1. ವಾದವನ್ನು ಗೆಲ್ಲುವುದು
ಯಾವುದೇ ವಾದವನ್ನು ಗೆಲ್ಲುವುದು ಸುಲಭವಲ್ಲ.  ಕೆಲವೊಮ್ಮೆ ನಿಮ್ಮ ವಾದದಲ್ಲಿ ಹುರುಳಿದ್ದರೂ, ಎದುರಾಳಿ ವಿತಂಡವಾದ ಮಾಡ್ತಾ ಇದ್ದರೆ ನೀವು ಗೆಲ್ಲಲಾರರಿ. ಅಂಥ ವೇಳೆಯಲ್ಲಿ, ಎದುರಾಳಿಯನ್ನು ಜಾಸ್ತಿ ಮಾತಾಡಲು ಬಿಡಿ. ಮತ್ತು ಪ್ರಶ್ನೆಗಳನ್ನು ಎಸೆಯುತ್ತಾ ಇರಿ. ಎದುರಾಳಿ ತನ್ನ ಮಾತನ್ನು ತಾನೇ ಕಾಂಟ್ರಡಿಕ್ಟ್ ಮಾಡುವ ಹಾಗೆ ಪ್ರಶ್ನೆ ಎಸೆಯಿರಿ.
2. ನಿಮ್ಮ ಮಾತನ್ನು ಗಂಭಿರವಾಗಿ ತಗೊಳ್ತಿದಾರಾ?
ಒಂದು ವೇಳೆ ಎದುರಿಗೆ ಇರುವವರು ನಿಮ್ಮ ಮಾತನ್ನು ಸೀರಿಯಸ್ಸಾಗಿ ತಗೊಳ್ತಿಲ್ಲ ಅಂತ ನಿಮಗೆ ಅನಿಸಿದರೆ, ಈ ಮಾತನ್ನು ನಿಮ್ಮ ತಂದೆ ಅಥವಾ ತಾಯಿ ನಿಮಗೆ ಹೇಳಿದ್ದರು ಅಂತ ಹೇಳಿ. ತಂದೆ ಅಥವಾ ತಾಯಿಯ ಮಾತು ಎಂದರೆ ಸೀರಿಯಸ್ಸಾಗಿ ತೆಗೆದುಕೊಳ್ಳುವುದು ಎಲ್ಲರ ಸ್ವಭಾವ. 
3. ಇನ್ನೊಬ್ಬ ಕೋಪಗೊಂಡರೆ
ನಿಮ್ಮ ಸಂಗಾತಿ ಅಥವಾ ಗೆಳೆಯ/ ಗೆಳತಿ, ನಿಮ್ಮ ಬಗ್ಗೆ ಇನ್ನೊಂದು ಕ್ಷಣದಲ್ಲಿ ಕೋಪಗೊಳ್ಳಲಿದ್ದಾರೆ ಎಂದು ನಿಮಗೆ ಗೊತ್ತಾಯ್ತು ಅಂದುಕೊಳ್ಳಿ. ಆ ಕ್ಷಣ ನೀವು ಅವರ ಪಕ್ಕದಲ್ಲಿ ಕೂರಿ ಅಥವಾ ನಿಲ್ಲಿ. ಆಗ ನಿಮಗೂ ಅವರಿಗೂ ಮುಖಾಮುಖಿ ಕಾಂಟ್ಯಾಕ್ಟ್ ತಪ್ಪುತ್ತದೆ ಮಾತ್ರವಲ್ಲ, ಸಣ್ಣ ಧ್ವನಿಯಲ್ಲಿ ಮಾತಾಡಬೇಕಾಗುತ್ತದೆ. ಅಟೋಮ್ಯಾಟಿಕಲೀ ಕೋಪ ಇಳಿಯುತ್ತದೆ.
4. ಗಮನವಿಟ್ಟು ಕೇಳ್ತಿದಾರಾ?
ನಿಮ್ಮ ಮಾತನ್ನು ಎದುರಿಗೆ ಇರುವವರು ಗಮನವಿಟ್ಟು ಕೇಳ್ತಿದಾರಾ ಇಲ್ವಾ ಅಂತ ಪರೀಕ್ಷಿಸುವುದಕ್ಕೆ ಇದು ಟ್ರಿಕ್ಕು. ನೀವು ಈ ಮೊದಲು ಆಡಿದ ಒಂದು ಮಾತನ್ನು ಕಾಂಟ್ರಡಿಕ್ಟ್ ಮಾಡುವ ಮಾತನ್ನು ಹೇಳಿ. ಅವರು ನಿಜಕ್ಕೂ ಸೀರಿಯಸ್ಸಾಗಿ ಕೇಳ್ತಿದ್ದರೆ, ಆಗ ಹಾಗೆ ಹೇಳಿದಿರಲ್ಲಾ, ಈಗ ಹೀಗೆ ಹೇಳ್ತಿದೀರಿ ಎಂದು ಪ್ರಶ್ನೆ ಮಾಡುತ್ತಾರೆ.

ನಿಮ್ಮ ಅಣ್ಣ, ತಮ್ಮನ ಜೊತೆ ಜಗಳ ಆಡ್ತೀರಾ ? ಆಡ್ಕೊಳಿ... ಇದು ಬೆಸ್ಟ್ 

5. ಸುಳ್ಳು ಫೋನ್‌ ನಂಬರ್ ಕೊಟ್ರೆ
ಇನ್ಯಾರೋ ನಿಮಗೆ ಅವರ ಫೋನ್ ನಂಬರ್ ಕೊಡುವಾಗ, ಅದು ಸುಳ್ಳು ನಂಬರ್ ಇರಬಹುದು ಅಂತ ನಿಮಗೆ ಅನುಮಾನ ಬಂತು ಅಂತಿಟ್ಟುಕೊಳ್ಳಿ. ಆಗ ನೀವು ಬರೆದುಕೊಂಡಿದ್ದರಲ್ಲಿ ಒಂದೆರಡು ನಂಬರ್ ತಪ್ಪಾಗಿ ರಿಪೀಟ್ ಮಾಡಿ. ನಿಜವಾದ ನಂಬರನ್ನೇ ಅವರು ಹೇಳಿದ್ದರೆ, ನಿಮ್ಮ ತಪ್ಪನ್ನು ಅವರು ಸರಿಪಡಿಸುತ್ತಾರೆ.
6. ನಿಮ್ಮ ಮಾತನ್ನು ಒಪ್ಪಲು
ಎದುರಿಗೆ ಇರುವವರು ನಿಮ್ಮ ಮಾತನ್ನು ಒಪ್ಪಬೇಕು ಎಂದು ನಿಮಗೆ ಅನಿಸಿದರೆ, ಅವರ ಐ ಕಾಂಟ್ಯಾಕ್ಟ್ ತಪ್ಪಿಸಬೇಡಿ. ಕಣ್ಣುಗಳನ್ನು ನೋಡುತ್ತಾ ತಲೆಯಾಡಿಸಿ. ಆಗ ಅವರೂ ತಲೆಯಾಡಿಸಿ ಒಪ್ಪಿಗೆ ಸೂಚಿಸುತ್ತಾರೆ.

#Feelfree: ಪೀರಿಯೆಡ್ಸ್ ಟೈಮ್‌ನಲ್ಲಿ ಸೆಕ್ಸ್ ಬಗ್ಗೆ ಒಂದಿಷ್ಟು ಮಾಹಿತಿ

7. ಎದುರಿನವರ ಮಾತನ್ನು ಆಲಿಸುವ ಕ್ರಮ
ಇನ್ನೊಬ್ಬರ ಮಾತನ್ನು ಸಾರಾಂಶ ರೂಪದಲ್ಲಿ ಅವರಿಗೆ ಮರಳಿ ಒಪ್ಪಿಸುವುದು ಒಳ್ಳೆಯ ಕ್ರಮ. ಇದರಿಂದ ಅವರಿಗೂ, ಓಹೋ ನನ್ನ ಮಾತನ್ನು ಈತ ಸೀರಿಯಸ್ಸಾಗಿ ಕೇಳಿದ್ದಾನೆ ಎಂಬ ಆತ್ಮೀಯ ಭಾವನೆ ಮೂಡುತ್ತದೆ. ನಿಮ್ಮ ಮಾತಿನಲ್ಲಿ ತಪ್ಪಿದ್ದರೆ ಅವರೇ ಸರಿಪಡಿಸಬಹುದು.
8. ಅವರ ಹೆಸರನ್ನು ಉಚ್ಚರಿಸುವುದು
ಮಾತಿನ ನಡುವೆ ಆಗಾಗ ಎದುರಿಗೆ ಇರುವವರ ಹೆಸರನ್ನು ಉಚ್ಚರಿಸಿ. ಇದರಿಂದಾಗಿ ಅವರಿಗೂ ತಾವು ಇಂಪಾರ್ಟೆಂಟ್ ಅನ್ನುವ ಫೀಲ್ ಆಗುತ್ತದೆ. ಜೊತೆಗೆ ಅವರು ನಿಮಗೆ ಹೊಸಬರಾಗಿದ್ದರೆ, ಅವರ ಹೆಸರನ್ನು ನೆನಪಿಟ್ಟುಕೊಳ್ಳಲು ಇದು ಅನುಕೂಲ.

ಓಶೋ ಹೇಳಿದ ಗರ್ಲ್‌ಫ್ರೆಂಡ್ ಜೋಕ್‌ಗಳು 

9. ನಿಮ್ಮ ಆಯ್ಕೆಗೆ ಒಪ್ಪಿಸುವುದು
ಇನ್ನೊಬ್ಬರು ನಿಮ್ಮ ಯಾವುದೋ ಪ್ರಪೋಸಲ್‌ಗೆ ಒಪ್ಪಬೇಕು ಅಂತ ನಿಮಗೆ ಅನ್ನಿಸಿದರೆ, ಅವರಿಗೆ ಎರಡು ಅಥವಾ ಮೂರು ಆಯ್ಕೆ ಕೊಡಿ. ಅದರಲ್ಲಿ ನೀವು ಯಾವುದನ್ನು ಅವರು ಆಯ್ಕೆ ಮಾಡಲೆಂದು ಬಯಸಿರುತ್ತೀರೋ, ಅದಕ್ಕಿಂತ ಕೆಳಮಟ್ಟದ ಒಂದು ಅಥವಾ ಎರಡು ಆಯ್ಕೆಗಳಿರಲಿ. ಅವರು ನೀವು ಬಯಸಿದ್ದನ್ನೇ ಆಯ್ಕೆ ಮಾಡುತ್ತಾರೆ. 
10. ಇನ್ನೊಬ್ಬರ ಬಗೆಗಿನ ನಿಮ್ಮ ವರ್ಣನೆ
ನೀವು ಇನ್ನೊಬ್ಬರನ್ನು ಬಣ್ಣಿಸುವಾಗ ಯಾವ ಪದಗಳನ್ನು ಬಳಸುತ್ತೀರೋ, ನಿಮ್ಮನ್ನು ಅದೇ ರೀತಿ ಜನ ನೋಡುತ್ತಾರೆ. ನೀವು ಕೊಳಕು ಪದಗಳಿಂದ ಒಬ್ಬ ವ್ಯಕ್ತಿಯನ್ನು ಬಣ್ಣಿಸಿದರೆ, ಜನ ನಿಮ್ಮನ್ನು ಅದೇ ರೀತಿ ನೋಡುವ ಸಾಧ್ಯತೆ ಹೆಚ್ಚು.