ಮದ್ವೆಯಾಗೋ ಹುಡುಗನಲ್ಲಿ ಇಂಥಾ ಗುಣವಿರ್ಲಿ ಅಂತ ಹುಡುಗೀರು ಬಯಸ್ತಾರಂತೆ
ಮದುವೆ ಅನ್ನೋದು ಅಷ್ಟು ಈಝಿ ಅಲ್ಲ. ಸರಿಯಾದ ಪಾರ್ಟ್‌ನರ್ ಸಿಕ್ಕರೆ ಮಾತ್ರ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ವೈವಾಹಿಕ ಜೀವನದಲ್ಲೂ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದರಲ್ಲೂ ಮದುವೆಯಾಗೋ ಹುಡುಗನಲ್ಲಿ ನಿರ್ಧಿಷ್ಟ ಗುಣವಿರಲಿ ಅಂತ ಹುಡುಗಿಯರು ಬಯಸ್ತಾರಂತೆ. ಅದೇನು ಅಂತ ತಿಳ್ಕೊಳ್ಳೋಣ.
ಮದುವೆಯೆಂಬುದು ಒಂದು ಸುಂದರವಾದ ಸಂಬಂಧ (Relationship). ಆದ್ರೆ ಸರಿಯಾದ ಸಂಗಾತಿ ಸಿಕ್ಕರಷ್ಟೇ ಸಂಸಾರ ಸುಂದರವಾಗಿ ಸಾಗುತ್ತದೆ. ಇಲ್ಲದಿದ್ದರೆ ಭಿನ್ನಾಭಿಪ್ರಾಯಗಳಿಂದಲೇ ಜೀವನ ನರಕವಾಗಿಬಿಡುತ್ತದೆ. ಹೀಗಾಗಿಯೇ ಸಂಗಾತಿಯ (Partner) ಆಯ್ಕೆಯ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರೂ ಚ್ಯೂಸಿಯಾಗಿರ್ತಾರೆ. ತಮಗೆ ಎಲ್ಲಾ ರೀತಿಯಲ್ಲೂ ಸರಿಹೊಂದುವ ಪಾರ್ಟ್‌ನರ್ ಸಿಗಲಿ ಎಂದು ಅಂದುಕೊಳ್ಳುತ್ತಾರೆ.
ಆದರೆ ಬಹುತೇಕ ಹುಡುಗರು ನಮಗ್ಯಾರೂ ಹುಡುಗಿಯರೇ ಬೀಳ್ತಿಲ್ಲ. ಯಾರೂ ನಮ್ಮನ್ನು ಇಷ್ಟಪಡಲ್ಲ ಅಂತ ಕೊರಗ್ತಾ ಇರ್ತಾರೆ. ಆದರೆ ಹೀಗೆಲ್ಲಾ ಹೇಳೋ ಮೊದಲು ಹುಡುಗಿಯರಿಗೆ ಎಂಥಾ ಹುಡುಗಿಯರು ಇಷ್ಟವಾಗ್ತಾರೆ ಅನ್ನೋದನ್ನು ತಿಳ್ಕೊಬೇಕು. ಅದರಲ್ಲೂ ಮದುವೆ (Marriage)ಯಾಗೋ ಹುಡುಗನಲ್ಲಿ ನಿರ್ಧಿಷ್ಟ ಗುಣವಿರಲಿ ಅಂತ ಹುಡುಗಿಯರು ಬಯಸ್ತಾರಂತೆ. ಅದೇನು ಅಂತ ಮೊದಲು ತಿಳ್ಕೊಳ್ಳಿ.
ಪರಸ್ಪರ ಆಕರ್ಷಣೆ
ಸಾಮಾನ್ಯವಾಗಿ ಹುಡುಗಿಯರು (Girls) ತಮಗೊಬ್ಬ ಹುಡುಗ ಇಷ್ಟವಾದರೆ ಅವನನ್ನು ಮನಸ್ಫೂರ್ತಿಯಾಗಿ ಪ್ರೀತಿಸುತ್ತಾರೆ. ಹಾಗೆಯೇ ಹುಡುಗ ಸಹ ತನ್ನನ್ನು ನನ್ನಷ್ಟೇ ಪ್ರೀತಿಸಲಿ (Love) ಎಂದು ಹುಡುಗಿ ಅಂದುಕೊಳ್ಳುತ್ತಾಳೆ. ಹುಡುಗನಲ್ಲಿಯೂ ತನ್ನ ಕುರಿತು ಮನದಾಳದಿಂದ ಆಕರ್ಷಣೆಯಿರಲಿ ಎಂದು ಬಯಸುತ್ತಾಳೆ.
ಅವಲಂಬನೆ
ಹುಡುಗಿ ಯಾವಾಗಲೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ಮತ್ತೊಬ್ಬರ ಸಾಥ್ ಬೇಕೆಂದು ಬಯಸುತ್ತಾಳೆ. ಹೀಗಾಗಿ ಗಂಡನಲ್ಲಿ ಈ ಗುಣವಿರಲಿ ಎಂದು ಆಕೆ ಖಂಡಿತವಾಗಿಯೂ ಬಯಸುತ್ತಾಳೆ. ತನ್ನ ಮನಸ್ಸಿನ ಎಲ್ಲಾ ಭಾವನೆಗಳನ್ನು ಸುಲಭವಾಗಿ ಹಂಚಿಕೊಳ್ಳಲು ಸಾಧ್ಯವಾಗಬೇಕು ಎಂದು ಅಂದುಕೊಳ್ಳುತ್ತಾಳೆ.
ಭಾವನಾತ್ಮಕ ಸಂಬಂಧ
ಪಾಲುದಾರ ತನ್ನೊಂದಿಗೆ ಕೇವಲ ದೈಹಿಕವಾಗಿ (Physical) ಮಾತ್ರವಲ್ಲ ಭಾವನಾತ್ಮಕವಾಗಿಯೂ ಉತ್ತಮ ನಂಟನ್ನು ಹೊಂದಿರಬೇಕೆಂದು ಪ್ರತಿಯೊಬ್ಬ ಹೆಣ್ಣೂ ಬಯಸುತ್ತಾಳೆ. ಅಲ್ಲದೆ ತಾನು ಸಂಬಂಧ ಹೊಂದಲು ಬಯಸುವ ಪುರುಷನು (Men) ಇಮೋಶನಲಿ ಸ್ಟ್ರಾಂಗ್ ಆಗಿರಲಿ ಎಂದು ಅಂದುಕೊಳ್ಳುತ್ತಾಳೆ. ಹೀಗೆ ಇರುವುದರಿಂದ ತಾನು ಯಾವುದೇ ಭಾವನೆಯನ್ನು ಹೇಳಿಕೊಂಡು ನಿರಾಳವಾಗಬಹುದು. ಆತ ಸಮಸ್ಯೆಯನ್ನು ನಿಭಾಯಿಸುವ ಕಾರಣ ತಾನು ಸ್ಟ್ರಾಂಗ್ ಆಗಿರಬಹುದು ಎಂದು ಅಂದುಕೊಳ್ಳುತ್ತಾಳೆ.
ಬುದ್ಧಿವಂತ
ಪ್ರತಿಯೊಬ್ಬ ಹುಡುಗಿಯೂ ತನ್ನ ಹುಡುಗ ಇಂಟೆಲಿಜೆಂಟ್ (Brilliant) ಆಗಿರಲಿ ಎಂದು ಅಂದುಕೊಳ್ಳುತ್ತಾಳೆ. ಇದರಿಂದಾಗಿ ಆತನ ಮೂಲಕ ಹೊಸ ಹೊಸ ವಿಚಾರಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಯಾವತ್ತೂ ಸಹ ಬೋರ್ ಆಗುವುದಿಲ್ಲ ಎಂದು ಬಯಸುತ್ತಾಳೆ. ಏನು ಹೇಳಿದರೂ ಅರ್ಥವಾಗದ ಪೆದ್ದು ಪೆದ್ದು ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ.
ಟ್ರಾವೆಲ್ ಮಾಡುವವರು
ಯಾವಾಗಲೂ ಸೋಷಿಯಲೈಸ್ ಆಗಿರುವವರನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಸುಮ್ಮನೆ ಗುಮ್ಮನೆ ಕುಳಿತಿರುವವರು ಅವರಿಗೆ ಇಷ್ಟವಾಗುವುದಿಲ್ಲ. ಬದಲಿಗೆ ಎಲ್ಲರೊಂದಿಗೆ ಬೆರೆಯುತ್ತಾ, ಮಾತನಾಡುತ್ತಾ ಇರುವವರು ಹೆಚ್ಚು ಆಪ್ತರಾಗುತ್ತಾರೆ. ಎಲ್ಲೆಡೆ ಓಡಾಡುವ, ಟ್ರಾವೆಲ್ ಮಾಡುವ ಹುಡುಗರು, ಹುಡುಗಿಯರಿಗೆ ಬೇಗನೇ ಆಪ್ತವಾಗುತ್ತಾರೆ.