ಪರ್ಫೆಕ್ಟ್ ಸಂಸಾರದ ಗುಟ್ಟು ಬಿಚ್ಚಿಟ್ಟ ವೀಣಾ ಸುಂದರ್… ಇಲ್ಲಿದೆ ಸುಂದರ ಫ್ಯಾಮಿಲಿ ಫೋಟೋ
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಹಲವು ವರ್ಷಗಳಿಂದ ಸದ್ದು ಮಾಡುತ್ತಿರುವ ಜೋಡಿ ಅಂದರೆ ಅದು ಸುಂದರ್ ಮತ್ತು ವೀಣಾ ದಂಪತಿಗಳು. ಈ ಜೋಡಿಯ ಫ್ಯಾಮಿಲಿ ಬಗ್ಗೆ ಒಂದಿಷ್ಟು ವಿಷ್ಯ ತಿಳಿಯೋಣ.

ರಂಗಭೂಮಿ ಕಲಾವಿದರಾಗಿ ಪ್ರಯಾಣ ಆರಂಭಿಸಿ, ಕನ್ನಡ ಕಿರುತೆರೆ ಮತ್ತು ಹಿರಿತೆಯಲ್ಲಿ ಮಿಂಚುತ್ತಿರುವ ಜೋಡಿ ಅಂದರೆ ಅದು ವೀಣಾ ಸುಂದರ್ (Veena Sundar) ದಂಪತಿ. ಸದ್ಯ ಬೃಂದಾವನ ಸೀರಿಯಲ್ ನಲ್ಲಿ ಜೊತೆಯಾಗಿ ನಟಿಸುತ್ತಿದೆ ಈ ಜೋಡಿ.
ದಶಕಗಳಿಂದ ರಂಗಭೂಮಿ,ಕಿರುತೆರೆ ಮತ್ತು ಹಿರಿತೆರೆಯಲ್ಲಿ ಅಭಿನಯಿಸುತ್ತಿರುವ ಈ ತಾರಾ ದಂಪತಿ ನಟನಾ ಲೋಕಕ್ಕೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ಅಷ್ಟೇ ಅಲ್ಲ ಇಬ್ಬರು ಜೋಡಿಯಾಗಿಯೇ ಸುಮಾರು 12 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ವೀಣಾ ಇಂದು ಕಿರುತೆರೆ ಮತ್ತು ಸಿನಿಮಾಗಳಲ್ಲೂ ಬಹುಬೇಡಿಕೆಯ ಪೋಷಕ ನಟಿ. ತೆಲುಗು ಸಿನಿಮಾಗಳಲ್ಲೂ ಸಹ ವೀಣಾ ನಟಿಸಿದ್ದಾರೆ. ಸುಂದರ್ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ ರಂಗ ಕಲಾವಿದ, ಸದ್ಯ 'ಸುವ್ವಿ' ನಾಟಕ ತಂಡವನ್ನು (Drama troup) ಕಟ್ಟಿಕೊಂಡಿದ್ದು,. ಭಾರತದಲ್ಲಿ ಮಾತ್ರವಲ್ಲದೆ ಅಮೇರಿಕ, ಸಿಂಗಪೂರ್ ಸೇರಿದಂತೆ ಅನೇಕ ದೇಶಗಳಲ್ಲಿ ನಾಟಕ ಪ್ರದರ್ಶನ ನೀಡಿದ್ದಾರೆ.
ಬರೋಬ್ಬರಿ 25 ವರ್ಷಗಳ ದಾಂಪತ್ಯ ಜೀವನವನ್ನು ಸಾಗಿಸಿರುವ ವೀಣಾ ಸುಂದರ್ ದಂಪತಿ ದಾಂಪತ್ಯ ಜೀವನದಲ್ಲಿ ಸತಿಪತಿಗಳು ಒಬ್ಬರಿಗೊಬ್ಬರು ಯಾವ ರೀತಿ ಜೊತೆಯಾಗಬೇಕು ಅನ್ನೋದಕ್ಕೆ ಬೆಸ್ಟ್ ಉದಾಹರಣೆ. ಇಬ್ಬರೂ ಬ್ಯುಸಿ ನಟರಾಗಿದ್ದರೂ ದಾಂಪತ್ಯ ಜೀವನವನ್ನು, ಮಕ್ಕಳ ಬೆಳವಣಿಯಲ್ಲಿ ಸದಾ ಜೊತೆಯಾಗಿ ಇರುವಂತೆ ಬ್ಯಾಲೆನ್ಸ್ ಮಾಡಿಕೊಂಡು ಬಂದಿದ್ದಾರೆ ಇವರು.
ಈ ಮುದ್ದಾದ ಜೋಡಿಗಳಿಗೆ ಇಬ್ಬರು ಮಕ್ಕಳಿದ್ದು, ಮಗಳು ಅನರ್ಘ್ಯ ಸಾಧ್ವಿ. ಸದ್ಯ ಪಿಯುಸಿ ಓದುತ್ತಿದ್ದಾರೆ, ಅಷ್ಟೇ ಅಲ್ಲ ಕಳೆದ ಏಳು ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದಾಳೆ. ಇವರ ಮಗ ಅಭಿ ಫಿಸಿಯೋಥೆರಪಿ ಓದುತ್ತಿದ್ದಾರೆ. ಇಬ್ಬರೂ ಸದ್ಯ ನಟನೆಯಿಂದ ದೂರವಿದ್ದು ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ.
ಇನ್ನು ಇಬ್ಬರೂ ಕಲಾವಿದರಾಗಿದ್ದರೂ ಮಕ್ಕಳನ್ನು ನೋಡಿಕೊಳ್ಳುವಲ್ಲಿ, ಸಮಯ ಕೊಡುವಲ್ಲಿ ಇವರ ಪ್ಲಾನಿಂಗ್ ನಿಜಕ್ಕೂ ಬೆಸ್ಟ್. ಮಕ್ಕಳಿಗೋಸ್ಕರ ಪ್ಲ್ಯಾನ್ ಮಾಡಿಕೊಂಡು ಸಿನಿಮಾಗಳಿಗೆ ಡೇಟ್ಸ್ (film dates) ಕೊಡುವ ಈ ಜೋಡಿ, ಸುಂದರ್ ಮನೆಯಲ್ಲಿದ್ದಾಗ ವೀಣಾ ಶೂಟಿಂಗ್ ಹೋಗುತ್ತಾರಂತೆ, ವೀಣಾ ಮನೆಯಲ್ಲಿದ್ದಾಗ ಸುಂದರ್ ಶೂಟಿಂಗ್ ಗೆ ಹೋಗುತ್ತಿದ್ದಂತೆ. ಈ ರೀತಿ ಮಕ್ಕಳಿಗೆ ಎಲ್ಲೂ ಫೀಲ್ ಆಗದಂತೆ ಬ್ಯಾಲೆನ್ಸ್ ಮಾಡಿಕೊಂಡು ಬಂದಿದ್ದಾರೆ ಈ ಜೋಡಿ.
ಹ್ಯಾಪಿ ಸಂಸಾರದ ಗುಟ್ಟನ್ನು ಹೇಳುವ ವೀಣಾ ಸುಂದರ್ ಮನೆ ಪರಿಪೂರ್ಣ ಆಗಬೇಕು ಎಂದರೆ ಪತಿಯಲ್ಲಿರುವ ಕೊರತೆಯನ್ನು ಪತ್ನಿ, ಪತ್ನಿಯಲ್ಲಿರುವ ಕೊರತೆಯನ್ನ ಪತಿ ನಿವಾರಿಸಬೇಕು. ಹೀಗೆ ಮಾಡಿದ್ರೆ ಮಾತ್ರ ಸಂಸಾರದಲ್ಲಿ ಬ್ಯಾಲೆನ್ಸ್ ಆಗುತ್ತಿದೆ ಎನ್ನುತ್ತಾರೆ, ಸಂಸಾರದಲ್ಲಿ ಸಿಲ್ವರ್ ಜುಬ್ಲಿ ಆಚರಿಸಿರುವ ಈ ಜೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.