Love Tips: ಪ್ರೀತಿ ಮಾಡಿ ತಪ್ಪೇನಿಲ್ಲ, ನಿಮ್ಮತನವನ್ನು ಬಿಟ್ಟು ಕೊಡ್ಬೇಡಿ
ಪ್ರೀತಿಸುವುದು ಸರಿ. ಆದ್ರೆ ಪ್ರೀತಿಗಾಗಿ ಯಾವತ್ತೂ ನಿಮ್ಮತನವನ್ನು ಬಿಟ್ಟು ಕೊಡಬೇಡಿ. ಸಂಬಂಧದಲ್ಲಿ ನಿಮ್ಮನ್ನು ಕಳೆದುಕೊಳ್ಳುವ ಭಾವನೆ ಅತ್ಯಂತ ಅಹಿತಕರವಾಗಿದೆ. ಹಾಗಿದ್ರೆ ಪ್ರೀತಿಯಲ್ಲಿ ಕಮಿಟ್ ಆಗಿದ್ದಾಗ ಹೇಗಿರಬೇಕು, ಹೇಗಿರಬಾರದು ಇಲ್ಲಿದೆ ಮಾಹಿತಿ.
ಪ್ರೀತಿಯೆಂಬುದು ಒಂದು ಅತ್ಯದ್ಭುತ ಅನುಭವವಾಗಿದೆ. ಪ್ರೀತಿಯಲ್ಲಿರುವಾಗ ಸುತ್ತಲಿನ ಪ್ರಪಂಚ ತುಂಬಾ ಸುಂದರವಾಗಿ ಕಾಣುತ್ತದೆ. ಎಲ್ಲಾ ತಪ್ಪುಗಳು ಸರಿಯೆನಿಸುತ್ತವೆ. ಆಹಾರವು ಉತ್ತಮ ರುಚಿಯನ್ನು ನೀಡುತ್ತದೆ. ಆಡುವ ಎಲ್ಲಾ ಮಾತುಗಳು ಹಿತವಾಗಿರುತ್ತದೆ. ಸಂಗೀತವು ಸುಮಧುರವಾಗಿ ಕಾಣಿಸುತ್ತದೆ. ಪ್ರೀತಿಯ ಮೋಡಿಯೇ ಅಂಥದ್ದು. ಪ್ರೀತಿ ಮೈ ಮರೆಯುವಂತೆ ಮಾಡುತ್ತದೆ. ಪ್ರೀತಿಸಿದವರಿಗಾಗಿ ಏನು ಮಾಡಲೂ ಸಿದ್ಧ ಎಂಬ ಮನಸ್ಥಿತಿಯನ್ನು ತರುತ್ತದೆ. ಆದ್ರೆ ಪ್ರೀತಿ ಎಂದ ಮಾತ್ರಕ್ಕೆ ಪ್ರೀತಿಸಬೇಕಷ್ಟೇ ವ್ಯಕ್ತಿತ್ವವನ್ನೇ ಕಳೆದುಕೊಳ್ಳಬೇಕಾಗಿಲ್ಲ. ವ್ಯಕ್ತಿತ್ವ ಕಳೆದುಕೊಂಡು ಪ್ರೀತಿಸಿದರೆ ಅದು ಪ್ರೀತಿಯೇ ಅಲ್ಲ. ಮನೋವಿಜ್ಞಾನಿ ಮತ್ತು ಹೋಪ್ ವೆಲ್ ಕೌನ್ಸೆಲಿಂಗ್ ಸೇವೆಗಳ ಸಹ ಸಂಸ್ಥಾಪಕರಾದ ಡಾ.ಫೌಜಿಯಾ ಮಸೂದ್ ಅವರ ಪ್ರಕಾರ, ಸಂಬಂಧಕ್ಕಾಗಿ ನೀವು ಎಂದಿಗೂ ತ್ಯಾಗ ಮಾಡದ ಕೆಲವು ವಿಷಯಗಳು ಇಲ್ಲಿವೆ.
1. ತುಂಬಾ ಉದಾರವಾಗಿರುವುದನ್ನು ನಿಲ್ಲಿಸಿ: ಅತಿಯಾಗಿ ಕೊಡುವ ಅಭ್ಯಾಸ ಯಾವ ಸಂಬಂಧದಲ್ಲೂ ಒಳ್ಳೆಯದಲ್ಲ. ನಮ್ಮ ಸಂಬಂಧಕ್ಕೆ ನಾವು ಹೆಚ್ಚು ಪ್ರೀತಿಯನ್ನು ನೀಡುತ್ತೇವೆ, ಪ್ರತಿಯಾಗಿ ನಾವು ಹೆಚ್ಚು ಪ್ರೀತಿ (Love)ಯನ್ನು ಪಡೆಯುತ್ತೇವೆ ಎಂದು ನಾವು ಭಾವಿಸುತ್ತೇವೆ. ದುರದೃಷ್ಟವಶಾತ್, ಅದು ಯಾವಾಗಲೂ ಆ ರೀತಿ ಕಾರ್ಯನಿರ್ವಹಿಸುವುದಿಲ್ಲ. ದೀರ್ಘಾವಧಿಯಲ್ಲಿ, ಇದು ಅಸಮಾಧಾನವನ್ನು ಸೃಷ್ಟಿಸಲು ಕಾರಣವಾಗುತ್ತದೆ. ಅಸಮಾಧಾನವು ಸಂಬಂಧದ ಸಂತೋಷ ಮತ್ತು ಬಾಳಿಕೆ ನಿರ್ಧರಿಸುವ ಅಂಶವಾಗಿದೆ. ನೀವು ಸಂಬಂಧದಲ್ಲಿ ಹೆಚ್ಚು ಪ್ರೀತಿಯನ್ನು ನೀಡಿದಾಗ, ನೀವು ನಿಮ್ಮನ್ನು ಕಳೆದುಕೊಳ್ಳುವ ಅಪಾಯವನ್ನು ಹೊಂದಿರುತ್ತೀರಿ. ಜೊತೆಗೆ ಸಂಬಂಧವನ್ನು ಸಹ ಕಳೆದುಕೊಳ್ಳುತ್ತೀರಿ.
ಯಾವ ಹುಡುಗೀನೂ ಇಷ್ಟ ಪಡ್ತಿಲ್ಲಾಂತ ಗೋಳಾಡ್ಬೇಡಿ, ಹೀಗೆ ಇಂಪ್ರೆಸ್ ಮಾಡಿ
2. ಮೆಚ್ಚಿನ ಹವ್ಯಾಸಗಳನ್ನು ಮರೆತುಬಿಡಬೇಡಿ: ಸಂಬಂಧದಲ್ಲಿ ಇದ್ದ ಮಾತ್ರಕ್ಕೆ ನಿಮ್ಮ ನೆಚ್ಚಿನ ಹವ್ಯಾಸ (Habit)ಗಳನ್ನು ಬಿಟ್ಟು ಕೊಡಬೇಕಾಗಿಲ್ಲ. ಪಾಲುದಾರರ ಭಾಗವಹಿಸುವಿಕೆ ಇಲ್ಲದೆ ನಿಮ್ಮೊಂದಿಗೆ ಮತ್ತು ನಿಮ್ಮ ಸ್ವಂತ ಆಸಕ್ತಿಗಳೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸಿ. ಬಹುಶಃ ನೀವು ಶಾಸ್ತ್ರೀಯ ನೃತ್ಯವನ್ನು ಆನಂದಿಸಬಹುದು ಆದರೆ ನಿಮ್ಮ ಸಂಗಾತಿ ಇಷ್ಟಪಡುವುದಿಲ್ಲ. ನಿಮ್ಮ ಸಂಗಾತಿಯ ಭಾಗವಹಿಸುವಿಕೆ ಇಲ್ಲದೆ ನಿಮ್ಮ ಮತ್ತು ನಿಮ್ಮ ಸ್ವಂತ ಹವ್ಯಾಸಗಳೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸಿ.
3. ಅತೃಪ್ತ ಸಂಬಂಧದಲ್ಲಿ ಇರಬೇಡಿ: ಸಾಂದರ್ಭಿಕವಾಗಿ, ಒಬ್ಬಂಟಿಯಾಗಿರುವ (Alone) ಭಯವು ನಿಜವಾದ ಸಂತೋಷಕ್ಕಾಗಿ ನಮ್ಮ ಬಯಕೆಗಿಂತ ಹೆಚ್ಚಾಗಿರುತ್ತದೆ. ಪರಿಣಾಮವಾಗಿ, ನಮ್ಮ ಅತ್ಯುತ್ತಮ ಗುಣಗಳನ್ನು ಹೊರತರದ ಪಾಲುದಾರಿಕೆಯಲ್ಲಿ ನಾವು ಮುಂದುವರಿಯುತ್ತೇವೆ. ಅಪರಿಚಿತರ ಭಯದಿಂದ ನಾವು ಸಾಧಾರಣ ಸಂಬಂಧಗಳಲ್ಲಿ ಇರುತ್ತೇವೆ, ಆದ್ದರಿಂದ ನಾವು ನಮಗೆ ಅಪಾರ ಹಾನಿ ಮಾಡಿಕೊಳ್ಳುತ್ತೇವೆ. ನಮಗೆ ಒಂದೇ ಜೀವನವಿದೆ, ಆದ್ದರಿಂದ ಅತೃಪ್ತ ಸಂಬಂಧದಲ್ಲಿ ಅದನ್ನು ಹಾಳು ಮಾಡದಿರಲು ಪ್ರಯತ್ನಿಸಿ. ನಿಮ್ಮ ಸಂತೃಪ್ತಿಯನ್ನು ಕೊಡದ, ಮನಸ್ಥಿತಿಯನ್ನು ಹಾಳುಮಾಡುವ ದೀರ್ಘಾವಧಿಯ ಸಂಬಂಧವನ್ನು ಬಿಟ್ಟುಬಿಡಿ. ನೀವು ಏಕೆ ಅತೃಪ್ತಿ ಹೊಂದಿದ್ದೀರಿ ಎಂದು ನಿಮ್ಮನ್ನು ಕೇಳಿಕೊಳ್ಳಿ ಮತ್ತು ನಿಮ್ಮ ಪ್ರಸ್ತುತ ಸಂಬಂಧವು ಅದರೊಂದಿಗೆ ಏನಾದರೂ ಸಂಬಂಧ ಹೊಂದಿದೆಯೇ ಎಂದು ಪರಿಗಣಿಸಿ.
ಲವ್ ಮಾಡಿದ್ರೆ ಸಾಲ್ದು, ಬ್ರೇಕಪ್ ಆಗ್ಬಾರ್ದು ಅಂದ್ರೆ ಹೀಗೆಲ್ಲಾ ಮಾಡ್ಬೇಕು !
4. ಆರ್ಥಿಕ ಮತ್ತು ವೈಯಕ್ತಿಕ ಸ್ವಾತಂತ್ರ್ಯ: ಸಂಬಂಧ (Relationship)ದಲ್ಲಿರುವ ಅನುಭವವು ಸಂತೋಷದಾಯಕ ಮತ್ತು ಪ್ರೀತಿಯಿಂದ ಕೂಡಿರುತ್ತದೆ. ಹೀಗಿದ್ದೂ ಆರ್ಥಿಕ ಮತ್ತು ವೈಯುಕ್ತಿಕ ಸ್ವಾತಂತ್ರ್ಯ ಹೊಂದಿರುವುದು ಮುಖ್ಯ. ಹೀಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಹೊಂದಿರಿ.
5. ಯಾರಿಗಾಗಿಯೂ ಬದಲಾಡಬೇಡಿ: ಪ್ರೇಮಿ ನೀವು ಬದಲಾಗಬೇಕೆಂದು ಬಯಸಿದರೆ, ಅದಕ್ಕೆಲ್ಲದ್ದಕ್ಕೂ ಸಿದ್ಧರಾಗಬೇಡಿ. ಪ್ರೀತಿಯೆಂದರೆ ನಾವು ಯಾರಿಗಾದರೂ ಬದಲಾಗಬೇಕು ಎಂಬುದು ಅರ್ಥವಲ್ಲ. ನಾವೆಲ್ಲರೂ ನಮ್ಮದೇ ಆದ ವಿಶೇಷತೆಗಳು ಮತ್ತು ದೌರ್ಬಲ್ಯಗಳನ್ನು ಹೊಂದಿದ್ದೇವೆ. ಇದನ್ನು ಅನುಸರಿಸಿಕೊಂಡು ಹೋಗುವುದೇ ಪ್ರೀತಿ. ಬದಲಾಗಿ ಕಾಂಪ್ರಮೈಸ್ ಮಾಡಿಕೊಳ್ಳುವುದಲ್ಲ.