ಪುರುಷರಲ್ಲಿ ಫಲವತ್ತತೆ ಹೆಚ್ಚಿಸುವ ಆರೋಗ್ಯಕರ ಆಹಾರಗಳು
ಲೈಂಗಿಕತೆ ಮಾನವನ ಜೀವನದ ಒಂದು ಅವಿಭಾಜ್ಯ ಅಂಗ. ಲೈಂಗಿಕ ಆರೋಗ್ಯವು ಮನುಷ್ಯನಿಗೆ ಮುಖ್ಯ. ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುವ ಹಲವು ಆಹಾರಗಳಿವೆ. ವೀರ್ಯ ಚಲನಶೀಲತೆ ಮತ್ತು ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಈ ಆಹಾರಗಳನ್ನು ಪ್ರಯತ್ನಿಸಿ. ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುವ ಕೆಲವು ಆಹಾರಗಳು ಇಲ್ಲಿವೆ.
ಈ ಅತ್ಯಾಧುನಿಕ ಯುಗದಲ್ಲಿ ಪುರುಷರು ಅನುಭವಿಸುತ್ತಿರುವ ಮುಖ್ಯ ಸಮಸ್ಯೆ ವಿರ್ಯಾಣು ಸಂಖ್ಯೆ ಕಡಿಮೆಯಾಗುವುದು. ಇದನ್ನು ಸರಿ ಮಾಡಲು ಕೆಲವು ಆಹಾರಗಳ ಸೇವನೆ ಅತ್ಯಗತ್ಯ. ಯಾವುವು ಅವು?
ಬಾಳೆಹಣ್ಣುಗಳು:
ಜೀವಸತ್ವಗಳಲ್ಲಿ ಸಮೃದ್ಧವಾಗಿರುವ ಬಾಳೆಹಣ್ಣಿನಲ್ಲಿ ಬ್ರೋಮೆಲೈನ್ ಎಂಬ ವಿಶೇಷ ಕಿಣ್ವವಿದೆ. ಈ ಕಿಣ್ವವು ಪುರುಷರ ವೀರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ವಾಲ್‌ನಟ್ಸ್:
ವಾಲ್‌ನಟ್ಸ್ ಒಮೆಗಾ -3 ಫ್ಯಾಟಿ ಆ್ಯಸಿಡ್‌ನ ನೈಸರ್ಗಿಕ ಮೂಲ. ಇತರೆ ಪಾಲಿ ಅನ್‌ಸಾಚುರೇಟೆಡ್ ಫ್ಯಾಟಿ ಆ್ಯಸಿಡ್‌ಗಳ ಜೊತೆಗೆ ವೀರ್ಯ ಫಲವತ್ತಾಗಲು ಮತ್ತು ಸರಿಯಾಗಿ ಕೆಲಸ ಮಾಡಲು ಒಮೆಗಾ -3 ಅಗತ್ಯ. ಮೀನಿನ ಎಣ್ಣೆ ಮತ್ತು ಅಗಸೆಬೀಜಗಳಂತಹ ಇತರೆ ಆಹಾರಗಳು ಸಹ ಈ ಕಾಪೋಂಡ್‌ಗಳನ್ನು ಒಳಗೊಂಡಿರುತ್ತವೆ,
ವಾಲ್‌ನಟ್ಸ್ ತಿನ್ನುವುದರಿಂದ ಪುರುಷ ಈಜುಗಾರರ ದೇಹದ ಶೇಪ್ ಮತ್ತು ಸೈಜ್ ಹೆಚ್ಚಾಗುತ್ತದೆ.
ಟೊಮ್ಯಾಟೊ:
ಲೈಕೋಪೀನ್ ಸಮೃದ್ಧವಾಗಿರುವ ಟೊಮ್ಯಾಟೊ ಪುರುಷರ ವೀರ್ಯವನ್ನು ಸುಧಾರಿಸುತ್ತದೆ.
ದಾಳಿಂಬೆ:
ಈ ಹಣ್ಣು ವೀರ್ಯ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ದಾಳಿಂಬೆಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಇದ್ದು, ಮಾಲೋಂಡಿಲ್ಡಿಹೈಡ್ ಎಂಬ ನಿರ್ದಿಷ್ಟ ರಾಸಾಯನಿಕದ ವಿರುದ್ಧ ಹೋರಾಡುತ್ತದೆ.
ದಿನಾಲೂ ದಾಳಿಂಬೆ ನೀಡಿ, ವೀರ್ಯದ ಫಲವತ್ತತೆಯನ್ನು ಪರೀಕ್ಷಿಸಲಾಗಿದೆ. ಇದರಿಂದ ದೇಹದ ವಿಷಕಾರಿ ಅಂಶಗಳು ಹೋರ ಹೋಗಿ, ವೀರ್ಯದ ಫಲವತ್ತತೆ ಹೆಚ್ಚಾಗಿರುವುದು ಅಧ್ಯಯನಗಳಿಂದ ಸಾಬಿತಾಗಿದೆ.
ಡಾರ್ಕ್ ಚಾಕೊಲೇಟ್:
ಮಿಲ್ಕ್ ಚಾಕೊಲೇಟ್‌ಗಿಂತ ಪುರುಷರು ಡಾರ್ಕ್ ಚಾಕೊಲೇಟ್ ಅನ್ನು ಆರಿಸಿಕೊಳ್ಳುತ್ತಾರೆ. ಡಾರ್ಕ್ ಚಾಕೊಲೇಟ್ ಎಲ್-ಅರ್ಜಿನೈನ್ ಇರುವಿಕೆಗೆ ಹೆಸರುವಾಸಿ. ಎಂಡಾರ್ಫಿನ್‌ಗಳ ಬಿಡುಗಡೆ ಮತ್ತು ಹೆಚ್ಚಳದಲ್ಲಿ ಈ ಚಾಕೊಲೇಟ್ ಸಹಾಯ ಮಾಡುತ್ತದೆ. ಮನಸ್ಸು ಖುಷಿಯಾಗಿದ್ದರೆ ಸೆಕ್ಸ್‌ನಲ್ಲಿ ಖುಷಿಯಿಂದ ಭಾಗಿಯಾಗುತ್ತಾರೆ.