Asianet Suvarna News Asianet Suvarna News

Relationship Tips: ದಾಂಪತ್ಯ ಮುಪ್ಪಾಗ್ಬಾರದೆಂದ್ರೆ ಈ ಟಿಪ್ಸ್ ಫಾಲೋ ಮಾಡಿ

ದಾಂಪತ್ಯಕ್ಕೆ ಮುಪ್ಪಿಲ್ಲ. ದಾಂಪತ್ಯ ಸದಾ ಹಸಿರಾಗಿರಬೇಕು. ಬಾಡಿದ ಹೂವಾದ್ರೆ ಅದ್ರಲ್ಲಿ ಸ್ವಾದವಿರೋದಿಲ್ಲ. ದಾಂಪತ್ಯ ಸದಾ ಯೌವನದಲ್ಲಿಯೇ ಇರಬೇಕೆಂದ್ರೆ ಕೆಲವೊಂದು ರೂಲ್ಸ್ ಫಾಲೋ ಮಾಡ್ಬೇಕು. ಆಗ್ಲೇ ಸುಖಕರ ಜೀವನ ಸಾಧ್ಯ.

Do Follow These Five Things Regularly In Your Married Life
Author
Bangalore, First Published Aug 24, 2022, 3:16 PM IST

ಮದುವೆ ಸಂಬಂಧವನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ದೀರ್ಘಕಾಲ ಉಳಿಯಬೇಕಾದ ಸಂಬಂಧವಾಗಿದೆ. ಸಂಗಾತಿ ಸಾವಿನ ನಂತ್ರವೂ ಹಿಂದಿನ ಮಧುರ ಜೀವನ ನೆನಪಿನಲ್ಲಿರಬೇಕು. ಜೀವನದ ಕೊನೆಯವರೆಗೆ ಇಬ್ಬರೂ ಒಟ್ಟಿಗೆ ಬದುಕುತ್ತೇವೆಂದು ಪ್ರಮಾಣ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುತ್ತಾರೆ. ಮದುವೆಯಾದ ಮೊದಲೆರಡು ವರ್ಷ ಸುಖವಾಗಿದ್ದು ನಂತ್ರ ನಾನ್ಯಾರು, ನೀನ್ಯಾರು ಎಂಬಂತೆ ಬದುಕುವುದು ಜೀವನವಲ್ಲ. ವರ್ಷಗಳು ಕಳೆದಂತೆ ಇಬ್ಬರ ಮಧ್ಯೆ ಸಂಬಂಧ ಗಟ್ಟಿಯಾಗ್ಬೇಕು. ಇಬ್ಬರ ಮಧ್ಯೆ ಪ್ರೀತಿ, ವಿಶ್ವಾಸ, ಗೌರವ ಹೆಚ್ಚಾಗಬೇಕು. ದಾಂಪತ್ಯಕ್ಕೆ ಕಾಲಿಟ್ಟು ವರ್ಷಗಳು ಕಳೆಯುತ್ತಿದ್ದಂತೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಇಬ್ಬರು ಅವರವರ ಕೆಲಸದಲ್ಲಿ ಬ್ಯುಸಿಯಾಗ್ತಾರೆ. ಪರಸ್ಪರ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಆರ್ಥಿಕ ಸ್ಥಿತಿ ಸುಧಾರಣೆ, ಮಕ್ಕಳ ಜೀವನದ ಮೇಲೆ ಗಮನ ಹರಿಸಬೇಕಾಗುತ್ತದೆ. ಆದ್ರೆ ಈ ಎಲ್ಲ ಅಡಚಣೆ, ಜವಾಬ್ದಾರಿ ಮಧ್ಯೆಯೂ ಸಂಗಾತಿಯನ್ನು ಮರೆಯಬಾರದು. ಪ್ರತಿ ದಿನ ಕೆಲವೊಂದು ಸಂಗತಿಗಳನ್ನು ನೆನಪಿಟ್ಟುಕೊಂಡು, ಅದನ್ನು ಪಾಲಿಸುತ್ತ ಬಂದಲ್ಲಿ ಸಂಬಂಧ ದೀರ್ಘಕಾಲ ಸಂತೋಷದಿಂದ ಕೂಡಿರೋದ್ರಲ್ಲಿ ಎರಡು ಮಾತಿಲ್ಲ. ದಂಪತಿ ಪ್ರತಿ ದಿನ ಪಾಲಿಸಬೇಕಾದ ನಿಯಮಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ. 

ಪರಸ್ಪರ ಮಾತುಕತೆ :  ಅನೇಕರ ಮನೆಯಲ್ಲಿ ದಂಪತಿ (Couple) ಮಧ್ಯೆ ಮಾತಿರುವುದಿಲ್ಲ. ಸಂಗಾತಿಗೆ ಬೇಸರವಾದ್ರೆ ಎನ್ನುವ ಕಾರಣಕ್ಕೆ ಇಲ್ಲವೆ ಬೇರೆ ಬೇರೆ ಕಾರಣಗಳಿಗೆ ಸಂಗಾತಿ ಜೊತೆ ಮನಸ್ಸಿ (Mind) ನ ಮಾತನ್ನು ಕೆಲವರು ಹಂಚಿಕೊಳ್ಳುವುದಿಲ್ಲ. ಇದು ಸಂಬಂಧವನ್ನು ಹದಗೆಡಿಸುತ್ತದೆ. ಸಂಗಾತಿ ಮಧ್ಯೆ ಮಾತು ಬಹಳ ಮುಖ್ಯ. ವಿಷ್ಯ ಚಿಕ್ಕದಾಗಿರಲಿ ಇಲ್ಲ ದೊಡ್ಡದಾಗಿರಲಿ ನಿಮ್ಮ ಭಾವನೆಗಳನ್ನು ನೀವು ಸಂಗಾತಿ ಮುಂದೆ ಅತ್ಯಗತ್ಯವಾಗಿ ಹಂಚಿಕೊಳ್ಳಬೇಕು.  ಇಬ್ಬರ ಮಧ್ಯೆ ಉತ್ತಮ ಸಂವಹನವಿದ್ರೆ ಸಂಬಂಧ ನಿಮ್ಮ ಅರಿವಿಲ್ಲದೆ ಗಟ್ಟಿಯಾಗಿರುತ್ತದೆ.

ಫೋನ್ (Phone) ದೂರವಿದ್ರೆ ಒಳ್ಳೆಯದು : ಸಂಗಾತಿಯೊಂದಿಗೆ ಸುಮಧುರ ಸಮಯ ಕಳೆಯಬೇಕು ಎನ್ನುವಾಗ ಫೋನ್ ನಿಮ್ಮ ಸರಸಕ್ಕೆ ಅಡ್ಡಿಯಾಗ್ಬಾರದು. ಸಂಗಾತಿ ಜೊತೆ ಪ್ರೀತಿ ಇರಲಿ, ಮಾತಿರಲಿ, ಪ್ರವಾಸವಿರಲಿ, ನಿಮ್ಮ ಫೋನ್ ಸೇರಿದಂತೆ ಗ್ಯಾಜೆಟ್ ದೂರವಿಡುವುದು ಒಳ್ಳೆಯದು. ಫೋನ್ ಸಂಬಂಧ ಕೆಡಿಸುತ್ತದೆ. ಮಾತು,ಪ್ರೀತಿಗಿಂತ ಫೋನ್ ನಲ್ಲಿ ಸಮಯ ಕಳೆಯುವುದು ಸಂಬಂಧವನ್ನು ಅಪಾಯಕ್ಕೆ ನೂಕಿದಂತೆ ಎಂಬುದು ನೆನಪಿರಲಿ. 

ಇದನ್ನೂ ಓದಿ: REAL STORY : 7 ವರ್ಷ ಚಿಕ್ಕವನ ಜೊತೆ ಸಂಬಂಧ ಬೆಳೆಸಿ ಸಂಕಷ್ಟದಲ್ಲಿ ವಿವಾಹಿತೆ

ಪ್ರತಿ ದಿನ ಇರಲಿ ಮುತ್ತು : ದಿನಕ್ಕೆ ಒಮ್ಮೆ ಮುತ್ತು ಎಲ್ಲಾ ಒತ್ತಡ ದೂರ. ಯಸ್, ನಿಮ್ಮ ಸಂಗಾತಿಗೆ ದಿನಕ್ಕೆ ಒಂದಾದ್ರೂ ಮುತ್ತು ನೀಡಿ.  ಇದರಿಂದ ದಾಂಪತ್ಯದಲ್ಲಿ ಅನ್ಯೋನ್ಯತೆ ಉಳಿಯುತ್ತದೆ. ಚುಂಬನ ಪ್ರೀತಿ ವ್ಯಕ್ತಪಡಿಸುವ ಒಂದು ವಿಧಾನವಾಗಿದೆ. ಮುತ್ತಿಗೆ ವಯಸ್ಸಿನ ಮಿತಿಯಿಲ್ಲ. ನಿಮ್ಮಿಬ್ಬರ ವಯಸ್ಸು 70ರ ಗಡಿ ದಾಟಿದ್ದರೂ ನೀವು ಸಂಗಾತಿಗೆ ಮುತ್ತು ನೀಡಬಹುದು. ನಿಮ್ಮ ಮುತ್ತು ನಿಮ್ಮ ಸಂಗಾತಿ ಪ್ರೀತಿಯನ್ನು ದುಪ್ಪಟ್ಟು ಮಾಡುತ್ತದೆ.   

ಪರಸ್ಪರರ ಅಭಿಪ್ರಾಯಕ್ಕೆ ನೀಡಿ ಮಹತ್ವ : ದಿನ ನಿತ್ಯದ ಜೀವನದಲ್ಲಿ ನಮ್ಮ ಮುಂದೆ ಅನೇಕ ಸವಾಲುಗಳಿರುತ್ತವೆ. ಅದನ್ನು ನಾನೊಬ್ಬನೇ ಮಾಡಬಲ್ಲೆ ಎಂಬ ಛಲ ಬೇಡ. ದಾಂಪತ್ಯ ಅಂದ್ಮೇಲೆ ಇಬ್ಬರಿಗೂ ಸಮಪಾಲು, ಸಮಬಾಳ್ವೆ ಎಂಬುದನ್ನು ಅರಿತಿರಿ. ನಿಮಗೆ ಸಮಸ್ಯೆ ಬಂದಾಗ ಸಂಗಾತಿಯ ಅಭಿಪ್ರಾಯ ಕೇಳಿ. ಯಾವುದೇ ಒಂದು ವಸ್ತು ಖರೀದಿ ಮಾಡುವಾಗ್ಲೂ ಸಂಗಾತಿ ಅಭಿಪ್ರಾಯ ಕೇಳಿ. ಹಾಗೆಯೇ ಸಂಗಾತಿಯ ಆಲೋಚನೆಗಳನ್ನು ಸಹ ನೀವು ಗೌರವಿಸುವುದು ಬಹಳ ಮುಖ್ಯ.

ಇದನ್ನೂ ಓದಿ: Relationship Tips: ಕ್ಷಮೆಯಲ್ಲಿದೆ ಸಂತೋಷದ ಗುಟ್ಟು

ಧನ್ಯವಾದ ಹೇಳಲು ಮರೆಯಬೇಡಿ : ಧನ್ಯವಾದ ಕೂಡ ಮುತ್ತಿನಂತೆ ಪ್ರೀತಿ, ಗೌರವ ಹೆಚ್ಚು ಮಾಡುವ ಶಬ್ಧವಾಗಿದೆ. ನಿಮ್ಮ ಬಾಳಿಗೆ ಅವರು ಪ್ರವೇಶ ಮಾಡಿರುವುದ್ರಿಂದ ನಿಮಗೆಷ್ಟು ಖುಷಿಯಾಗಿದೆ ಎಂಬುದನ್ನು ನಿಮ್ಮ ಸಂಗಾತಿಗೆ ಹೇಳಿ.  ಸದಾ ನಿಮ್ಮ ಜೊತೆಗಿರುವ ಕಾರಣಕ್ಕೆ ಧನ್ಯವಾದ ಹೇಳಿ. ಸಣ್ಣಪುಟ್ಟ ಕೆಲಸಗಳಲ್ಲಿ ನೆರವಾದಾಗ ಕೂಡ ನೀವು ಅವರಿಗೊಂದು ಥ್ಯಾಂಕ್ಸ್ ಹೇಳಬಹುದು. ಪ್ರತಿದಿನ ಧನ್ಯವಾದವನ್ನು ನೀವು ಐ ಲವ್ ಯೂ ಎನ್ನುವ ಮೂಲಕ ಕೂಡ ಹೇಳಬಹುದು.  ಇದು ನಿಮ್ಮ ಸಂಗಾತಿಗೆ ಸಂಬಂಧದ ಮಹತ್ವವನ್ನು ಅರಿತುಕೊಳ್ಳುವಂತೆ ಮಾಡುತ್ತದೆ. ನಿಮ್ಮ ದಾಂಪತ್ಯ ಶಾಶ್ವತವಾಗಿ ಯೌವನವಾಗಿರಿಸಲು ನೆರವಾಗುತ್ತದೆ.

Follow Us:
Download App:
  • android
  • ios