ಜಗತ್ತಿನ ನಾನಾ ಕಡೆ, ವಧೂವರರ ಮೊದಲ ರಾತ್ರಿಯ ಪದ್ಧತಿಗಳು ವಿಚಿತ್ರವಾಗಿರುತ್ತವೆ. ನಮ್ಮ ಭಾರತದಲ್ಲಿ, ವಧೂವರರ ಹಾಸಿಗೆಯ ಮೇಲೆ ಬಿಳೀ ಬಟ್ಟೆ ಹೊದೆಸುತ್ತಿದ್ದುದು, ಅದರಲ್ಲಿ ಮರುದಿನ ರಕ್ತದ ಕಲೆಗಳು ಇದ್ದರೆ ಹುಡುಗಿ ಕನ್ಯೆಯಾಗಿಯೇ ಇದ್ದವಳೆಂದು ಭಾವಿಸುವುದು, ಇಲ್ಲದಿದ್ದರೆ ಗಲಾಟೆ ಎಬ್ಬಿಸುವುದು ನಡೆಯುತ್ತಿತ್ತು. ಇದು ಹಳೇ ಪದ್ಧತಿ, ಈಗಿಲ್ಲವಾದರೂ, ಕೆಲವು ಕಡೆ ಇನ್ನೂ ಇದೆಯಂತೆ. ಇಂಥ ವಿಚಿತ್ರ ರೂಢಿಗಳು ಮೊದಲ ರಾತ್ರಿಗೆ ಸಂಬಂಧಿಸಿದಂತೆ ಹಲವು ಕಡೆ ಇವೆ.

ಬೇರೆ ಬೇರೆ ಮಲಗುವ ವಧುವರರು
ಬಂಗಾಳದಲ್ಲಿ ಒಂದು ಪದ್ಧತಿ ಇದೆ. ಅಲ್ಲಿ ಪ್ರಥಮ ರಾತ್ರಿಯಂದು ವಧು ಹಾಗೂ ವರರನ್ನು ಬೇರೆ ಬೇರೆ ಕೋಣೆಗಳಲ್ಲೇ ಮಲಗಿಸುತ್ತಾರೆ. ಹೀಗಾಗಿ ಫಸ್ಟ್ ನೈಟ್ ಏನು ನಡೆಯಬೇಕೋ ಅದು ನಡೆಯುವುದೇ ಇಲ್ಲ! ಬದಲಾಗಿ. ಮರುದಿನ ಬೆಳಗ್ಗೆ, ವಧೂ ತನ್ನ ತಾಯಿಯ ಮನೆಗೆ ಮರಳಿ ಬಂದು, ವರನ ಮನೆಯವರೆಲ್ಲ ಒಳ್ಳೆಯವರು ಎಂದು ಹೇಳುತ್ತಾಳೆ. ಇದಾದ ಬಳಿಕವೇ ವಧು ವರರಿಬ್ಬರೂ ಒಟ್ಟಿಗೆ ಮಲಗಲು ಹಿರಿಯರು ಒಪ್ಪಿಗೆ ಕೊಡುವುದು!

ವಧುವಿನ ತಾಯಿಯ ಸಮ್ಮುಖದಲ್ಲಿ
ದಕ್ಷಿಣ ಆಫ್ರಿಕದ ಕೆಲವು ಆದಿವಾಸಿಗಳಲ್ಲಿ ಒಂದು ಪದ್ಧತಿಯಿದೆ. ಅದೇನು ಎಂದರೆ, ವಧೂವರರು, ಮೊದಲ ರಾತ್ರಿಯನ್ನು ವಧುವಿನ ತಾಯಿಯ ಸಮ್ಮುಖದಲ್ಲೇ ಕಳೆಯಬೇಕು. ಅಂದರೆ ಗಂಡು ಹೆಣ್ಣು ಫಸ್ಟ್ ನೈಟ್ ಆಚರಿಸಿಕೊಳ್ಳುವ ಕೋಣೆಯಲ್ಲೇ ವಧುವಿನ ತಾಯಿಯೂ ಇರುತ್ತಾಳೆ. ಅಂದರೆ ಇದರಲ್ಲಿ ಒಂದು ಸೂಕ್ಷ್ಮವಿದೆ- ಸಂಭೋಗದ ಬಗ್ಗೆ ತಮಗೆ ತಿಳಿಯದಿರುವ ಅಂಶಗಳನ್ನು ಈ ಜೋಡಿ, ಈ ಹಿರಿಯ ಹೆಣ್ಣಿನ ಜೊತೆಗೆ ಕೇಳಿ ತಿಳಿದುಕೊಂಡು ಜ್ಞಾನ ಪಡೆದುಕೊಳ್ಳಬಹುದು ಎಂಬ ಉದ್ದೇಶದಿಂದಲೇ ಈ ರೂಢಿ ಚಾಲ್ತಿಗೆ ಬಂದಿದೆ.

ನೇತು ಬಿಟ್ಟ ಆಪಲ್
ಚೀನಾದಲ್ಲಿ ಒಂದು ರೂಢಿಯಿದೆ. ಅಲ್ಲಿ ಒಂದು ಆಪಲ್‌ ಅನ್ನು ವಧು ಹಾಗೂ ವರರನ್ನು ಆಚೆ ಈಚೆ ನಿಲ್ಲಿಸಿ ಅವರ ನಡುವೆ ಒಂದು ಆಪಲ್‌ ಹಣ್ಣನ್ನು ನೇತು ಬಿಡುತ್ತಾರೆ. ಇಬ್ಬರೂ ಹಾರಿ ಅದನ್ನು ಕಚ್ಚಲು ಪ್ರಯತ್ನಿಸಬೇಕು. ಯಾರು ಮೊದಲು ಕಚ್ಚಿದರೋ ಹಣ್ಣು ಅವರ ಪಾಲು. ಆದರೆ ಬಂಧುಗಳು ಹಣ್ಣು ಇವರಿಗೆ ಸಿಕ್ಕದಂತೆ ಅದನ್ನು ಅತ್ತಿತ್ತ ಎಳೆದಾಡುತ್ತ ಇರುತ್ತಾರೆ. ಈ ಹಾರಾಟದಲ್ಲಿ ವಧು- ವರರ ತುಟಿಗಳು ಪರಸ್ಪರ ಮುತ್ತನ್ನು ವಿನಿಮಯ ಮಾಡಿಕೊಳ್ಳುವುದನ್ನು ನೋಡುವುದೇ ಒಂದು ಮಜಾ. ಅದೇ ಇದರ ಉದ್ದೇಶ.

ಮೂರು ವರ್ಷದಲ್ಲೇ ಮದುವೆಯಾದವಳು ಈಗ ಪೊಲೀಸ್ ಸಾಹಿಬ್! ...

ಚೀಸ್‌ ಮೇಲೆ ಉರುಳಾಟ
ಸ್ಕಾಟ್ಲೆಂಡ್‌ನಲ್ಲಿ ಒಂದು ಪದ್ಧತಿಯಿದೆ. ಅದರ ಪ್ರಕಾರ ವಧು ವರರು ತಮ್ಮ ಹಾಸಿಗೆಗೆ ಚೀಸ್ ಅನ್ನು ಹಚ್ಚಬೇಕು. ಚೀಸ್‌ನ ಮೇಲೆ ಉರುಳಾಡಬೇಕು. ಅದು ಹೇಗೆ ಅದರ ಮೇಲೆ ನಿದ್ರಿಸುತ್ತಾರೋ ದೇವರೇ ಬಲ್ಲ. ಆದರೆ ನಿದ್ರಿಸುವುದಕ್ಕಲ್ಲ ತಾನೆ ಫಸ್ಟ್ ನೈಟ್‌ ಇರುವುದು! ಅಲ್ಲೇ ಪಾಯಿಂಟ್ ಇರುವುದು. ಚೀಸ್‌ನ ಮೇಲೆ ಉರುಳಾಡುವುದರಿಂದಲೇ ಸಕ್ಕತ್ ಮಜಾ ಸಿಗುತ್ತದೋ ಏನೋ.

ಮೀನಿನ ತಾಡನ
ಕೊರಿಯಾದಲ್ಲಿ ಒಂದು ವಿಚಿತ್ರ ರೂಢಿ ಇದೆ. ಅಲ್ಲಿ ಫಸ್ಟ್ ನೈಟ್‌ಗೆ ಮೊದಲು, ವಧು ರೂಮಿನಲ್ಲಿ ವರನಿಗಾಗಿ ಕಾಯುತ್ತಿರುವಾಗ, ವರನನ್ನು ಆತನ ಗೆಳೆಯರು ಅಟಕಾಯಿಸಿಕೊಂಡು ಬಿಡುತ್ತಾರೆ. ಆತನನ್ನು ನಡುವೆ ಕುಳ್ಳಿರಿಸಿಕೊಂಡು, ಅವನ ಕಾಲುಗಳನ್ನು ಬೆತ್ತಲೆ ಮಾಡಿ, ಅವನ ಪಾದಗಳಿಗೆ ಸತ್ತ ಮೀನಿನಿಂದ ಬಾರಿಸುತ್ತಾರೆ. ವರ ಬೊಬ್ಬಿಟ್ಟರೂ ಬಿಡುವುದೇ ಇಲ್ಲ. ಅವರ ಕನಸು, ಫಸ್ಟ್ ನೈಟ್ ಅವನು ಏನು ಮಾಡಬೇಕೆಂದೆದಿದ್ದಾನೆ ಎಲ್ಲವನ್ನೂ ಕೇಳಿ ಕೇಳಿ ಬಯಲಿಗೆಳೆಯುತ್ತಾರೆ. ಇದು ವಯಾಗ್ರಾ ಥರ ಕೆಲಸ ಮಾಡುತ್ತದೆ ಎಂದು ಹೇಳುವವರಿದ್ದಾರೆ. ಪ್ರಥಮ ರಾತ್ರಿಯ ತಲ್ಲಣವನ್ನಂತೂ ಈ ಕ್ರಮ ದೂರ ಮಾಡುತ್ತದೆ ಎನ್ನಲು ಅಡ್ಡಿಯಿಲ್ಲ.

47ರಲ್ಲೂ ಮಲೈಕಾ ಫಿಟ್: ಬ್ಯೂಟಿ ಸೀಕ್ರೆಟ್‌ ಹೇಳಿದ ನಟಿ ...

ಕೋಣೆ ಹೊರಗೆ ಗದ್ದಲ
ಫ್ರಾನ್ಸಿನಲ್ಲಿ ಚಾರಿವಾರಿ ಎಂಬ ಒಂದು ಕ್ರಮವಿದೆ. ವಧು ವರರು ಕೋಣೆ ಸೇರಿ ಬಾಗಿಲು ಹಾಕಿಕೊಂಡು ಇದ್ದರೆ, ಅವರ ಬಂಧುಗಳು, ಗೆಳೆಯ ಗೆಳತಿಯರು ಹೊರಗೆ ಸೇರಿ ಪಾತ್ರೆ ಇತ್ಯಾದಿಗಳಿಗೆ ಬಡಿಯುತ್ತಾ ರಣರಂಪ ಗದ್ದಲ ಎಬ್ಬಿಸುತ್ತಾರೆ. ವಧುವರರು ಹೊರಗೆ ಬಂದು ಈ ಬಂಧುಗಳಿಗೆ ಪಾನೀಯ ಇತ್ಯಾದಿಗಳನ್ನು ಕೊಟ್ಟ ಮೇಲೆಯೇ ಅವರು ಶಾಂತರಾಗುವುದು.

ಮೈಮೇಲೆ ಹೊಲಸಿನ ಮಳೆ
ಸ್ಕಾಟ್ಲೆಂಡ್‌ನಲ್ಲಿ ಒಂದು ಕ್ರಮವಿದೆ. ಅದರಲ್ಲಿ ಮೊದಲ ರಾತ್ರಿಗೆ ಮುನ್ನ ವಧುವರರಿಬ್ಬರನ್ನೂ ಒಟ್ಟಿಗೆ ಕೂರಿಸಿ ಅವರ ಮೇಲೆ ಹೊಲಸನ್ನೆಲ್ಲ ಸುರಿಯಲಾಗುತ್ತದೆ. ಇಬ್ಬರೂ ಒಟ್ಟಾಗೆ ಯಾವುದೇ ಕಷ್ಟಕೋಟಲೆಗಳಿಗೆ ಸಿದ್ಧರಾಗಿರಬೇಕು ಎಂಬುದು ಇದರ ಅರ್ಥವಂತೆ. ಹೀಗೆ ಹೊಲಸು ಸುರಿದ ಬಳಿಕ ಇಬ್ಬರೂ ಒಟ್ಟಿಗೇ ಸ್ನಾನದ ಮನೆಗೆ ಹೋಗಿ ಅವರನ್ನು ಶುಚಿಗೊಳಿಸಿಕೊಳ್ಳಬೇಕು. ಇದಂತೂ ರೋಮಾಂಚಕಾರಿ ಎನ್ನಲು ಅಡ್ಡಿಯಿಲ್ಲ ಅಲ್ಲವೇ!

ಅಲ್ಲಿ ಮ್ಯಾನ್‌ಸ್ಕೇಪ್ ಮಾಡುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕು 5 ವಿಷಯಗಳು! ...