ಶಾರೀರಿಕ ಸಂಬಂಧ ಬೆಳೆಸುವಾಗ ಇರಲಿ ಈ ವಿಷಯಗಳೆಡೆಗೆ ಗಮನ!

ಶಾರೀರಿಕ ಸಂಬಂಧ ಬೆಳೆಸುವಾಗ ದೇಹ ಹಾಗೂ ಮನಸ್ಸು ಎರಡೂ ಕೇಂದ್ರೀಕೃತವಾಗಿರ್ಬೇಕು. ಒಂದು ಕೈಕೊಟ್ರೂ ಸಂಪೂರ್ಣ ಸುಖ ಸಿಗೋದು ಕಷ್ಟ. ಕೆಲವೊಮ್ಮೆ ಮನಸ್ಸು ಸಿದ್ಧವಿದ್ರೂ ದೇಹ ತಯಾರಿರೋದಿಲ್ಲ. ದೇಹವನ್ನು ಮನಸ್ಸಿನ ದಾರಿಗೆ ತರಲು ತುಂಬಾ ಕಷ್ಟಪಡ್ಬೇಕಾಗಿಲ್ಲ.
 

Mind body must be synchronized when on bed to have happy married life

ದೈಹಿಕ ಹಾಗೂ ಮಾನಸಿಕವಾಗಿ ದೇಹವನ್ನು ರಿಲ್ಯಾಕ್ಸ್ ಮಾಡುವ ಕ್ರಿಯೆಗಳಲ್ಲಿ ಸಂಭೋಗ ಕೂಡ ಒಂದು. ಮನಸ್ಸು ಹಾಗೂ ದೇಹ ಬಹುತೇಕ ಬಾರಿ ಒಂದಕ್ಕೊಂದು ಸ್ಪಂದಿಸುವುದಿಲ್ಲ. ಮನಸ್ಸು ಹೇಳಿದಂತೆ ದೇಹ ಕೇಳುವುದಿಲ್ಲ ಇಲ್ಲ ದೇಹ ಹೇಳಿದಂತೆ ಮನಸ್ಸು ಕೇಳೋದಿಲ್ಲ. ಶಾರೀರಿಕ ಸಂಬಂಧದ ವಿಷ್ಯದಲ್ಲೂ ಅನೇಕ ಬಾರಿ ಇದು ಸಂಭವಿಸುತ್ತದೆ. ಮನಸ್ಸು ಲೈಂಗಿಕ ಕ್ರಿಯೆಯನ್ನು ಬಯಸುತ್ತಿರುತ್ತದೆ. ಆದ್ರೆ ದೇಹ ಉತ್ತೇಜನಗೊಳ್ಳುವುದಿಲ್ಲ. ಇಂಥ ಸಂದರ್ಭ ಸಂಗಾತಿ ಮುಂದೆ ಮುಜುಗರ ತರಿಸುತ್ತದೆ. ಹಾಗೆ ಮನಸ್ಸಿಗೆ ನೋವುಂಟಾಗುತ್ತದೆ. ನೀವೂ ಕೂಡ ಆ ಕ್ಷಣಗಳನ್ನು ಎದುರಿಸಿರಬಹುದು. ಈ ಸಮಸ್ಯೆ ಕೇವಲ ನಿಮಗೊಬ್ಬರಿಗಲ್ಲ. ಅನೇಕರು, ಅನೇಕ ಬಾರಿ ಈ ಇಕ್ಕಟ್ಟಿಗೆ ಸಿಲುಕ್ತಾರೆ. ಕೆಲವರಿಗೆ ಸಂಭೋಗ ಮಾಡುವ ಮನಸ್ಸಿದ್ದರೂ ಬಹುತೇಕ ಬಾರಿ ದೇಹ ಕೈಕೊಟ್ಟಿರುತ್ತದೆ. ದೇಹ ಉತ್ತೇಜನಗೊಳ್ತಿಲ್ಲ ಎಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಅದಕ್ಕೆ ಕೆಲವೊಂದು ಸರಳ ಉಪಾಯಗಳಿವೆ. ಮನಸ್ಸು ಇಂಟರ್ಕೋರ್ಸ್ ಬಯಸಿದ್ದು, ದೇಹ ಉತ್ತೇಜನಗೊಳ್ತಿಲ್ಲವೆಂದಾದ್ರೆ  ಈ ಟ್ರಿಕ್ಸ್ ಪಾಲನೆ ಮಾಡಿ, ಸಂಭೋಗ ಸುಖ ಪಡೆಯಬಹುದು. ಮನಸ್ಸು (Mind) ಬಯಸಿದಾಗ ದೇಹ ಉತ್ತೇಜನಗೊಳ್ಳಬೇಕೆಂದ್ರೆ ದೇಹ ಬಿಸಿಯಾಗ್ಬೇಕು. ದೇಹದ ಉಷ್ಣತೆ (Warmt) ಹೆಚ್ಚಾಗಲು ಇಲ್ಲಿದೆ ಕೆಲ ಮಾರ್ಗ. 

ರೋಲ್ ಪ್ಲೇ (Role Play) : ರೋಲ್ ಪ್ಲೇ ಸಂಭೋಗ (Intercourse) ದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಮ್ಮ ಆನಂದವನ್ನು ಹೆಚ್ಚಿಸುವ ಮತ್ತು ಒಂದೇ ಕಡೆ ಕೇಂದ್ರೀಕರಿಸುವ ಕೆಲಸವನ್ನು ಮಾಡುತ್ತದೆ.  ರೋಲ್ ಪ್ಲೇ ನಲ್ಲಿ ಸಂಗಾತಿಗೆ ಇಷ್ಟವಾದ ಪಾತ್ರವನ್ನು ಕಲ್ಪಿಸಿಕೊಳ್ಳುವಂತೆ ನೀವು ಹೇಳ್ಬೇಕು. ನಂತ್ರ ಆ ಪಾತ್ರ ನೀವಾಗಿ ಇಂಟರ್ಕೋರ್ಸ್ ಶುರು ಮಾಡ್ಬೇಕು. ಇದು ಉತ್ತೇಜನ ನೀಡುವುದಲ್ಲದೆ ಇಬ್ಬರ ಸಂತೋಷ (Happiness) ನ್ನು ಹೆಚ್ಚಿಸುತ್ತದೆ.

ಖಾಸಗಿ ಅಂಗ (Private Organ) ದ ಮೇಲೆ ಗಮನ : ಮನಸ್ಸು ಶಾರೀರಿಕ ಸಂಬಂಧ ಬಯಸುತ್ತಿದ್ದು, ದೇಹ ಉತ್ತೇಜಗೊಳ್ತಿಲ್ಲ ಎಂದಾದ್ರೆ ನಿಮ್ಮ ಮನಸ್ಸನ್ನು ಮೊದಲು ಖಾಸಗಿ ಅಂಗದ ಮೇಲೆ ಕೇಂದ್ರೀಕರಿಸಿ. ನಿಧಾನವಾಗಿ ಉತ್ತೇಜನ ನೀಡುವ ಅಂಗಗಳನ್ನು ಸ್ಪರ್ಶಿಸಿ. ಇದ್ರಿಂದ ದೇಹದ ಉಷ್ಣತೆ ಹೆಚ್ಚಾಗಲು ಶುರುವಾಗುತ್ತದೆ. 

ಯಪ್ಪಾ..ಸೆಕ್ಸ್ ಬಳಿಕ ಹುಡುಗರು ಯಾಕೆ ಹೀಗೆಲ್ಲಾ ಮಾತನಾಡ್ತಾರೆ !

ಅಶ್ಲೀಲ (Porn) ಚಿತ್ರಗಳ ವೀಕ್ಷಣೆ : ದೇಹದ ಉತ್ತೇಜನ ಹೆಚ್ಚಿಸಲು ಪೋರ್ನ್ ಒಳ್ಳೆಯ ವಿಧಾನ. ಸಂಗಾತಿ ಜೊತೆ ಪೋರ್ನ್ ವೀಕ್ಷಣೆ ಮಾಡಿದ್ರೆ ಸಂಭೋಗ ಸುಖ ದುಪ್ಪಟ್ಟಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ. ಅನೇಕರಿಗೆ ಪೋರ್ನ್ ಚಿತ್ರಗಳು ಉತ್ತೇಜನಗೊಳ್ಳಲು ನೆರವಾಗುತ್ತವೆ. ಚಿತ್ರಗಳನ್ನು ನೋಡ್ತಾ ಸಂಗಾತಿ ಜೊತೆ ಲವ್ ಫ್ಯಾಂಟಸಿ ಶುರು ಮಾಡಿದ್ರೆ ಇಬ್ಬರ ಮಧ್ಯೆ ಬಿಸಿ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. 

ಸಂಗಾತಿ ಜೊತೆ ಶವರ್ : ಬಹುಬೇಗ ಉತ್ತೇಜನಗೊಳ್ಬೇಕೆಂದ್ರೆ ಶವರ್ ಬೆಸ್ಟ್. ಇಬ್ಬರು ನೆಕೆಡ್ ಆಗಿ ಸ್ನಾನ ಮಾಡೋದ್ರಿಂದ ನಿಧಾನವಾಗಿ ದೇಹ, ಮನಸ್ಸು ಹೇಳಿದ್ದನ್ನು ಕೇಳುತ್ತೆ. 

ಸೆಕ್ಸಿ ಫೋಟೋ : ಸಂಗಾತಿ ಹಾಗೂ ನಿಮ್ಮ ಮಾದಕ ಫೋಟೋಗಳು ಕೂಡ ನಿಮ್ಮನ್ನು ಉತ್ತೇಜನಗೊಳಿಸುತ್ತವೆ. ನಿಮ್ಮ ಹಳೆಯ ಫೋಟೋಗಳನ್ನು ನೀವು ಪುನಃ ನೋಡ್ಬೇಕು. ನಿಮ್ಮಿಬ್ಬರ ಮಾದಕ ಫೋಟೋಗಳನ್ನು ನೋಡ್ತಿದ್ದಂತೆ ದೇಹದ ಬಿಸಿ ಹೆಚ್ಚಾಗುತ್ತದೆ. ಸಂಗಾತಿ ಒಪ್ಪಿಗೆ ಇದ್ರೆ ನಿಮಗಿಷ್ಟವಾಗುವ ಸೆಲೆಬ್ರಿಟಿಗಳ ಹಾಟ್ ಫೋಟೋ ಕೂಡ ನೀವು ನೋಡ್ಬಹುದು. ಇದು ಕೂಡ ದೇಹ ಉತ್ತೇಜನಗೊಳ್ಳಲು ನೆರವಾಗುತ್ತದೆ. 

Relationship Tips: ದಾಂಪತ್ಯ ಮುಪ್ಪಾಗ್ಬಾರದೆಂದ್ರೆ ಈ ಟಿಪ್ಸ್ ಫಾಲೋ ಮಾಡಿ

ಮಾದಕ ಪುಸ್ತಕಗಳು : ದೇಹ ಉತ್ತೇಜನಗೊಳ್ಳಬೇಕು,ದೇಹದ ಉಷ್ಣತೆ ಹೆಚ್ಚಾಗಬೇಕೆಂದ್ರೆ ನೀವು ಮಾದಕ ಪುಸ್ತಕ ಅಥವಾ ಕಾಮಪ್ರಚೋದಿತ ಕಾದಂಬರಿಗಳನ್ನು ಓದಬಹುದು. ಇದು ಕೂಡ ನಿಮ್ಮ ಮನಸ್ಸು ಹಾಗೂ ದೇಹ ಎರಡನ್ನೂ ಉತ್ತೇಜಿಸುತ್ತದೆ. ಬುಕ್ ನಲ್ಲಿರುವ ಪ್ರಯೋಗಗಳನ್ನು ನೀವು ಸಂಗಾತಿ ಜೊತೆ ಪ್ರಯತ್ನಿಸಬಹುದು. 
 

Latest Videos
Follow Us:
Download App:
  • android
  • ios