ಯುವಕರು ಎತ್ತರ ಕಡಿಮೆಯಿರೋ ಯುವತಿಯರತ್ತ ಆಕರ್ಷಿತರಾಗೋದೇಕೆ? ಇಲ್ಲಿವೆ 5 ಕಾರಣ 

ಕೆಲವು ಸಂಶೋಧನೆಗಳ ಪ್ರಕಾರ, ಪುರುಷರು ಕಡಿಮೆ ಎತ್ತರ ಮತ್ತು ಸಪೂರ ದೇಹ ಹೊಂದಿರುವ ಮಹಿಳೆಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಈ ಆಕರ್ಷಣೆ ಸಾಂಸ್ಕೃತಿಕ, ವೈಯಕ್ತಿಕ ಮತ್ತು ಸಾಮಾಜಿಕ ಅಂಶಗಳಿಂದ ಪ್ರಭಾವಿತವಾಗಬಹುದು. ಕಡಿಮೆ ಎತ್ತರದ ಮಹಿಳೆಯರು ಹೆಚ್ಚು ಆಕರ್ಷಕ ಮತ್ತು ಬುದ್ಧಿವಂತರಾಗಿ ಕಾಣುತ್ತಾರೆ ಎಂಬ ನಂಬಿಕೆಯೂ ಇದೆ.

Why are young men attracted to short women Here are 5 reasons mrq

ಯಾರ ಹೆಂಡ್ತಿ ಕುಳ್ಳಿ, ಅವರ ಕೀರ್ತಿ ದೊಡ್ಡದಾಗಿರುತ್ತೆ ಎಂಬ ಮಾತನ್ನು ಎಲ್ಲರೂ ಕೇಳಿರುತ್ತಿರಿ. ಆದ್ರೆ ಈ ಮಾತು ಇಂದಿಗೂ ಚಾಲ್ತಿಯಲ್ಲಿದ್ದು, ಹಲವು ಪುರುಷರು ತಮಗಿಂತ ಕಡಿಮೆ ಎತ್ತರ ಹೊಂದಿರುವ ಮಹಿಳೆಯರನ್ನು ಇಷ್ಟಪಡುತ್ತಾರೆ. ಹುಡುಗರು ಹೆಚ್ಚಾಗಿ ಕಡಿಮೆ ಎತ್ತರವಿರೋ ಹುಡುಗಿಯರತ್ತ ಆಕರ್ಷಿತರಾಗುತ್ತಾರೆ ಮತ್ತು ಅವರನ್ನೇ ಮದುವೆಯಾಗಲು ಇಷ್ಟಪಡುತ್ತಾರೆ. ಅರೇಂಜ್ ಮದುವೆಯಾದ್ರೂ ಹುಡುಗರು, ಕಡಿಮೆ ಎತ್ತರವಿರುವ ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ಈ ಬಗ್ಗೆ ಅಧ್ಯಯನ ನಡೆಸಲಾಗಿದ್ದು,  ಇದಕ್ಕೆ ಕಾರಣ ಏನು ಎಂಬುದನ್ನು ಸಹ ತಿಳಿಸಲಾಗಿದೆ. 

ಕೆಲವು ಸಂಶೋಧನೆ ಅಧ್ಯಯನಗಳ ಪ್ರಕಾರ, ಪುರುಷರು ಕಡಿಮೆ ಎತ್ತರ ಮತ್ತು ಸಪೂರ ದೇಹ ಹೊಂದಿರುವ ಮಹಿಳೆಯರತ್ತ ಹೆಚ್ಚು ಆಕರ್ಷಿತರಾಗು ತ್ತಾರೆ. ಈ ಆಕರ್ಷಣೆ ಸಂಸ್ಕೃತಿ, ವೈಯಕ್ತಿಕ ಕಾರಣ  ಮತ್ತು ಸಾಮಾಜಿಕ ವಿಚಾರದಲ್ಲಿ ಕೆಲವೊಮ್ಮೆ ಬದಲಾವಣೆಯಾಗಬಹುದು. ಪುರುಷರು ಕಡಿಮೆ ಎತ್ತರವಿರೋ ಮಹಿಳೆ ಅಥವಾ ಸಂಗಾತಿಯೊಂದಿಗೆ ಬಹುಬೇಗ ಭಾವನಾತ್ಮಕವಾಗಿ ಹೊಂದಿಕೊಳ್ಳುತಯತಾರೆ. ಅವರ ಜೊತೆಗಿನ ಸಮಯದಲ್ಲಿ ಅತ್ಯಂತ ಪ್ರೀತಿಯನ್ನು ಕಾಣುತ್ತಾರೆ ಎಂದು ವರದಿಯಾಗಿದೆ.

ಯಾಕೆ ಈ ಆಕರ್ಷಣೆ? ಇಲ್ಲಿವೆ 5  ಕಾರಣಗಳು
1.
ಸಾಮನ್ಯವಾಗಿ ಕಡಿಮೆ ಎತ್ತರವಿರೋ ಯುವತಿಯರು ಹೆಚ್ಚು ಆಕರ್ಷಕವಾಗಿ ಮತ್ತು ಹೆಚ್ಚು ಬುದ್ಧಿವಂತರಂತೆ ಕಾಣುತ್ತಾರೆ. ಹಾಗಾಗಿ ಭವಿಷ್ಯದಲ್ಲಿ ಎಲ್ಲಾ ಸಮಯದಲ್ಲಿಯೂ  ಕಡಿಮೆ ಎತ್ತರವಿರೋ ಸಂಗಾತಿ ಜೊತೆಯಲ್ಲಿರುತ್ತಾಳೆ ಎಂದು ಪುರುಷರು ನಂಬುತ್ತಾರೆ. ಯುವತಿಯರ ಎತ್ತರದಲ್ಲಿ ಪುರುಷರು ಭವಿಷ್ಯದ ಭದ್ರತೆಯನ್ನು ಕಾಣುತ್ತಾರೆ. 

2.ಮೊದಲಿನಿಂದಲೂ ಪುರುಷರು ಮಹಿಳೆಯರಿಗಿಂತ ದೈಹಿಕವಾಗಿ ಹೆಚ್ಚು ಬಲಶಾಲಿಗಳು ಎಂದು ಹೇಳಲಾಗುತ್ತದೆ. ಮಹಿಳೆಯರಿಗೆ ಸೌಮ್ಯಗುಣದ ತಾಯಿಯ ಚಿತ್ರಣವನ್ನು ನೀಡುತ್ತಾ ಬರಲಾಗಿದೆ. ಎತ್ತರ ಮಹಿಳೆ ಬಲಶಾಲಿಯಾಗಿ ಕಾಣುತ್ತಾರೆ ಎಂಬ ಕಾರಣಕ್ಕೂ ಪುರುಷರು ಕಡಿಮೆ ಎತ್ತರವಿರುವ ಯುವತಿಯರತ್ತ ಆಕರ್ಷಿತರಾಗುತ್ತಾರೆ. 

3.ಪುರುಷ ತನ್ನ ಸಂಗಾತಿ ತನ್ನ ಎದೆಯತ್ತರಕ್ಕೆ ಇರಬೇಕು ಎಂದು ಭಾವಿಸುತ್ತಾರೆ.  ಹೀಗಿದ್ರೆ ಸಂಗಾತಿಯನ್ನು ಮುದ್ದಾಗಿ ಅಪ್ಪಿಕೊಳ್ಳಬಹುದು ಎಂಬುವುದು ಹಲವರ ಅಭಿಪ್ರಾಯವಾಗಿದೆ. ಕಡಿಮೆ ಎತ್ತರವಿರೋ ಮಹಿಳೆ ಮತ್ತು ಎತ್ತರದ ಪುರುಷನ ಜೋಡಿಯೂ ಆಕರ್ಷಕವಾಗಿ ಕಾಣುತ್ತದೆ. ಎತ್ತರ ಕಾಳಜಿಯ ಭಾವನೆಯನ್ನು ಹುಟ್ಟು ಹಾಕುತ್ತದೆ. 

ಇದನ್ನೂ ಓದಿ: ನಿಶ್ಚಿತಾರ್ಥದ ಬೆನ್ನಲ್ಲೇ ವಧುವಿನೊಂದಿಗೆ ಮೊದಲರಾತ್ರಿ ಮಿಲನ ಆಚರಿಸಿದ ವರ; ಈಗ ಮದುವೆ ಬೇಡವಂತೆ!

4.ಪುರುಷ ಮತ್ತು ಮಹಿಳೆಯರ ಎತ್ತರದಲ್ಲಿ ವ್ಯತ್ಯಾಸವಿದ್ದಾಗ ಇದು ಸಂಬಂಧದಲ್ಲಿನ ಸಮತೋಲನಕ್ಕೆ ಕಾರಣವಾಗುತ್ತದೆ ಎಂಬುವುದು ಹಲವರ ಅಭಿಪ್ರಾಯವಾಗಿದೆ. ಸಂಬಂಧದಲ್ಲಿನ ಸಮತೋಲನಕ್ಕಾಗಿ ಹುಡುಗನ ಎತ್ತರಕ್ಕಿಂತ ಹುಡುಗಿಯ ಎತ್ತರ ಕಡಿಮೆ ಇರಬೇಕು ಎಂಬ ನಂಬಿಕೆಯೂ ಇದೆ. 

5. ಕಡಿಮೆ ಎತ್ತರವಿರುವ ಮಹಿಳೆಯರು ಸಾಮಾನ್ಯವಾಗಿ ತಮ್ಮ ಸೂಕ್ಷ್ಮತೆ ಮತ್ತು ಆಕರ್ಷಕ ದೇಹದಿಂದ ಎಲ್ಲರ  ನಡುವೆಯೂ ಗುರುತಿಸಿಕೊಳ್ಳುತ್ತಾರೆ. ಕಡಿಮೆ ಎತ್ತರವಿರೋ ಮಹಿಳಯರು ಆರೋಗ್ಯಕರವಾಗಿರುತ್ತವೆ. ಎತ್ತರವಿರೋ ಪುರುಷ ಸಂಗಾತಿಯೊಂದಿಗೆ ಆಕರ್ಷಿತವಾಗಿ ಕಾಣಿಸುತ್ತಾರೆ. 

ಇದನ್ನೂ ಓದಿ: 40ರ ಪ್ರೇಮಕ್ಕೆ ವಯಸ್ಸಿಲ್ಲ, ಆಯಸ್ಸೂ ಇಲ್ಲ! ಸುಡುವ ಕೆಂಡ, ಮುಟ್ಟಿದಾಗ ಸುಟ್ಟು, ಸೀದು, ಬೂದಿಯಾಗಬೇಕು!

Latest Videos
Follow Us:
Download App:
  • android
  • ios