕ್ರಿಯೆಗೆ ಮುನ್ನ ನಡೆಸಉವ ಮುನ್ನಲಿವಿನ ಚಟುವಟಿಕೆಯಿಂದ ಇಬ್ಬರಲ್ಲೂ ಸಹಜ ಲ್ಯೂಬ್ರಿಕೆಂಟ್‌ಗಳು ಉತ್ಪತ್ತಿಯಾಗುತ್ತವೆ. ಗಂಡಿಗೆ ಇದು ಸಾಕು. ಆದರೆ ಹೆಣ್ಣು ನೋವಾಗದಂತಿರಲು ಹೊರಗಿನ ಲ್ಯೂಬ್ರಿಕೆಂಟ್ ಬಳಸುವುದು ಉತ್ತಮ. ಮಾರುಕಟ್ಟೆಯಲ್ಲಿ ಕೆವೈ ಜೆಲ್ಲಿ ಮುಂತಾದ ಲ್ಯೂಬ್ರಿಕೆಂಟ್‌ಗಳು ಸಿಗುತ್ತವೆ. ಇದನ್ನು ಹಚ್ಚಿಕೊಳ್ಳಬಹುದು. ಶಿಶ್ನ ಕೂಡ ಸಾಕಷ್ಟು ಲ್ಯೂಬ್ರಿಕೆಂಟ್ ಆಗಿರುವುದು ಅಗತ್ಯ. ಈ ಕ್ರಿಯೆಯಲ್ಲಿ ಹೆಚ್ಚಿನ ಘರ್ಷಣೆಯಾಗಲೀ, ರಭಸದ ಘರ್ಷಣೆಯಾಗಲೀ ಮಾಡಕೂಡದು. ಇಷ್ಟಾಗಿಯೂ ಹೆಣ್ಣಿಗೆ ತೀರಾ ನೋವಾಗುತ್ತಿದೆ ಎನಿಸಿದರೆ ಸಂಭೋಗ ನಡೆಸಬಾರದು. ಗುದಸಂಭೋಗದ ಬಳಿಕವೂ ಅಂಗಗಳನ್ನು ಸಾಕಷ್ಟು ಶುಚಿಗೊಳಿಸಿಕೊಳ್ಳಬೇಕು.
#Feelfree: ಬಾ ಅಂತ ಕರೀತಾಳೆ ಬಾಸ್‌ನ ಮಡದಿ!
ಗುದಸಂಭೋಗದ ಬಗ್ಗೆ ಭಯ ಬೇಡ. ಅದನ್ನು ಸಹಜ ಸಂತೋಷದ ಕ್ರಿಯೆಯಾಗಿಯೂ ನೋಡಲು, ಅನುಭವಿಸಲು ಸಾಧ್ಯವಿದೆ. ಕೆಲವು ಗಂಡು- ಹೆಣ್ಣುಗಳು ಇಬ್ಬರೂ ಅತಿಯಾಗಿ ಉದ್ರೇಕಿತ ಸ್ಥಿತಿಯಲ್ಲಿ ಇದ್ದಾಗ ಕೆಲವೊಮ್ಮೆ ಪರಸ್ಪರ ನೋಯಿಸಿಕೊಳ್ಳುವುದು ಉಂಟು. ಅದೂ ರತಿಕ್ರೀಡೆಯ ಒಂದು ಸ್ವರೂಪವೇ. ಆದರೆ ಇದೂ ಅತಿಯಾಗಬಾರದು. ಕೆಲವೊಮ್ಮೆ ಗುದಸಂಭೋಗದ ರುಚಿ ಕಂಡ ಗಂಡಸು, ಪದೇ ಪದೇ ಅದನ್ನು ಬಯಸಬಹುದು. ಆದರೆ ಇದರಿಂದ ಹೆಣ್ಣು ಸಹಜ ಸುಖದಿಂದ ವಂಚಿತಳಾಗಬಹುದು. ಗಂಡು ಕೂಡ, ಹಿಂಬದಿಯ ಗಟ್ಟಿ ಸ್ನಾಯುಗಳ ನಡುವೆ ಗಂಡಿನ ಶಿಶ್ನ ಹೆಚ್ಚಿನ ಒತ್ತಡಕ್ಕೆ ಒಳಗಾಗುವುದರಿಂದ, ಶಿಶ್ನಕ್ಕೆ ದೀರ್ಘಕಾಲಿಕ ನೋವು ಕೂಡ ಉಂಟಾಗಬಹುದು. ಆದ್ದರಿಂದ ಎಚ್ಚರ ಬೇಕು.
#Feelfree: ಹೆಂಡ್ತಿ ಹಾದರ ನೋಡೋ ಗತಿ ವೈರಿಗೂ ಬರಬಾರ್ದು!