ಇಬ್ಬರು ಹೆಂಡ್ತೀರ ಮುದ್ದಿನ ಗಂಡ, ಮೂರು ದಿನ ಅವಳ ಜೊತೆ, ಮೂರು ದಿನ ಇವಳ ಜೊತೆ!
ಕೆಲವೊಬ್ಬರು ಒಬ್ಬಳು ಹೆಂಡತಿಯನ್ನು ಸಂಭಾಳಿಸೋದೆ ಕಷ್ಟಾನಪ್ಪ ಅಂತಾರೆ..ಇನ್ನು ಕೆಲವರು ಎರಡೆರಡು ಮದ್ವೆ ಮಾಡ್ಕೊಂಡು ಹಾಯಾಗಿರ್ತಾರೆ. ಹಾಗೆಯೇ ಇಲ್ಲೊಬ್ಬ ಭೂಪ, ಇಬ್ಬರನ್ನು ಮದ್ವೆಯಾಗಿ ವಿಚಿತ್ರ ಒಪ್ಪಂದವೊಂದನ್ನು ಮಾಡ್ಕೊಂಡಿದ್ದಾನೆ. ಅದೇನು?
ಮದುವೆ ಅನ್ನೋದು ಒಂದು ಸುಂದರವಾದ ಸಂಬಂಧ. ಗಂಡ-ಹೆಂಡತಿ ಜೊತೆಯಾಗಿ ಜೀವನ ನಡೆಸೋದೆ ದಾಂಪತ್ಯ. ಕೆಲವೊಬ್ಬರು ಒಂದು ಮದುವೆಯಾಗಿ ಸಂಭಾಳಿಸಲಾಗದೆ ಒದ್ದಾಡ್ತಾರೆ. ಇನ್ನು ಕೆಲವೊಬ್ಬರು ಎರಡೆರಡು ಮದ್ವೆಯಾಗಿ ಒದ್ದಾಡ್ತಾ ಎಲ್ಲವನ್ನೂ ಹೇಗೋ ಸಂಭಾಳಿಸ್ತಾರೆ. ಗಂಡ (Husband) ಅಥವಾ ಹೆಂಡತಿ (Wife) ಜೊತೆಗೇ ಇರಬೇಕೆಂದು ಬಯಸುವುದು ಸಾಮಾನ್ಯ. ಆದ್ರೆ ಇಬ್ಬರನ್ನು ಮದುವೆಯಾದ ವ್ಯಕ್ತಿ ಏಕಕಾಲದಲ್ಲಿ ಎರಡೂ ಕಡೆ ಇರಲು ಸಾಧ್ಯವಿಲ್ಲವಲ್ಲ. ಹೀಗಾಗಿಯೇ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲೊಬ್ಬ ವ್ಯಕ್ತಿ ಇಬ್ಬರನ್ನು ಮದುವೆಯಾಗಿ ವಿಚಿತ್ರ ಒಪ್ಪಂದ (Agreement) ಮಾಡಿಕೊಂಡಿದ್ದಾನೆ.
ಇಬ್ಬರು ಹೆಂಡ್ತಿಯರು ಇರೋ ಭೂಪನ ವಿಚಿತ್ರ ಒಪ್ಪಂದ
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಇಬ್ಬರು ವಿವಾದಿತ ಮಹಿಳೆಯ ನಡುವೆ ವಿಶಿಷ್ಟ ಒಪ್ಪಂದ ನಡೆದಿದೆ. ವಾರದ 3 ದಿನ ಮೊದಲ ಪತ್ನಿ ಹಾಗೂ 3 ದಿನ 2ನೇ ಪತ್ನಿ ಜತೆ ಪತಿ ಇರಲು ತೀರ್ಮಾನವಾಗಿದೆ. ವಾರಾಂತ್ಯದಲ್ಲಿ ಯಾರೊಂದಿಗೆ ವಾಸಿಸಬೇಕು ಎಂದು ಗಂಡ ನಿರ್ಧರಿಸುತ್ತಾನಂತೆ. 2017ರಲ್ಲಿ ವ್ಯಕ್ತಿಯೊಬ್ಬ ಮೊರದಾಬಾದ್‌ನಲ್ಲಿ ಎರಡನೇ ಮದುವೆ (Marriage)ಯಾಗಿ ತನ್ನ ಪತ್ನಿಯನ್ನು ಅಲ್ಲಿ ಬಿಟ್ಟುಬಂದಿದ್ದ. ಆಕೆ ಮನೆಗೆ ಕರೆದುಕೊಂಡು ಹೋಗುವಂತೆ ಕೇಳಿದಾಗೆಲ್ಲ ಕ್ಷುಲ್ಲಕ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. 2017ರಲ್ಲಿ ತನ್ನ ಮದುವೆಯಾದ ನಂತರ, ತನ್ನ ಪತಿ ತನ್ನನ್ನು ಅತ್ತೆಯ ಮನೆಗೆ ಕರೆದುಕೊಂಡು ಹೋಗಲಿಲ್ಲ ಬದಲಿಗೆ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುವಂತೆ ಹೇಳಿದನು ಎಂದು ದೂರಿನಲ್ಲಿ ತಿಳಿಸಿದ್ದಳು.
Relationship Tips: ಇಂತಹ ಹುಡುಗರು ಪ್ರಪಂಚದಲ್ಲೇ ಬೆಸ್ಟ್ ಲವರ್ಸ್ ಆಗ್ತಾರೆ
ತನ್ನ ಗಂಡನನ್ನು ಹುಡುಕುತ್ತಾ, ಮಹಿಳೆ ಅವನ ಪೋಷಕರ ಮನೆಗೆ ತಲುಪಿದಳು, ಅಲ್ಲಿ ಅವನು ಈಗಾಗಲೇ ಮದುವೆಯಾಗಿದ್ದಾನೆ ಮತ್ತು ಮೂರು ಮಕ್ಕಳನ್ನು ಹೊಂದಿದ್ದಾನೆ ಎಂದು ಅವಳು ಕಂಡುಕೊಂಡಳು. ಪುರುಷನಿಗೆ ತನ್ನ ಎರಡನೇ ಹೆಂಡತಿಯಿಂದ ಮಗಳೂ ಇದ್ದಾಳೆ.ಬಳಿಕ ಎಸ್‌ಎಸ್‌ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಳು. ನಂತರ ಪ್ರಕರಣವನ್ನು ಕೌನ್ಸೆಲಿಂಗ್‌ಗಾಗಿ ನಾರಿ ಉತ್ಥಾನ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ನಾಗರಿಕ ವಿವಾದಗಳನ್ನು ಪರಿಹರಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡುವ ಖಾಸಗಿ ಗುಂಪು ಈ ಸ್ಪಷ್ಟವಾದ ವಿಲಕ್ಷಣ ನಿರ್ಧಾರವನ್ನು ತಲುಪಿದೆ. ಸೋಮವಾರದಿಂದ ಬುಧವಾರದವರೆಗೆ ಪತಿ ಮೊದಲ ಹೆಂಡತಿಯೊಂದಿಗೆ ಇರುತ್ತಾನೆ. ಆದರೆ, ಗುರುವಾರದಿಂದ ಶನಿವಾರದವರೆಗೆ ಅವನು ತನ್ನ ಎರಡನೇ ಹೆಂಡತಿಯೊಂದಿಗೆ ಇರುವಂತೆ ಸೂಚಿಸಲಾಗಿದೆ. ಒಪ್ಪಂದದ ಪ್ರಕಾರ, ಸದ್ಯ ಇಬ್ಬರು ಹೆಂಡತಿಯರು ತಮ್ಮ ಅತ್ತೆಯೊಂದಿಗೆ ವಾಸಿಸುತ್ತಾರೆ.
ಮನೇಲಿ ಚೆಂದದ ಹೆಂಡತಿಯಿದ್ರೂ ಪುರುಷರು ಮತ್ತೊಬ್ಬಳ ಪ್ರೀತೀಲಿ ಬೀಳೋದ್ಯಾಕೆ ?
ಬಹುತೇಕ ಎಲ್ಲಾ ಪುರುಷರು, ಮನೆಯಲ್ಲಿ ಸುಂದರವಾದ ಹೆಂಡತಿಯನ್ನು ಹೊಂದಿದ್ದರೂ ಸಹ, ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಳ್ಳಲು ಹಂಬಲಿಸುತ್ತಾರೆ. ಯಾಕೆಂದರೆ ಅವರಿಗೆ ಉತ್ತಮ ಸ್ನೇಹಿತೆಯ ಅಗತ್ಯವಿರುತ್ತದೆ. ಯಾಕೆಂದರೆ ಅವರು ಹೆಂಡತಿಗೆ ಎಲ್ಲಾ ವಿಷಯವನ್ನು ಹೇಳಲು ಸಾಧ್ಯವಾಗುವುದಿಲ್ಲ. ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳಲು ಅವರಿಗೆ ಸ್ನೇಹಿತೆಯ ಅಗತ್ಯವಿರುತ್ತದೆ. ಹೀಗಾಗಿ ಸಂಬಂಧದಲ್ಲಿ ಯಾವತ್ತೂ ಪ್ರೀತಿಯ ಜೊತೆ ಸ್ನೇಹವನ್ನು ಕಾಪಾಡಿಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಪುರುಷರು ಇತರ ಮಹಿಳೆಯರತ್ತ ಆಕರ್ಷಿತರಾಗುವ ಅಪಾಯವಿದೆ.
ನೋಟು ಎಣಿಸಲು ಪೇಚಾಡಿದ ವರ, ಇವನೆಂಥಾ ಬೆಪ್ಪ ಅಂತ ಮದ್ವೆ ಕ್ಯಾನ್ಸಲ್ ಮಾಡಿದ ವಧು
ಕೆಲವು ಪುರುಷರಿಗೆ ಪ್ರಬುದ್ಧತೆಯ ಕೊರತೆಯಿದೆ. ಸಂಸಾರಸ್ಥರಾದೂ ಸಹ ತಮ್ಮ ಜೀವನದಲ್ಲಿ ಒಮ್ಮೆ ಸಂಬಂಧವನ್ನು ಹೇಗೆ ಬದ್ಧಗೊಳಿಸಬೇಕೆಂದು ಅವರಿಗೆ ತಿಳಿದಿಲ್ಲ. ಅಂತಹವರು ತಮ್ಮ ಹೆಂಡತಿಯನ್ನು ಬಿಟ್ಟು ಬೇರೆ ಮಹಿಳೆಯೊಂದಿಗೆ ಸಂಬಂಧವನ್ನು ಪ್ರಾರಂಭಿಸಲು ನೋಡುತ್ತಾರೆ. ಈ ಮೂಲಕ ಮನೆಯಿಂದ ಹೊರಗೆ ಖುಷಿಯನ್ನು ಕಂಡುಕೊಳ್ಳಲು ಯತ್ನಿಸುತ್ತಾರೆ.ಅನೇಕ ಪುರುಷರಿಗೆ ಮದುವೆಯಾಗವ ವರೆಗೆ ಮಾತ್ರ ಹೆಂಡತಿಯ ಬಗ್ಗೆ ಆಸಕ್ತಿಯಿರುತ್ತದೆ.
ಮದುವೆಯ ನಂತರ ಆಕೆಯ ಮೇಲಿನ ಆಸಕ್ತಿ ಹೊರಟು ಹೋಗುತ್ತದೆ. ಅನೇಕ ಪುರುಷರಿಗೆ ಈ ಅಭ್ಯಾಸವಿದೆ. ಒಮ್ಮೆ ಅವರು ಬಯಸಿದ್ದನ್ನು ಕಂಡುಕೊಂಡ ನಂತರ ಅವರು ಬೇಸರಗೊಳ್ಳುತ್ತಾರೆ. ಹಾಗೆ ಬೇಜಾರಾದಾಗ ಹೆಂಡತಿಯ ಮೇಲಿನ ಪ್ರೀತಿ ಕಡಿಮೆಯಾಗುತ್ತದೆ. ಇದರ ಜೊತೆಯಲ್ಲೇ ಇನ್ನೊಬ್ಬ ಮಹಿಳೆಯ ಸಂಪರ್ಕ ಬೇಕು ಅನಿಸುತ್ತೆ. ಹೀಗಾದಾಗ ಪುರುಷರು ಮನೆಯಿಂದ ಹೊರಗೆ ಬೇರೆ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಳ್ಳಲು ಉತ್ಸುಕರಾಗುತ್ತಾರೆ.