Childs Personality: ಹಠ ಮಾಡುವ ಮಕ್ಕಳನ್ನು ಸರಿ ಮಾಡುವುದು ಹೇಗೆ ?

ಮಕ್ಕಳು (Children) ಮಾತು ಮಾತಿಗೂ ಸಿಡುಕ್ತಾರಾ ? ಸಣ್ಣ ಪುಟ್ಟ ವಸ್ತುಗಳು ಬೇಕೇ ಬೇಕು ಅಂತ ಹಠ ಮಾಡ್ತಾರ ? ದೊಡ್ಡವರನ್ನು ಕಂಡ್ರೆ ಭಯ ಇಲ್ಲ. ಪೇರೆಂಟ್ಸ್ (Parents) ಕಂಡ್ರೂ ಡೋಂಟ್ ಕೇರಾ. ಹಾಗಿದ್ರೆ ಸಮರ್ಪಕ ರೀತಿಯಲ್ಲಿ ಮಕ್ಕಳ ವ್ಯಕ್ತಿತ್ವ (Personality) ರೂಪಿಸಲು ಹೀಗೆ ಮಾಡಿ.

How To Discipline Your Child The Smart And Healthy Way

ಪ್ರತಿಯೊಬ್ಬ ಪೋಷಕರು ಸಹ ತಮ್ಮ ಮಕ್ಕಳು (Children) ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಬೇಕೆಂದೇ ಬಯಸುತ್ತಾರೆ. ಹೀಗಾಗಿ ಚಿಕ್ಕಂದಿನಲ್ಲಿ ಮಕ್ಕಳ ನಡವಳಿಕೆಗಳನ್ನು ತಿದ್ದಲು, ಉತ್ತಮ ವ್ಯಕ್ತಿತ್ವ (Personality)ವನ್ನು ರೂಪಿಸಲು ಪ್ರಯತ್ನಿಸುತ್ತಾರೆ. ಆದರೆ ಮಕ್ಕಳನ್ನು ಅತಿ ಮುದ್ದಿನಿಂದ ಬೆಳೆಸುವ ಇವತ್ತಿನ ಪೋಷಕರ ಮನಸ್ಥಿಯೇ ಅವರಿಗೆ ಮುಳುವಾಗುತ್ತಿದೆ. ಹೆಚ್ಚಿನ ಮಕ್ಕಳು ಹಠಮಾರಿತನ, ಅಶಿಸ್ತಿನ ಸ್ವಭಾವವನ್ನು ರೂಢಿಸಿಕೊಂಡಿರುತ್ತಾರೆ. ಹಿರಿಯರಿಗೆ ಅಗೌರವ ತೋರುವುದು, ರೂಡ್ ಆಗಿ ಮಾತನಾಡುವ ಸ್ವಭಾವವನ್ನು ಬೆಳೆಸಿಕೊಂಡಿರುತ್ತಾರೆ. ಪೋಷಕರು ಸಹ ಮಕ್ಕಳ ಬೇಡಿಕೆಗಳಿಗೆ ಮಣಿಯುವುದು, ಅವರ ಹಠಮಾರಿತನವನ್ನು ಪ್ರೋತ್ಸಾಹಿಸುವುದು ಮಾಡುತ್ತಿರುತ್ತಾರೆ. ಇದು ಮಕ್ಕಳ ಸ್ವಭಾವ ಸ್ವಲ್ಪಮಟ್ಟಿಗೆ ಮಿತಿ ಮೀರಲು ಕಾರಣವಾಗಬಹುದು. ಮಕ್ಕಳು ಶಿಸ್ತಿನ ಕೊರತೆಯೊಂದಿಗೆ ಬೆಳೆಯಬಹುದು. ನಿಮ್ಮ ಮಕ್ಕಳು ಈ ಕೆಳಗೆ ಹೇಳಿದಂತೆ ವರ್ತಿಸುತ್ತಿದ್ದರೆ ಇದು ನಿಮ್ಮ ಮಕ್ಕಳ ಸ್ವಭಾವವನ್ನು ತಿದ್ದಲು, ಅವರ ವ್ಯಕ್ತಿತ್ವವನ್ನು ರೂಪಿಸಲು ಸೂಕ್ತ ಸಮಯ.

ಮಕ್ಕಳಿಗೆ ಎಲ್ಲವೂ ಬೇಕೆಂಬ ಹಂಬಲ
ಮಕ್ಕಳು ಸಾಮಾನ್ಯವಾಗಿ ಎಲ್ಲಾ ಬೇಡಿಕೆಗಳಿಗೂ ಪೋಷಕರಿಂದ ಎಸ್ ಎಂಬ ಉತ್ತರ ಬರಬೇಕೆಂದು ಬಯಸುತ್ತಾರೆ. ತಾವು ಕೇಳಿದ್ದನ್ನೆಲ್ಲಾ ಕೊಡಿಸಬೇಕೆಂದು ನಿರೀಕ್ಷಿಸುತ್ತಾರೆ. ನಿಮ್ಮ ಮಕ್ಕಳು ಸಹ ಹೀಗೆಯೇ ನೋ ಎಂದ ತಕ್ಷಣ ನೆಲದ ಮೇಲೆ ಬಿದ್ದು ಉರುಳಾಡುವುದು, ಅಳುವುದು ಮಾಡುತ್ತಿದ್ದರೆ ಅವರ ವ್ಯಕ್ತಿತ್ವದ ಬಗ್ಗೆ ಮರುಪರಿಶೀಲಿಸಬೇಕು. ಅಗತ್ಯತೆ, ಅನಗತ್ಯತೆಯ ಬಗ್ಗೆ ಮಕ್ಕಳಿಗೆ ಹೇಳಿ ಕೊಡಬೇಕು. 

Parenting Tips: ತಪ್ಪು ಮಾಡಿದ ಮಕ್ಕಳನ್ನು ಶಿಕ್ಷಿಸುವ ಅಮ್ಮನಿಗ್ಯಾಕೆ ದೂಷಣೆಯ ಉಡುಗೊರೆ?

ಆತ್ಮಸಾಕ್ಷಿ ಇಲ್ಲದಂತೆ ವರ್ತಿಸುವುದು
ಇವತ್ತಿನ ಮಕ್ಕಳು ಆತ್ಮಸಾಕ್ಷಿಯಿಲ್ಲದೆ ವರ್ತಿಸುವುದನ್ನು ನೋಡುವುವಾಗ ತುಂಬಾ ಗಾಬರಿಯಾಗುತ್ತದೆ. ತಪ್ಪು ಮಾಡಿದ ಮೇಲೆಯೂ ಮಕ್ಕಳಿಗೆ ತಪ್ಪಿತಸ್ಥರೆಂಬ ಭಾವನೆ ಮೂಡದಿದ್ದಲ್ಲಿ ಇದು ತುಂಬಾ ಅಪಾಯಕಾರಿಯಾಗಿದೆ. ಇದು ಅಶಿಸ್ತಿನ ಕೊರತೆಯೂ ಹೌದು. ಹೀಗಾಗಿ ಈ ರೀತಿಯ ವರ್ತನೆಗೆ ಮತ್ತೊಬ್ಬರ ಮನಸ್ಸಿಗೆ ಎಷ್ಟು ನೋವಾಗುತ್ತದೆ ಎಂಬುದನ್ನು ತಿಳಿಸಿಕೊಡಿ. 

ತಪ್ಪಾದಾಗ ಒಪ್ಪಿಕೊಳ್ಳುವುದನ್ನು ಕಲಿಸಿ
ನಿಮ್ಮ ಮಗು ತನ್ನ ತಪ್ಪಿಗಾಗಿ ಇತರ ಮಕ್ಕಳನ್ನು ದೂಷಿಸಿದರೆ, ಇದು ಮಗುವಿನ ಶಿಸ್ತಿನ (Discipline)ಕೊರತೆಯ ಬಗ್ಗೆ ಸೂಚಿಸುತ್ತದೆ. ಹೀಗಾಗಿ ತಪ್ಪು ಮಾಡಿದಾಗ ಒಪ್ಪಿಕೊಳ್ಳಲು, ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮಕ್ಕಳಿಗೆ ಕಲಿಸಿ ಕೊಡಿ. ತಪ್ಪು ಮಾಡುವುದು ಸಹಜ, ತಿದ್ದಿ ನಡೆಯಬೇಕೆಂಬುದನ್ನು ತಿಳಿಸಿಕೊಡಿ. ಮಕ್ಕಳ ಆಯ್ಕೆಗಳಿಗೆ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಅವರಿಗೆ ಕಲಿಸಿ ಇದು ಅವರಿಗೆ ಜವಾಬ್ದಾರಿ (Responsibilty) ಯನ್ನು ಸ್ಪಷ್ಟವಾಗಿಸುತ್ತದೆ.

Super Food For Kids: ಮಕ್ಕಳು ಕುಳ್ಳಗಿದ್ದಾರೆ ಅನ್ನೋ ಬೇಜಾರಾ..ಮೊಟ್ಟೆ, ಸಿಹಿ ಗೆಣಸು ಕೊಟ್ಟು ನೋಡಿ

ಮಕ್ಕಳಲ್ಲಿ ಹಠಮಾರಿತನ ಸ್ವಭಾವ
ಮಕ್ಕಳಲ್ಲಿ ಕಂಡು ಬರುವ ಹಠಮಾರಿತನದ ಸ್ವಭಾವವೇ ಮಕ್ಕಳ ವ್ಯಕ್ತಿತ್ವವನ್ನು ಸಾಮಾನ್ಯವಾಗಿ ಹಾಳು ಮಾಡುತ್ತದೆ. ಹೀಗಾಗಿ ಚಿಕ್ಕಂದಿನಲ್ಲೇ ಈ ಸ್ವಭಾವವನ್ನು ಬದಲಾಯಿಸುವುದು ಮುಖ್ಯವಾಗಿದೆ. ಹಠ ಹಿಡಿದ ತಕ್ಷಣ ಮಗುವಿನ ಯಾವುದೇ ಬೇಡಿಕೆಯನ್ನು ಈಡೇರಿಸುವುದನ್ನು ನಿಲ್ಲಿಸಿ. ಇದರಿಂದ ಮಕ್ಕಳು ಪೋಷಕರನ್ನು ನಿಯಂತ್ರಿಸಲು ಆರಂಭಿಸುತ್ತಾರೆ. ಬದಲಾಗಿ ಪದೇ ಪದೇ ಹಠ ಹಿಡಿದಾಗ ಬೈದು ಬುದ್ಧಿ ಹೇಳಿ. ಇದರಿಂದ ಮತ್ತೊಂದು ಸಾರಿ ಆ ಹಠವನ್ನು ಪುನರಾವರ್ತಿಸಲು ಮಕ್ಕಳು ಹಿಂಜರಿಯುತ್ತಾರೆ.

ಅಸಡ್ಡೆ ಮನೋಭಾವ
ಮಕ್ಕಳು ಪೋಷಕರ ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತಿಲ್ಲ, ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಅನಿಸಿದರೆ ಅದನ್ನು ಪ್ರೋತ್ಸಾಹಿಸಲು ಹೋಗಬೇಡಿ. ಸರಿಯಾದ ವಿಷಯಗಳನ್ನು ಯಾವಾಗಲೂ ಪರಿಗಣನೆಗೆ ತೆಗೆದುಕೊಳ್ಳುವಂತೆ ಸೂಚಿಸಿ.

ಮಕ್ಕಳಲ್ಲಿ ಸಹಾನುಭೂತಿಯ ಕೊರತೆ
ಇವತ್ತಿನ ಮಕ್ಕಳಲ್ಲಿ ಮುಖ್ಯವಾಗಿ ಅಹಂಕಾರದ ವರ್ತನೆ ಕಂಡು ಬರುತ್ತದೆ. ಸಾಮಾನ್ಯವಾಗಿ ಹಿರಿಯರನ್ನು ಕಂಡಾಗ ಅಗೌರವ ತೋರುವುದನ್ನು ಮಾಡುತ್ತಿರುತ್ತಾರೆ. ಹಾಗೆಯೇ ಕಷ್ಟದಲ್ಲಿರುವವರನ್ನು ಕಂಡಾಗ ಸಹಾನೂಭೂತಿ ತೋರಿಸುವುದು ತಿಳಿದಿರುವುದಿಲ್ಲ. ಇದನ್ನು ಪೋಷಕರು ಪುಟ್ಟ ಮಕ್ಕಳಿಗೆ ತಿಳಿಸಿ ಕೊಡಬೇಕು. ದಯೆ, ಸಹಾನುಭೂತಿಯ ಮಹತ್ವದ ಮನವರಿಕೆ ಮಾಡಿಕೊಡಬೇಕು. ಈ ರೀತಿ ಉತ್ತಮ ವರ್ತನೆ ತೋರಿದಾಗ ಅವರನ್ನು ಪ್ರಶಂಸಿಸುವುದನ್ನು ಮರೆಯಬೇಡಿ. ಇದರಿಂದ ಮಕ್ಕಳು ಉತ್ತಮ ಗುಣಗಳನ್ನೇ ಹೆಚ್ಚು ಹೆಚ್ಚಾಗಿ ರೂಢಿಸಿಕೊಳ್ಳುತ್ತಾ ಹೋಗುತ್ತಾರೆ. 

Latest Videos
Follow Us:
Download App:
  • android
  • ios