#Feelfree: ಕೊರೋನಾ ಕಾಲದ ಎಫೆಕ್ಟ್‌, ಸೆಕ್ಸ್ ಅಂದರೆ ಭಯ!

ಕೊರೋನಾ ಎಫೆಕ್ಟ್‌ನಿಂದಾಗಿ ಮನೆಮನೆಗಳೂ ಭೀತಿಯ ತಾಣಗಳಾಗುತ್ತಿವೆ. ಕೊರೋನಾ ಆತಂಕ ಬೆಡ್‌ರೂಮಿಗೂ ಕಾಲಿರಿಸಿ ಸೆಕ್ಸ್ ಸುಖವನ್ನೇ ಕಿತ್ತುಕೊಂಡಿದೆ.

Covid 19 pandemic stolen libido of couple

ಪ್ರಶ್ನೆ: ನಾನು ವಿವಾಹಿತ. ನನ್ನ ವಯಸ್ಸು ಮೂವತ್ತು, ಪತ್ನಿಗೆ ಇಪ್ಪತ್ತೆಂಟು. ನಾವಿಬ್ಬರೂ ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದೇವೆ. ಸುರಕ್ಷಿತತೆ ಇದೆ ಎಂದು ನಾವು ಭಾವಿಸಿಕೊಂಡಿದ್ದೇವೆ. ಆದರೆ ನಾವಿಬ್ಬರೂ ಹೊರಗೆ ಹೋಗಿ ದುಡಿಯುವಂಥ ವೃತ್ತಿಗಳಲ್ಲಿ ಇದ್ದೇವೆ. ಹೀಗಾಗಿ ಲಾಕ್‌ಡೌನ್‌ ಇದ್ದರೂ ನಾವು ಹೊರಗೆ ಹೋಗಲೇಬೇಕು. ಡ್ಯೂಟಿ ಮುಗಿಸಿ ಬಂದ ನಂತರ ಚೆನ್ನಾಗಿ ಸ್ನಾನ ಮಾಡಿ, ಸ್ವಚ್ಛ ಮಾಡಿಕೊಂಡು, ಫ್ರೆಶ್ ಅಡುಗೆ ಮಾಡಿ ಸೇವಿಸಿ, ಹೊರಗಿನ ಫುಡ್ ತರಿಸದೆ, ಹೊರಗಿನರ್ಯಾರನ್ನೂ ಭೇಟಿ ಮಾಡದೆ- ಹೀಗೆ ಎಚ್ಚರಿಕೆಯಿಂದಲೇ ಬದುಕುತ್ತಿದ್ದೇವೆ. ಆದರೆ ಕಳೆದ ಒಂದು ವರ್ಷದಿಂದ, ಆತಂಕ- ಭೀತಿಗಳಿಲ್ಲದೆ ಸೆಕ್ಸ್ ಮಾಡುವುದೇ ನಮಗೆ ಸಾಧ್ಯವಾಗಿಲ್ಲ. ಯಾಕೆಂದರೆ ಇಬ್ಬರಲ್ಲಿ ಯಾರೋ ಒಬ್ಬರು ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದರೆ, ಅದು ಇನ್ನೊಬ್ಬನಿಗೂ ಹರಡಬಹುದು ಎಂಬ ಭಯ ನಮ್ಮಿಬ್ಬರಲ್ಲೂ ಇದೆ. ಈ ಆತಂಕದಲ್ಲಿ ನನಗೆ ಸರಿಯಾಗಿ ಶಿಶ್ನ ನಿಮಿರುವುದೂ ಇಲ್ಲ. ಪತ್ನಿಗೆ ಯೋನಿ ಒದ್ದೆಯಾಗುವುದೂ ಇಲ್ಲ. ಹೀಗಾಗಿ ಸೆಕ್ಸ್ ಎಂಬುದು ನೋವಿನಿಂದ ಕೂಡಿ, ಇಬ್ಬರೂ ಸೇರುವುದನ್ನೇ ನಿಲ್ಲಿಸಿಬಿಟ್ಟಿದ್ದೇವೆ. ಹೀಗಾದರೆ ಮುಂದೇನು ಗತಿ ಎಂಬ ಆತಂಕ ನಮ್ಮಿಬ್ಬರಲ್ಲಿದೆ.

#Feelfree: ನನ್ನ ಗಂಡ ಸಂಭೋಗದ ಉತ್ತುಂಗ ತಲುಪುವುದೇ ಇಲ್ಲ! ...

ಉತ್ತರ: ನಿಮ್ಮ ಹಾಗೆಯೇ ತುಂಬಾ ಮಂದಿ ದಂಪತಿ ಕೊರೋನಾ ಕಾಲದ ಭೀತಿ ಆತಂಕಗಳನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಮೊದಲಿನಂತೆ ಸೆಕ್ಸ್‌ನಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ಕಾರಣ, ಸಂಗಾತಿಯೊಂದಿಗೆ ಕೊರೋನಾ ವೈರಸ್‌ ಬಂದಿರಬಹುದು, ಅಥವಾ ನನ್ನಿಂದಾಗಿ ನನ್ನ ಸಂಗಾತಿಗೆ ದಾಟಬಹುದು ಎಂಬ ಆತಂಕ. ಈ ಆತಂಕವೇ ಎಲ್ಲ ಖುಷಿಯನ್ನೂ ತಿಂದುಹಾಕುತ್ತಿದೆ.
ಇದನ್ನು ಮೀರಿ ಲೈಂಗಿಕ ಕ್ರಿಯೆಯನ್ನು ಒಂದು ಸಂತಸದ ಅನುಭವ ಆಗಿಸಲು ದಂಪತಿಗಳು ಏನು ಮಾಡಬಹುದು?


- ನೀವು ಸದಾ ಸುರಕ್ಷಿತವಾಗಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಸಂಗಾತಿಗೂ ಖಾತ್ರಿಪಡಿಸಿ. ಹೊರಗೆ ಹೋದಾಗ ಮಾಸ್ಕ್ ಧರಿಸಿ. ಇತರರಿಂದ ಆರು ಅಡಿ ದೂರದಲ್ಲಿರಿ. ಗುಂಪಿನಲ್ಲಿ ಸೇರಬೇಡಿ. ಅವಕಾಶ ಆದಾಗಲೆಲ್ಲಾ ಸೋಪು ಹಚ್ಚಿ ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಪದೇ ಪದೇ ಮುಖವನ್ನು ಮುಟ್ಟಿಕೊಳ್ಳಬೇಡಿ. ಸಂಗಾತಿಯೂ ಈ ಎಲ್ಲ ನಿಯಮಗಳನ್ನು ಪಾಲಿಸುವಂತೆ ಮಾಡಿ.
- ಸಂಜೆ ಅಥವಾ ರಾತ್ರಿ ಒಂದಷ್ಟು ಹೊತ್ತು ಜತೆಯಲ್ಲಿ ಕಳೆಯಿರಿ. ಆಗ ಮೊಬೈಲ್, ಟಿವಿ ಸೇರಿದಂತೆ ಎಲ್ಲ ಬಗೆಯ ಸಂವಹನ ಸಾಧನಗಳನ್ನು ಆಫ್ ಮಾಡಿ. ನಿಮ್ಮ ಮೆಚ್ಚಿನ ಒಳಾಂಗಣ ಆಟವಾಡಿ, ಕ್ರಾಫ್ಟ್- ಪೇಂಟಿಂಗ್ ಹೀಗೆ ಯಾವುದಾದರೂ ಆಡಿ. ಒಳ್ಳೆಯ ಪುಸ್ತಕ ಓದಿ, ಕತೆ ಹೇಳಿ. ಒಟ್ಟಿನಲ್ಲಿ ಜೊತೆಯಲ್ಲಿ ಸಮಯ ಕಳೆಯಿರಿ. ಇದರಿಂದ ಉಂಟಾಗುವ ಆಪ್ತತೆ ನಿಮ್ಮನ್ನು ಬೆಡ್‌ರೂಮಿನಲ್ಲೂ ಬೆಸೆಯುತ್ತದೆ.
- ಯಾವುದೇ ಕಾರಣಕ್ಕೂ ಟಿವಿ ಆನ್ ಮಾಡಿ ಕೊರೋನಾ ಸಂಬಂಧಿತ ಸುದ್ದಿಗಳನ್ನು ಕೇಳಬೇಡಿ. ಪತ್ರಿಕೆಯಲ್ಲಿ ಪ್ರಕಟವಾಗುವ ಪಾಸಿಟಿವ್, ಸ್ಫೂರ್ತಿಯುತ ಸುದ್ದಿಗಳನ್ನು ಓದಿ. ಅದು ನಿಮ್ಮ ಜೀವನಪ್ರೀತಿ ಹೆಚ್ಚಿಸುವಂತೆ ಇರಲಿ.

Covid 19 pandemic stolen libido of couple

#Feelfree: ವಿವಾಹೇತರ ಸಂಬಂಧದ ಬಯಕೆ, ನಿಭಾಯಿಸೋದು ಹೇಗೆ? ...

- ನನಗೆ ರೋಗ ಬಂದರೇನು ಗತಿ, ನನ್ನ ಚಿಕಿತ್ಸೆಗೆ ಹಣ ಇಲ್ಲವಲ್ಲ, ನಾನು ಕೊರೋನಾದಿಂದ ಸತ್ತರೆ ನನ್ನ ಕುಟುಂಬದವರೇನು ಮಾಡುವರು ಮುಂತಾದ ನೆಗೆಟಿವ್ ಚಿಂತನೆಯನ್ನೇ ಸದಾ ಮಾಡುತ್ತ ಇರಬೇಡಿ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ.
- ಮುಂಜಾನೆ ಸ್ವಲ್ಪ ಬೇಗ ಎದ್ದು ಗಾರ್ಡನಿಂಗ್‌ನಂಥ ಕೆಲಸದಲ್ಲಿ ತೊಡಗಿಕೊಳ್ಳಿ. ಮುಂಜಾನೆ ಸಮಯ ಇದ್ದರೆ, ಮನಸ್ಸು ಪ್ರಫುಲ್ಲವಾಗಿರುವ ಈ ಸಮಯದಲ್ಲಿ ಕೂಡ ನೀವು ಶೃಂಗಾರ ನಡೆಸಬಹುದು.
- ಇಬ್ಬರೂ ಜೊತೆಯಾಗಿ ಶೃಂಗಾರ ಪ್ರಚೋದಕ ಕತೆ ಓದಿ ಅಥವಾ ಅಂಥ ಸಿನಿಮಾಗಳನ್ನು ನೋಡಿ. ಇದು ನಿಮ್ಮ ಮೂಡ್ ಅನ್ನು ಎತ್ತರಿಸುತ್ತದೆ. 
- ಆರೋಗ್ಯಕರ ಆಹಾರ ಪದ್ಧತಿ ಇಟ್ಟುಕೊಳ್ಳಿ. ಸಕ್ಕರೆ ಕಡಿಮೆ ಮಾಡಿ, ಪ್ರೊಟೀನ್ ಹಾಗೂ ನಾರಿನಂಶ ಹೆಚ್ಚಿರುವ ಆಹಾರ ಸೇವಿಸಿ. 
- ಜನನಾಂಗಗಳ ಸಂಪರ್ಕದಿಂದ ಕೊರೋನಾ ವೈರಸ್ ಹರಡುತ್ತದೆ ಎಂಬುದಕ್ಕೆ ಸಾಕ್ಷಿಗಳಿಲ್ಲ. ಮುಖದ ಸಂಪರ್ಕದಿಂದ ಹರಡಬಹುದು ಅಷ್ಟೇ. ಆದರೆ ಉತ್ತಮ ಸೆಕ್ಸ್‌ ಬಾಯಿಯ ಪಾಲ್ಗೊಳ್ಳುವಿಕೆಯಿಲ್ಲದೆ ಸಾಧ್ಯವಿಲ್ಲ. 

#Feelfree: ತಂದೆಗೆ ಇನ್ನೊಬ್ಬ ಮಹಿಳೆ ಜತೆ ಸಂಬಂಧ, ಏನ್ ಮಾಡ್ಲಿ? ...

"
 

Latest Videos
Follow Us:
Download App:
  • android
  • ios