- ಮದುವೆಯಾದ ಮೇಲೆ ಒಬ್ಬಳೇ ಎಲ್ಲಿ ಬೇಕೆಂದರೆ ಅಲ್ಲಿ ಹೋಗಿ ಬರೋಕಾಗಲ್ಲ. ಗಂಡ ಎಂಬ ಗೂಬೆ ಜೊತೆಗೇ ಇರುತ್ತೆ.
- ಹಳೇ ಬಾಯ್‌ಫ್ರೆಂಡ್ಸ್ ಜೊತೆ ಮುಕ್ತವಾಗಿ ಮಾತಾಡೋಕೇ ಆಗಲ್ಲ. ಗಂಡ ಎಂಬ ಪ್ರಾಣಿ ಯಾರದು ಅಂತ ಕೆಕ್ಕರಿಸಿಕೊಂಡು ಕೇಳುತ್ತೆ.
- ಮದುವೆಯಾದ ಮೇಲೆ ಮೊಬೈಲ್‌ ಫೋನ್‌ನಲ್ಲಿ ಗಂಟೆಗಟ್ಟಲೆ ಚಾಟ್ ಮಾಡೋಕೆ, ಹರಟೆ ಹೊಡೆಯೋಕೆ ಆಗಲ್ಲ. ಗಂಡ ಕಿರಿಕಿರಿ ಮಾಡ್ತಾನೆ.
- ರಾತ್ರೋರಾತ್ರಿ ಮಂಚದ ಮೇಲೆ ಮಲಗಿ ನಿದ್ರೆ ಹೋಗಿರುವಾಗ ಎಲ್ಲಿಂದಲೋ ಒಂದು ಕೈಯೋ ಕಾಲೋ ಬಂದು ನಿಮ್ಮ ಮೇಲೆ ಬೀಳಬಹುದು. ಆಗ ಬೆಚ್ಚಿ ಬೀಳಬಾರದು. ಯಾಕಂದರೆ ಅದು ಸದಾ ನಿಮ್ಮ ಜೊತೆಗೇ ಇರುವ ಗಂಡ ಎಂಬ ಜೀವಿಯದ್ದು.
- ಮನೇಲಿ ಹೇಳದೆ ಕೇಳದೆ ಎಲ್ಲೂ ಹೋಗಿ ಬರೋಕೆ ಆಗಲ್ಲ. ಪಿಕ್‌ನಿಕ್ಕೋ, ಔಟಿಂಗೋ ಒಂಟಿಯಾಗಿ ಮಾಡೋಕೆ ಆಗಲ್ಲ. ಯಾಕಂದರೆ ಅಷ್ಟು ಸುಲಭವಾಗಿ ಕ್ಷಮಿಸಿಬಿಡೋ ಜನ ಅಲ್ಲ ಜೊತೆಗಿರೋದು.

17ರ ಚೆಲುವೆ ಜೊತೆ 78ರ ವೃದ್ಧನ ಮದುವೆ: 22 ದಿನವೇ ಸಂಸಾರ ...

- ಮೊದಲಿನ ಥರಾ ಒಂದೇ ಒಂದು ರಕ್‌ಸ್ಯಾಕು ಬೆನ್ನು ಮೇಲೆ ಬಿಸಾಡಿಕೊಂಡು ಹೋಗೋಕೆ ಆಗಲ್ಲ. ಗಂಡನ ಪೆಟಾರಿಯ ಮೇಲೂ ನಿಗಾ ಇಡಬೇಕಾಗುತ್ತೆ. ಕಾಚಾ, ಬನಿಯನ್ ಎಲ್ಲ ನಿಮ್ಮ ಬ್ಯಾಗ್‌ನೊಳಗೂ ಪ್ರವೇಶ ಮಾಡಬಹುದು.
- ಮಧ್ಯರಾತ್ರಿ ಎದ್ದು ಫ್ರಿಡ್ಜ್‌ನಿಂದ ಐಸ್‌ಕ್ರೀಮ್ ತೆಗೆದುಕೊಂಡು ಕತ್ತಲಲ್ಲಿ ಒಂಟಿಯಾಗಿ ಕುಳಿತು ತಿನ್ನೋಕೆ ಆಗಲ್ಲ. ಗಂಡ ಎಂಬ ಜೀವಿ ನಿಮ್ಮನ್ನು ಮೆಂಟಲ್ ಹಾಸ್ಪಿಟಲ್‌ಗೆ ಅಡ್ಮಿಟ್ ಮಾಡೋ ಚಾನ್ಸಿದೆ.
- ನಿಮ್ಮ ಮುಖದ ಬಳಿ ಬರೋ ಗಂಡನ ಮುಖ ನಿಮ್ಮ ಮುಖದಷ್ಟೇ ನಯವಾಗಿ ಇರೋಲ್ಲ. ನಾಲ್ಕೆಂಟು ದಿನದ ಗಡ್ಡ ಇರಬಹುದು. ಅದು ನಿಮ್ಮ ಕೆನ್ನೆಗೆ ತಾಗಿ ತುರಿಸೋಕೆ ಆರಂಭಿಸಿ ಅಲರ್ಜಿ ಆಗಿ ಕೆನ್ನೆಯೆಲ್ಲಾ ಕೆಂಪಗೆ ದದ್ದು ಬಿದ್ದು... ಅಯ್ಯೋ ಯಾಕೇಳ್ತಿರಾ!
- ಮೊದಲಿನ ಥರಾ ಗೆಳತಿಯರ ಜೊತೆಗೋ ಗೆಳಯರ ಜೊತೆಗೋ ಹಾಟ್ ಡ್ರಿಂಕ್ಸ್ ಅಷ್ಟೊಂದು ಸುಲಭವಾಗಿ ಕುಡಿಯೋಕೆ ಆಗೋಲ್ಲ. ಯಾಕಂದ್ರೆ ಹುಡುಗಿಯರು ಕುಡಿಯೋದು ವೈನು ಮಾತ್ರ ಅಂತನ್ನೋ ರೊಮ್ಯಾಂಟಿಕ್ ಕಲ್ಪನೆ ಗಂಡನಿಗೆ ಇರುತ್ತಲ್ಲಾ.

ಸೆಕ್ಸ್ ಲೈಫಿಗೆ ಹಾರ್ಮ್ ಮಾಡೋ ಈ food ಸೇವಿಸದಿದ್ದರೆಯೇ ಒಳ್ಳೇದು! ...

 - ಸಿನಿಮಾ ನೋಡ್ತಾ ಕೂತಿರುವಾಗ ಒಂದಿಡೀ ಪ್ಯಾಕ್ ಚಿಪ್ಸ್ ನಿಮನಿಮಗೇ ಅಂತ ತಿಂತಾ ಕೂತಿರೋಕಾಗಲ್ಲ. ಗಂಡ ಎಂಬ ಜೀವಿಯ ಕೈ ಆ ಪಕ್ಕದಿಂದ ಬಂದು ನಿಮ್ಮ ಪಾಲಿನಿಂದ ಕಸಿದುಕೊಳ್ಳುತ್ತೆ. ತಮ್ಮನ ಜೊತೆಗೋ, ತಂಗಿಯ ಜೊತೆಗೋ ಮಾಡಿದಂಗೆ ಗಲಾಟೆ ಮಾಡಂಗೂ ಇಲ್ಲ.
- ಗಂಡನ ಜೊತೆಗೆ ಪುಗಸಟ್ಟೆಯಾಗಿ ಬರುವ ಅತ್ತೆ- ಮಾವ- ಮೈದುನ- ನಾದಿನಿ ಎಂಬಿತ್ಯಾದಿ ಜೀವಿಗಳನ್ನು ಸಹಿಸಿಕೊಳ್ತಾ ಇರಬೇಕಾಗುತ್ತೆ. ಇವರಲ್ಲಿ ಕೆಲವರು ಪರಮ ಬೋರು, ಇನ್ನು ಕೆಲವರು ಮಹಾ ಕಿರಿಕಿರಿ, ಕಿರುಕುಳ ಪಾರ್ಟಿಗಳೆಲ್ಲ ಇರುತ್ತಾರೆ. ಇವರು ನಿಮಗೆ ಬೇಡಾಂದ್ರೂ ಜೀವನದ ತಾಳ್ಮೆಯ ಪಾಠ ಕಲಿಸುತ್ತಾರೆ.
- ಕೆಲವೊಮ್ಮೆ ನಿಮ್ಮ ಬಟ್ಟೆಗಳ ಜೊತೆಗೆ ಗಂಡನ ಬಟ್ಟೆಗಳನ್ನೂ ಒಗೆಯೂ ಚಾನ್ಸ್ ಸಿಗಬಹುದು. 
- ಗಂಡನ ಮೊಬೈಲನ್ನು ಆಗಾಗ ಇಣುಕಿ ನೋಡೋ, ಅವನ ಮೆಸೇಜ್ ಹಿಸ್ಟರಿ, ನೆಟ್ ಸರ್ಚಿಂಗ್ ಹಿಸ್ಟರಿ ಪರಿಶೀಲಿಸುವ ಚಟ ಶುರುವಾಗಬಹುದು, ಬೇಡಾಂದ್ರೂ. 
- ಹಾಗೇ, ನಿಮ್ಮ ಮೊಬೈಲನ್ನೂ ನೀವಿಲ್ಲದಾಗ ಯಾರೋ ಕದ್ದು ನೋಡ್ತಾ ಇರ್ತಾರೆ ಅಂತ ಅನ್ನಿಸೋಕೆ ಶುರುವಾಗಬಹುದು, ಆತಂಕ ಬೇಡ. ಅದು ಅವನೇ.
- ನಿಮಗಿಷ್ಟ ಅಂತ ಚಾಕಲೇಟ್ ಫ್ಲೇವರ್ ಐಸ್‌ಕ್ರೀಮ್ ತಂದು ಫ್ರಿಜ್‌ನಲ್ಲಿಟ್ಟರೆ, ಮರುದಿನದ ಹೊತ್ತಿಗೆ ಅದು ಮಂಗಮಾಯ ಆಗಿರಬಹುದು. ಗಾಬರಿ ಬೇಡ, ಪತಿದೇವರ ಮೂತಿ ನೋಡಿ.

ಜನರನ್ನು ಅರ್ಥ ಮಾಡಿಕೊಳ್ಳೋಕೆ ಈ ಸಿಂಪಲ್ ಸೈಕಾಲಜಿ ಟ್ರಿಕ್! ...