ಗರ್ಲ್ ಫ್ರೆಂಡ್ ಬೇಕೆಂದು ಈತ ಎಲ್ಲಿ ಜಾಹೀರಾತು ನೀಡಿದ್ದಾನೆ ಗೊತ್ತಾ?

ಸಂಗಾತಿ ಹುಡುಕಾಟಕ್ಕೆ ಜನರು ಡೇಟಿಂಗ್ ಅಪ್ಲಿಕೇಷನ್ ಮೊರೆ ಹೋಗ್ತಾರೆ. ಇದೇ ಕಾರಣಕ್ಕೆ ನಾನಾ ಡೇಟಿಂಗ್ ಅಪ್ಲಿಕೇಷನ್ ಹುಟ್ಟಿಕೊಂಡಿದೆ. ಡೇಟ್ ಗೆ ಪಾರ್ಟನರ್ ಹುಡುಕಲು ಇಷ್ಟೆಲ್ಲ ಆಯ್ಕೆ ಇದ್ರೂ ಈತ ಭಿನ್ನ ವಿಧಾನ ಅನುಸರಿಸಿ ಗಮನ ಸೆಳೆದಿದ್ದಾನೆ. 
 

Us Software Engineer Uses Facebook Marketplace Ads To Find Himself A Date roo

ಡೇಟಿಂಗ್ ವಿಧಾನ ಬದಲಾಗಿದೆ. ಒಬ್ಬರನ್ನೊಬ್ಬರು ಭೇಟಿಯಾಗ್ಬೇಕು ಎಂದೇನಿಲ್ಲ. ಆನ್ಲೈನ್ ನಲ್ಲಿಯೇ ಬಯೋಡೇಟ್ ಫಾರ್ವರ್ಡ್ ಮಾಡಿ ಒಬ್ಬರಿಗೊಬ್ಬರು ಇಷ್ಟಪಡಲು ಶುರು ಮಾಡ್ತಾರೆ. ಕೆಲವರ ಮದುವೆ ಕೂಡ ಆನ್ಲೈನ್ ನಲ್ಲೇ ಆಗಿದ್ದಿದೆ. ಟಿಂಡರ್, ಗ್ರಿಂಟರ್, ಬಂಬಲ್ ಸೇರಿದಂತೆ ಅನೇಕ ಡೇಟಿಂಗ್ ಅಪ್ಲಿಕೇಷನ್ ಗಳು ಜನರಿಗೆ ಸಂಗಾತಿ ಹುಡುಕಲು, ಡೇಟ್ ಗೆ ನೆರವಾಗ್ತಿವೆ. ಮೊಬೈಲ್ ನಲ್ಲಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿ, ನಿಮ್ಮ ಪ್ರೊಫೈಲ್ ಹಾಕಿ, ಮ್ಯಾಚಿಂಗ್ ಹುಡುಕ್ತಾ, ಸ್ವೈಪ್ ಮಾಡ್ತಾನೆ ನೀವು ಸಂಗಾತಿ ಹುಡುಕಿಕೊಳ್ಳಬಹುದು. ಇಷ್ಟೆಲ್ಲ ಡೇಟಿಂಗ್ ಅಪ್ಲಿಕೇಷನ್ ಇದ್ರೂ ಜನರು ತಮ್ಮ ಸಂಗಾತಿ ಹುಡುಕಲು ಭಿನ್ನ ಮಾರ್ಗಗಳನ್ನು ಅನುಸರಿಸುತ್ತಾರೆ. ಕೆಲವರು ಪೇಪರ್ ನಲ್ಲಿ ಜಾಹೀರಾತು ನೀಡೋದಿದೆ. ಈ ವ್ಯಕ್ತಿ ಸಂಗಾತಿ ಹುಡುಕಲು ಸ್ವಲ್ಪ ಭಿನ್ನ ವಿಧಾನವನ್ನು ಅನುಸರಿಸಿದ್ದಾನೆ. 

ಅಮೆರಿಕ (America) ದ ಮೈಕಲ್ ಎನ್ನುವ ವ್ಯಕ್ತಿಗೆ ಡೇಟಿಂಗ್ (Dating) ಗಾಗಿ ಹುಡುಗಿಯ ಅವಶ್ಯಕತೆ ಇದೆ. ಡೇಟಿಂಗ್ ಸಂಗಾತಿ  ಹುಡುಕಲು ಆತ ಫೇಸ್ಬುಕ್ (Facebook) ಸಹಾಯ ಪಡೆದಿದ್ದಾನೆ. ಅಲ್ಲಿ ಜಾಹೀರಾತು ಹಾಕಿದ್ದಾನೆ. ನ್ಯೂಯಾರ್ಕ್ (NewYork) ನಗರದಲ್ಲಿ ವಾಸವಾಗಿರುವ ಮೈಕಲ್ ಗೆ 33 ವರ್ಷ ವಯಸ್ಸು. ಆತ ಸಾಫ್ಟ್‌ವೇರ್ ಎಂಜಿನಿಯರ್. ಡೇಟಿಂಗ್ ಗೆ ಹುಡುಗಿ ಹುಡುಕಲು ಆತ ಫೇಸ್‌ಬುಕ್ ನ ಮಾರ್ಕೆಟ್‌ಪ್ಲೇಸ್‌ನಲ್ಲಿ ಜಾಹೀರಾತು ಪೋಸ್ಟ್ ಮಾಡಿದ್ದಾನೆ. 

ಬಿಲಿಯನೇರ್ ಮುಕೇಶ್ ಅಂಬಾನಿಯನ್ನು ಮದುವೆಯಾಗಲು ನೀತಾ ಅಂಬಾನಿ ಹಾಕಿದ್ದ ಕಂಡೀಷನ್ಸ್ ಏನು?

ಇದೊಂದು ವೈಯಕ್ತಿಕ ಜಾಹೀರಾತಾಗಿದೆ. ಇದು ನನಗೆ ತುಂಬಾ ಮುಜುಗರ ತರಿಸುತ್ತಿದೆ. ಆದ್ರೆ ಇದು ಆಸಕ್ತಿದಾಯಕವಾಗಿಯೂ ಇದೆ ಎಂದು ನಾನು ಭಾವಿಸುತ್ತೇನೆ ಎಂದು ಮೈಕಲ್ ಬರೆದಿದ್ದಾನೆ. ಮೈಕಲ್ ಈ ಜಾಹೀರಾತಿನಲ್ಲಿ ಬ್ಲೇಜರ್ ಧರಿಸಿರುವ ಮೈಕಲ್, ನಾಚಿಕೊಳ್ಳುವ ಫೋಟೋ ಹಾಕಿ, ಡೇಟ್ ಮೈಕಲ್ ಎಂದು ಶೀರ್ಷಿಕೆ ಹಾಕಿದ್ದಾನೆ. 

ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಮಾರಾಟಕ್ಕಿರುವ ಬೈಸಿಕಲ್‌ಗಳು ಮತ್ತು ಯಂತ್ರಗಳ ಜಾಹೀರಾತುಗಳ ಮಧ್ಯೆ ಮೈಕಲ್ ಡೇಟ್ ಜಾಹೀರಾತು ಪಾಪ್ ಅಪ್ ಆಗುತ್ತಿದೆ.  ನಾನು ದಯಾಳು, ಸಂತೋಷದ ವ್ಯಕ್ತಿ, ಕುತೂಹಲ, ಸೃಜನಶೀಲ ವ್ಯಕ್ತಿ ಮತ್ತು ದೊಡ್ಡ ದಡ್ಡ. ಆದ್ರೆ ನನ್ನ ಆಂಟಿಗೆ ಗೊತ್ತು ನಾನು ಸಾಕಷ್ಟು ಆಕರ್ಷಕ ಎನ್ನುವುದು ಎಂದು ಮೈಕಲ್ ಬರೆದಿದ್ದಾನೆ. 

ಜಾಹೀರಾತಿನಲ್ಲಿ ಮೈಕಲ್ ತನಗೆ ಎಂಥ ಹುಡುಗಿ ಬೇಕು ಎಂಬುದನ್ನು ಕೂಡ ಹೇಳಿದ್ದಾನೆ. ನಾನು ಗಂಭೀರ ಸಂಬಂಧಕ್ಕೆ ಸಿದ್ಧವಾಗಿರುವ ಮಹಿಳೆಯನ್ನು ಭೇಟಿಯಾಗಲು ಬಯಸುತ್ತೇನೆ, ನ್ಯೂಯಾರ್ಕ್ ಸುತ್ತಮುತ್ತ ಅವರು ವಾಸವಾಗಿರಬೇಕು ಎಂದು ಮೈಕಲ್ ತಿಳಿಸಿದ್ದಾನೆ. ತನ್ನ ರಾಜಕೀಯ ಆಸಕ್ತಿ ಬಗ್ಗೆಯೂ ಮೈಕಲ್ ಬರೆದಿದ್ದಾನೆ. ನಾನು ರಾಜಕೀಯದ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ ಆದರೆ ನಾನು ಅದನ್ನು ನನ್ನ ಸಂಪೂರ್ಣ ವ್ಯಕ್ತಿತ್ವವನ್ನಾಗಿ ಮಾಡಿಕೊಂಡಿಲ್ಲ ಎಂದಿದ್ದಾನೆ.

ಪರ್ಫೆಕ್ಟ್ ಸಂಸಾರದ ಗುಟ್ಟು ಬಿಚ್ಚಿಟ್ಟ ವೀಣಾ ಸುಂದರ್… ಇಲ್ಲಿದೆ ಸುಂದರ ಫ್ಯಾಮಿಲಿ ಫೋಟೋ

ಫೇಸ್ಬುಕ್ ಮಾರ್ಕೆಟ್ ಪ್ಲೇಸ್ (Facebook Market Place): ಫೇಸ್ಬುಕ್ ನಲ್ಲಿ ನಾವು ಸ್ನೇಹಿತರು, ಸಂಬಂಧಿಕರ ಫೋಟೋ, ವಿಡಿಯೋ ಜೊತೆ ಚಾಟಿಂಗ್ ಮಾಡ್ತಾರೆ. ಆದ್ರೆ ಫೇಸ್ಬುಕ್ ಇಷ್ಟಕ್ಕೇ ಸೀಮಿತವಾಗಿಲ್ಲ. ವಸ್ತುಗಳನ್ನು ಕೂಡ ನೀವು ಅದರಲ್ಲಿ ಮಾರಾಟ ಮಾಡಬಹುದು. ಫೇಸ್ಬುಕ್ ಮಾರ್ಕೆಟ್ ಪ್ಲೇಸ್ ಇದಕ್ಕೆ ಅವಕಾಶ ನೀಡುತ್ತದೆ. ಉತ್ಪನ್ನಗಳ ಬಗ್ಗೆ ಜಾಹೀರಾತನ್ನು ನೀವು ಅಲ್ಲಿ ಕಾಣಬಹುದು. ಜಾಹೀರಾತಿಗೆ ಕಂಪನಿ ವಾರಕ್ಕೆ 5 ಡಾಲರ್ ನಿಂದ 50,000 ಡಾಲರ್ ಶುಲ್ಕವನ್ನು ವಿಧಿಸುತ್ತದೆ. 2016 ರಲ್ಲಿ ಕಂಪನಿಯು ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್ ಮೂಲಕ ಇ-ಕಾಮರ್ಸ್ ವ್ಯವಹಾರಗಳ ಜಗತ್ತಿಗೆ ತೆರೆದುಕೊಂಡಿದೆ. ಫೇಸ್ಬುಕ್ ಮಾರ್ಕೆಟ್ ಪ್ಲೇಸ್ ಪ್ರತಿ ತಿಂಗಳು ಅಂದಾಜು ಒಂದು ಬಿಲಿಯನ್ ಮಾರುಕಟ್ಟೆ ಬಳಕೆದಾರರನ್ನು ಹೊಂದಿದೆ. ವಸ್ತುಗಳನ್ನು ಮಾರಾಟ ಮಾಡುವ ಜಾಗದಲ್ಲಿ ವ್ಯಕ್ತಿ ಡೇಟಿಂಗ್ ಜಾಹೀರಾತು ಹಾಕಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ. 

Latest Videos
Follow Us:
Download App:
  • android
  • ios