Sexual Health: ಸಂಗಾತಿ ಕಾಂಡೋಮ್ ಬೇಡ ಅಂತಾರ ? ಹೀಗೆ ಮಾಡಿ ಮನವೊಲಿಸಿ
ಅನೇಕ ಪುರುಷರಿಗೆ, ಫೋರ್‌ಪ್ಲೇ ಉತ್ತುಂಗದಲ್ಲಿರುವಾಗ ಕಾಂಡೋಮ್ ಬಳಸುವುದು ಮೂಡ್-ಕಿಲ್ಲರ್ ಆಗಿರಬಹುದು. ಇಂಥಾ ಸಂದರ್ಭದಲ್ಲಿ ಸಂಗಾತಿ ಕಾಂಡೋಮ್ ಬಳಸುವುದನ್ನು ತಪ್ಪಿಸಲು ನಿಮಗೆ ಎಲ್ಲಾ ರೀತಿಯ ಕಾರಣಗಳನ್ನು ನೀಡಬಹುದು. ಆದರೆ ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಲು ಕಾಂಡೋಮ್ ಹೆಚ್ಚು ಅಗತ್ಯವಾಗಿದೆ.
ಕಾಂಡೋಮ್ ಬಳಕೆಯನ್ನು ತಪ್ಪಿಸಲು ಸಂಗಾತಿ ಹಲವು ಕಾರಣಗಳನ್ನು ನೀಡಬಹುದು. ನಿಮಿರುವಿಕೆ ಸಮಸ್ಯೆಗಳು, ನನಗೆ ಇಷ್ಟವಿಲ್ಲ, ಇದು ಸಂತೋಷವನ್ನು ಕಡಿಮೆ ಮಾಡುತ್ತದೆ, ನನಗೆ ಲ್ಯಾಟೆಕ್ಸ್‌ಗೆ ಅಲರ್ಜಿ ಇದೆ ಎಂದೆಲ್ಲಾ ಹೇಳಬಹುದು. ಆದರೆ ನಿಮ್ಮ ಸಂಗಾತಿ ಕಾಂಡೋಮ್ ಧರಿಸಲು ನಿರಾಕರಿಸುತ್ತಿದ್ದರೆ, ನೀವು ಅದನ್ನು ಬಳಸಲು ಒತ್ತಾಯಿಸುವುದು ಅಗತ್ಯವಾಗಿದೆ. ಸಂಗಾತಿಯ ಮನವೊಲಿಸಿ ಕಾಂಡೋಮ್ ಧರಿಸುವಂತೆ ಮಾಡಬೇಕಾಗುತ್ತದೆ. ಮುಂಬೈನ ಮುಲುಂಡ್‌ನ ಫೋರ್ಟಿಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಮತ್ತು ಸೆಕ್ಸಲಾಜಿಸ್ಟ್ ಡಾ.ಸಂಜಯ್ ಕುಮಾವತ್, ಕಾಂಡೋಮ್‌ನ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದಾರೆ.
1. ಸಮರ್ಥನೀಯ ಸಂವಹನ ತಂತ್ರವನ್ನು ಬಳಸಿ: ಕಾಂಡೋಮ್ ಧರಿಸುವಾಗ ನಿಮ್ಮ ಸಂಗಾತಿ (Partner) ಇಲ್ಲವೆನ್ನುವ ಉತ್ತರ ನೀಡುವಂಥವರಾಗಿದ್ದರೆ ನೀವು ಈ ಬಗ್ಗೆ ಮೊದಲೇ ಮಾತನಾಡಿಕೊಳ್ಳಬೇಕು. ಕಾಂಡೋಮ್ ಅನ್ನು ಬಳಸಲು ಪಾಲುದಾರನನ್ನು ಕೇಳುವುದು ಸ್ವಲ್ಪ ವಿಚಿತ್ರವೆನಿಸಬಹುದು. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಸುರಕ್ಷಿತ ಲೈಂಗಿಕತೆ (Safe sex)ಯನ್ನು ಅಭ್ಯಾಸ ಮಾಡುವುದು ತುಂಬಾ ಮುಖ್ಯವಾಗಿದೆ. ಆದ್ದರಿಂದ ಲೈಂಗಿಕ ಜೀವನದಲ್ಲಿ ಯಡವಟ್ಟುಗಳಾಗಲು ಬಿಡಬೇಡಿ. ನಿಮ್ಮ ಸಂವಹನದಲ್ಲಿ ದೃಢವಾಗಿರಿ ಮತ್ತು ಕಾಂಡೋಮ್ ಏಕೆ ಅಗತ್ಯ ಎಂದು ನಿಮ್ಮ ಸಂಗಾತಿಗೆ ತಿಳಿದಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಯಾವುದು ಅತಿಯಾದರೂ ಅಪಾಯವೇ, ಸೆಕ್ಸ್ ಸಹ ಇದಕ್ಕೆ ಹೊರತಲ್ಲ
ಹೆಚ್ಚುವರಿಯಾಗಿ, ಕಾಂಡೋಮ್ ಬಳಕೆಯನ್ನು ಕೇಳುವುದು ಯಾವಾಗಲೂ ಅಪರಾಧವಲ್ಲ. ಆದರೆ ಲೈಂಗಿಕತೆಯ ಮೊದಲು ಅಥವಾ ಸಮಯದಲ್ಲಿ ಮಾತನಾಡುವುದನ್ನು ತಪ್ಪಿಸಲು ಪ್ರಯತ್ನಿಸಿ. ಬದಲಾಗಿ, ನೀವಿಬ್ಬರೂ ಉದ್ವಿಗ್ನತೆಯನ್ನು ಅನುಭವಿಸದ ಸಮಯವನ್ನು ಆರಿಸಿ.
2. ಕಾಂಡೋಮ್ ಧರಿಸುವುದರಿಂದ ಆಗುವ ಅನುಕೂಲ ವಿವರಿಸಿ: ನಿಮ್ಮ ಸಂಗಾತಿ ಕಾಂಡೋಮ್ ಅನ್ನು ಬಳಸುವಂತೆ ಮಾಡಲು ಉತ್ತಮ ಮಾರ್ಗವೆಂದರೆ ಅದರ ಬಳಕೆಯ ಪ್ರಯೋಜನಗಳನ್ನು ವಿವರಿಸುವುದು. ಕಾಂಡೋಮ್‌ಗಳ ಬಳಕೆಯ ಅನುಕೂಲಗಳನ್ನು ಸಂಗಾತಿಗೆ ಬಿಡಿಸಿ ಹೇಳಿ. ಇದು ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಲೈಂಗಿಕವಾಗಿ ಹರಡುವ ರೋಗಗಳು (Disease) ಎರಡರಿಂದಲೂ ರಕ್ಷಣೆಯಾಗಿದೆ. ಘರ್ಷಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಯೋನಿ ಎಪಿಥೀಲಿಯಂನ ಸವೆತವನ್ನು ತಡೆಯುತ್ತದೆ. ಪ್ರತಿ ದಂಪತಿಗಳು ಏಕತಾನತೆಯನ್ನು ತಪ್ಪಿಸಲು ವಿವಿಧ ಸ್ಥಾನಗಳನ್ನು ಪ್ರಯತ್ನಿಸಲು ಬಯಸುತ್ತಾರೆ. ಈ ಸಂದರ್ಭದಲ್ಲಿ ಕೆಲವು ಸ್ಥಾನಗಳು (Position) ಪಾಲುದಾರರಿಗೆ ಸೋಂಕು ಉಂಟುಮಾಡುವ ಅಪಾಯವಿರುತ್ತದೆ.
3. ಲೈಂಗಿಕ ಕ್ರಿಯೆ ಸುಧಾರಿಸಬಹುದು: ಕಾಂಡೋಮ್ ಬಳಕೆಯಿಂದ ಲೈಂಗಿಕ ಕ್ರಿಯೆ ಸುಧಾರಿಸಬಹುದು. ಕಾಂಡೋಮ್ ಧರಿಸಿದಾಗಲೂ ಸಹ ನೀವು ಲೈಂಗಿಕ ಸುಖವನ್ನು ಉನ್ನತವಾಗಿ ಅನುಭವಿಸಬಹುದು ಎಂದು ನಿಮ್ಮ ಸಂಗಾತಿಗೆ ತಿಳಿಸಿ. ಕಾಂಡೋಮ್‌ಗಳು ಲೂಬ್ರಿಕೇಟೆಡ್ ಆಗಿರುತ್ತವೆ. ಆದ್ದರಿಂದ, ಇದು ಘರ್ಷಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಸ್ಖಲನದ ಹಂತವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಲೈಂಗಿಕತೆಯಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕತೆಯು ಹೆಚ್ಚು ಕಾಲ ಉಳಿಯುತ್ತದೆ. ವಾಸ್ತವವಾಗಿ, ಕಾಂಡೋಮ್‌ನ ಬಣ್ಣ ಮತ್ತು ಸುವಾಸನೆಯು ಅನುಭವಕ್ಕೆ ಕೊಡುಗೆ ನೀಡಬಹುದು.
ಬೆನ್ನು ನೋವಾ? ಯಾವುದ್ಯಾವುದೋ ಭಂಗಿ ಸೂಟ್ ಆಗೋಲ್ಲ
4. ಅನಗತ್ಯ ಗರ್ಭಧಾರಣೆ ತಪ್ಪಿಸಲು ಸಹಾಯ ಮಾಡುತ್ತದೆ: ನೀವು ಹೆಚ್ಚು ಜವಾಬ್ದಾರರಾಗಿದ್ದರೆ, ಕಾಂಡೋಮ್ ಅನ್ನು ಬಳಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ನಿಮ್ಮ ಸಂಗಾತಿಗೆ ತಿಳಿಸಿ, ವಿಶೇಷವಾಗಿ ಅನಗತ್ಯ ಗರ್ಭಧಾರಣೆಯನ್ನು (Pregnancy) ತಡೆಯಬಹುದು ಎಂಬುದನ್ನು ಮನವರಿಕೆ ಮಾಡಿ. ಕಾಂಡೋಮ್‌ಗಳು ಗರ್ಭನಿರೋಧಕ ಮೌಲ್ಯವನ್ನು ಹೊಂದಿದ್ದು, ಇದು ಅನಗತ್ಯ ಗರ್ಭಧಾರಣೆ, ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಯುತ್ತದೆ ಎಂದು ತಿಳಿದುಬಂದಿದೆ. ಅನಪೇಕ್ಷಿತ ಗರ್ಭಧಾರಣೆಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡವನ್ನು ಉಂಟುಮಾಡುತ್ತದೆ.
5. ಕಾಂಡೋಮ್ ಅಗತ್ಯವಾಗಿ ಬಳಸಿ: ಯಾವಾಗಲೂ ನಿಮ್ಮೊಂದಿಗೆ ಕಾಂಡೋಮ್‌ಗಳನ್ನು ಕೊಂಡೊಯ್ಯಿರಿ ಏಕೆಂದರೆ ಭಾವೋದ್ರಿಕ್ತ ಕ್ಷಣದಲ್ಲಿ ಸುಮ್ಮನಿದ್ದು. ನಂತರ ಪಶ್ಚಾತ್ತಾಪ ಪಡುವುದು ಅರ್ಥಹೀನವಾಗಿರುತ್ತದೆ. ಆದ್ದರಿಂದ, ಕಾಂಡೋಮ್‌ಗಳ ಬಳಕೆಯನ್ನು ಒತ್ತಾಯಿಸುವ ಬದಲಿಗೆ ಅದನ್ನು ಲಭ್ಯವಾಗುವಂತೆ ಮಾಡಿ. ಅಲ್ಲದೆ, ನಿಮ್ಮ ಸಂಗಾತಿಯ ಲೈಂಗಿಕ ಇತಿಹಾಸದ ಬಗ್ಗೆ ತಿಳಿದುಕೊಂಡಿರಿ.