Personality Development: ಗುಂಪಲ್ಲಿ ಮಾತನಾಡೋಕೆ ಹಿಂಜರಿಕೆನಾ ? ಕಾನ್ಫಿಡೆನ್ಸ್ ಹೆಚ್ಚಾಗಲು ಹೀಗೆ ಮಾಡಿ

ನಾಲ್ಕು ಮಂದಿ ಗುಂಪು (Group) ಸೇರಿ ಮಾತಾಡೋಕೆ ಹೊರಟ್ರು ಅಂದ್ರೆ ಸಾಕು ಅಲ್ಲಿರೋಕೆ ಆಗಲ್ಲ. ಬಾಯ್ಬಿಟ್ಟು ಒಂದೆರಡು ಮಾತಾನಾಡೋದಂತು ದೂರದ ಮಾತು. ಸುಮ್ನೆ ಎಲ್ರನ್ನೂ ನೋಡ್ಕೊಂಡು ಹಲ್ಕಿರಿಯೋದಷ್ಟೇ ಕೆಲ್ಸ. ನಿಮ್ಗೂ ಇದೇ ಥರ ಪ್ರಾಬ್ಲಂ (Problem) ಆಗ್ತಿದ್ಯಾ ? ಹಾಗಿದ್ರೆ ನಮ್ ಹತ್ರ ನಿಮ್ಮ ಸಮಸ್ಯೆಗೆ ಸೊಲ್ಯೂಶನ್.

Ways To Build Your Confidence If You Have Social Anxiety

‘ಹ್ಯೂಮನ್ ಈಸ್ ಎ ಸೋಷಿಯಲ್ ಎನಿಮಲ್’ ಎಂಬ ಮಾತೇ ಇದೆ. ಮನುಷ್ಯ ಎಂದಾಗ ಸಮಾಜದಲ್ಲಿ ಬೆರೆಯುವುದು ಅತೀ ಮುಖ್ಯ. ಆದರೆ ಹಲವರಿಗೆ ನಾನಾ ಕಾರಣಗಳಿಂದ ಸಾಮಾಜಿಕವಾಗಿ ಬೆರೆಯಲು ಸಾಧ್ಯವಾಗುವುದಿಲ್ಲ. ಭಯ, ಆತಂಕ ಉಂಟಾಗುತ್ತದೆ. ಈ ರೀತಿಯ ಸಾಮಾಜಿಕ ಆತಂಕವನ್ನು ನಿಭಾಯಿಸುವುದು ತುಂಬಾ ಕಠಿಣವಾಗಿದೆ. ಜನರೊಂದಿಗೆ ಚೆನ್ನಾಗಿ ಬೆರೆಯಲು ಸಾಧ್ಯವಾಗದಿರುವುದು ಜೀವನದಲ್ಲಿ ಹಲವು ಬಾರಿ ತೊಂದರೆಗೆ ಕಾರಣವಾಗುತ್ತದೆ. ಸಾಮಾಜಿಕ ಆತಂಕವನ್ನು ಸಹಿಸಿಕೊಳ್ಳುವುದು ಸುಲಭವಲ್ಲ. ಆದರೆ ನಿಮ್ಮ ವ್ಯಕ್ತಿತ್ವ (Personality)ದಲ್ಲಿ ಕೆಲವೊಂದು ಬದಲಾವಣೆ ಮಾಡುವುದರಿಂದ ಸಾಮಾಜಿಕ ಆತಂಕವನ್ನು ದೂರ ಮಾಡಬಹುದು. ಗುಂಪಲ್ಲಿ ಮಾತನಾಡೋಕೆ ಹಿಂಜರಿಕೆನಾ ? ಹಾಗಿದ್ರೆ ಕಾನ್ಫಿಡೆನ್ಸ್ ಹೆಚ್ಚಾಗಲು ಹೀಗೆ ಮಾಡಿ. ಇದರಿಂದ ಆತಂಕವಿಲ್ಲದೆ ಜನರೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ.

ಧನಾತ್ಮಕವಾಗಿ ಮಾತನಾಡಿ
ಜೀವನದಲ್ಲಿ ಯಾವತ್ತೂ ಪಾಸಿಟಿವ್ (Positive) ನೇಚರ್ ಇಟ್ಟುಕೊಳ್ಳಿ. ಒಳ್ಳೆಯದಾಗುತ್ತದೆ ಎಂದೇ ಮಾತನಾಡಿ, ಒಳ್ಳೆಯದಾಗುತ್ತದೆ ಎಂಬ ಭರವಸೆ ಇಟ್ಟುಕೊಳ್ಳಿ. ನಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡುವುದನ್ನು ಬಿಟ್ಟುಬಿಡಿ. ನೀವು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಹಾಯ ಮಾಡುವ ಧನಾತ್ಮಕ ವಿಷಯಗಳ ಬಗ್ಗೆ ಹೆಚ್ಚು ಕಾರ್ಯಪ್ರವೃತ್ತರಾಗಿ. ಇದರಿಂದಾಗಿ ಆತ್ಮವಿಶ್ವಾಸ (Confidence) ಹೆಚ್ಚುತ್ತದೆ. ಜನರೊಂದಿಗೆ ಕಾನ್ಫಿಡೆನ್ಸ್‌ನಿಂದ ಬೆರೆಯಲು ಸಾಧ್ಯವಾಗುತ್ತದೆ.

Personality Development: ನೀವು ನಿಂತುಕೊಳ್ಳುವ ರೀತಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ

ಸಾಧನೆಗಳ ಬಗ್ಗೆ ಹೆಮ್ಮೆಪಡಿ
ಜೀವನ (Life)ದಲ್ಲಿ ನಾವೇನು ಮಾಡಿಲ್ಲ, ನಮ್ಮಿಂದೇನೂ ಸಾಧಿಸಲು ಸಾಧ್ಯವಿಲ್ಲ ಎಂಬ ಆಲೋಚನೆ ನಮ್ಮನ್ನು ಕಂಗೆಡಿಸುತ್ತದೆ. ಹೀಗಾಗಿ ಜೀವನದಲ್ಲಿ ನೀವು ಕಷ್ಟಪಟ್ಟು ಏನನ್ನು ಸಾಧಿಸಿದ್ದೀರಿ ಎಂಬ ಬಗ್ಗೆ ಮಾತ್ರ ಗಮನಕೊಡಿ. ಮತ್ತೊಬ್ಬರೊಂದಿಗೆ ಹೋಲಿಸಬೇಡಿ. ಒಬ್ಬೊಬ್ಬರ ಜೀವನ ಒಂದೊಂದು ರೀತಿ ಇರುತ್ತದೆ. ಜೀವನದಲ್ಲಿ ಇಲ್ಲಿಯವರೆಗೆ ನೀವು ಕಷ್ಟಪಟ್ಟಿರುವ ಹಂತಗಳು, ಅದನ್ನು ದಾಟಿ ಬಂದಿರುವ ನಿಮಗೆ ಮಾತ್ರ ಗೊತ್ತಿರುತ್ತದೆ. ಆ ಕಠಿಣ ದಿನಗಳನ್ನು ನೀವು ಕಳೆದು ಬಂದಿರುವುದಕ್ಕೆ ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆಪಡಿ. ನೀವು ಹೆಚ್ಚಿನ ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದುವೇ ನಿಮಗೆ ಹೊಸ ಸಾಧನೆಗೆ ಪ್ರೇರಣೆ ನೀಡಬಹುದು.

ಅಭಿನಂದನೆಗಳನ್ನು ಸ್ವೀಕರಿಸಿ
ಜನರು ನಿಮ್ಮ ಕೆಲಸದ ಬಗ್ಗೆ, ನಿಮ್ಮ ಬಗ್ಗೆ ಮೆಚ್ಚುಗೆ ಸೂಚಿಸಿದಾಗ ಅಭಿನಂದನೆಗಳನ್ನು ಸ್ವೀಕರಿಸಿ. ನೀವು ಎಷ್ಟು ಚೆನ್ನಾಗಿ ಕಾಣಿಸುತ್ತಿದ್ದೀರಿ ಅಥವಾ  ಎಷ್ಟು ಚೆನ್ನಾಗಿ ಕೆಲಸ ಮಾಡಿದ್ದೀರಿ ಎಂದು ಹೊಗಳಿದಾಗ ಖುಷಿಪಡಿ. ವಿನಾಕಾರಣ ಹೇಳುತ್ತಿದ್ದಾರೆ ಎಂದು ನಿಮ್ಮ ಬಗ್ಗೆಯೇ ಸಂಶಯ ಪಡಬೇಡಿ. ಈ ರೀತಿಯ ಮೆಚ್ಚುಗೆ ನಿಮ್ಮೆ ಬಗ್ಗೆ ನಿಮಗೆ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ.

Childs Personality: ಹಠ ಮಾಡುವ ಮಕ್ಕಳನ್ನು ಸರಿ ಮಾಡುವುದು ಹೇಗೆ ?

ನೇರವಾಗಿ ನಡೆಯಿರಿ
ನೀವು ಹೇಗೆ ಕುಳಿತುಕೊಳ್ಳುತ್ತೀರಿ, ಹೇಗೆ ನಡೆಯುತ್ತೀರಿ ಎಂಬುದು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ನೇರವಾಗಿ ಕುಳಿತುಕೊಳ್ಳುವುದು, ನೇರವಾಗಿ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ಇದು ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ನೇರವಾಗಿ ಕುಳಿತಾಗ ಅಥವಾ ನಿಂತಾಗ, ಅದು ಆತ್ಮವಿಶ್ವಾಸವನ್ನು ಹೊರಹಾಕುತ್ತದೆ. ಬೆನ್ನು ಬಾಗಿಸಿ ಕುಳಿತುಕೊಳ್ಳವುದು ನೀವು ತುಂಬಾ ಭಯಪಟ್ಟಿದ್ದೀರಿ ಎಂಬುದನ್ನು ತೋರಿಸುತ್ತದೆ. ಹೀಗಾಗಿ ನಡೆಯುವ, ಕುಳಿತುಕೊಳ್ಳುವ ಭಂಗಿ (Posture) ಯಾವತ್ತೂ ಸಮರ್ಪಕವಾಗಿರಲಿ.

ಜೀವನದಲ್ಲಿ ಗುರಿಗಳನ್ನು ಇಟ್ಟುಕೊಳ್ಳಿ
ಆತ್ಮವಿಶ್ವಾಸ ಹೆಚ್ಚಾಗಲು ಜೀವನದಲ್ಲಿ ನಿರ್ಧಿಷ್ಟ ಗುರಿಯನ್ನು ಇಟ್ಟುಕೊಳ್ಳಿ. ಮೊದಲಿಗೇ ದೊಡ್ಡ ಗುರಿಗಳನ್ನು ಇಟ್ಟುಕೊಂಡು ನಿಮ್ಮ ಮೇಲೆ ಒತ್ತಡ ಹಾಕಿಕೊಳ್ಳಬೇಡಿ.  ಇದರಿಂದ ನಕಾರಾತ್ಮಕ (Negative) ಆಲೋಚನೆಗಳು ಹೆಚ್ಚಾಗಬಹುದು.ಆರಂಭದಲ್ಲಿ ಸಣ್ಣ ಗುರಿಗಳನ್ನು ಇಟ್ಟುಕೊಂಡು ಅದನ್ನು ಸಾಧಿಸಿ. ನಂತರ ನಂತರ ಹಂತ ಹಂತವಾಗಿ ಹೊಸ ಗುರಿಗಳನ್ನು ಸಾಧಿಸುತ್ತಾ ಹೋಗಿ. ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚುತ್ತದೆ. ಗುಂಪಿನಲ್ಲಿಯೂ ನೀವು ಯಾವುದೇ ಅಳುಕಿಲ್ಲದೆ ಆತ್ಮವಿಶ್ವಾಸದಿಂದ ಬೆರೆಯುವಂತೆ ಮಾಡುತ್ತದೆ.

Latest Videos
Follow Us:
Download App:
  • android
  • ios