ಹುಡುಗಿ ನಿಮ್ಮ ಜೊತೆ ಹೀಗೆ ವರ್ತಿಸಿದರೆ ನಿಮ್ಮ ಮೇಲೆ ಮನಸ್ಸಾಗಿದೆ ಎಂದರ್ಥ!

ಜೊತೆಗೇ ಓಡಾಡೋ ಹುಡುಗಿ ನಿಜಕ್ಕೂ ತನ್ನನ್ನು ಇಷ್ಟಪಡ್ತಾಳಾ ಇಲ್ಲವಾ ಅನ್ನೋ ಡೌಟ್ ಬಹಳ ಮಂದಿ ಹುಡುಗರಿಗೆ ಇರುತ್ತೆ. ಹುಡುಗಿಯರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವಳಿಗೆ ನಿಮ್ಮ ಬಗ್ಗೆ ಆಕರ್ಷಣೆ ಇದೆಯೋ ತಿಳಿಯುತ್ತದೆ.

 

Girls behaviour indicates their love

ಹೆಣ್ಣು ಅಂದರೆ ಅರ್ಥವೇ ಆಗದ ಒಗಟು. ಅವಳನ್ನು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟ. ಅವಳಿಗೆ ತನ್ನ ಮೇಲೆ ಮನಸ್ಸಿದೆಯೋ ಇಲ್ಲವೋ ಅನ್ನೋದೇ ಎಷ್ಟೋ ಹುಡುಗರ ನಿದ್ದೆಯನ್ನು ಕಸಿದುಕೊಂಡಿದೆ. ಆದರೆ ತುಂಟ ಹುಡುಗೀರು ಅವರ ಅವರ ನಿದ್ದೆಯನ್ನು ಕದಿಯುತ್ತಲೇ ಇರುತ್ತಾರೆಯೇ ಹೊರತು ತಮ್ಮ ಮನಸ್ಸಲ್ಲಿ ಏನಿದೆ ಅನ್ನೋದನ್ನು ಎಲ್ಲೂ ಬಿಟ್ಟು ಕೊಡರು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಇದು ಕಷ್ಟವಲ್ಲ. ಹುಡುಗಿಯರು ಸಾಮಾನ್ಯವಾಗಿ ತಾವು ಆಕರ್ಷಿತರಾದ ಹುಡುಗರೊಂದಿಗೆ ಮಾತ್ರ ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಕೆಲವೊಮ್ಮೆ ಈ ಭಾವನೆಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಆದರೆ ಬಹುತೇಕ ಹುಡುಗಿಯರಲ್ಲಿ ಸಾಮಾನ್ಯವಾಗಿರುವ ಗುಣ. ಈ ರೀತಿಯ ಭಾವನೆಗಳ ಮೂಲಕ ಹುಡುಗಿಯರು ಹುಡುಗರನ್ನು ಕಂಡರೆ ಅವರು ಆ ಹುಡುಗರತ್ತ ಆಸಕ್ತರಾಗಿದ್ದಾರೆ ಅಂತ ಅರ್ಥ ಮಾಡಿಕೊಳ್ಳಬಹುದು.

ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಕಂಡು ಹಿಡಿಯಬಹುದು. ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಯಾರಿಗೂ ಕೂಡ ಸಾಧ್ಯವಾಗಿಲ್ಲ ಅನ್ನೋದು ಹಳೆಯ ಮಾತು. ಇದು ಸತ್ಯ ಅಂತ ಬಹಳ ಮಂದಿ ಹೇಳುತ್ತಾರೆ. ಹುಡುಗಿಯರನ್ನು ಕೇಳಿದರೆ ಈ ಮಾತು ಪೂರ್ತಿ ನಿಜವ್ಲ ಅಂತಾರೆ. ಆದರೆ ಹುಡುಗರು ಈ ವಿಚಾರ ಬಂದಾಗ ಯಾವಾಗಲೂ ಗೊಂದಲಕ್ಕೆ ಒಳಗಾಗುತ್ತಾರೆ. ಜಗತ್ತಿನಲ್ಲಿ ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಅಂದುಕೊಳ್ಳುವ ಪುರುಷರಿಗೆ, ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎಂದು ಮಾತ್ರ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಗೂ ಮಹಿಳೆಯರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲವಿದೆ.

ಆದರೆ ಹುಡುಗಿಯರು ಸಾಮಾನ್ಯವಾಗಿ ತಾವು ಆಕರ್ಷಿತರಾದ ಹುಡುಗರೊಂದಿಗೆ ಮಾತ್ರ ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಅದು ಕಷ್ಟವಲ್ಲ. ಅವರು ನೋ ಅಂದರೆ ಯೆಸ್‌ ಅಂತಲೇ ಅರ್ಥವಾ ಅಥವಾ ನೋ ಅನ್ನೋ ಅಥವೇನ ಅನ್ನೋದನ್ನು ಮೊದಲು ಗಮನಿಸಬೇಕು.

Zodiac Sign: ವಯಸ್ಸಾದವರ ಕಾಳಜಿ ಮಾಡೋಕೆ ಇವರು ಎತ್ತಿದ ಕೈ: ಇವರ ಸಮೀಪವರ್ತಿಗಳೇ ಧನ್ಯರು

ಇನ್ನೊಂದು ಮುಖ್ಯವಾದ ಅಂಶ ಅಂದರೆ ಹೆಣ್ಮಕ್ಕಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು(Limitations) ಆಕರ್ಷಿತರಾದ ಪುರುಷರಿಗೆ ಬಹಿರಂಗವಾಗಿ ಹೇಳುತ್ತಾರೆ. ವ್ಯಕ್ತಿ ಏನು ಅಂದುಕೊಳ್ಳುತ್ತಾರೋ ಎಂಬುವುದನ್ನು ಕೂಡ ಚಿಂತಿಸದೇ ಅವರ ಎಲ್ಲಾ ಭಯ, ಅಭದ್ರತೆ ಮತ್ತು ಅನುಮಾನಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಈ ರೀತಿ ಹೇಳಿಕೊಳ್ಳುವುದು ಹುಡುಗಿಗೆ ನಿಮ್ಮ ಮೇಲೆ ಸಾಕಷ್ಟು ನಂಬಿಕೆ ಇದೆ ಎಂಬುದರ ಸಂಕೇತವಾಗಿದೆ.

ನಿಮ್ಮನ್ನು ಇಷ್ಟಪಡುವ ಹುಡುಗಿಯರು(Girls) ನಿಮ್ಮ ಜೊತೆಗೆ ಹೆಚ್ಚು ಸಮಯ ಕಳೆಯಲು ಸಿದ್ಧರಿರುತ್ತಾರೆ. ತನ್ನಿಷ್ಟದ ಹುಡುಗನ ಜೊತೆಗೆ ಡೇಟ್‌ಗೆ(Date) ಹೋಗುವುದು, ಸಿನಿಮಾಗೆ ಹೋಗುವುದು ಅಥವಾ ಸುಮ್ಮನೆ ಆತನ ಜೊತೆಗೆ ಇರುವುದು ಮತ್ತು ಅವನ ಉಪಸ್ಥಿತಿಯನ್ನು ಆನಂದಿಸುವುದು ಮುಂತಾದ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಾರೆ. ಇದು ಸಂಬಂಧವನ್ನು ಗಟ್ಟಿಗೊಳಿಸುವುದು ಮಾತ್ರವಲ್ಲದೇ ಇದು ಹೆಚ್ಚಿನ ಭಾವನಾತ್ಮಕ ಸಂತೋಷವನ್ನು ನೀಡುತ್ತದೆ.

ಹುಡುಗಿಯರು ಯಾವಾಗಲೂ ತಾವು ಇಷ್ಟಪಡುವ ಪುರುಷರಿಗೆ ದೈಹಿಕವಾಗಿ ಹತ್ತಿರವಾಗಲು ಬಯಸುತ್ತಾರೆ. ಆಗಾಗ್ಗೆ ಸ್ಪರ್ಶಿಸುವುದು, ಮೈ ಮುಟ್ಟುವುದು ಈ ಎಲ್ಲಾ ಪ್ರಮುಖ ಸಂಕೇತಗಳು ವ್ಯಕ್ತಿಗೆ ತುಂಬಾ ಹತ್ತಿರವಾಗಲು ಇಷ್ಟಪಡುತ್ತಿದ್ದಾರೆ ಎಂದರ್ಥ. ಅದರಲ್ಲಿಯೂ ಕೈ ಹಿಡಿದುಕೊಳ್ಳುವುದು ಮತ್ತು ಅಪ್ಪಿಕೊಳ್ಳುವುದು ಹೆಚ್ಚು ಪ್ರೀತಿಯನ್ನು ವ್ಯಕ್ತಪಡಿಸುವುದಾಗಿದೆ.

ತಾವು ಇಷ್ಟಪಟ್ಟ ವ್ಯಕ್ತಿ ಕುಗ್ಗಿದಾಗ ಆತನೊಂದಿಗೆ ಇರಲು ಬಯಸುತ್ತಾರೆ. ಆತನ ಕಷ್ಟದ ಸಮಯದಲ್ಲಿ ಅವನಿಗೆ ಏನಾಯಿತು ಎಂದು ಕೇಳುತ್ತಾರೆ ಮತ್ತು ಅವನಿಗೆ ಪ್ರೋತ್ಸಾಹದ ಮಾತುಗಳನ್ನು ಆಡಿ ಬೆಂಬಲಿಸುತ್ತಾರೆ. ಮತ್ತೆ ವ್ಯಕ್ತಿಯನ್ನು ಮೊದಲಿನ ಸ್ಥಿತಿಗೆ ತರಲು ಪ್ರಯತ್ನಿಸುತ್ತಾರೆ. ಕಷ್ಟದ ಸಮಯದಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸುವುದರಿಂದ ಇಬ್ಬರ ನಡುವೆ ಪ್ರೀತಿ(Love) ಹೆಚ್ಚಾಗುತ್ತದೆ.

ಇವೆಲ್ಲ ಅಂಶಗಳನ್ನು ನಿಮ್ಮ ಹುಡುಗಿ ಫಾಲೋ ಮಾಡ್ತಿದ್ರೆ ನೀವು ಒಂದು ಹೆಜ್ಜೆ ಮುಂದಿಡಬಹುದು. ಆಕೆ ನಿಮ್ಮನ್ನು ಇಷ್ಟಪಡುತ್ತಾಳೆ ಅಂದುಕೊಳ್ಳಬಹುದು.

'ಇವಳು ಭಯಂಕರಿ ಸುಂದ್ರಿ' ಅಂದ್ರು ಆನಂದ್‌ ಮಹೀಂದ್ರಾ: ಅದ್ಯಾವ ಹೆಣ್ಣಿಗೆ ಈ ಹೊಗಳಿಕೆ?

Latest Videos
Follow Us:
Download App:
  • android
  • ios