#Feelfree: ವೀರ್ಯದ್ರವ ಸಾಕಷ್ಟಿದೆ, ಆದರೆ ವೀರ್ಯವಿಲ್ಲ!

ವೀರ್ಯದ್ರವ ಇದ್ದರೂ ವೀರ್ಯಾಣು ಇಲ್ಲ ಎಂಬ ಸಮಸ್ಯೆ ಪುರುಷರಲ್ಲಿ ಯಾಕೆ ಉಂಟಾಗುತ್ತದೆ? ಇದಕ್ಕೆ ಪರಿಹಾರವೇನು?

What if one suffers from azoospermia

ಪ್ರಶ್ನೆ: ನಾನು ವಿವಾಹಿತೆ. ಮದುವೆಯಾಗಿ ಐದು ವರ್ಷವಾಗಿದೆ. ಗಂಡನಿಗೆ ಮೂವತ್ತು, ನನಗೆ ಇಪ್ಪತ್ತೈದು. ಮದುವೆಯಾಗಿ ಮೂರನೇ ವರ್ಷದಿಂದ ಮಗು ಪಡೆಯಲು ಯತ್ನಿಸಿದೆವು. ಅಂದಿನಿಂದ ಇಂದಿನವರೆಗೂ ಯಾವುದೇ ಗರ್ಭಧಾರಣೆ ತಡೆಯುವ ವಿಧಾನಗಳನ್ನು ಬಳಸಿಲ್ಲ. ಪರ್ಯಾಯ ದಿನಗಳಂದು ಹಾಗೂ ನನ್ನ ಋತುಚಕ್ರದ ಮಧ್ಯದ ದಿನಗಳಲ್ಲಿ ಸೇರುತ್ತೇವೆ. ನಾನು ಹಾಗೂ ನನ್ನ ಗಂಡ ಆರೋಗ್ಯವಾಗಿದ್ದೇವೆ. ಯಾವ ಅನಾರೋಗ್ಯ, ಅಸೌಖ್ಯ ಅಥವಾ ದೀರ್ಘಾವಧಿ ಕಾಯಿಲೆಗಳೂ ಇಲ್ಲ. ಬಿಪಿ, ಮಧುಮೇಹ, ಹೃದಯ ಕಾಯಿಲೆಗಳಂಥ ಸಮಸ್ಯೆಯಿಲ್ಲ. ನನ್ನ ಗಂಡನಿಗೂ ನನಗೂ ಸೆಕ್ಸ್ ಎಂದರೆ ಇಷ್ಟವೇ. ಯಾಕೆ ಗರ್ಭಧಾರಣೆ ಆಗುತ್ತಿಲ್ಲ ಎಂದು ಟೆಸ್ಟ್ ಮಾಡಿಸಿದೆವು. ನನ್ನ ಗಂಡನಲ್ಲಿ ಸಾಕಷ್ಟು ವೀರ್ಯದ್ರವ ಇದೆ, ಆದರೆ ವೀರ್ಯಾಣು ಇಲ್ಲ ಎಂದು ಟೆಸ್ಟ್ ರಿಸಲ್ಟ್ ತಿಳಿಸಿತು. ಅಷ್ಟೊಂದು ಆರೋಗ್ಯಕರವಾಗಿರುವ ಪುರುಷರಲ್ಲಿಯೂ ಈ ಸಮಸ್ಯೆ ಇರುತ್ತದೆಯೇ? ಸಂಭೋಗದಲ್ಲಿ ತುಂಬು ಆಸಕ್ತಿಯಿಂದ ಪಾಲ್ಗೊಂಡು ನನ್ನನ್ನು ರಮಿಸುವ ಗಂಡನಲ್ಲಿ ಈ ಸಮಸ್ಯೆ ಇದೆ ಎಂದರೆ ನಂಬಲಾಗುತ್ತಿಲ್ಲ. 

ಉತ್ತರ: ನಿಮ್ಮ ಸಮಸ್ಯೆ ಹಾಗೂ ಬೇಸರ ನನಗೆ ಅರ್ಥವಾಗುತ್ತದೆ. ಆದರೆ ಇಂಥ ಪ್ರಕರಣಗಳು ಕಡಿಮೆಯೇನಲ್ಲ. ಇತ್ತೀಚೆಗೆ ಇಂಥ ಗಂಡಸರು ಸಾಕಷ್ಟು ಕಂಡುಬರುತ್ತಿದ್ದಾರೆ. ಮೇಲ್ನೋಟಕ್ಕೆ ತುಂಬ ಆರೋಗ್ಯವಂತರಾಗಿರುತ್ತಾರೆ. ಸಂಭೋಗದಲ್ಲಿಯೂ ಚೆನ್ನಾಗಿಯೇ ಪಾಲ್ಗೊಳ್ಳಬಹುದು, ಅದನ್ನು ಸವಿಯಬಹುದು. ಸ್ಖಲನದ ಸಂದರ್ಭದಲ್ಲಿ ಎಲ್ಲ ಗಂಡಸರಂತೆಯೇ ಇವರೂ ವೀರ್ಯದ್ರವ ಹೊರಹಾಕುತ್ತಾರೆ. ಆದರೆ ಅದರಲ್ಲಿ ಸಂತಾನ ಸೃಷ್ಟಿಸಬಲ್ಲ ಸಾಮರ್ಥ್ಯ ಇರೋ ವೀರ್ಯಾಣು ಇರೋದಿಲ್ಲ. 

#Feelfree: ಕೊರೋನಾ ಕಾಲದ ಎಫೆಕ್ಟ್‌, ಸೆಕ್ಸ್ ಅಂದರೆ ಭಯ! ...

ಇದನ್ನು ವೈದ್ಯಕೀಯ ಭಾಷೆಯಲ್ಲಿ ಅಝೂಸ್ಪರ್ಮಿಯಾ ಎನ್ನುತ್ತಾರೆ. ಇದು ಅನೇಕ ಕಾರಣಗಳಿಂದ ಬರಬಹುದು.
- ಪುರುಷರ ಸಂತಾನೋತ್ಪತ್ತಿ ಪ್ರದೇಶಕ್ಕೆ ಬಲವಾದ ಏಟು ಬಿದ್ದಿದ್ದರೆ.
- ಅಲ್ಲಿ ಯಾವುದಾದರೂ ಸೋಂಕು ಉಂಟಾಗಿದ್ದರೆ.
- ಅಲ್ಲಿ ಉರಿಯೂತ ಉಂಟಾಗಿದ್ದರೆ.
- ಪೆಲ್ವಿಕ್‌ ಪ್ರದೇಶದಲ್ಲಿ ಯಾವುದಾದರೂ ಶಸ್ತ್ರಚಿಕಿತ್ಸೆ ನಡೆದಿದ್ದರೆ.
- ಆ ಪ್ರದೇಶದಲ್ಲಿ ಆಂತರಿಕ ಗುಳ್ಳೆ ಅಥವಾ ಸಿಸ್ಟ್ ಇದ್ದರೆ.
- ವೀರ್ಯನಾಳದಲ್ಲಿ ಬ್ಲಾಕೇಜ್ ಇದ್ದರೆ. 
- ವ್ಯಾಸೆಕ್ಟಮಿ ಅಥವಾ ಸಂತಾನಹರಣ ಶಸ್ತ್ರಚಿಕಿತ್ಸೆ ಆದವರಲ್ಲಿ.
ಈ ಮೇಲಿನ ಕಾರಣಗಳಲ್ಲಿ ಕೊನೆಯದೊಂದನ್ನು ಬಿಟ್ಟು ಇನ್ಯಾವ ಕಾರಣದಿಂದಲಾದರೂ ಈ ಸಮಸ್ಯೆ ಉಂಟಾಗಿರಬಹುದು. ಇದನ್ನು ಪರೀಕ್ಷೆ ಮಾಡಿಸಬೇಕು. ಕೆಲವು ಸಮಸ್ಯೆಗಳಿಗೆ ಔಷಧದಿಂದ ಪರಿಹಾರ ಇದೆ. ಕೆಲವಕ್ಕೆ ಶಸ್ತ್ರಚಿಕಿತ್ಸೆಯೇ ಪರಿಹಾರ. ಇನ್ನು ಕೆಲವನ್ನು ಸರಿಪಡಿಸಲಾಗುವುದಿಲ್ಲ. ಅಂಥ ಸನ್ನಿವೇಶದಲ್ಲಿ ನೀವು ಐವಿಎಫ್‌ ಮಾಡಿಸಿಕೊಳ್ಳಬಹುದು. ಯಾವುದಕ್ಕೂ ತಜ್ಞರಲ್ಲಿ ತೋರಿಸಿ ಮುಂದಿನ ನಡೆಗಳನ್ನು ಇಡಿ.

#Feelfree: ಹಸ್ತಮೈಥುನ ಬಿಟ್ಟ ನಂತರ ದೇಹದಲ್ಲಿ ಏನಾಗುತ್ತೆ ಬದಲಾವಣೆ? ...
 

ಪ್ರಶ್ನೆ: ನನ್ನ ವಯಸ್ಸು ಹದಿನೆಂಟು. ನನಗೊಬ್ಬಳು ಗರ್ಲ್‌ಫ್ರೆಂಡ್‌ ಇದ್ದಾಳೆ. ಇತ್ತೀಚೆಗೆ ಆಕೆಯ ಮನೆಯಲ್ಲಿ ಹಿರಿಯರು ಇಲ್ಲದಿರುವ ಸಂದರ್ಭದಲ್ಲಿ ಇಬ್ಬರೂ ಸೆಕ್ಸ್ ನಡೆಸಿದೆವು. ಆ ಸಂದರ್ಭದಲ್ಲಿ ಇಬ್ಬರಿಗೂ ನೋವಾಯಿತು. ಈ ನೋವು ಎರಡು ಮೂರು ದಿನಗಳ ಕಾಲ ಮುಂದುವರಿಯಿತು. ಈಗ ಸರಿಹೋಗಿದೆಯಾದರೂ, ಮತ್ತೊಮ್ಮೆ ಸಂಭೋಗಕ್ಕೆ ನನ್ನ ಗೆಳತಿ ಒಪ್ಪುತ್ತಿಲ್ಲ. ಏನು ಮಾಡಲಿ?

#Feelfree: ಅವಳಿಗೆ ಸಡನ್ನಾಗಿ ಮೂಡ್ ಹೋಗುತ್ತೆ, ಏನ್ಮಾಡ್ಲೀ... ...

ಉತ್ತರ: ಕಲಿಕೆ ಅಥವಾ ಕೆಲಸ ಸಂಪಾದಿಸುವ ಕಡೆಗೆ ಗಮನ ಹರಿಸಬೇಕಾದ ನೀವು ಗಡಿಬಿಡಿಯಲ್ಲಿ, ನಿಮ್ಮ ಗೆಳತಿಯ ತಂದೆ ತಾಯಿ ಯಾವ ಕ್ಷಣದಲ್ಲಿ ಮನೆಗೆ ಮರಳುತ್ತಾರೋ ಎಂಬ ಆತಂಕದಲ್ಲಿ, ಲೈಂಗಿಕ ಕ್ರಿಯೆ ಮಾಡಲು ಹೋಗಿದ್ದೀರಿ. ನೋವಾಗದೆ ಇನ್ನೇನಾದೀತು? ನಿಮಗೆ ಅಷ್ಟೊಂದು ಆ ಅನುಭವ ಸಂಪಾದಿಸುವ ಆತುರವಿದ್ದರೆ, ಸಾಕಷ್ಟು ಸಮಯ ತೆಗೆದುಕೊಂಡು, ಇಬ್ಬರೂ ಮುನ್ನಲಿವು ಅಥವಾ ಫೋರ್‌ಪ್ಲೇಯಲ್ಲಿ ತೊಡಗಿಕೊಂಡು, ಇಬ್ಬರ ಖಾಸಗಿ ಜಾಗಗಳು ಸಾಕಷ್ಟು ತೇವವಾದ ಬಳಿಕ ಸೆಕ್ಸ್‌ನಲ್ಲಿ ತೊಡಗಿ.

Latest Videos
Follow Us:
Download App:
  • android
  • ios