ರತನ್ ಟಾಟಾ ಸಮೂಹ ಸಂಸ್ಥೆಯ ಝುಡಿಯೋ ಶಾಪಿಂಗ್ ಮಾಲ್ ಕೈಗೆಟುಕವ ದರದಲ್ಲಿ ಅತ್ಯುತ್ತಮ ಉತ್ಪನ್ನಗಳ ನೀಡುತ್ತಿದೆ. ಇದೀಗ ರತನ್ ಟಾಟಾ ಝುಡಿಯೋಗೆ ಮುಕೇಶ್ ಅಂಬಾನಿ ರಿಲಯನ್ಸ್ ಠಕ್ಕರ್ ನೀಡಿದೆ. ಬೆಂಗಳೂರಿನಲ್ಲಿ ಹೊಚ್ಚ ಹೊಸ ಯುಸ್ತಾ ಶಾಪಿಂಗ್ ಮಳಿಗೆ ಆರಂಭಿಸಿದೆ. ಕೇವಲ 499 ರೂಪಾಯಿಗೆ ನೆಚ್ಚಿನ ಬಟ್ಟೆ ಸೇರಿದಂತೆ ಇತರ ಉತ್ಪನ್ನ ನೀಡುತ್ತಿದೆ.

ಬೆಂಗಳೂರು(ಅ.13) ರತನ್ ಟಾಟಾ ನಿಧನಕ್ಕೆ ದೇಶವೆ ಕಂಬನಿ ಮಿಡಿದಿದೆ. ರತನ್ ಟಾಟಾ ಹೂಡಿಕೆ ಮಾಡಿದ ಸಂಸ್ಥೆಗಳೆಲ್ಲವೂ ದೇಶದಲ್ಲಿ ಕೇವಲ ದುಡ್ಡಿನ ವ್ಯವಹಾರ ಮಾತ್ರವಲ್ಲ, ಭಾರತೀಯತೆ, ಮೇಕ್ ಇನ್ ಇಂಡಿಯಾ, ಯುವಕರಿಗೆ ಉದ್ಯೋಗವಕಾಶ, ದೇಶಭಕ್ತಿ ತುಂಬುವ ಕೆಲಸ ಮಾಡುತ್ತಿದೆ. ಹೀಗೆ ರತನ್ ಟಾಟಾ ಸಮೂಹ ಸಂಸ್ಥೆಗಳ ಭಾಗವಾಗಿರುವ ಝುಡಿಯೋ ಬಟ್ಟೆ ಹಾಗೂ ಫ್ಯಾಶನ್ ಉತ್ಪನ್ನಗಳ ಮಳಿಗೆ ಅತೀ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಜನರಿಗೆ ನೀಡುತ್ತಿದೆ. ಇದೀಗ ರತನ್ ಟಾಟಾ ಝುಡಿಯೋಗೆ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಠಕ್ಕರ್ ನೀಡಿದೆ. ಬೆಂಗಳೂರಿನಲ್ಲಿ ರಿಲಯನ್ಸ್ ಯುಸ್ತಾ ಅನ್ನೋ ಹೊಸ ಮಳಿಗೆ ಆರಂಭಿಸಿದೆ. ಇಲ್ಲಿ ಕೇವಲ 499 ರೂಪಾಯಿ ಬೆಲೆಯಲ್ಲಿ ಖರೀದಿ ಸಾಧ್ಯ.

Add Asianetnews Kannada as a Preferred SourcegooglePreferred

ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಫ್ಯಾಷನ್ ಬ್ರ್ಯಾಂಡ್ ರಿಟೇಲ್ ಮಳಿಗೆಯನ್ನು ರಿಲಯನ್ಸ್ ಆರಂಭಿಸಿದೆ. ಬೆಂಗಳೂರಿನ ಕೋರಮಂಗಲದಲ್ಲಿ ಈ ಮಳಿಗೆ ಆರಂಭಗೊಂಡಿದೆ. ಹೊಚ್ಚ ಹೊಸ ಫ್ಯಾಷನ್ ಬಟ್ಟೆಗಳು, ಉತ್ತಮ ಗುಣಮಟ್ಟ, ಹತ್ತು ಹಲವು ಆಯ್ಕೆಗಳು ಈ ಯುಸ್ತಾ ಮಳಿಗೆಯಲ್ಲಿ ಲಭ್ಯವಿದೆ.

ಕೇವಲ 39 ರೂಪಾಯಿ ISD ರೀಚಾರ್ಜ್ ಪ್ಲಾನ್ ಘೋಷಿಸಿದ ಜಿಯೋ, ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ!

ಯುಸ್ತಾ ತನ್ನ ಮಳಿಗೆಯನ್ನು ವಿಸ್ತರಿಸುತ್ತಿದೆ. ಇದೀಗ ಬೆಂಗಳೂರಿನ ಇತೆರೆಡೆ ಯುಸ್ತಾ ಮಳಿಗೆ ಆರಂಭಿಸಲು ರಿಲಯನ್ಸ್ ಸಜ್ಜಾಗಿದೆ. ಭಾರತದ 27 ನಗರಗಳಲ್ಲಿ ಯುಸ್ತಾ ಮಳಿಗೆ ಹೊಂದಿದೆ. ಕರ್ನಾಟ ಸೇರಿದಂತೆ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಹರಿಯಾಣ, ಪಶ್ಚಿಮ ಬಂಗಾಳ, ಹರ್ಯಾಣ, ಕೇರಳದ ಪ್ರಮುಖ ನಗರಗಳಲ್ಲಿ ಯುಸ್ತಾ ಮಳಿಗೆ ಆರಂಭಗೊಂಡಿದೆ. ಮಳಿಗೆ ಮಾತ್ರವಲ್ಲ, ಆನ್‌ಲೈನ್ ಮೂಲಕ ಶಾಪಿಂಗ್ ಮಾಡಲು ಇಲ್ಲಿ ಅವಕಾಶವಿದೆ.

ಟ್ರೆಂಡಿ ಉಡುಪುಗಳು, ಯುನಿಸೆಕ್ಸ್ ಶೈಲಿ, ವಿವಿಧ ಆಯ್ಕೆ, ಹೊಸ ಫ್ಯಾಶನ್ ಉತ್ಪನ್ನಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಹೆಚ್ಚಿನ ಉತ್ಪನ್ನಗಳು ಕೇವಲ 499 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಯುಸ್ಟಾ ಕೈಗೆಟುಕುವ ಬೆಲೆಯ ಆಫರ್ ಜೊತೆಗೆ ಯುವ ಫ್ಯಾಷನ್ ಲೋಕದಲ್ಲಿ ಬಿರುಗಾಳಿ ರೀತಿಯಲ್ಲಿ ತನ್ನ ಆನ್-ಟ್ರೆಂಡ್ ಉಡುಪುಗಳನ್ನು ತಂದಿದೆ. ಬೆಂಗಳೂರು ಯುವ ಶಕ್ತಿ ಮತ್ತು ಸೃಜನಶೀಲತೆಯ ಕೇಂದ್ರವಾಗಿದ್ದು, ಈ ಮಳಿಗೆಯು ಫ್ಯಾಷನ್‌ನ ಭವಿಷ್ಯವನ್ನು ರೂಪಿಸುವ ಟ್ರೆಂಡ್‌ಸೆಟರ್‌ಗಳಿಗೆ ಪ್ರಮುಖ ತಾಣವಾಗಲಿದೆ ಎಂದು ರಿಲಯನ್ಸ್ ರಿಟೇಲ್ ಫ್ಯಾಶನ್ ಹೇಳಿದೆ. ಅತೀ ಕಡಿಮೆ ಬೆಲೆಯಲ್ಲಿ ಗ್ರಾಹಕರು ಉತ್ತಮ ಬ್ರ್ಯಾಂಡ್ ಬಟ್ಟೆಗಳ ಖರೀದಿಸಲು ಇಲ್ಲಿ ಸಾಧ್ಯವಿದೆ ಎಂದಿದ್ದಾರೆ. 

ಕೇವಲ 13 ಸಾವಿರ ರೂಗೆ ಜಿಯೋಬುಕ್ 11 ಲ್ಯಾಪ್‌ಟಾಪ್, ಇದು ದೀಪಾವಳಿ ಆಫರ್!