ಸಾಕುವ ತಾಕತ್ತಿಲ್ಲ, ಗರ್ಭಪಾತಕ್ಕೆ ಅವಕಾಶ ನೀಡಿ ಎಂದು 27 ವರ್ಷದ ಮಹಿಳೆ ಮನವಿ: ಸುಪ್ರೀಂಕೋರ್ಟ್ ಹೇಳಿದ್ದೇನು?
26 ವಾರಗಳ ಗರ್ಭಿಣಿಯೊಬ್ಬರಿಗೆ ಈ ಹಿಂದೆ ಗರ್ಭಪಾತಕ್ಕೆ ಅನುವು ಮಾಡಿಕೊಟ್ಟು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (DY chandrachud) ಅವರ ತ್ರಿಸದಸ್ಯ ಪೀಠ, ‘ನಾವು ಮಗುವನ್ನು ಕೊಲ್ಲಲು ಸಾಧ್ಯವಿಲ್ಲ’ ಎಂದು ಮೌಖಿಕವಾಗಿ ಹೇಳಿದೆ.
ನವದೆಹಲಿ: 26 ವಾರಗಳ ಗರ್ಭಿಣಿಯೊಬ್ಬರಿಗೆ ಈ ಹಿಂದೆ ಗರ್ಭಪಾತಕ್ಕೆ ಅನುವು ಮಾಡಿಕೊಟ್ಟು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (DY chandrachud) ಅವರ ತ್ರಿಸದಸ್ಯ ಪೀಠ, ‘ನಾವು ಮಗುವನ್ನು ಕೊಲ್ಲಲು ಸಾಧ್ಯವಿಲ್ಲ’ ಎಂದು ಮೌಖಿಕವಾಗಿ ಹೇಳಿದೆ.
ಕೇಂದ್ರ ಸರ್ಕಾರದ ಅರ್ಜಿಗೆ ಬುಧವಾರ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿತ್ತು. ಹೀಗಾಗಿ ಗುರುವಾರ ಅದು ತ್ರಿಸದಸ್ಯ ಪೀಠದ ಮುಂದೆ ಬಂದಿತು. ಈ ವೇಳೆ ಪೀಠವು, ‘ಇನ್ನೂ ಹುಟ್ಟಿಲ್ಲದ ಜೀವಂತ ಮಗುವಿನ ಹಕ್ಕು ಹಾಗೂ ಅದರ ತಾಯಿಗೆ ತನ್ನ ದೇಹದ ಮೇಲಿರುವ ಹಕ್ಕು ಎರಡರ ನಡುವೆ ನಾವು ಸಮತೋಲನ ಸಾಧಿಸಬೇಕಿದೆ. ಆರೋಗ್ಯವಂತ ಮಗುವಾಗಿ ಹುಟ್ಟಬಹುದಾದ ಭ್ರೂಣವನ್ನು ನಾವು ಕೊಲ್ಲಲು ಸಾಧ್ಯವಿಲ್ಲ. 26 ವಾರಗಳ ಕಾಲ ಮಗುವನ್ನು ಹೊಟ್ಟೆಯಲ್ಲಿರಿಸಿಕೊಂಡ ಮಹಿಳೆಗೆ ಇನ್ನು ಕೆಲವು ವಾರಗಳ ಕಾಲ ಕಾಯಲು ಸಾಧ್ಯವೇ ಎಂದು ಕೇಳಿ’ ಎಂದು ಆಕೆಯ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಇಸ್ರೇಲ್ ಯುದ್ಧ: 212 ಭಾರತೀಯರನ್ನು ಹೊತ್ತು ದೆಹಲಿ ತಲುಪಿದ ಏರ್ ಇಂಡಿಯಾ ಮೊದಲ ವಿಮಾನ
ಅಲ್ಲದೆ, ಮಹಿಳೆಯ ಜತೆ ಮಾತನಾಡಬೇಕು. ಗರ್ಭಾವಸ್ಥೆ ಮುಂದುವರಿಸಲು ಸಾಧ್ಯವೆ ಎಂದು ಇನ್ನೊಮ್ಮೆ ಕೇಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹಾಗೂ ಆಕೆಯ ವಕೀಲರಿಗೆ ಸೂಚಿಸಿತು. ‘ಈ ಮಗು ನನಗೆ ಬೇಡ. ನಾನು ಖಿನ್ನತೆ (Depression)ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದೇನೆ. 3ನೇ ಮಗು ಸಾಕುವ ಶಕ್ತಿ ನನಗಿಲ್ಲ. ಗರ್ಭಪಾತಕ್ಕೆ ಅನುಮತಿ ನೀಡಿ’ ಎಂದು 27 ವರ್ಷದ ಮಹಿಳೆಯೊಬ್ಬರು ಹೂಡಿರುವ ದಾವೆ ಇದಾಗಿದೆ.
ಇಸ್ರೇಲ್ ಯುದ್ಧ: ಬಾಂಬ್ ಶೆಲ್ಟರ್‌ಗೆ ಬರುತ್ತಿದ್ದಂತೆ ನಾವಿದ್ದ ಮನೆ ಧ್ವಂಸವಾಗಿದ್ದು ತಿಳಿಯಿತು