Asianet Suvarna News Asianet Suvarna News

Personality Development: ನೀವು ನಿಂತುಕೊಳ್ಳುವ ರೀತಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ

ಬಹಳಷ್ಟು ಮಂದಿ ಮಾತನಾಡುವ ರೀತಿಯಲ್ಲಿ, ಕಣ್ಣು (Eyes)ಗಳನ್ನು ನೋಡಿ ವ್ಯಕ್ತಿತ್ವ (Personality) ಹೇಗೆಂದು ಕಂಡು ಹಿಡಿದು ಬಿಡುತ್ತಾರೆ. ಅದೇ ರೀತಿ ನಾವು ನಿಂತುಕೊಳ್ಳುವ ಭಂಗಿಯಲ್ಲೂ ನಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಂತೆ. ಹಾಗಿದ್ರೆ ನೀವು ನಿಂತುಕೊಳ್ಳುವ ರೀತಿ ನಿಮ್ಮ ಬಗ್ಗೆ ಏನನ್ನು ಸೂಚಿಸುತ್ತದೆ.

The Way You Stand Says Something About Your Personality
Author
Bengaluru, First Published Jan 18, 2022, 5:07 PM IST

ಮನುಷ್ಯ ಎಂದಾಗ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಸ್ತ ಮನಸ್ಥಿತಿಯಿರುತ್ತದೆ. ಪ್ರೀತಿ, ಸಿಟ್ಟು, ಸಹನೆ, ಶಾಂತತೆ, ಸಿಡುಕು, ಶಿಸ್ತು, ಸೋಮಾರಿ, ಅಸಡ್ಡೆ ಹೀಗೆ ನಾನಾ ಗುಣಗಳನ್ನು ಹೊಂದಿರುವವರನ್ನು ನೋಡಬಹುದು. ಎಲ್ಲಾ ಭಾವನೆಯನ್ನು ಸಮರ್ಥವಾಗಿ ನಿಭಾಯಿಸುವವರು ಪರಿಪೂರ್ಣ ವ್ಯಕ್ತಿತ್ವದವರಾಗಿರುತ್ತಾರೆ. ಆದರೆ, ವಾಸ್ತವದಲ್ಲಿ ನೋಡಿದಾಗ ಯಾರೊಬ್ಬರೂ ಪರಿಪೂರ್ಣ ವ್ಯಕ್ತಿತ್ವದವರಿಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಒಂದು ರೀತಿಯಲ್ಲಿ ನ್ಯೂನತೆಯಿರುತ್ತದೆ. ಆದರೆ ಮನುಷ್ಯ ಎಂದಾಗ ಶ್ರೀಮಂತ-ಬಡವ, ಜಾತಿ-ಧರ್ಮ, ಮೇಲು-ಕೀಳು ಎಂಬುದಕ್ಕಿಂತ ವ್ಯಕ್ತಿತ್ವ (Personality) ಹೇಗಿದೆ ಎಂಬುದು ಬಹಳ ಮುಖ್ಯವಾಗುತ್ತದೆ. 

ಬಹಳಷ್ಟು ಮಂದಿ ಮಾತನಾಡುವ ರೀತಿಯಲ್ಲಿ, ಕಣ್ಣು (Eyes)ಗಳನ್ನು ನೋಡಿ ವ್ಯಕ್ತಿತ್ವ ಹೇಗೆಂದು ಕಂಡು ಹಿಡಿದು ಬಿಡುತ್ತಾರೆ. ಅದೇ ರೀತಿ ನಾವು ನಿಂತುಕೊಳ್ಳುವ ಭಂಗಿಯಲ್ಲೂ ನಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಂತೆ. ನಡೆಯುವ, ಕುಳಿತುಕೊಳ್ಳುವ, ಮಾತನಾಡುವ ಶೈಲಿ ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನಿಂತುಕೊಳ್ಳುವ ರೀತಿಯೂ ಹಾಗೆಯೇ. ಕೆಲವೊಬ್ಬರು ಹೆಚ್ಚು ಬೆಂಡಾಗಿ ನಿಂತರೆ, ಕೆಲವರು ನೇರವಾಗಿ ನಿಲ್ಲುತ್ತಾರೆ, ಇನ್ನೂ ಕೆಲವರು ಅರೆ ಬೆಂಡಾಗಿ ನಿಲ್ಲುತ್ತಾರೆ. ಇದೆಲ್ಲವೂ ಅವರವರ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ.

Eyes And Personality: ನಿಮ್ಮ ಕಣ್ಣು ನಿಮ್ ಬಗ್ಗೆ ಏನ್ ಹೇಳತ್ತೆ ನೋಡಿ.

ಯಾವಾಗಲೂ ನೇರವಾಗಿ ನಡೆಯುವುದು ಮತ್ತು ನೇರವಾಗಿ ನಿಲ್ಲುವುದು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದನ್ನು ಎಲ್ಲರೂ, ಯಾವಾಗಲೂ ಮಾಡುತ್ತಿಲ್ಲ. ಕೆಳಗಿನ ಮೂರು ಭಂಗಿಗಳು ಕಡಿಮೆ ಸ್ವಾಭಿಮಾನವನ್ನು ಸೂಚಿಸುತ್ತವೆ. ನೀವು ಕೂಡಾ ಹೀಗೆ ನಿಲ್ಲುವವರಾಗಿದ್ದರೆ, ನೀವು ನಿಮ್ಮ ಭಂಗಿಯನ್ನು ಸುಧಾರಿಸಬಹುದು ಮತ್ತು ಈ ಮೂಲಕ ಸ್ವಯಂ ವ್ಯಕ್ತಿತ್ವ ಅನ್ನು ಸುಧಾರಿಸಬಹುದು.

ತುಸು ಬೆಂಡಾಗಿ ನಿಲ್ಲುವುದು
ತುಸು ಬೆಂಡಾಗಿ ನಿಲ್ಲುವುದು ನಿಮ್ಮ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸ (Confidence)ದ ಬಗ್ಗೆ ಹೇಳುತ್ತದೆ. ತುಸು ಬೆಂಡಾಗಿ ನಿಲ್ಲುವವರು ಕಡಿಮೆ ಸ್ವಾಭಿಮಾನ ಹೊಂದಿರುತ್ತಾರೆ ಎಂದು ತಿಳಿದುಬರುತ್ತದೆ. ಮನಶ್ಶಾಸ್ತ್ರಜ್ಞ ಡಾ.ಸೀಮಾ ಹಿಂಗೋರಾನಿ ಪ್ರಕಾರ, ಎಂದಿಗೂ ತಮ್ಮ ಬೆನ್ನನ್ನು ಸಂಪೂರ್ಣವಾಗಿ ನೇರಗೊಳಿಸದ, ಆದರೆ ಅದನ್ನು ಸ್ವಲ್ಪಮಟ್ಟಿಗೆ ಕುಗ್ಗಿಸಿ ನಿಲ್ಲುವ ಜನರು ಸಾಮಾನ್ಯವಾಗಿ ಕಡಿಮೆ ಸ್ವಾಭಿಮಾನವನ್ನು ಹೊಂದಿರುತ್ತಾರೆ. ಇದು ಕಡಿಮೆ ಆತ್ಮವಿಶ್ವಾಸದ ವ್ಯಕ್ತಿತ್ವವನ್ನು ಸೂಚಿಸುತ್ತದೆ ಎಂದು ತಿಳಿದುಬಂದಿದೆ.

ನೇರವಾಗಿ ನಿಂತುಕೊಳ್ಳುವುದು
ಯಾವಾಗಲೂ ನೇರವಾಗಿ (Straight) ನಿಂತುಕೊಳ್ಳುವ ಅಭ್ಯಾಸ ಒಳ್ಳೆಯದು ಎಂದು ಮನಶ್ಶಾಸ್ತ್ರಜ್ಞ ಶಿಫಾರಸು ಮಾಡುತ್ತಾರೆ. ಯೋಗ (Yoga) ಅಥವಾ ಜಾಗಿಂಗ್‌ನಂತಹ ವ್ಯಾಯಾಮಗಳ ಮೂಲಕವೂ ನೀವು ಇದನ್ನು ಸಾಧಿಸಬಹುದು ಎಂದು ತಿಳಿಸುತ್ತಾರೆ. ಕೆಲವು ಜನರು ನಡೆಯುವಾಗ ಓಲಾಡುತ್ತಾ ನಡೆಯುತ್ತಾರೆ. ಇದು ನಿಮ್ಮ ದೇಹಕ್ಕೆ ಸ್ಥಿರತೆಯನ್ನು ನೀಡುವುದಿಲ್ಲ. ಈ ಭಂಗಿಯು ತುಂಬಾ ಅಸಹಾಯಕವಾಗಿದೆ ಮತ್ತು ದುರ್ಬಲ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಹಿಂಗೋರಾನಿ ಹೇಳುತ್ತಾರೆ. ಹೀಗಾಗಿ ನಡೆಯುವಾಗ, ಕುಳಿತುಕೊಳ್ಳುವಾಗ, ನಿಂತುಕೊಳ್ಳುವಾಗ ನೇರವಾಗಿದ್ದರೆ, ಇದು ನೀವು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂಬುದಕ್ಕೆ ನಿದರ್ಶನವಾಗಿದೆ.

Smartphone And Personality: ಮೊಬೈಲ್‌ನ್ನು ಹೇಗೆ ಹಿಡಿದುಕೊಳ್ಳುತ್ತೀರಿ ಎಂಬುದು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ

ದೇಹದ ಉಳಿದ ಭಾಗಗಳಿಗಿಂತ ತಲೆ ಮುಂದಕ್ಕೆ ಮಾಡಿ ನಿಲ್ಲುವುದು
ಚಡಪಡಿಕೆ ಮತ್ತು ಹೈಪರ್ ಆಕ್ಟಿವಿಟಿಯಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಈ ಭಂಗಿಯಲ್ಲಿ ನಿಲ್ಲುತ್ತಾರೆ. ಇದರಲ್ಲಿ ಅವರ ತಲೆಯು ಅವರ ದೇಹದ ಉಳಿದ ಭಾಗಗಳಿಗಿಂತ ಹೆಚ್ಚು ಮುಂದಿರುತ್ತದೆ. ಈ ಜನರು ಸ್ವಾಭಾವಿಕವಾಗಿ ಹಲವು ವಿಷಯಗಳ ಬಗ್ಗೆ ಕುತೂಹಲದಿಂದ ಕೂಡಿರುತ್ತಾರೆ. ಆದರೆ ಯಾವುದರಲ್ಲೂ ನಂಬಿಕೆಯಿಲ್ಲದವರು ಎಂದು ಹಿಂಗೋರಾನಿ ಹೇಳುತ್ತಾರೆ. ಜನರು ತಮ್ಮ ಮನಸ್ಸಿನಲ್ಲಿ ಶಾಂತಿಯನ್ನು ಸೃಷ್ಟಿಸಲು ನಿಯಮಿತವಾಗಿ ವ್ಯಾಯಾಮ ಮಾಡಲು ಮತ್ತು ಜಾಗಿಂಗ್ ಮಾಡಲು ಹಿಂಗೊರಾನಿ ಸಲಹೆ ನೀಡುತ್ತಾರೆ.

ಮನುಷ್ಯ ಹೇಗೆ ಎಂಬುದನ್ನು ಆತನ ಮಾತಿಗಿಂತ ಮೊದಲು, ಆತನ ವ್ಯಕ್ತಿತ್ವ, ಚಲನವಲಗಳು ತಿಳಿಸುತ್ತವೆ. ಹೀಗಾಗಿ ನಿಂತುಕೊಳ್ಳುವ, ಕುಳಿತುಕೊಳ್ಳುವ, ನಡೆದಾಡುವ ಶೈಲಿಯ ಬಗ್ಗೆ ತಿಳಿದುಕೊಂಡು ಅದನ್ನು ಉತ್ತಮಗೊಳಿಸುವುದು ಮುಖ್ಯ.

Follow Us:
Download App:
  • android
  • ios