ಪ್ರೇಮಿಗಳ ದಿನಾಚರಣೆ ಕೆಲ ದಿನ ಮಾತ್ರ ಬಾಕಿ. ಈಗಾಗಲೇ ಪ್ರಣಯ ಹಕ್ಕಿಗಳು ಸಂಭ್ರಮದಲ್ಲಿದ್ದಾರೆ. ಈ ಪ್ರೇಮಿಗಳ ದಿನಾಚರಣೆಗೆ ರತನ್ ಟಾಟಾ ಪ್ರೀತಿ ಪ್ರಣಯ ಕುರಿತ ರೋಚಕ ಹಾಗೂ ನೋವಿನ ಘಟನೆ ಬಹಿರಂಗವಾಗಿದೆ. ದೂರವಾದ ರತನ್ ಟಾಟಾ ಮೊದಲ ಪ್ರೀತಿ, ಮುರಿದು ಬಿದ್ದ ಮದುವೆ ನಿಮಗೆ ಗೊತ್ತಾ?

ಮುಂಬೈ(ಫೆ.11) ಉದ್ಯಮಿ ರತನ್ ಟಾಟಾ ವ್ಯಕ್ತಿತ್ವ, ಸಾಧನೆ, ನಡೆದು ಬಂದ ಹಾದ ಎಲ್ಲರಿಗೂ ಮಾದರಿ. ರತನ್ ಟಾಟಾ ನಿಧನರಾದರೂ ಅವರ ನೆನಪು ಅಜರಾಮರ. ರತನ್ ಟಾಟಾ ಪ್ರೀತಿ ಕುರಿತು ಹಲವು ಮಾಹಿತಿಗಳು ಈಗಾಗಲೇ ಲಭ್ಯವಿದೆ. ಖುದ್ದು ರತನ್ ಟಾಟಾ ಕೂಡ ಈ ಕುರಿತು ಕೆಲ ಸೂಕ್ಷ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಪ್ರೇಮಿಗಳ ದಿನಾಚರಣೆ ರತನ್ ಟಾಟಾ ಅವರ ಮೊದಲ ಪ್ರೀತಿ ದೂರವಾಗಿದ್ದೇಕೆ? ಮದುವೆ ಮುರಿದು ಬಿದ್ದಿದ್ದೇಗೆ ಅನ್ನೋದು ಬಹಿರಂಗವಾಗಿದೆ. ರತನ್ ಟಾಟಾ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ ಹೆಸರು ಕ್ಯಾರೊಲಿನ್ ಎಮೊನ್ಸ್. ಮದುವೆಗೂ ತಯಾರಿ ಮಾಡಿಕೊಂಡಿದ್ದ ರತನ್ ಟಾಟಾಗೆ ಮದುವೆ ಆಗಲೇ ಇಲ್ಲ. ಕೊನೆಯವರೆಗೂ ರತನ್ ಟಾಟಾ ಬ್ರಹ್ಮಾಚಾರಿಯಾಗಿ ಉಳಿದರು.

ಅದು 1960ರ ದಶಕ. ರತನ್ ಟಾಟಾ ವಿದ್ಯಾಭ್ಯಾಸ ಮುಗಿಸಿ ಅಮೆರಿಕದ ಲಾಸ್ ಎಂಜಲೀಸ್‌ನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆರ್ಕೀಟೆಕ್ಚರ್ ಕ್ಷೇತ್ರದಲ್ಲಿ ಕೆಲಸ ಆರಂಭಿಸಿದ ರತನ್ ಟಾಟಾ 19 ವರ್ಷದ ಕಾಲೇಜು ಹುಡುಗಿ ಕ್ಯಾರೊಲಿನ್ ಎಮೊನ್ಸ್ ಮೊದಲ ನೋಟಕ್ಕೆ ಪ್ರೀತಿಯಲ್ಲಿ ಬಿದ್ದಿದ್ದರು. ಕ್ಯಾರೊಲಿನ್ ತಂದೆ ವಸ್ತುಶಿಲ್ಪ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ವ್ಯಕ್ತಿಯಾಗಿದ್ದರು. ಹೀಗಾಗಿ ಕ್ಯಾರೊಲಿನ್ ತಂದೆ ಮೂಲಕ ರತನ್ ಟಾಟಾ ಹಾಗೂ ಕ್ಯಾರೊಲಿನ್ ಮತ್ತಷ್ಟು ಆತ್ಮೀಯರಾಗಿದ್ದರು.

ರತನ್ ಟಾಟಾ 10,000 ಕೋಟಿ ರೂ ಆಸ್ತಿಯಲ್ಲಿ ಮುದ್ದಿನ ನಾಯಿಗೂ ಇದೆ ಅತೀ ದೊಡ್ಡ ಪಾಲು!

ಇಬ್ಬರಿಗೂ ಪ್ರೀತಿ ಚಿಗುರೊಡೆದಿತ್ತು. ರತನ್ ಟಾಟಾ ವೃತ್ತಿ ಆರಂಭಿಸಿದ್ದರೆ, ಆರ್ಕಿಟೆಕ್ಟ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದರು. ರತನ್ ಟಾಟಾ ಪ್ರೀತಿ ಗಾಢವಾಗಿತ್ತು, ಕ್ಯಾರೊಲಿನ್ ಕೂಡ ಅಷ್ಟೇ ಪ್ರೀತಿಸುತ್ತಿದ್ದರು. ಇವರ ಪ್ರೀತಿ ವಿಚಾರ ಮನೆಯವರಿಗೆ ತಿಳಿಸಿದ್ದರು. ರತನ್ ಟಾಟಾ ಸ್ವಂತ ನಿರ್ಧಾರಕ್ಕೆ ಮನೆಯಲ್ಲಿ ಯಾವುದೇ ವಿರೋಧಗಳು ಇರಲಿಲ್ಲ. ಇತ್ತ ಕ್ಯಾರೋಲಿನ್ ಮನೆಯಲ್ಲಿ ವಿರೋಧಗಳು ಇರಲಿಲ್ಲ. ಆದರೆ ಭಾರತ ಅನ್ನೋ ಕಾರಣಕ್ಕೆ ಆತಂಕವಿತ್ತು. 1960ರ ದಶಕದಲ್ಲಿ ಭಾರತದ ಚಿತ್ರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ನಿಕೃಷ್ಠವಾಗಿತ್ತು. ಕಡು ಬಡತನ, ಹಾವಾಡಿಗ ದೇಶ, ಮೂಲ ಸೌಕರ್ಯವಿಲ್ಲದ ಬಡ ದೇಶ ಅನ್ನೋದು ಬಿಂಬಿತವಾಗಿತ್ತು. 

ಹೀಗಾಗಿ ಕ್ಯಾರೊಲಿನ್ ಪೋಷಕರಿಗೆ ಮಗಳನ್ನು ರತನ್ ಟಾಟಾ ಜೊತೆ ಮದುವೆ ಮಾಡಿಸಿ ಭಾರತಕ್ಕೆ ಕಳುಹಿಸಲು ಹೆದರಿದ್ದರು. ಆದರೆ ಮಗಳ ನಿರ್ಧಾರವನ್ನು ಪೋಷಕರು ಗೌರವಿಸಿದ್ದರು. ಹೀಗಾಗಿ ಮದುವೆ ತಯಾರಿಗಲು ಆರಂಭಗೊಂಡಿತ್ತು. ಇತ್ತ ರತನ್ ಟಾಟಾ ಕೂಡ ಶೀಘ್ರದಲ್ಲಿ ಕ್ಯಾರೊಲಿನ್ ಮದುವೆಯಾಗಲು ಬಯಸಿದ್ದರು. ಇದರ ನಡುವೆ ಅಂದರೆ 1962ರಲ್ಲಿ ರತನ್ ಟಾಟಾ ತನ್ನ ಅಜ್ಜಿಯ ಆರೋಗ್ಯ ಕಾರಣದಿಂದ ಭಾರತಕ್ಕೆ ಮರಳಿದ್ದರು. ಅಜ್ಜಿಯ ಆರೋಗ್ಯ ನೋಡಿಕೊಂಡು ಕೆಲ ದಿನ ಉಳಿಯುವ ನಿರ್ಧಾರದಲ್ಲಿದ್ದರು. ಬಳಿಕ ಲಾಸ್ ಎಂಜಲೀಸ್‌ಗೆ ತೆರಳಲು ಪ್ಲಾನ್ ಮಾಡಿದ್ದರು. ಆದರೆ ರತನ್ ಟಾಟಾ ಭಾರತಕ್ಕೆ ಮರಳಿದ ಬಳಿಕ ಭಾರತ ಚೀನಾ ಯುದ್ಧ ಆರಂಭಗೊಂಡಿತ್ತು. 1962 ಅಕ್ಟೋಬರ್ -ನವೆಂಬರ್ ತಿಂಗಳು ಯುದ್ಧ ನಡೆದಿತ್ತು. ಇತ್ತ ರತನ್ ಟಾಟಾ ತಮ್ಮ ಅಜ್ಜಿ ಜೊತೆ ಆರೋಗ್ಯ ನೋಡಿಕೊಂಡು ಕಳೆದಿದ್ದರು. ರತನ್ ಟಾಟಾಗೆ ಅಜ್ಜಿ ಪಂಚಪ್ರಾಣವಾಗಿದ್ದರು. ಕಾರಣ ರತನ್ ಟಾಟಾ ಅವರನ್ನು ಸಾಕಿ ಸಲಹಿದ್ದು, ಬೆಳೆಸಿದ್ದು ಎಲ್ಲವೂ ಅಜ್ಜಿ. 

ಇತ್ತ ರತನ್ ಟಾಟಾ ಕ್ಯಾರೊಲಿನ್ ಭೇಟಿಯಾಗಲು ಹಾತೊರೆಯುತ್ತಿದ್ದರು. ಯುದ್ಧ ಮುಗಿದ ಬೆನ್ನಲ್ಲೇ ಅಮೆರಿಕಾಗೆ ತೆರಳಿ ಕ್ಯಾರೊಲಿನ್ ಭೇಟಿಯಾಗಲು ಬಯಸಿದ್ದರು. ಇಂಡೋ-ಚೀನಾ ಯುದ್ಧದಿಂದ ಕ್ಯಾರೊಲಿನ್ ಪೋಷಕರು ಬೆಚ್ಚಿ ಬಿದ್ದಿದ್ದರು. ಯುದ್ಧಪೀಡಿತ ದೇಶಕ್ಕೆ ಮಗಳನ್ನು ಮದುವೆ ಮಾಡಿಸಿಕೊಡಲು ಹಿಂದೇಟು ಹಾಕಿದ್ದರು. ಯುದ್ಧದಿಂದ ಭಾರತ ಮತ್ತಷ್ಟು ಬಡವಾಗಿರಲಿದೆ.ಇಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತೆ ಇರಲಿದೆ ಅನ್ನೋ ಆತಂಕವಿತ್ತು. ಹೀಗಾಗಿ ಮಗಳು ಕ್ಯಾರೊಲಿನ್‌ಗೆ ಈ ವಿಚಾರವನ್ನು ಮನದಟ್ಟು ಮಾಡಿ ಬೇರೆ ಮದುವೆಗೆ ಒಪ್ಪಿಸಿದ್ದರು. ಆರ್ಕಿಟೆಕ್ಟ್ ಹಾಗೂ ಪೈಲೆಟ್ ಒವೆನ್ ಜೋನ್ಸ್ ಜೊತೆ ಕ್ಯಾರೊಲಿನ್ ಮದುವೆ ನಡೆದಿತ್ತು.

ಇನ್ನೇನು ಕ್ಯಾರೊಲಿನ್ ಮದುವೆಯಾಗಬೇಕೆಂದುಕೊಂಡಿದ್ದ ರತನ್ ಟಾಟಾಗೆ ತೀವ್ರ ನೋವುಂಟು ಮಾಡಿತ್ತು. ಮೊದಲ ಸುಂದರ ಪ್ರೀತಿ ಛಿದ್ರವಾಗಿತ್ತು. ಇಂಡೋ ಚೀನಾ ಯುದ್ಧದಿಂದ ರತನ್ ಟಾಟಾ ಪ್ರೀತಿ ಮುರಿದು ಬಿದ್ದಿತ್ತು. ಈ ಕುರಿತು ರೋಚಕ ಮಾಹಿತಿಗಳು ಥೋಮಸ್ ಮ್ಯಥ್ಯೂ ಬರೆದ ರತನ್ ಟಾಟಾ ಎ ಲೈಫ್ ಅನ್ನೋ ಬಯೋಗ್ರಫಿಯಲ್ಲಿ ಉಲ್ಲೇಖಿಸಿದ್ದಾರೆ.

ರತನ್ ಟಾಟಾ ಝುಡಿಯೋಗೆ ಅಂಬಾನಿ ಠಕ್ಕರ್, ಬೆಂಗಳೂರಲ್ಲಿ ಕೇವಲ 499 ರೂ ಖರೀದಿ ಮಳಿಗೆ ಆರಂಭ!