Asianet Suvarna News Asianet Suvarna News

ಮಕ್ಕಳು ಅನಗತ್ಯವಾಗಿ ಸಾರಿ ಕೇಳ್ತಿರ್ತೀರಾ ? ಅಭ್ಯಾಸ ತಪ್ಪಿಸೋಕೆ ಹೀಗ್ ಮಾಡಿ

ತಪ್ಪು ಮಾಡಿದಾಗ ಸಾರಿ ಕೇಳುವುದು ಸಹಜ. ಆದರೆ ಕೆಲವು ಮಕ್ಕಳಿಗೆ ಮಾತು ಮಾತಿಗೆ ಆಗಾಗ ಸಾರಿ ಕೇಳುವ ಅಭ್ಯಾಸವಿರುತ್ತದೆ. ಅದಕ್ಕೇನು ಕಾರಣ ? ಮಕ್ಕಳ ಇಂಥಾ ಅಭ್ಯಾಸ ತಪ್ಪಿಸಲು ಪೋಷಕರು ಏನು ಮಾಡ್ಬೋದು ಅನ್ನೋ ಮಾಹಿತಿ ಇಲ್ಲಿದೆ.

Parenting Tips: How To Stop Your Daughter From Apologizing Vin
Author
First Published Nov 2, 2022, 12:43 PM IST

ತಪ್ಪುಗಳನ್ನು ಒಪ್ಪಿಕೊಳ್ಳುವುದರಲ್ಲಿ ಮತ್ತು ಕ್ಷಮೆಯಾಚಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಆ ಪದಕ್ಕೂ ಒಂದು ಪರಿಪೂರ್ಣವಾದ ಅರ್ಥವಿದೆ. ಹೀಗಾಗಿ ಸುಮ್‌ ಸುಮ್ನೆ ಆ ಪದವನ್ನು ಬಳಸೋದನ್ನು ಮಾಡಬಾರದು. ತಪ್ಪಿದ್ದಾಗ ಮಾತ್ರ ಕ್ಷಮೆ ಯಾಚಿಸಬೇಕು. ನನ್ನನ್ನು ಕ್ಷಮಿಸಿ ಎಂಬ ಪದಗುಚ್ಛವನ್ನು ಮಕ್ಕಳು, ವಿಶೇಷವಾಗಿ ಹೆಣ್ಣುಮಕ್ಕಳು ಪದೇ ಪದೇ ಬಳಸಿದಾಗ, ಅದು ಹೆಚ್ಚು ಗಂಭೀರವಾದ ಯಾವುದರದ್ದೋ ಸಂಕೇತವಾಗಿರಬಹುದು. ವಿಶೇಷವಾಗಿ ಮಕ್ಕಳು ಆಗಿಂದಾಗೆ ಸಾರಿ ಕೇಳಲು ಯಾವುದೇ ಕಾರಣಗಳಿಲ್ಲ. ಹೀಗಾಗಿ ಆಗಾಗ ಸಾರಿ ಕೇಳುವ ಇಂಥಾ ಅಭ್ಯಾಸವನ್ನು ಕೆಲವೊಬ್ಬರು ದುರುಪಯೋಗ ಪಡಿಸಿಕೊಂಡಿಸಿಕೊಂಡು ಬಿರುತ್ತಾರೆ.

ಆಗಾಗ ಕ್ಷಮೆಯಾಚಿಸುವುದು ಸಂಘರ್ಷವನ್ನು ಶಮನಗೊಳಿಸಲು ಒಂದು ಮಾರ್ಗವಾಗಿದೆ. ಸಾರಿ ಕೇಳುವುದರಿಂದ ಚರ್ಚೆ ಮುಂದುವರಿಯುವುದಿಲ್ಲ. ಶಾಂತಿಯುತವಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ. ತಜ್ಞರ ಪ್ರಕಾರ ಮಕ್ಕಳು, ವಿಶೇಷವಾಗಿ ಯುವತಿಯರು ಕ್ಷಮೆಯಾಚಿಸುವ ಜವಾಬ್ದಾರಿಯನ್ನು ಅನುಭವಿಸಲು ಇದು ಒಂದು ಕಾರಣವಾಗಿದೆ. ಆದರೆ ಹಾಗಾಗಬಾರದು.ಬದಲಿಗೆ ಹೆಣ್ಣುಮಕ್ಕಳು ಹೆಚ್ಚು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಹಾಗಿದ್ರೆ ಹೆಚ್ಚು ಆತ್ಮವಿಶ್ವಾಸ, ಹೆಚ್ಚು ದೃಢವಾದ ಮಕ್ಕಳನ್ನು ಬೆಳೆಸಲು ಪೋಷಕರು ಏನು ಮಾಡಬೇಕು? ಅನಗತ್ಯವಾಗಿ ಕ್ಷಮಿಸಿ ಎಂದು ಹೇಳುವುದನ್ನು ನಿಲ್ಲಿಸಲು ನಿಮ್ಮ ಹೆಣ್ಣುಮಕ್ಕಳಿಗೆ ಏನನ್ನು ಕಲಿಸಬೇಕು ಎಂಬ ಮಾಹಿತಿ ಇಲ್ಲಿದೆ.

Parenting Tips: ಮಕ್ಕಳನ್ನು ಶಿಕ್ಷಿಸುವ ಮೊದಲು ಪೋಷಕರು ಮಾಡಬೇಕಾದ ಕೆಲಸಗಳಿವು

ಮಕ್ಕಳನ್ನು ಆತ್ಮವಿಶ್ವಾಸದಿಂದ ಬೆಳೆಸಿ
ಕಲಿಕೆ (Learning) ಮನೆಯಿಂದಲೇ ಪ್ರಾರಂಭವಾಗುತ್ತದೆ. ಹೆಚ್ಚು ಆತ್ಮವಿಶ್ವಾಸ (Confidence)ವಿರುವ ಹೆಣ್ಣುಮಕ್ಕಳನ್ನು ಬೆಳೆಸಲು, ನೀವು ಅವರು ಸುರಕ್ಷಿತ (Safe) ಭಾವನೆಯನ್ನು ಅನುಭವಿಸುವ ವಾತಾವರಣವನ್ನು ಸೃಷ್ಟಿಸಬೇಕು. ಅವರ ದೃಷ್ಟಿಕೋನವನ್ನು ಗೌರವಿಸಬೇಕು ಮತ್ತು ಮೆಚ್ಚುಗೆ ಸೂಚಿಸಬೇಕು. ಸಾಮಾನ್ಯವಾಗಿ, ಪೋಷಕರು (Parents) ಸಾಮಾಜಿಕ ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಮಕ್ಕಳನ್ನು ಸಹ ಅದೇ ಒತ್ತಡದ (Pressure) ಪ್ರಭಾವಕ್ಕೆ ಒಳಗಾಗಿ ಬೆಳೆಸುತ್ತಾರೆ. ಆದರೆ ಹಾಗೆ ಮಾಡಬಾರದು. ಹೆಣ್ಣು-ಗಂಡು ಎಂಬ ತಾರತಮ್ಯವನ್ನು ಬಿಟ್ಟು ಮಕ್ಕಳನ್ನು ಬೆಳೆಸಿ. ಇದರಿಂದ ಮಕ್ಕಳು ತಮ್ಮ ವ್ಯಕ್ತಿತ್ವವನ್ನು (Personality) ಉತ್ತಮವಾಗಿ ರೂಪಿಸಿಕೊಳ್ಳುತ್ತಾರೆ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ.

ಪೇರೆಂಟಿಂಗ್‌ ಸ್ಟೈಲ್ ಬದಲಾಯಿಸಿ
ಮಕ್ಕಳಲ್ಲಿ ಧೈರ್ಯ ತುಂಬಲು ಪೋಷಕರು ತಮ್ಮ ಪೇರೆಂಟಿಂಗ್ ಸ್ಟ್ರೈಲ್‌ನ್ನು ಸಹ ಬದಲಾಯಿಸಿಕೊಳ್ಳಬಹುದು. ಕ್ಷಮೆ ಕೇಳುವ ಅಥವಾ ಜನರನ್ನು ಮೆಚ್ಚಿಸುವ ಹೆಣ್ಣುಮಕ್ಕಳು ಕಟ್ಟುನಿಟ್ಟಾದ, ನಿರಂಕುಶ ಪೋಷಕರನ್ನು ಹೊಂದಿರಬಹುದು. ಇಂತಹ ಪೋಷಕರ ಶೈಲಿಯು ಮಕ್ಕಳನ್ನು ಮತ್ತು ಅವರ ವಿಶಿಷ್ಟ ವ್ಯಕ್ತಿತ್ವಗಳನ್ನು ಪೋಷಿಸುವ ಬದಲು ವಿಧೇಯತೆ, ಶಿಸ್ತು, ನಿಯಂತ್ರಣವನ್ನು ಪ್ರೋತ್ಸಾಹಿಸುತ್ತದೆ. ಇದು ಮಗುವಿನ ಅಗತ್ಯತೆಗಳನ್ನು ಕಡೆಗಣಿಸಲು ಕಾರಣವಾಗಬಹುದು ಮತ್ತು ಅವರ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ವಿಫಲರಾಗಬಹುದು. ಆದ್ದರಿಂದ, ನಿಮ್ಮ ಮಗುವಿಗೆ ತಮ್ಮ ಬಗ್ಗೆ ಕಡಿಮೆ ಮತ್ತು ಮುಖ್ಯವಲ್ಲ ಎಂದು ಭಾವಿಸುವಂತೆ ಮಾಡಿ.

ಮಾತು ಮಾತಿಗೆ ಮಕ್ಕಳ ಮೇಲೆ ಸಿಟ್ಟು ಬರುತ್ತಾ ? ಕಂಟ್ರೋಲ್ ಮಾಡದಿದ್ರೆ ಕಷ್ಟ

ಮಕ್ಕಳಿಗೆ ಇಲ್ಲ ಎಂದು ಹೇಳಬೇಡಿ
ನಿಮ್ಮ ಮಗಳ ವಿಚಾರಗಳನ್ನು ನೀವು ಒಪ್ಪಿದರೂ ಒಪ್ಪದಿದ್ದರೂ ಕೇವಲ 'ಹೌದು' ಅಥವಾ 'ಇಲ್ಲ' ಎಂದು ಹೇಳಬೇಡಿ. ಅವರ ಅಭಿಪ್ರಾಯಗಳು, ಅವರ ಭಾವನೆಗಳು ಮತ್ತು ಅವರು ಹೇಗೆ ಭಾವಿಸುತ್ತಾರೆ ಎಂಬುದನ್ನು ಮೌಲ್ಯೀಕರಿಸಿ. ನಿಮಗೆ ಒಪ್ಪಿಗೆಯಾಗದ ಕೆಲಸವನ್ನು ಅವರು ಮಾಡಲು ಬಯಸಿದರೆ, ಇಲ್ಲ ಎಂದು ಹೇಳಬೇಡಿ. ಬದಲಿಗೆ ನಿಮಗೆ ಒಪ್ಪಿಗೆಯಿಲ್ಲದ ಕೆಲಸ ಅವರು ಮಾಡುತ್ತಿದ್ದರೆ ಏಕೆ ಎಂದು ಅವರನ್ನು ಕೇಳಿ ಮತ್ತು ಅವರ ಆಯ್ಕೆಗೆ ಸರಿಯಾದ ತಾರ್ಕಿಕತೆಯನ್ನು ಒದಗಿಸಲು ಅವರನ್ನು ಪ್ರೋತ್ಸಾಹಿಸಿ. 

ಬಲವಾದ ಅಭಿಪ್ರಾಯ ಹೊಂದಲು ಮಕ್ಕಳನ್ನು ಪ್ರೋತ್ಸಾಹಿಸಿ 
ಹೆಣ್ಣುಮಕ್ಕಳನ್ನು ಬೆಳೆಸುವುದರ ಜೊತೆಗೆ, ನೀವು ಅವರಲ್ಲಿ ಚೆನ್ನಾಗಿ ಮಾತನಾಡುವ, ಆತ್ಮವಿಶ್ವಾಸ ಮತ್ತು ಉತ್ತಮ ವಾದ ಮಾಡುವ ಗುಣಗಳನ್ನು ಬೆಳೆಸುವತ್ತ ಗಮನ ಹರಿಸಬೇಕು. ನಿಮ್ಮ ಹೆಣ್ಣುಮಕ್ಕಳಿಗೆ ಅವರ ಅಭಿಪ್ರಾಯಗಳನ್ನು, ಅವರ ಆಲೋಚನೆಗಳನ್ನು ವ್ಯಕ್ತಪಡಿಸಲು ನೀವು ಸ್ವಾತಂತ್ರ್ಯವನ್ನು ನೀಡುತ್ತಿರುವಾಗ, ಅವುಗಳನ್ನು ಹೇಗೆ ವ್ಯಕ್ತಪಡಿಸಬೇಕೆಂದು ನೀವು ಅವರಿಗೆ ಕಲಿಸಬೇಕು. ಸುರಕ್ಷಿತ ಮತ್ತು ನಿರ್ಣಯಿಸದ ವಾತಾವರಣವನ್ನು ಒದಗಿಸುವುದು ಮಾತ್ರವಲ್ಲ, ಅವರ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ಸಕ್ರಿಯವಾಗಿ ಆಲಿಸುವುದು ಮತ್ತು ಮೌಲ್ಯೀಕರಿಸುವುದನ್ನು ಅಭ್ಯಾಸ ಮಾಡುವುದು ಅವರ ವ್ಯಕ್ತಿತ್ವವನ್ನು ದೃಢಪಡಿಸುತ್ತದೆ.

Follow Us:
Download App:
  • android
  • ios