Asianet Suvarna News Asianet Suvarna News

ಮಕ್ಕಳು ಕದಿಯುತ್ತಾರಾ? ಇಗ್ನೋರ್ ಮಾಡ್ಬೇಡಿ, ಆರಂಭದಲ್ಲಿಯೇ ಚಿವುಟಿ

ಶಾಲೆಯಲ್ಲಿ ಪೆನ್ಸಿಲ್ ಕದಿಯೋದು, ರಬ್ಬರ್ ಕದಿಯೋದು ಸಾಮಾನ್ಯ ಎನ್ನಿಸಬಹುದು. ಆದ್ರೆ ಮಕ್ಕಳ ಈ ಕೆಲಸ ಚಟವಾದ್ರೆ ಸಮಸ್ಯೆಯಾಗುತ್ತದೆ. ಹಾಗಾಗಿ ಆರಂಭದಲ್ಲಿಯೇ ಮಕ್ಕಳಿಗೆ ಬುದ್ಧಿ ಹೇಳಿ ಸರಿದಾರಿಗೆ ತರುವುದು ಮುಖ್ಯ.
 

Ways To Stop Your Child From Stealing
Author
First Published Nov 4, 2022, 1:13 PM IST

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಗಾದೆಯಿದೆ. ಬಾಲ್ಯದಲ್ಲಿ ಮಕ್ಕಳು ಎನ್ನುವ ಕಾರಣಕ್ಕೆ ಅವರ ಸ್ವಭಾವದಲ್ಲಿ ಬದಲಾವಣೆ ಮಾಡಲು ಪಾಲಕರು ಹೋಗೋದಿಲ್ಲ. ಮಕ್ಕಳು ಮಾಡಿದ ತಪ್ಪನ್ನು ಮಾಫಿ ಮಾಡಲು ಶುರು ಮಾಡ್ತಾರೆ. ಅತಿಯಾಗಿ ಮಕ್ಕಳನ್ನು ಪ್ರೀತಿಸುವ ಪಾಲಕರು, ಮಕ್ಕಳು ಮಾಡಿದ್ದಲ್ವಾ ಅಂತಾ ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಹೋಗ್ತಾ ಹೋಗ್ತಾ ಮಕ್ಕಳ ಸ್ವಭಾವ ಸಮಸ್ಯೆ ತರಲು ಶುರುವಾಗುತ್ತದೆ. ದೊಡ್ಡವರಾಗ್ತಿದ್ದಂತೆ ಅವರನ್ನು ಬದಲಿಸಲು ಸಾಧ್ಯವಾಗೋದಿಲ್ಲ. ಹಾಗಾಗಿ ಮುಂದೆ ತೊಂದರೆ ತರಬಹುದು ಎಂಬ ಮಕ್ಕಳ ಸ್ವಭಾವವನ್ನು ಬಾಲ್ಯದಲ್ಲಿಯೇ ತಿದ್ದಬೇಕು.

ಮಕ್ಕಳಿ (Children) ಗೆ ಆಕರ್ಷಣೆ ಹೆಚ್ಚು. ತಮ್ಮಲ್ಲಿರುವ ವಸ್ತುವನ್ನು ಬಿಟ್ಟು ಅವರು ಬೇರೆಯವರ ವಸ್ತುವಿಗೆ ಆಸೆಪಡ್ತಾರೆ. ಇದೇ ಕಾರಣಕ್ಕೆ ಬೇರೆಯವರ ವಸ್ತುಗಳನ್ನು ತೆಗೆದಿಟ್ಟುಕೊಳ್ಳಲು ಶುರು ಮಾಡ್ತಾರೆ. ಇದು ಅಪರಾಧ, ಬೇರೆಯವರ ವಸ್ತುವನ್ನು ತೆಗೆದಿಟ್ಟುಕೊಳ್ಳಬಾರದು, ಇದು ಕಳ್ಳತನ (Theft) ಎಂಬ ಯಾವುದೇ ಸಂಗತಿ ಅವರಿಗೆ ತಿಳಿದಿರುವುದಿಲ್ಲ. ಆರಂಭದಲ್ಲಿ ಶಾಲೆ (School) ಯಿಂದ ಶುರುವಾಗುವ ಈ ಅಭ್ಯಾಸಕ್ಕೆ ಶುರುವಲ್ಲಿಯೇ ಬ್ರೇಕ್ ಹಾಕದೆ ಹೋದ್ರೆ ಅದನ್ನು ನಿಲ್ಲಿಸೋದು ಕಷ್ಟ. ಮಕ್ಕಳು ಕಳ್ಳತನ ಶುರು ಮಾಡಿದ್ದಾರೆ ಎಂದಾದ್ರೆ ಅವರನ್ನು ಹೇಗೆ ದಾರಿಗೆ ತರಬೇಕು ಎಂಬುದನ್ನು ನಾವು ಹೇಳ್ತೇವೆ.

ಮಕ್ಕಳು ಅನಗತ್ಯವಾಗಿ ಸಾರಿ ಕೇಳ್ತಿರ್ತೀರಾ ? ಅಭ್ಯಾಸ ತಪ್ಪಿಸೋಕೆ ಹೀಗ್ ಮಾಡಿ

ಮಕ್ಕಳಿಗೆ ವಸ್ತುವಿನಲ್ಲಿರುವ ವ್ಯತ್ಯಾಸವನ್ನು ಹೇಳಿ : ಮಕ್ಕಳಿಗೆ ನಮ್ಮ ವಸ್ತು ಹಾಗೂ ಬೇರೆಯವರ ವಸ್ತುವಿನ ಮಧ್ಯೆ ಇರುವ ವ್ಯತ್ಯಾಸವನ್ನು ಹೇಳಬೇಕು. ಬೇರೆಯವರ ವಸ್ತುಗಳನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು, ಅಗತ್ಯವಿದ್ದರೆ ನಮ್ಮನ್ನು ಕೇಳಬೇಕು ಎಂದು ಮಕ್ಕಳಿಗೆ ತಿಳಿ ಹೇಳಬೇಕು. ಹಾಗೆಯೇ ಮಕ್ಕಳಿಗೆ ಅಗತ್ಯವಿರುವ ವಸ್ತುಗಳ ಬಗ್ಗೆ ಪಾಲಕರು ಗಮನ ನೀಡಬೇಕು. ಕೆಲವೊಮ್ಮೆ ಮಕ್ಕಳ ಬ್ಯಾಗ್ ನಲ್ಲಿ ಪೆನ್ಸಿಲ್, ರಬ್ಬರ್ ಇರೋದಿಲ್ಲ. ಆಗ ಮಕ್ಕಳು ಬೇರೆ ಮಕ್ಕಳ ಪೆನ್ಸಿಲ್ ತೆಗೆದಿಟ್ಟುಕೊಳ್ತಾರೆ.

ಮಕ್ಕಳ ಕಳ್ಳತನಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡುವುದು ಮುಖ್ಯ :  ಕೆಲವು ಬಾರಿ ಮಕ್ಕಳ ಬ್ಯಾಗ್ ನಲ್ಲಿ ಎಲ್ಲ ವಸ್ತುಗಳಿರುತ್ತವೆ. ಆದ್ರೂ ಅವರು ಬೇರೆಯವರ ವಸ್ತುವನ್ನು ಮನೆಗೆ ತಂದಿರುತ್ತಾರೆ. ಆಗ ಇದಕ್ಕೆ ಕಾರಣವೇನು ಎಂಬುದನ್ನು ನೀವು ತಿಳಿಯಬೇಕು. ಒಂದೆರಡು ಬಾರಿ ಬೇರೆಯವರ ವಸ್ತುವನ್ನು ಎತ್ತಿಟ್ಟುಕೊಳ್ಳುವ ಮಕ್ಕಳಿಗೆ ಅದು ಚಟವಾಗುತ್ತದೆ. ಅದ್ರಲ್ಲಿ ಖುಷಿ ಸಿಗಲು ಶುರುವಾಗುತ್ತದೆ. ಈ ಚಟವನ್ನು ಬಿಡಿಸುವುದು ಕಷ್ಟ. ಹಾಗಾಗಿ ಆರಂಭದಲ್ಲಿಯೇ ಕಾರಣ ತಿಳಿದು ಅದನ್ನು ಬಗೆಹರಿಸುವ ಪ್ರಯತ್ನ ನಡೆಸಿ.

ಏಟಿನಿಂದ ಬುದ್ದಿ ಹೇಳಲು ಸಾಧ್ಯವಿಲ್ಲ : ಮಕ್ಕಳು ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾದಾಗ ಪಾಲಕರು ಕೈ ಎತ್ತುತ್ತಾರೆ. ಇದು ತಪ್ಪು. ನೀವು ಮಕ್ಕಳಿಗೆ ಏಟು ನೀಡಿದ್ರೆ ಅವರು ಸುಧಾರಿಸುತ್ತಾರೆ ಎಂಬುದು ಸುಳ್ಳು. ಪ್ರೀತಿಯಿಂದ ನೀವು ಮಕ್ಕಳನ್ನು ತಿದ್ದಬೇಕಾಗುತ್ತದೆ. ಹಾಗಾಗಿ ಅವರನ್ನು ಹತ್ತಿರ ಕುಳಿಸಿಕೊಂಡು ನಿಧಾನವಾಗಿ ಹೀಗೆ ಮಾಡುವುದು ತಪ್ಪು ಎಂದು ಮಕ್ಕಳಿಗೆ ತಿಳಿಸಿ.

ಮುಂದಿನ ಸಮಸ್ಯೆಯನ್ನು ಅರ್ಥ ಮಾಡಿಸಿ : ಒಂದೊಂದು ಮಕ್ಕಳ ತಿಳುವಳಿಕೆ ಶಕ್ತಿ ಭಿನ್ನವಾಗಿರುತ್ತದೆ. ನಿಮ್ಮ ಮಕ್ಕಳಿಗೆ ಯಾವ ವಿಧಾನದಲ್ಲಿ ಹೇಳಿದ್ರೆ ಬೇಗ ಅರ್ಥವಾಗುತ್ತದೆ ಎಂಬುದು ನಿಮಗೆ ತಿಳಿದಿರುತ್ತದೆ. ಕಳ್ಳತನ ಮಾಡಿದ್ರೆ ಮುಂದೆ ಏನಾಗುತ್ತದೆ ಎಂಬುದನ್ನು ವಿವರಿಸಿ. ಶಾಲೆಯಲ್ಲಿ ಎಲ್ಲರ ಮುಂದೆ ಅವಮಾನವಾಗುತ್ತದೆ, ಸ್ನೇಹಿತರು ಮಾತನಾಡುವುದಿಲ್ಲ, ಶಾಲೆಯಲ್ಲಿ ಕಳ್ಳ ಎಂಬ ಪಟ್ಟ ಬರುತ್ತದೆ. ಇದ್ರಿಂದ  ತಲೆ ಎತ್ತಿ ನಡೆಯಲು ಸಾಧ್ಯವಿಲ್ಲ, ಶಿಕ್ಷಕರು ಶಿಕ್ಷೆ ನೀಡುತ್ತಾರೆ ಹೀಗೆ ಅನೇಕ ರೀತಿಯಲ್ಲಿ ಅವರಿಗೆ ಇದು ತಪ್ಪು ಎಂಬುದನ್ನು ನೀವು ಅರ್ಥ ಮಾಡಿಸಬೇಕು.

Parenting Tips: ಮಗಳಿಗೇನಾದರೂ ಮುಟ್ಟಿನ ಸಮಸ್ಯೆ ಇದ್ಯಾ, ಹುಷಾರಾಗಿ ಹೇಗೆ ಹ್ಯಾಂಡಲ್ ಮಾಡಬಹುದು?

ಆಸೆ ನಿಯಂತ್ರಿಸುವುದನ್ನು ಕಲಿಸಿ : ಮೊದಲೇ ಹೇಳಿದಂತೆ ಮಕ್ಕಳು ತಮ್ಮದಲ್ಲದಿರುವ ವಸ್ತುವನ್ನು ಹೆಚ್ಚು ಇಷ್ಟಪಡ್ತಾರೆ. ನೀವು ಮಕ್ಕಳಿಗೆ ಅವರ ಬಳಿ ಇರುವ ವಸ್ತುವಿನಲ್ಲಿಯೇ ತೃಪ್ತಿ ಹೊಂದುವುದು ಹೇಗೆ ಎಂಬುದನ್ನು ತಿಳಿಸಬೇಕು. ಎಲ್ಲರ ಬಳಿಯೂ, ಎಲ್ಲ ವಸ್ತು ಇರಲು ಸಾಧ್ಯವಿಲ್ಲ. ನಿಮ್ಮ ಬಳಿ ಇರುವ ವಸ್ತು ನಿಮ್ಮ ಸ್ನೇಹಿತರ ಬಳಿ ಇಲ್ಲ. ಹಾಗೆ ಅವರ ಬಳಿ ಇರುವುದು ನಿಮ್ಮಲ್ಲಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕು.
 

Follow Us:
Download App:
  • android
  • ios