Asianet Suvarna News Asianet Suvarna News

89 ವರ್ಷದ ವೃದ್ಧನಿಗೆ ವಿಚ್ಛೇದನ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ಹೇಳಿದ್ದೇನು?

ಹಲವು  ದಶಕಗಳ ದಾಂಪತ್ಯ ವಿರಸದ ನಂತರ ಬದುಕಿನ ಮುಸಂಜೆಯಲ್ಲಿ 89 ವರ್ಷದ ವೃದ್ಧರೊಬ್ಬರು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದ್ದು, ವೃದ್ಧ ದಂಪತಿಗೆ ತಿಳಿ ಹೇಳುವ ಪ್ರಯತ್ನ ಮಾಡಿದೆ.

What did the Supreme Court say when it refused to grant a divorce to an 89 year old man akb
Author
First Published Oct 13, 2023, 10:18 AM IST

ನವದೆಹಲಿ: ಹಲವು  ದಶಕಗಳ ದಾಂಪತ್ಯ ವಿರಸದ ನಂತರ ಬದುಕಿನ ಮುಸಂಜೆಯಲ್ಲಿ 89 ವರ್ಷದ ವೃದ್ಧರೊಬ್ಬರು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದ್ದು, ವೃದ್ಧ ದಂಪತಿಗೆ ತಿಳಿ ಹೇಳುವ ಪ್ರಯತ್ನ ಮಾಡಿದೆ. ಮದುವೆ ಎಂಬ ಸಂಪ್ರದಾಯವೂ ಸಮಾಜದಲ್ಲಿ ಒಂದು ಪ್ರಮುಖ ಸ್ಥಾನವನ್ನು ಆಕ್ರಮಿಸಿದೆ ಹಾಗೂ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಇತ್ತೀಚೆಗೆ ನ್ಯಾಯಾಲಯಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿದ್ದರೂ ಕೂಡ ವಿವಾಹ ಎಂಬ ಸಂಸ್ಥೆಯೂ(ಸಂಪ್ರದಾಯ) ಭಾರತೀಯ ಸಮಾಜದಲ್ಲಿದಂಪತಿಗಳ ನಡುವೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಅಮೂಲ್ಯವಾದ ಭಾವನಾತ್ಮಕ ಜೀವನ ಜಾಲ ಎಂದು ಪರಿಗಣಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಈ ಅರ್ಜಿಯ ವಜಾಗೊಳಿಸುವ ವೇಳೆ ಹೇಳಿದೆ. 

82 ವರ್ಷದ ಪತ್ನಿ ಹಾಗೂ ತನಗೆ ವಿಚ್ಛೇದನ ನೀಡಿದ್ದ ಚಂಡೀಗಢದ ಜಿಲ್ಲಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪಿನ ವಿರುದ್ಧ 89 ವರ್ಷದ ವೃದ್ಧರೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ  ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ (Aniruddha Bose) ಮತ್ತು ಬೇಲಾ ಎಂ ತ್ರಿವೇದಿ (Bela M Trivedi) ಅವರ ಪೀಠವು ಈ ವಯೋವೃದ್ಧನಿಗೆ ತಿಳಿಹೇಳಿ ಈ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದೆ. 

ಅಜ್ಜ-ಅಜ್ಜಿಯ ಕ್ಯೂಟ್ ಫೈಟ್‌ ವಿಡಿಯೋ ವೈರಲ್, ಯಾರ ದೃ‍ಷ್ಟಿಯೂ ಬೀಳದಿರಲಿ ಎಂದ ನೆಟ್ಟಿಗರು

ನಮ್ಮ ಅಭಿಪ್ರಾಯದ ಪ್ರಕಾರ, ಭಾರತೀಯ ಸಮುದಾಯದಲ್ಲಿ ಮದುವೆಯು ಕಾನೂನಿನಿಂದ ಮಾತ್ರವಲ್ಲದೆ ಸಾಮಾಜಿಕ ನಿಯಮಗಳಿಂದಲೂ ನಿಯಂತ್ರಿಸಲ್ಪಡುತ್ತದೆ.  ವೈವಾಹಿಕ ಸಂಬಂಧಗಳಿಂದಾಗಿಯೇ ಅನೇಕ ಇತರ ಸಂಬಂಧಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಮತ್ತು ಬೆಳೆಯುತ್ತವೆ. ಆದ್ದರಿಂದ, ಭಾರತದ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ  'ಮದುವೆಯ ಮರುಪಡೆಯಲಾಗದ ಸ್ಥಗಿತ' (irretrievable breakdown of marriage) ಸೂತ್ರವನ್ನು ಒಪ್ಪಿಕೊಳ್ಳಲಾಗದು ಎಂದು  ಸುಪ್ರೀಂಕೋರ್ಟ್‌ ಪೀಠ ಹೇಳಿದೆ.

89 ವರ್ಷದ ವೃದ್ಧನ 82 ವರ್ಷದ ಪತ್ನಿ  1963 ರಿಂದಲೂ ತನ್ನ ಜೀವನದುದ್ದಕ್ಕೂ ಈ ಪವಿತ್ರ ಸಂಬಂಧವನ್ನು ಉಳಿಸಿಕೊಂಡಿದ್ದಾರೆ ಮತ್ತು ಅವರ ಪತಿ ಅವರ ಬಗ್ಗೆ ಸಂಪೂರ್ಣ ಹಗೆತನ ದ್ವೇಷ ತೋರಿಸಿದ್ದರೂ ಪತಿಯಿಂದ ಜನಿಸಿದ ತನ್ನ ಮೂವರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂಬುದನ್ನು  ಸುಪ್ರೀಂಕೋರ್ಟ್ ಗಮನಿಸಿದೆ. ಬರೀ ಇಷ್ಟೇ ಅಲ್ಲದೇ ಪ್ರತಿವಾದಿಯಾಗಿರುವ ಪತ್ನಿ ಮುಂದೆಯೂ ತನ್ನ ಪತಿಯನ್ನು ಎಂದಿನಂತೆ ನೋಡಿಕೊಳ್ಳಲು ಸಿದ್ಧರಿದ್ದಾರೆ ಮತ್ತು ಜೀವನದ ಮುಸಂಜೆಯಲ್ಲಿ ಆತನನ್ನು  ಒಂಟಿಯಾಗಿ ಬಿಡಲು ಆಕೆ ಬಯಸುವುದಿಲ್ಲ. ಇದರ ಜೊತೆಗೆ ಸಮಕಾಲೀನ ಸಮಾಜದಲ್ಲಿ 'ವಿಚ್ಛೇದಿತ ಮಹಿಳೆ' ಎಂಬ ಕಳಂಕದೊಂದಿಗೆ ಸಾಯಲು ಬಯಸುವುದಿಲ್ಲ ಎಂಬ ಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸಮಾಜದಲ್ಲಿವಿಚ್ಚೇದನ  ಕಳಂಕ ಎನಿಸದೇ ಇರಬಹುದು. ಆದರೂ ನಾವಿಲ್ಲಿ ಪ್ರತಿವಾದಿಯ ಭಾವನೆಗಳ ಬಗ್ಗೆ ಕಾಳಜಿ ವಹಿಸುತ್ತೇವೆ ಎಂದು ನ್ಯಾಯಾಲಯ ಅರ್ಜಿ ವಜಾಗೊಳಿಸುವ ವೇಳೆ ಹೇಳಿದೆ. 

30 ಕೋಟಿ ಆಸ್ತಿ ಇದ್ದರೂ ತುತ್ತು ಅನ್ನ ಹಾಕದ ಮಗ, ವಿಷ ಸೇವಿಸಿ ವೃದ್ಧ ದಂಪತಿ ಆತ್ಮಹತ್ಯೆ

ಪ್ರಸ್ತುತ ಸ್ಥಿತಿಯ ಅಡಿಯಲ್ಲಿ ಪ್ರತಿವಾದಿಯಾಗಿರುವ 82ರ ಹರೆಯದ ಪತ್ನಿಯ ಭಾವನೆಗಳನ್ನು ಪರಿಗಣಿಸಿ ಗೌರವಿಸಿ  ಸಂವಿಧಾನದ ಅರ್ಟಿಕಲ್ 142 ಅಡಿ ಅವರ ಹಾಗೂ ಕಕ್ಷಿದಾರರ ನಡುವಿನ  ಈ ವಿವಾಹವನ್ನು ವಿಸರ್ಜಿಸಲು ನಿರಾಕರಿಸಿತು. 

ಸಾಕುವ ತಾಕತ್ತಿಲ್ಲ, ಗರ್ಭಪಾತಕ್ಕೆ ಅವಕಾಶ ನೀಡಿ ಎಂದು 27 ವರ್ಷದ ಮಹಿಳೆ ಮನವಿ: ಸುಪ್ರೀಂಕೋರ್ಟ್ ಹೇಳಿದ್ದೇನು?

Follow Us:
Download App:
  • android
  • ios