ಎಷ್ಟ್ ಫೋಟೋ ತೆಗೀತಿರಪ್ಪಾ..ಫೋಟೋಗೆ ಪೋಸ್ ನೀಡಲು ಹೇಳಿದ್ದಕ್ಕೆ ವರಮಾಲೆ ಎಸೆದು ಹೊರನಡೆದ ವರ!
ಮದುವೆ ಅನ್ನೋದು ಎಲ್ಲರ ಜೀವನದಲ್ಲೂ ತುಂಬಾ ಖುಷಿಯಾಗಿರುವ ಕ್ಷಣ. ಹೀಗಾಗಿಯೇ ಇದನ್ನು ಮೆಮೊರೆಬಲ್ ಆಗಿಸಲು ಎಲ್ಲರೂ ಪ್ರಯತ್ನಿಸ್ತಾರೆ. ಫೋಟೋ, ವೀಡಿಯೋಗಳನ್ನು ಮಾಡಿ ಇಟ್ಟುಕೊಳ್ತಾರೆ. ಆದ್ರೆ ಇಲ್ಲೊಂದು ಮದ್ವೆ ಮನೆಯಲ್ಲಿ ಫೋಟೋಸ್ ಕಾರಣಕ್ಕಾಗಿಯೇ ಗಲಾಟೆ ನಡೆದು ಹೋಗಿದೆ.
ಹಿಂದೆಲ್ಲಾ ಮದುವೆ ಅಂದ್ರೆ ನೂರಾರು ಜನ್ಮದ ಬಂಧ ಎಂಬಂತೆ ಇರುತ್ತಿತ್ತು. ಹಿರಿಯರು ನಿಂತು ಮಾಡಿದ ಮದುವೆಯಲ್ಲಿ ಗಂಡ-ಹೆಂಡತಿ ಸಾಯೋವರೆಗೂ ಪ್ರೀತಿ, ನಂಬಿಕೆಯಿಂದ ಜೊತೆಯಾಗಿ ಇರ್ತಾ ಇದ್ರು. ಆದ್ರೆ ಈಗಲೋ ಹುಡುಗಿಯ ಕುತ್ತಿಗೆಗೆ ತಾಳಿ ಕಟ್ಟುವ ವರೆಗೂ ಮದ್ವೆ ಆಯ್ತು ಅನ್ನುವಂತಿಲ್ಲ. ನಿಶ್ಚಿತಾರ್ಥದ ಬಳಿಕ, ಮದುವೆಯ ಕೊನೆ ಕ್ಷಣದಲ್ಲಿ ಹೀಗೆ ಏನಾದರೊಂದು ರಾದ್ಧಾಂತ ಆಗಿ ಮದ್ವೆ ಕ್ಯಾನ್ಸಲ್ ಆಗುತ್ತೆ. ಹಿಂದೆಲ್ಲಾ ಸಂಬಂಧ ಉಳಿಸೋಕೆ ಎಲ್ಲಾ ರೀತಿಯಲ್ಲೂ ಪ್ರಯತ್ನಿಸ್ತಿದ್ರು. ಆದ್ರೆ ಈಗ ಮಾತ್ರ ಸಣ್ಣಪುಟ್ಟ ಕಾರಣಕ್ಕೆ ಸಂಬಂಧಗಳನ್ನು ಮುರಿಯೋ ಘಟನೆಗಳೇ ನಡೆಯುತ್ತವೆ. ಹಾಗೆಯೇ ಇಲ್ಲೊಂದೆಡೆ ಮದುವೆಯಲ್ಲಿ ಫೋಟೋಸ್ ತೆಗೆಯೋ ವಿಚಾರಕ್ಕಾಗಿ ವರ ಸಿಟ್ಟು ಮಾಡಿಕೊಂಡಿದ್ದು, ಮದುವೆ ಮನೆಯಲ್ಲಿ ಗಲಾಟೆ ನಡ್ದಿದೆ.
ಈಗ ಮದುವೆ ಸೀಸನ್ ನಡೆಯುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣ (Social media)ಗಳಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಮದುವೆ (Marriage) ಮನೆಯಲ್ಲಿ ನಡೆದ ಎಡವಟ್ಟು, ವಧುವಿನ ಅಲಂಕಾರ, ಊಟದ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಹಾಗೆಯೇ ಈ ಮದುವೆಯಲ್ಲಿ ಪದೇ ಪದೇ ಪೋಟೋಗೆ ಫೋಸ್ ನೀಡಲು ಹೇಳುವ ಫೋಟೋಗ್ರಾಫರ್ ವಿರುದ್ಧ ವರ ಸಿಟ್ಟಿಗೆದ್ದಿದ್ದಾನೆ.
ಪಟಾಕಿ ಸದ್ದಿಗೆ ಬೆಚ್ಚಿಬಿದ್ದ ವರ, ಏನಪ್ಪಾ ನಿನ್ ಅವಸ್ಥೆ ಅಂತ ಬಿದ್ದೂ ಬಿದ್ದೂ ನಕ್ಕ ಮಂದಿ
ಫೋಟೋಗೆ ಫೋಸ್ ನೀಡಿ ಸುಸ್ತಾದ ವರ, ವರಮಾಲೆ ಎಸೆದು ಆಕ್ರೋಶ
ಭಾರತೀಯ ವಿವಾಹಗಳಲ್ಲಿ ಎಷ್ಟು ಶಾಸ್ತ್ರಗಳು ನಡೆಯುತ್ತವೆಯೋ, ಅಷ್ಟೇ ಪ್ರಮಾಣದಲ್ಲಿ ಕ್ಯಾಮೆರಾಗೆ ಪೋಸ್ ನೀಡಬೇಕಾಗುತ್ತದೆ. ಮದುವೆಯ ಖುಷಿ ಕ್ಷಣವನ್ನು ಎಲ್ಲರೂ ಸೆರೆ ಹಿಡಿಯಬೇಕೆಂದು ಬಯಸುತ್ತಾರೆ. ಹೀಗಾಗಿಯೇ ಎಲ್ಲಾ ಮದುವೆಯಲ್ಲಿ ಯಾರಿಲ್ಲದಿದ್ದರೂ ಫೋಟೋಗ್ರಾಫರ್ ಅಂತೂ ಇರಲೇಬೇಕು. ಮದುವೆಯ ಪ್ರತಿಯೊಂದು ಕ್ಷಣವನ್ನೂ ಫೋಟೋಗ್ರಾಫರ್ ಕ್ಲಿಕ್ಕಿಸುತ್ತಾರೆ. ಇದಕ್ಕಾಗಿ ವರ-ವಧು (Groom-bride) ಆಗಾಗ ಫೋಸ್ ನೀಡುತ್ತಲೇ ಇರಬೇಕಾಗುತ್ತದೆ. ಯಾವುದೇ ಕ್ಷಣ ಮಿಸ್ ಆದರೂ ಅದೇ ಫೋಸ್‌ನ್ನು ಮತ್ತೆ ಮತ್ತೆ ಮಾಡಿಸುತ್ತಾರೆ.
ವಧು-ವರರು ಮದುವೆ ಶಾಸ್ತ್ರದಲ್ಲಿ ಪಾಲ್ಗೊಂಡು ತುಂಬಾ ಸುಸ್ತಾಗಿರುತ್ತಾರೆ. ಹೀಗಿರುವಾಗ ಮತ್ತೆ ಮತ್ತೆ ಫೋಸ್ ನೀಡಲು ಹೇಳುವುದು ಅವರನ್ನು ನಿಜವಾಗಿಯೂ ಹೈರಾಣಾಗಿಸುತ್ತದೆ. ಈ ಮದುವೆ ಮನೆಯಲ್ಲೂ ಹಾಗೆಯೇ ಆಗಿದೆ. ವರ, ವಧುವಿಗೆ ಹಾರ ಹಾಕುವ ಫೋಸ್ ಸರಿಯಾಗಿ ಬಂದಿಲ್ಲ. ಹೀಗಾಗಿ ಫೋಟೋಗ್ರಾಫರ್ ಅದನ್ನೇ ಮತ್ತೆ ಮತ್ತೆ ಮಾಡುವಂತೆ ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ವರ, ವರಮಾಲೆಯನ್ನೇ ಎಸೆದು ಬಿಟ್ಟಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಮಂಟಪದಲ್ಲಿರುವ ವರ, ಹೂವಿನ ಮಾಲೆ (Garland)ಯನ್ನು ಸಿಟ್ಟಿನಿಂದ ಎಸೆಯುವುದನ್ನು ನೋಡಬಹುದು
26 ಬಾರಿ ಮದ್ವೆಯಾಗಿದ್ದಾನೆ ಈ 60 ವರ್ಷದ ವ್ಯಕ್ತಿ, 100 ಬಾರಿ ಆಗೋದು ಗುರಿಯಂತೆ!
ಈ 1.57 ನಿಮಿಷದ ವೀಡಿಯೊದಲ್ಲಿ, ವರನಿಗೆ ಕ್ಯಾಮೆರಾಪರ್ಸನ್ಸ್ ವಧುವಿಗೆ ಮಾಲೆ ಹಾಕುವಂತೆ ಪದೇ ಪದೇ ಕೇಳುತ್ತಾರೆ. ವರನು ಅದನ್ನು ಚೆನ್ನಾಗಿ ಮಾಡುತ್ತಿದ್ದಾಗ, ವಧು ಹಾರವನ್ನು ವರನ ತಲೆಯ ಮೇಲೆ ಹಾಕುತ್ತಾಳೆ. ಪುನರಾವರ್ತಿತ ಭಂಗಿಯಿಂದ ಕೋಪಗೊಂಡ ವರನು ತನ್ನ ಹಾರವನ್ನು ಎಸೆಯುತ್ತಾನೆ.
ವಧುವಿನ ಪೋಷಕರು ಕೊಟ್ಟ ಬೀರು ಕಳಪೆಯೆಂದು ಮದುವೆ ಕ್ಯಾನ್ಸಲ್ ಮಾಡಿದ ವರ!
ಭಾರತದಲ್ಲಿ ವರದಕ್ಷಿಣ ನಿಷೇಧ. ಆದರೂ ಕದ್ದು ಮುಚ್ಚಿ ವರದಕ್ಷಿಣೆ, ಕೊಡು ಕೊಳ್ಳುವಿಕೆ ನಡೆಯುತ್ತಲೇ ಇದೆ. ಮತ್ತೆ ಕೆಲವರು ಗಿಫ್ಟ್ ಅನ್ನೋ ಹೆಸರಿನಲ್ಲೂ ವರದಕ್ಷಿಣೆ ಸಂಪ್ರದಾಯ ಮುಂದುವರಿಸಿದ್ದಾರೆ. ವರದಕ್ಷಿಣೆಯಾಗಿ ವಧುವಿನ ಪೋಷಕರು ಕೊಟ್ಟ ಬೀರು ಕಳಪೆಯಾಗಿದೆ ಎಂದು ವರ ಮದುವೆ ಕ್ಯಾನ್ಸಲ್ ಮಾಡಿರೋ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. 22 ವರ್ಷದ ಹೀನಾ ಫಾತಿಮಾ ಮದುವೆ 25 ವರ್ಷದ ಚಾಲಕ ಮೊಹಮ್ಮದ್ ಝಾಕೀರ್ ಜೊತೆ ನಿಗದಿಯಾಗಿತ್ತು. ಮದುವೆ ನಿಶ್ಚಯ ದಿನ ವರನ ಕಡೆಯವರು ಹಲವು ಡಿಮಾಂಡ್ ಮಾಡಿದ್ದಾರೆ. ಅದರಂತೆ ವರದಕ್ಷಿಣೆ ರೂಪದಲ್ಲಿ ವಧುವಿನ ತಂದೆ ಫರ್ನೀಚರ್ ಕೊಟ್ಟಿದ್ದು, ಇದರಲ್ಲಿ ಬೀರು ಹಳೆಯದಾಗಿದೆ ಎಂದು ವರ ಮದುವೆ ಕ್ಯಾನ್ಸಲ್ ಮಾಡಿದ್ದಾನೆ.