ಪುಳ್ಚಾರು ತಿಂದ್ಕೊಂಡಿರೋನು ಸನ್ಯಾಸಿ ಅಂತ ಮಾಂಸಾಹಾರಿಗಳು ಆಡಿಕೊಳ್ಳೋದು ಸಾಮಾನ್ಯ. ಸಸ್ಯಾಹಾರಿಗಳೆಂದ್ರೆ ಸೆಕ್ಸ್ ಲೈಫಲ್ಲಿ ಹಿಂದೆ ಬಿದ್ದಿರ್ತಾರೆ ಎಂಬುದೂ ಸಾಮಾನ್ಯ ನಂಬಿಕೆ. ಆದರೆ, ಇದು ಮೂಢನಂಬಿಕೆ, ವಿಷ್ಯ ಏನಂದ್ರೆ, ಸಸ್ಯಾಹಾರಿಗಳ ಸೆಕ್ಸ್ ಲೈಫೇ ಬೆಸ್ಟ್ ಅಂತಿದೆ ಹೊಸ ಸರ್ವೆ. 

ಹೌದು, ಲೈಂಗಿಕ ಜೀವನವನ್ನು ಉತ್ತಮಗೊಳಿಸಿಕೊಳ್ಳಲು ನೀವು ಎಲ್ಲ ಪ್ರಯತ್ನ ಮಾಡಿಯೂ ಸೋತಿದ್ದರೆ ಇದನ್ನು ಟ್ರೈ ಮಾಡಿ. ಇನ್ನು ಮುಂದೆ ಮಾಂಸಾಹಾರ ತ್ಯಜಿಸಿ ನೋಡಿ. 

ಮಳೆಗಾಲದಲ್ಲಿ ಬೆಚ್ಚನೆ ಹಿತದ ಜೊತೆ ಇಮ್ಯುನಿಟಿ ಹೆಚ್ಚಿಸಲು ನಿಮ್ಮ ಟೀ ಹೀಗಿರಲಿ

ಜಗತ್ತು ಪ್ರಕೃತಿ ಹಾಗೂ ತಮ್ಮ ದೇಹ ಪ್ರಕೃತಿಯ ಒಳಿತಿಗಾಗಿ ವೇಗನಿಸಂ, ಸಸ್ಯಾಹಾರ ಎಂದು ಹೆಚ್ಚು ಹೆಚ್ಚು ಅಪ್ಪಿಕೊಳ್ಳುತ್ತಿದೆ. ಹೀಗೆ ಸಸ್ಯಾಹಾರಕ್ಕೆ ಮುಖ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವಾಗಲೇ, ಇದು ಇನ್ನಷ್ಟು ಹೆಚ್ಚಾಗಲು ಬಲವಾದ ಕಾರಣವೊಂದು ಸಿಕ್ಕಿದೆ. ಅದೇನೆಂದ್ರೆ ವೆಜಿಟೇರಿಯನ್ಸ್ ಅತ್ಯುತ್ತಮ ಪ್ರೇಮಿಗಳಾಗಿದ್ದು, ಅವರು ಮಾಂಸಾಹಾರಿಗಳಿಗಿಂತಲೂ ಹೆಚ್ಚು ಸೆಕ್ಸ್ ಅನುಭವಿಸುತ್ತಾರೆ ಎಂಬುದು. 

ಅಧ್ಯಯನ
ಯುಕೆ ಮೂಲದ ವಿವಾಹೇತರ ಸಂಬಂಧದ ವೆಬ್‌ಸೈಟ್ ಹಕ್ನಾಲ್ ಡಿಸ್ಪ್ಯಾಚ್ ಈ ಅಧ್ಯಯನ ಕೈಗೊಂಡಿದ್ದು, ಇದರಲ್ಲಿ 500 ಸಸ್ಯಾಹಾರಿಗಳು ಹಾಗೂ 500 ಮಾಂಸಾಹಾರಿಗಳು ಭಾವಹಿಸಿದ್ದರು. ಸರ್ವೆಯ ಫಲಿತಾಂಶದಂತೆ ಮಾಂಸಾಹಾರಿಗಳು ಹಾಸಿಗೆಯಲ್ಲಿ ಬಹಳ ಸ್ವಾರ್ಥಿಗಲಾಗಿರುವ ಜೊತೆಗೆ, ತಮ್ಮ ಸೆಕ್ಸ್ ಲೈಫ್ ಬಗ್ಗೆ ಹೆಚ್ಚು ಅಸಮಾಧಾನ ಹೊಂದಿರುತ್ತಾರೆ ಎಂಬುದು ತಿಳಿದುಬಂದಿದೆ. 

ಶೇ.57ರಷ್ಟು ಸಸ್ಯಾಹಾರಿಗಳು ತಾವು ವಾರಕ್ಕೆ 3-4 ಬಾರಿ ಸೆಕ್ಸ್‌ನಲ್ಲಿ ತೊಡಗುವುದಾಗಿ ಹೇಳಿದ್ದರೆ, ಶೇ.49 ಮಾಂಸಾಹಾರಿಗಳು ತಾವು ವಾರಕ್ಕೆ ಕೇವಲ ಒಂದೋ ಎರಡೋ ಬಾರಿ ಸೆಕ್ಸ್ ಅನುಭವಿಸುವುದಾಗಿ ಹೇಳಿದ್ದಾರೆ. ಇನ್ನು ತೃಪ್ತಿಯ ವಿಷಯಕ್ಕೆ ಬಂದರೆ,ಬರೋಬ್ಬರಿ ಶೇ.84ರಷ್ಟು ಸಸ್ಯಾಹಾರಿಗಳು ತಮ್ಮ ಸೆಕ್ಸ್ ಲೈಫ್ ಬಗ್ಗೆ ತೃಪ್ತಿ ಹೊಂದಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಮಾಂಸಾಹಾರಿಗಳಲ್ಲಿ ತೃಪ್ತತೆ ವ್ಯಕ್ತಪಡಿಸಿದವರ ಸಂಖ್ಯೆ ಕೇವಲ ನೂರಕ್ಕೆ 59 ಮಂದಿ. ಇಷ್ಟೇ ಅಲ್ಲ, ಸಸ್ಯಾಹಾರಿಗಳೇ  ಹೆಚ್ಚು ಫೋರ್‌ಪ್ಲೇ ಹಾಗೂ ಡರ್ಟಿ ಟಾಕಿಂಗ್‌ನ್ನು ಎಂಜಾಯ್ ಮಾಡುವುದು ಎಂಬುದೂ ಸರ್ವೆಯಲ್ಲಿ ಬಹಿರಂಗವಾಗಿದೆ. 

ಬಟರ್‌ಫ್ರೂಟ್‌ - ಬಾದಾಮಿ: ಸೆಕ್ಸ್ ಡ್ರೈವ್ ಉತ್ತಮಗೊಳಿಸುವ 9 ಆಹಾರಗಳು

ಸಸ್ಯಾಹಾರಿಗಳಲ್ಲಿ ಶೇ.92 ಮಂದಿ ಸೆಕ್ಸ್ ಎಂಜಾಯ್ ಮಾಡುತ್ತಿದ್ದು, ಶೇ.88ರಷ್ಟು ಜನ ಫೋರ್‌ಪ್ಲೇ ಇಷ್ಟಪಡುತ್ತಾರೆ. ಇನ್ನು ಶೇ.48ರಷ್ಟು ಮಂದಿಗೆ ಡರ್ಟಿ ಟಾಕ್ ಖುಷಿ ನೀಡುತ್ತದೆ. ಆದರೆ, ಮಾಂಸಾಹಾರಿಗಳಲ್ಲಿ ಈ ಸಂಖ್ಯೆ ಕ್ರಮವಾಗಿ ಶೇ.79, ಷೇ.68, ಶೇ.35ರಷ್ಟು ಮಾತ್ರ ಇದೆ. 

ಕಾಮೋತ್ತೇಜಕ ಆಹಾರ
ಸಸ್ಯಾಹಾರಿಗಳ ಈ ಸೂಪರ್ ಸೆಕ್ಸ್‌ ಲೈಫ್‌ನಲ್ಲಿ ಆಹಾರದ ಪಾತ್ರ ದೊಡ್ಡದಿದೆ.  ಸಸ್ಯಾಹಾರಿಗಳ ಆಹಾರದಲ್ಲಿ ಕಾಮೋತ್ತೇಜಕ ಗುಣಗಳನ್ನು ಹೊಂದಿರುವ ಆಹಾರಗಳು ಹೆಚ್ಚಾಗಿ ದೇಹ ಸೇರುತ್ತವೆ. ಬಾದಾಮಿ, ಬಾಳೆಹಣ್ಣು, ಬೆಣ್ಣೆಹಣ್ಣು, ಮೆಂತ್ಯೆ, ದಾಳಿಂಬೆ, ಸೊಪ್ಪುಗಳು ಇತ್ಯಾದಿ ಆಹಾರಗಳಲ್ಲಿ ಕಾಮೋತ್ತೇಜಕ ಗುಣಗಳಿರುತ್ತವೆ. ಇನ್ನು ಸಸ್ಯ ಜನ್ಯ ಆಹಾರಗಳಲ್ಲಿ ವಿಟಮಿನ್ ಬಿ ಹಾಗೂ ಝಿಂಕ್ ಹೆಚ್ಚಿದ್ದು ಇವು ಕೂಡಾ ಲಿಬಿಡೋ ಹೆಚ್ಚಿಸುತ್ತವೆ. ಇವು ಸೆಕ್ಸ್ ಬದುಕಿನ ಎಕ್ಸೈಟ್‌ಮೆಂಟ್ ಹೆಚ್ಚಿಸುತ್ತವೆ. ಆದರೆ, ಮಾಂಸಾಹಾರ ಸೇವಿಸುವವರಿಗೆ ಇಂಥ ಆಹಾರಗಳು ಹೆಚ್ಚಾಗಿ ರುಚಿಸುವುದೂ ಇಲ್ಲ, ಅವರದನ್ನು ಹೆಚ್ಚು ಬಳಸುವುದೂ ಇಲ್ಲ. 

ಪುರಷರಲ್ಲಿ ಫಲವತ್ತತೆ ಹೆಚ್ಚಿಸುವ ಆರೋಗ್ಯಕರ ಆಹಾರಗಳಿವು

ಹಾರ್ಮೋನ್ ಪಾತ್ರ
ಸಸ್ಯಾಹಾರವನ್ನು ನೆಚ್ಚುವುದರಿಂದ ದೇಹದಲ್ಲಿ ಸೆರೋಟೋನಿನ್ ಹಾರ್ಮೋನ್ ಹೆಚ್ಚಾಗಿ ಬಿಡುಗಡೆಯಾಗುತ್ತದೆ. ಇದು ವ್ಯಕ್ತಿಯ ಸೆಕ್ಸ್ ಡ್ರೈವ್ ಹೆಚ್ಚಿಸಿ ಸಂತೋಷವನ್ನು ದ್ವಿಗುಣಗೊಳಿಸುತ್ತದೆ. ಸಸ್ಯಾಹಾರದಿಂದ ಎನರ್ಜಿಯೂ ಹೆಚ್ಚು. ಇದು ಕೂಡಾ ವ್ಯಕ್ತಿಯನ್ನು ಸಮಯವನ್ನು ನೋಡದೆ ಆರಾಮಾಗಿ ಸೆಕ್ಸ್‌ನಲ್ಲಿ ತೊಡಗಲು ಸಹಾಯಕವಾಗುತ್ತದೆ. 
 ಕೇವಲ ತೂಕ ಇಳಿಸೋಕೆ ಅಥವಾ ನಿಸರ್ಗಕ್ಕಾಗಿ ಸಸ್ಯಾಹಾರದ ಮೊರೆ ಹೋಗಬೇಡಿ, ನಿಮ್ಮ ಹಾಗೂ ಸಂಗಾತಿಯ ನಡುವಿನ ಬಿಸಿ ಹೆಚ್ಚಿಸಲು ಕೂಡಾ ಈ ಪ್ರಯೋಗ ಮಾಡಿ ಮಾಡಿನೋಡಿ.