ಯಾವ ಹುಡುಗೀನೂ ಇಷ್ಟ ಪಡ್ತಿಲ್ಲಾಂತ ಗೋಳಾಡ್ಬೇಡಿ, ಹೀಗೆ ಇಂಪ್ರೆಸ್ ಮಾಡಿ
ಪ್ರೀತಿಯೆಂಬ ಮಧುರ ಭಾವನೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಹುಡುಗರು ಮಾತ್ರ ಯಾವ ಹುಡುಗೀನಾ ನಮ್ಮನ್ನು ಕಣ್ಣೆತ್ತಿಯೂ ನೋಡ್ತಿಲ್ವಲ್ಲಪ್ಪಾ ಅಂತ ಬೇಜಾರಲ್ಲೇ ಇರ್ತಾರೆ. ಡೋಂಟ್ ವರಿ ಹುಡುಗೀರನ್ನು ಇಂಪ್ರೆಸ್ ಮಾಡೋದು ಹೇಗೆ ನಾವ್ ಹೇಳ್ತೀವಿ.
ನಾವು ಇಷ್ಟಪಡುವ ವ್ಯಕ್ತಿ ನಮ್ಮನ್ನು ಮರಳಿ ಇಷ್ಟಪಡದಿದ್ದಾಗ ನಾವು ನಿಜವಾಗಿಯೂ ನಿರಾಶೆಗೊಳ್ಳುತ್ತೇವೆ. ಹುಡುಗಿಯನ್ನು ಮೆಚ್ಚಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಕಾಲ್, ಮೆಸೇಜ್. ಉಡುಗೊರೆಗಳನ್ನು ನೀಡುತ್ತವೆ. ಹೀಗಿದ್ದೂ ಆಕೆ ನೀವು ಅವಳ ಪ್ರೀತಿಗೆ ಅರ್ಹರು ಎಂದು ಭಾವಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವೇನು ಮಾಡಬಹುದು ? ಹುಡುಗೀರನ್ನು ಲವ್ ಮಾಡೋ ಕತೆ ಹಾಗಿರ್ಲಿ. ಕೆಲವೊಬ್ಬರು ತಲೆಯೆತ್ತಿ ಸಹ ನೋಡಲ್ಲ. ಮತ್ತೆ ಇಂಪ್ರೆಸ್ ಮಾಡೋದು ಹೇಗೆ ಅನ್ನೋದು ಹಲವು ಹುಡುಗರ ಗೋಳು. ಹುಡುಗಿಯರ ಮನಸ್ಸು ಗೆಲ್ಲಲ್ಲು, ಅವರನ್ನು ಇಂಪ್ರೆಸ್ ಮಾಡಲು ಇಲ್ಲಿದೆ ಕೆಲವೊಂದು ಸಿಂಪಲ್ ಟಿಪ್ಸ್.
ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಿರಲಿ: ಹುಡುಗಿ ಮಾತ್ರವಲ್ಲ ಯಾರಾದರೂ ಸಹ ನಿಮ್ಮನ್ನು ಇಷ್ಟಪಡಬೇಕಾದರೆ ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಿರಬೇಕು. ಅಂಜಿಕೆಯಿಲ್ಲದೆ ಧೈರ್ಯವಾಗಿ ಸ್ಪಷ್ಟವಾಗಿ ಮಾತನಾಡುವುದು, ನೇರವಾಗಿ ನಡೆಯುವುದು ನಿಮ್ಮ ಅಭ್ಯಾಸವಿರಲಿ. ಸುಳ್ಳು ಹೇಳುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಏನಿದ್ದರೂ ನೇರಾನೇರ ಮಾತನಾಡಿ. ಎಲ್ಲರಿಗೂ ಗೌರವ (Respect) ನೀಡಿ. ನಿಮ್ಮ ಮನಸ್ಸಿನ ಮಾತನ್ನು ನೀವು ಯಾರಿಗಾದರೂ ಹೇಳಲು ಬಯಸಿದರೆ, ಮೊದಲು ಆತ್ಮವಿಶ್ವಾಸದಿಂದಿರಿ. ನಾಚಿಕೆ ಸ್ವಭಾವದವರಲ್ಲಿ ನೀವೂ ಒಬ್ಬರಾಗಿದ್ದರೆ ಅದು ನಿಮಗೆ ಒಳ್ಳೆಯದಲ್ಲ. ಹೆಚ್ಚಿನ ಹುಡುಗಿಯರು ಉತ್ತಮ ಆತ್ಮವಿಶ್ವಾಸವನ್ನು (Confidence) ಹೊಂದಿರುವ ಹುಡುಗರನ್ನು ಇಷ್ಟಪಡುತ್ತಾರೆ. ಹಾಗಾಗಿ ಯಾವಾಗಲೂ ಆತ್ಮವಿಶ್ವಾಸದಿಂದಿರಿ. ಇಂಥಾ ಉತ್ತಮ ಗುಣಗಳು ನಿಮ್ಮ ವ್ಯಕ್ತಿತ್ವವನ್ನು ಆಕರ್ಷಕಗೊಳಿಸುತ್ತವೆ.
ಹುಡುಗ್ರು ಕಳಿಸೋ ಮೆಸೇಜ್‌ಗೆ ಹುಡುಗೀರು ಲೇಟ್ ರಿಪ್ಲೆ ಮಾಡೋದೇಕೆ?
ನೀಟಾಗಿ ಡ್ರೆಸ್ ಮಾಡಿ: ಹುಡುಗರು (Boys) ಹುಡುಗಿಯರನ್ನು ಇಂಪ್ರೆಸ್ ಮಾಡಲು ಎಷ್ಟೆಲ್ಲಾ ಕಸರತ್ತು ಮಾಡುತ್ತಾರೆ ಎನ್ನುವುದು ನಿಮಗೆ ಗೊತ್ತೇ ಇದೆ. ತಾವು ಇಷ್ಟಪಟ್ಟ ಹುಡುಗಿಯನ್ನು ಒಲಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೂ ಕೆಲವು ಹುಡುಗರಿಗೆ ಇದು ಬಹಳ ಸುಲಭ ಆದ್ರೆ ಇನ್ನೂ ಕೆಲವರಿಗೆ ಇದು ಸಿಕ್ಕಾಪಟ್ಟೆ ಕಷ್ಟವಾಗಿರುತ್ತದೆ. ಹುಡುಗಿಯರನ್ನು (Girls) ಆಕರ್ಷಿಸಲು ಮುಖ್ಯವಾಗಿ ನೀಟಾಗಿ ರೆಡಿಯಾಗುವುದು ಮುಖ್ಯ. ಕೆದರಿದ ಕೂದಲು, ಐರನ್ ಮಾಡದ ಶರ್ಟ್ ಹೀಗೆ ಒಟ್ಟಾರೆ ಡ್ರೆಸ್ ಮಾಡುವವರು ಯಾವ ಹುಡುಗಿಗೂ ಇಷ್ಟವಾಗುವುದಿಲ್ಲ. ಹೀಗಾಗಿ ಯಾವಾಗಲೂ ಗರಿಗರಿಯಾಗಿ ಐರನ್ ಮಾಡಿದ ಪ್ಯಾಂಟ್, ಶರ್ಟ್ ಧರಿಸಿ. ಕೂದಲನ್ನು ಟ್ರೆಂಡ್‌ಗೆ ತಕ್ಕಂತೆ ಒಪ್ಪವಾಗಿ ಬಾಚಿಕೊಳ್ಳಿ.
ಸ್ವಚ್ಛತೆ ಅತ್ಯಗತ್ಯ: ಹುಡುಗಿಯರು ಸ್ವಚ್ಛತೆಗೆ ಅತಿ ಹೆಚ್ಚು ಆದ್ಯತೆ ಕೊಡುತ್ತಾರೆ. ಆದರೆ ಅನೇಕ ಹುಡುಗರು ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದಿಲ್ಲ. ಬೇಕಾಬಿಟ್ಟಿ ಇರುತ್ತಾರೆ. ನೀವೂ ಕೂಡ ಅಂತಹವರಾಗಿದ್ದರೆ ಈ ಅಭ್ಯಾಸವನ್ನು ಕೂಡಲೇ ಬದಲಿಸಿಕೊಳ್ಳಿ. ಯಾಕೆಂದರೆ ಹುಡುಗಿಯರು ಅಂತಹ ಹುಡುಗರನ್ನು ಇಷ್ಟಪಡುವುದಿಲ್ಲ. ಹುಡುಗಿಯರಿಗೆ ಸ್ವಚ್ಛವಾಗಿರುವ ಹುಡುಗರು, ಪ್ರತಿದಿನ ಶುಚಿಯಾದ ಬಟ್ಟೆ ಧರಿಸುವ, ತಮ್ಮ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವ ಹುಡುಗರು ಇಷ್ವವಾಗುತ್ತಾರೆ.
Loveಗೆ ಕಣ್ಣಿಲ್ಲವೆಂತಾರೆ, ಆದರೆ ಈ ಪ್ರೀತಿ ಗೀತಿ ಹೀಗೂ ಹುಟ್ಟುತ್ತಾ?
ಗಮನ ಕೊಡಿ ಮತ್ತು ಉತ್ತಮ ಕೇಳುಗರಾಗಿರಿ: ಯಾರಾದರೂ ತನ್ನ ಮಾತನ್ನು ಪೂರ್ಣ ಗಮನದಿಂದ ಕೇಳಿದಾಗ ಹುಡುಗಿ ಅದನ್ನು ಯಾವಾಗಲೂ ಗೌರವಿಸುತ್ತಾಳೆ. ಇತ್ತೀಚಿನ ದಿನಗಳಲ್ಲಿ, ಗೆಳತಿಗೆ ಉಡುಗೊರೆಗಳನ್ನು ಕೊಡುವ ಮೂಲಕ ಅವರನ್ನು ಇಂಪ್ರೆಸ್ ಮಾಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಹೆಚ್ಚಿನ ಹುಡುಗಿಯರು ಕೆಲಸ ಮಾಡುತ್ತಾರೆ. ಹೀಗಾಗಿ ತಮಗೆ ಬೇಕೆನಿಸಿದ್ದನ್ನು ಖರೀದಿಸಲು ಶಕ್ತರಾಗಿರುತ್ತಾರೆ. ಆದ್ದರಿಂದ ಮನಸ್ಸಿಟ್ಟು ಅವಳ ಮಾತನ್ನು ಕೇಳುವ ಅಭ್ಯಾಸ ರೂಢಿಸಿಕೊಳ್ಳಿ. ಇದು ಆಕೆಗೆ ಅತ್ಯಂತ ಆಪ್ತ ಉಡುಗೊರೆಯೆನಿಸಿಕೊಳ್ಳುತ್ತದೆ. ತಾವು ಸ್ಪೆಷಲ್ ವ್ಯಕ್ತಿಯೆಂಬ ಭಾವನೆಯನ್ನು ಮೂಡಿಸುತ್ತದೆ.