ಯಾವಾಗ ಲವ್ ಮಾಡಬೇಕು? ಅದಕ್ಕೂ ಹೊತ್ತು ಗೊತ್ತು ಇರುತ್ತಾ?
ಪ್ರೀತಿಯೊಂದು ಮಧುರಾನುಭವ. ಅದ್ಯಾರ ಮೇಲೆ, ಹೇಗೆ ಹುಟ್ಟುತ್ತೆ ಅಂತ ಹೇಳಲಾಗೋಲ್ಲ. ಆದರೆ, ಪ್ರಬುದ್ಧತೆ ಮೇಲೆ ಅದರ ಉಳಿವು, ಅಳಿವು ನಿಂತಿರುತ್ತೆ ಅನ್ನೋದು ಸತ್ಯ. ಪ್ರೀತಿ ಮೇಲೊಂದು ಲವ್ ಸ್ಟೋರಿ.
ಯಾವಾಗ ಲವ್ ಮಾಡ್ಬೇಕು? ಇಷ್ಟು ಏಜ್ ಆದಾಗ, ಇಷ್ಟು ಸಂಬಳ ಬಂದಾಗ, ಇಷ್ಟು ಸಾಧನೆ ಮಾಡಿದಾಗ? ಹೀಗೆ ಲವ್ ಯಾವಾಗ ಮಾಡ್ಬೇಕು ಅನ್ನೋದೇ ಸಾಕಷ್ಟು ಜನರ ಕನ್‌ಪ್ಯೂಶನ್! ಒಂದು ತಿಳ್ಕೊಳಿ, ಲವ್ ಮಾಡೋಕೆ, ಸಾಧಿಸೋಕೆ, ಸಂತೋಷವಾಗಿರೋಕೆ ಒಂದು ನಿರ್ದಿಷ್ಟ ಸಮಯ ಅಂತ ಇಲ್ಲ. ಅದು ಯಾವಾಗ ಯಾರಿಗಾದ್ರೂ ಒಲಿಯಬಹುದು. ಆದ್ರೆ ಅದರೆಡೆಗೆ ನಿಮ್ಮ ಪ್ರಯತ್ನ ಹೇಗಿರುತ್ತೆ ಅನ್ನೋ ಆಧಾರದ ಮೇಲೆ ಅದರ ಫಲ ನಿಮಗೆ ಸಿಗುತ್ತೆ.
ಓಕೆ, ಕೆಲವು ಉದಾಹರಣೆಗಳನ್ನು ಕೊಟ್ಟು ಹೇಳಿದ್ರೆ ಅರ್ಥವಾಗಬಹುದು, ಕಿರಣ್ ಮತ್ತು ಅರ್ಜುನ್ ಇಂಜಿನಿಯರಿಂಗ್ ಓದ್ತಾ ಇದ್ದ ಗೆಳೆಯರು. ಇಬ್ಬರೂ ಜೀವನದಲ್ಲಿ ಏನೋ ಸಾಧಿಸಬೇಕು ಅನ್ನೋ ಕನಸು ಕಟ್ಟಿಕೊಂಡೇ ಕಾಲೇಜು ಮೆಟ್ಟಿಲು ಹತ್ತಿದವರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಕಿರಣ್ ತನ್ನದೇ ಕ್ಲಾಸಿನಲ್ಲಿ ಓದ್ತಾ ಇದ್ದ ರಮ್ಯ ಅನ್ನೋ ಹುಡುಗಿಗೆ ಆಕರ್ಷಿತನಾದ. ಅವಳ ಮೇಲೆ ಅವನಿಗೆ ಲವ್ ಆಯ್ತು. ತಪ್ಪೇನಿಲ್ಲ.. ಹುಚ್ಚುಕೋಡಿ ವಯಸ್ಸು, ಲವ್ ಮಾಡಲಿ. ಆದ್ರೆ ಬೇರೆಲ್ಲಾ ಬಿಟ್ಟು ಬರೀ ಲವ್ ಮಾಡಿದ್ರೆ ಹೇಗೆ? ಅವಳ ಹಿಂದೆ ಬಿದ್ದ. ಅವಳನ್ನು ಪ್ರೀತಿಸ್ತೀನಿ ಅಂತ ಹಠ ಮಾಡಿದ. ಅವಳು ಒಪ್ಪದಿದ್ದಾಗ ಆತ್ಮಹತ್ಯೆಗೂ ಪ್ರಯತ್ನ ಮಾಡ್ದ!
ನಿಮ್ಮ ಸಂಗಾತಿಯೂ ಈ ತರ ಆಡ್ತಾರಾ? ಇನ್ನು ಲವ್ ಮಾಡೋದು ವೇಸ್ಟ್
ಮತ್ತೊಂದು ಕಡೆ ಅರ್ಜುನ್ ತಾನು ಬಂದ ಕಾರಣ ಮರೆಯದೇ ತನ್ನ ಓದಿನ ಕಡೆಗೆ ಹೆಚ್ಚಿನ ಟೈಮ್ ಕೊಟ್ಟ. ಪ್ರತಿ ಸೆಮಿಸ್ಟರ್‌ನಲ್ಲೂ ಕಾಲೇಜಿಗೆ ಟಾಪರ್ ಆದ ಸಮಯ ಸಿಕ್ಕಾಗಲೆಲ್ಲಾ ಕಿರಣ್ ಬುದ್ದಿ ಹೇಳ್ತ. ಈ ಟೈಮಲ್ಲಿ ಲವ್ ಚಿಂತೆ ಬಿಟ್ಟು ಓದೋ ಕಡೆ ಕಾನ್ಸಂಟ್ರೇಟ್ ಮಾಡು ಅಂತ ಅರ್ಥ ಮಾಡಿಸೋ ಪ್ರಯತ್ನ ಮಾಡ್ಡ. ಬಟ್ ಉಪಯೋಗ ಆಗ್ಲಿಲ್ಲ. ಇಂಜಿನಿಯರಿಂಗ್ ಮುಗಿಸಿ ಹೊರಬಂದಾಗ ಅರ್ಜುನ್ ಮತ್ತು ರಮ್ಯ ದೊಡ್ಡ ಕಂಪನಿಯೊಂದರ ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ದೊಡ್ಡ ಸಂಬಳಕ್ಕೆ ಸೆಲೆಕ್ಟ್ ಆಗಿದ್ರು. ಕಿರಣ್ ಇನ್ನೂ 4-5 ಸಬ್ಜೆಕ್ಟ್ ಬಾಕಿ ಉಳಿಸಿಕೊಂಡು ಲೈಫ್ ಹಾಳು ಮಾಡಿಕೊಂಡಿದ್ದ!
ಈಗ ಹೇಳಿ ಇಲ್ಲಿ ಯಾರು ಸರಿ? ಯಾರು ತಪ್ಪು? ಪ್ರೀತಿ ಹುಟ್ಟಿದ್ದು ತಪ್ಪಲ್ಲ, ಆದ್ರೆ ಕಿರಣ್ ಪ್ರೀತಿಗೆ ಬಿದ್ದು ತಾನು ಕಾಲೇಜು ಸೇರಿದ ಕಾರಣವನ್ನೇ ಮರೆತಿದ್ದು ತಪ್ಪು. ತನ್ನದೇ ಜೊತೆಗೆ ಬಂದ ಗೆಳೆಯ ಅರ್ಜುನ್‌ನನ್ನು ನೋಡಿಯೂ ಕಲೀದೇ ಇದ್ದಿದ್ದು ತಪ್ಪು. ತನ್ನ ಬಲವಂತದ ಪ್ರೀತಿಗೆ ರಮ್ಯಾಳಿಗೆ ಕಾಟ ಕೊಟ್ಟಿದ್ದು ತಪ್ಪು. ಅಪ್ಪ ಅಮ್ಮನ ಕನಸಿಗೆ ಕೊಳ್ಳಿ ಇಟ್ಟಿದ್ದು ತಪ್ಪು. ಅವತ್ತು ಕಿರಣ್ ಪ್ರಪೋಸಲ್ ರಮ್ಯ ನಿರಾಕರಿಸಿದಾಗ ಅವಳ ಮೇಲಿನ ಪ್ರೀತಿಯನ್ನು ಮನಸಲ್ಲೇ ಇಟ್ಟುಕೊಂಡು ಅದನ್ನು ಛಲ ಅಂತ ಸ್ವೀಕರಿಸಿ ಚೆನ್ನಾಗಿ ಓದಿ ಕ್ಯಾಂಪಸ್ ಇಂಟರ್‌ವ್ಯೂ ಪಾಸ್ ಆಗಿದ್ರೆ ಅರ್ಜುನ್, ರಮ್ಯಾ ಜೊತೆ ತಾನೂ ಲಕ್ಷ ಸಂಬಳ ಪಡೀತಿದ್ದ. ಅವಳಿಗೋಸ್ಕರ ಕಿರಣ್ ಇಷ್ಟೆಲ್ಲಾ ಮಾಡಿದ್ದು ಅಂತ ಗೊತ್ತಾಗಿ ಅವಳೇ ಒಂದು ದಿನ ಒಪ್ಪಿಕೊಂಡ್ರೂ ಒಪ್ಪಿಕೊಳ್ತಿದ್ದು ಅನ್ಸುತ್ತೆ.
ಹುಡುಗಿ ನಿಮ್ಮ ಜೊತೆ ಹೀಗೆ ವರ್ತಿಸಿದರೆ ನಿಮ್ಮ ಮೇಲೆ ಮನಸ್ಸಾಗಿದೆ ಎಂದರ್ಥ!
ಸೋ...ಇಟ್ಸ್ ಸಿಂಪಲ್. ಲವ್ ಮಾಡಿ ತಪ್ಪಲ್ಲ.. ಆದ್ರೆ ಬರೀ ಲವ್ ಮಾಡ್ಕೊಂಡಿದ್ರೆ ಲೈಫ್ (Life) ಹಾಳಾಗಿ ಹೋಗುತ್ತೆ ಹುಷಾರ್... ಪ್ರೀತಿ (Love) ಅನ್ನೋದು ಒತ್ತಾಯ ಮಾಡಿ ಪಡೆಯೋ ಭಾವನೆ ಅಲ್ಲ. ಅದು ಒಂದು ವಸ್ತುವೂ ಅಲ್ಲ.. ಪ್ರೀತಿ ಗೆಲ್ಲೋಕೆ ಪ್ರೀತಿ ಒಂದಿದ್ರೆ ಸಾಲಲ್ಲ.. ಅದಕ್ಕೆ ಹಠ ಬೇಕು, ಛಲ ಬೇಕು, ಸಾಧಿಸೋ ಹಂಬಲ ಇರಬೇಕು. ಪ್ರೀತಿಸದವಳನ್ನು ನೂರ್ಕಾಲ ಚೆನ್ನಾಗಿ ನೋಡಿಕೊಳ್ಳೋ ಕನಸುಗಳ ಬೀಜ ಬಿತ್ತಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಯಾವಾಗ ಲವ್ ಮಾಡಬೇಕು ಅನ್ನೋದು ಗೊತ್ತಿರಬೇಕು! ಇವತ್ತು ಭಾರತದಲ್ಲಿ 30-40 ಪರ್ಸೆಂಟ್ ಕಾಲೇಜು ಹುಡುಗ ಹುಡುಗೀರು ಲವ್‌ಗೆ ಬೀಳ್ತಾರೆ. ಅದರಲ್ಲಿ ಸಕ್ಸಸ್‌ಫುಲ್ ಲವ್ ಸ್ಟೋರಿಗಳು (Successful Love Stories) ತುಂಬಾ ಅಂದ್ರೆ ತುಂಬಾ ಕಮ್ಮಿ. ಆದ್ರೆ ಆ ಕಾಲೇಜು ದಿನಗಳ ಆಕರ್ಷಣೆ ನಿಮ್ಮ ಕನಸು, ಸಾಧಿಸೋ ಛಲಕ್ಕೆ ಕೊಳ್ಳಿ ಇಟ್ಟಿರುತ್ತೆ. ನಿಮ್ಮ ಬದುಕು ಹೀಗಾಗದಿರಲಿ. ಸಿಗಬೇಕಾದ ಪ್ರೀತಿ ಸಿಕ್ಕೇ ಸಿಗುತ್ತೆ.. ಅದರ ಬೆನ್ನು ಹತ್ತಿ ನೀವು ಹೋಗೋ ಅವಶ್ಯಕತೆ ಇಲ್ಲ. ಅದೇ ನಿಮ್ಮನ್ನು ಒಲಿದು ಬರುತ್ತೆ.. ಜಸ್ಟ್ ಕೀಪ್ ಗ್ರೋಯಿಂಗ್. ಅಷ್ಟೆ...